ಇಷ್ಟರಲ್ಲಿ ಹೆಚ್ಚು ಕಡಿಮೆ ಮಧ್ಯಾಹ್ನವಾಯಿತು. ಆಗಲಿಂದ ಸೂರ್ಯನು ಕಾಂತಿಗುಂದಿ ಮೂರು ಘಂಟೆಯ ತನಕ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು; ಇದಲ್ಲದೆ ದೇವಾಲಯದ ತೆರೆಯು ನಡುವೆ ಹರಿದುಹೋಯಿತು. ಆಮೇಲೆ ಯೇಸು - ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ ಎಂದು ಮಹಾಧ್ವನಿಯಿಂದ ಕೂಗಿದನು; ಇದನ್ನು ಹೇಳಿದ ಮೇಲೆ ಪ್ರಾಣಬಿಟ್ಟನು. ಶತಾಧಿಪತಿಯು ನಡೆದ ಸಂಗತಿಯನ್ನು ನೋಡಿ - ಈ ಮನುಷ್ಯನು ಸತ್ಪುರುಷನೇ ನಿಜ ಎಂದು ದೇವರನ್ನು ಕೊಂಡಾಡಿದನು. ಈ ನೋಟಕ್ಕಾಗಿ ಕೂಡಿಬಂದಿದ್ದ ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ಎದೆಬಡುಕೊಳ್ಳುತ್ತಾ ಹಿಂತಿರುಗಿ ಹೋದರು. Luke / ಲೂಕ 23 : 44 - 48
Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.
#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #lentenmessages #Luke23v44 #29thmarch #promisewordformarch