_________________________
ಮಹನೀಯರೇ....
"ಮಹಾಮನು" ಕಾದಂಬರಿ ವಾಚನ ಸರಣಿ ಕಾರ್ಯಕ್ರಮ ದಿನಾಂಕ. 09–10–2020 ಶುಕ್ರವಾರ ಮೊದಲ ಸಂಚಿಕೆ ಪ್ರಸಾರಗೊಡು 29–10–2021ರಂದು 100ನೇ ಸಂಚಿಕೆಯೊಂದಿಗೆ ಸಂಪನ್ನಗೊಂಡಿತು.
ನನ್ನ ಬದುಕಿನ ಏಳು ಬೀಳುಗಳ ಜೊತೆಗೆ ಅದನ್ನು ಹಾಗೇ ಕರೆದು ತಂದಿದ್ದೇನೆ.
ಈ ಒಂದು ಕಾರ್ಯ ನಾನು ಬಯಸದಿದ್ದರೂ ನನಗೆ ಜನಪ್ರಿಯತೆಯ ಜೊತೆಗೆ ಮನೋ ಪಕ್ವತೆಯನ್ನೂ ತಂದುಕೊಟ್ಟಿತು.
ಈ ಸೇವೆಯು ಕಾದಂಬರಿಯ ಕರ್ತೃ ಕವಿಶ್ರೇಷ್ಟ ಜೀವಣ್ಣ ಮಸಳಿ, ಡಾ.ವೀರೇಶ ಬಡಿಗೇರ ಗುರೂಜಿಯವರು ಹಾಗೂ ನೀವೆಲ್ಲರೂ (ವೇದಿಕೆಯ ಮಹನೀಯರು) ನನಗೆ ನೀಡಿದ ಮಹಾಪ್ರಸಾದವೆಂದೇ ಸ್ವೀಕರಿಸಿದ್ದೇನೆ...
ನನ್ನನ್ನು ಸದಾ ಹರಸಿ-ಹಾರೈಸಿದ (ಹಾರೈಸುತ್ತಲಿರುವ) ಪೂಜ್ಯ ಗುರು-ಮಹನೀಯ ವೃಂದಕ್ಕೂ ಅಭಿವಂದಿಸುವೆ....
ಮತ್ತೆ ಇನ್ನೊಂದು ಮಹತ್ವದ ಮಹಾಸೇವೆಯೊಂದಿಗೆ ಅತೀ ಶೀಘ್ರದಲ್ಲೇ ನಿಮ್ಮೊಂದಿಗಿರುತ್ತೇನೆ...
ಹೃತ್ಪ್ರಣಾಮಗಳೊಂದಿಗೆ.
ನಿಮ್ಮವ
ಬಸವರಾಜ ಬಡಿಗೇರ ಬೋರಗಿ.