Listen

Description

ಎಲ್ಲರಿಗಮೀಗ ನಮೊ – ಬಂಧುಗಳೆ, ಭಾಗಿಗಳೆ । 

ಉಲ್ಲಾಸವಿತ್ತವರೆ, ಮನವ ತೊಳೆದವರೆ ।। 

ಟೊಳ್ಳು ಜಗ, ಸಾಕು ಬಾಳ್ – ಎನಿಸಿ ಗುರುವಾದವರೆ । 

ಕೊಳ್ಳಿರೀ ನಮನವನು – ಮಂಕುತಿಮ್ಮ ।। 922

ನಿನಗಾರು ಗುರುವಹರು? ನೀನೊಬ್ಬ ತಬ್ಬಲಿಗ ।

ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು ।।

ದಿನವ ಕಳೆ ; ಗುರುಶಿಷ್ಯಪಟ್ಟಗಳು ನಿನಗೇಕೆ ?।

ನಿನಗೆ ನೀನೇ ಗುರುವೊ – ಮಂಕುತಿಮ್ಮ ।। 923