Listen

Description

ಆ ದಿನಗಳಲ್ಲಿ ಯೇಸು ಗಲಿಲಾಯ ಸೀಮೆಗೆ ಸೇರಿದ ನಜರೇತೆಂಬ ಊರಿನಿಂದ ಬಂದು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ಸ್ನಾನಮಾಡಿಸಿಕೊಂಡನು. ಮಾಡಿಸಿಕೊಂಡ ಕೂಡಲೆ ಆತನು ನೀರಿನೊಳಗಿಂದ ಮೇಲಕ್ಕೆ ಬರಲು ಆಕಾಶವೊಡೆದು ದೇವರಾತ್ಮವು ಪಾರಿವಾಳದ ಹಾಗೆ ತನ್ನ ಮೇಲೆ ಇಳಿಯುವದನ್ನು ಕಂಡನು. ಆಗ - ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು. ಕೂಡಲೆ ಯೇಸು ದೇವರಾತ್ಮಪ್ರೇರಿತನಾಗಿ ಅಡವಿಗೆ ಹೋದನು. ಆತನು ನಾಲ್ವತ್ತು ದಿವಸ ಅಡವಿಯಲ್ಲಿ ಮೃಗಗಳೊಂದಿಗೆ ಇದ್ದು ಸೈತಾನನಿಂದ ಶೋಧಿಸಲ್ಪಡುವವನಾದನು; ಮತ್ತು ದೇವದೂತರು ಆತನಿಗೆ ಉಪಚಾರಮಾಡಿದರು. Mark 1 : 9 - 13