In this episode, Dr. Sandhya S. Pai recites her very famous editorial Priya Odugare EP - 122 - ಒಳ್ಳೆಯತನ ಕಲಿಸಿದಾತನೇ ಗುರು | Teacher's Goodness
ಸೂಫಿ ಸಂತ ಹಸನ್ ನ ಜೀವಜ್ಯೋತಿ ಕೆಲವೇ ಕ್ಷಣಗಳಲ್ಲಿ ಆರಿಹೋಗುವುದರಲ್ಲಿತ್ತು. ಸನಿಹವಿದ್ದ ಶಿಷ್ಯನೊಬ್ಬ ಗುರುವಿಗೆ ಕಟ್ಟಕಡೆಯ ಪ್ರಶ್ನೆ ಕೇಳಿದ: “ನಿಮ್ಮ ಗುರುಗಳು ಯಾರು?”. ಹಸನ್ ಮೊಗದಲ್ಲಿ ತೆಳುನಗುವೊಂದು ಹಾದುಹೋಯಿತು. ಒಬ್ಬ ಕಳ್ಳ, ಬಾಯಾರಿದ ನಾಯಿ, ಪುಟ್ಟ ಹುಡುಗ ತಮ್ಮ ಗುರುವಾದ ಬಗೆಯನ್ನು ವಿಸ್ಮಯಕಾರಿಯಾಗಿ ಬಣ್ಣಿಸಿದರು. ಬದುಕಿನ ಸೂಕ್ಷ್ಮ ಕಲಿಕೆಯ ಕುರಿತಾದ ಬಲುಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಲು ಕೇಳಿ,