Please visit https://thebookvoice.com/podcasts/1/audiobook/835639 to listen full audiobooks.
Title: [Kannada] - Yaana
Author: S.L. Bhyrappa
Narrator: Kiran Naik
Format: Unabridged Audiobook
Length: 10 hours 18 minutes
Release date: January 25, 2023
Genres: Science Fiction
Publisher's Summary:
ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್.ಎಲ್. ಭೈರಪ್ಪನವರ 'ಯಾನ' ಕೃತಿಯು ಸೌರಮಂಡಲದಿಂದಾಚೆಗೆ ಪಯಣ ಮಾಡುವಾಗ ಮಾನವನ ನೈತಿಕ ಚೌಕಟ್ಟುಗಳಲ್ಲೂ ಆಗುವ ಪಲ್ಲಟವನ್ನು ಕೇಂದ್ರೀಕರಿಸುವ ವಸ್ತುವನ್ನುಒಳಗೊಂಡಿದೆ. ಈ ಯಾನವನ್ನು ನಡೆಸಲು ಆಯ್ಕೆಯಾಗುವ ಒಬ್ಬ ಖಭೌತ-ವಿಜ್ಞಾನಿ, ಕಂಪ್ಯೂಟರ್ ತಂತ್ರಘ್ಯಾನದಲ್ಲಿ ನಿಪುಣನಾದ ಸುದರ್ಶನ್ ಮತ್ತು ಅವನ ಸಹಚಾರಿ, ಭಾರತೀಯ ವಿಮಾನದಳದ ಅತ್ಯುತ್ತಮ ಫೈಟರ್ ಪೈಲಟ್ (ಮುಂದೆ ಅವನ ಪತ್ನಿಯಾಗಿ, ಅವರು ಸೃಷ್ಟಿಸ ಬೇಕಾಗಿದ್ದ ಮಕ್ಕಳ ತಾಯಿ) ಉತ್ತರೆಯ ಸುತ್ತಮುತ್ತಾ ಹೆಣೆದ ಈ ಕಥೆ, ಓದುಗನನ್ನು ಬಾಹ್ಯಾಕಾಶಲೋಕದ ಯಾನದಲ್ಲಿ ಆಳವಾಗಿ ಕರೆದೊಯ್ಯುತ್ತದೆ. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ವಿನ್ಯಾಸಗೊಳಿಸಿದ ಆಕಾಶ ನೌಕೆಯಲ್ಲಿ, ನಮ್ಮ ಸೂರ್ಯನ ಗುರುತ್ವವನ್ನೂ ಮೀರಿ, 4.6 ಜ್ಯೋತಿರ್ವರ್ಷಗಳ ದೂರದಲ್ಲಿರುವ, ಮತ್ತೊಂದು ನಕ್ಷತ್ರಮಂಡಲ ಪ್ರಾಕ್ಸಿಮಾ ಸೆಂಟಾರಿಸ್ ಕಡೆಗೆ ಪ್ರಯಾಣಿಸುವ ಈ ಜೋಡಿಯ ನಡುವಿನ ಸಂಬಂಧ, ಅವರ ಆಂತರಿಕ ತುಮುಲಗಳು, ಪರಸ್ಪರ ದ್ವೇಷದ ಭಾವನೆಗಳು, ತಮ್ಮ ಮಾತೃ ಗ್ರಹವನ್ನು ಪೂರ್ಣವಾಗಿ ತೊರೆದು, ಮಾನವನ ಮುಂದಿನ ಪೀಳಿಗೆಯ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಧಾರೆಯೆರಿಯುವ ದೃಢ ಮನೋಸಂಕಲ್ಪದ ಇಬ್ಬರು ಅಪರೂಪದ ವ್ಯಕ್ತಿಗಳ ಸುತ್ತ ಹೆಣೆದ ಯಾನದಲ್ಲಿ, ಭೈರಪ್ಪನವರು ಕೇವಲ ವೈಜ್ಞಾನಿಕ ಮತ್ತು ತಂತ್ರಜ್ಞಾನದ ವಿಷಯಗಳನ್ನಷ್ಟೇ ಅಲ್ಲಾ, ಮತ್ತೊಮ್ಮೆ ಮಾನವನ ನಡುವಿನ ಸಂಬಂಧಗಳ ಸಂಕೀರ್ಣತೆಯನ್ನು ವಿಶ್ಲೇಷಿಸುವಲ್ಲಿ ಸಫಲವಾಗಿದ್ದಾರೆ.