Listen

Description

ಆತನು ಸಮುದ್ರವನ್ನು ಭೇದಿಸಿ ಅದರ ನೀರನ್ನು ರಾಶಿಯಂತೆ ನಿಲ್ಲಿಸಿ ಅವರನ್ನು ದಾಟಿಸಿದನು. ಹಗಲು ಮೋಡದಿಂದಲೂ ಇರುಳು ಬೆಂಕಿಯ ಬೆಳಕಿನಿಂದಲೂ ಅವರನ್ನು ಕರೆದೊಯ್ದನು. ಆತನು ಅರಣ್ಯದಲ್ಲಿ ಬಂಡೆಗಳನ್ನು ಸೀಳಿ ಅವರಿಗೆ ಸಾಗರದಿಂದಲೋ ಎಂಬಂತೆ ಧಾರಾಳವಾಗಿ ನೀರು ಕುಡಿಸಿದನು. ಗಿರಿಶಿಲೆಯಿಂದ ಜಲಪ್ರವಾಹಗಳನ್ನು ಹೊರಡಿಸಿ ನದಿಗಳಾಗಿ ಹರಿಯಮಾಡಿದನು. Psalms / ಕೀರ್ತನೆಗಳು 78 : 13 - 16