Look for any podcast host, guest or anyone
Showing episodes and shows of

AraliKatte

Shows

AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp99: ಕನ್ನಡಿಗರ ಅಸ್ಮಿತೆ - ಅರಳಿಕಟ್ಟೆ ಸಂಚಿಕೆಗಳ ಹಿನ್ನೋಟ - Kanndiga Identity - Glimpses from the past episodesಹತ್ತಾರು ಪಾಡ್ ಕಾಸ್ಟ್ ಗಳನ್ನು ನಿಯಮಿತವಾಗಿ ಕೇಳುವ ನಾವು ಅದೊಂದು ದಿನ "ಕನ್ನಡದಲ್ಲೇಕೆ ಪಾಡ್ಕಾಸ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ" ಎಂದು ಕೇಳಿಕೊಂಡೆವು. ನಾವೇನು ವೃತ್ತಿಪರರಲ್ಲದಿದ್ದರೂ ಕೈಲಾದ ಮಟ್ಟಿಗೆ ಕನ್ನಡದಲ್ಲಿ ವಿಶಿಷ್ಟ ಚರ್ಚೆಗಳನ್ನು ನಡೆಸೋಣ ಎಂದು ಶುರು ಮಾಡಿದ ಪ್ರಯತ್ನವೇ “ಅರಳಿಕಟ್ಟೆ".ಈ ವಾರದ ೯೯ ನೇ ಸಂಚಿಕೆ ವಿಶಿಷ್ಟವಾದದ್ದು. ನೂರು ಸಂಚಿಕೆಗಳ ಮೈಲಿಗಲ್ಲನ್ನು ಸಂಭ್ರಮಿಸಲು ನಾವು ಇದುವರೆಗೆ ಪ್ರಕಟವಾದ ಸಂಚಿಕೆಗಳಲ್ಲಿ ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯನ್ನು ಕುರಿತು ವಿವಿಧ ಹಿನ್ನೆಲೆಯ ಅತಿಥಿಗಳೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ತುಣುಕುಗಳನ್ನು ಪೋಣಿಸಿದ್ದೇವೆ.ನೂರನೆಯ ಸಂಚಿಕೆಯಲ್ಲಿ ಬಹು ವಿಶಿಷ್ಟವಾದ ಅತಿಥಿಯೊಬ್ಬರು ನಮಗೆ ಜೊತೆಯಾಗಲಿದ್ದಾರೆ.00:00 - Intro  02:53 - From episode 92 with Chidananda rajaghatta  18:35 - Sponsored Ad: Kempu Kannada stories  20:07 - From episode 48 with Vinay Kumar 29:47 - From episode 49 with Vinay Kumar  38:40 - From episode 93 with Rajiv Raghunandan  48:24 - From episode 76 with Vasudhendhra  51:59 - From episode 80 with Mahesh Bhat  56:45 - From episode 26 with Vasant ShettyCredits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2022-03-271h 10AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp98: ಪರಮಾಣು ಶಕ್ತಿ ಲೋಕದಲ್ಲೊಂದು ಸುತ್ತು (ಭಾಗ ೨) - The world of nuclear energy (Part 2)ತಮಗೆ ತಿಳಿಯದ ತಂತ್ರಜ್ಞಾನ, ವಿಜ್ಞಾನದ ಕುರಿತು ಎಲ್ಲರಿಗೂ ಆತಂಕ ಸಹಜ.ಅಣು ವಿಜ್ಞಾನ ಎಂದರೆ ಬಹುತೇಕರಿಗೆ ಕಣ್ಣ ಮುಂದೆ ಬರುವುದು ಅಣು ಬಾಂಬ್, ಇಲ್ಲವೇ ಉಕ್ರೇನಿನ ಚರ್ನೋಬಿಲ್ ಸ್ಥಾವರದ ಅವಘಡ. ಈ ಚಿತ್ರಿಕೆಗಳನ್ನು ಮೀರಿದ ವಾಸ್ತವ ಅಣು ವಿಜ್ಞಾನಕ್ಕಿದೆ. ಮುರಿದ ಮೂಳೆಯ ಎಕ್ಸ್ ರೇ ಮುದ್ರಿಕೆ, ಕ್ಯಾನ್ಸರ್ ಚಿಕಿತ್ಸೆ, ಬೀಜ ಸಂಸ್ಕರಣೆ, ವೈದ್ಯಕೀಯ ಉಪಕರಣಗಳ ಸೋಂಕು ತೆಗೆಯುವಿಕೆ, ಕೈಗಾರಿಕೆಗಳಲ್ಲಿ ದ್ರಾವಣಗಳ ಕಲೆಸುವಿಕೆಯನ್ನು ಅಳೆಯುವುದು, ಲೋಹದಲ್ಲಿನ ಸೂಕ್ಷ್ಮ ಸೀಳುಗಳನ್ನು, ವೆಲ್ಡಿಂಗ್ ಗುಣಮಟ್ಟವನ್ನು ಅಳೆಯುವುದು ಹೀಗೆ ಅಸಂಖ್ಯಾತ ಬಳಕೆಗಳನ್ನು ಅಣು ವಿಜ್ಞಾನ ಹೊಂದಿದೆ.ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವಲ್ಲಿಯೂ ಪರಮಾಣು ಶಕ್ತಿಯ ಪಾತ್ರ ಬಗ್ಗೆ ಜಾಗತಿಕ ತಾಪಮಾನ ಏರಿಕೆಯ ಸಂದರ್ಭದಲ್ಲಿ ಮಹತ್ವದ್ದಾಗಿದೆ. ಒಂದು ಕಡೆ ಫ್ರಾನ್ಸ್ ತನ್ನ ಶೇ. ೭೦ರಷ್ಟು ವಿದ್ಯುಚ್ಛಕ್ತಿಯನ್ನು ಅಣುಶಕ್ತಿಯಿಂದ ಉತ್ಪಾದಿಸಿದರೆ ಪಕ್ಕದ ಜರ್ಮನಿ ತನ್ನೆಲ್ಲ ಅಣು ಸ್ಥಾವರಗಳನ್ನು ಮುಚ್ಚುವ ತಯಾರಿಯಲ್ಲಿದೆ. ರಷ್ಯಾದ ತೈಲ, ಅನಿಲದ ಮೇಲಿನ ಅವಲಂಬನೆ ಕೈಕಚ್ಚಿರುವಾಗ ತಮ್ಮ ನಿರ್ಧಾರವನ್ನು ಪುನರ್ವಿಮರ್ಶೆಗೆ ಒಡ್ಡಿದ್ದಾರೆ. ಭಾರತದಲ್ಲಿ ಕೇವಲ ಶೇ ೩ ರಷ್ಟು ವಿದ್ಯುಚ್ಛಕ್ತಿ ಅಣು ಸ್ಥಾವರಗಳಿಂದ ಲಭ್ಯವಾಗುತ್ತಿದೆ.ಅಣು ವಿಜ್ಞಾನದ ಕುರಿತ ಇವೆಲ್ಲ ಮಗ್ಗುಲುಗಳ ಚರ್ಚೆಯನ್ನು ಅರಳಿಕಟ್ಟೆ ಬಾಬಾ ಅಣುವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ವಿಜ್ಞಾನಿ ಡಾ ಎಂ ಎಸ್ ಶ್ರೀನಿವಾಸ ಮೂರ್ತಿಯವರೊಂದಿಗೆ ನಡೆಸಿದೆ. ಚರ್ಚೆಯು ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಎರಡನೆಯ ಹಾಗೂ ಅಂತಿಮ ಭಾಗ ತೊಂಭತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date: 20 February 2022Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2022-03-1745 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp97: ಪರಮಾಣು ಶಕ್ತಿ ಲೋಕದಲ್ಲೊಂದು ಸುತ್ತು - The world of nuclear energyತಮಗೆ ತಿಳಿಯದ ತಂತ್ರಜ್ಞಾನ, ವಿಜ್ಞಾನದ ಕುರಿತು ಎಲ್ಲರಿಗೂ ಆತಂಕ ಸಹಜ.ಅಣು ವಿಜ್ಞಾನ ಎಂದರೆ ಬಹುತೇಕರಿಗೆ ಕಣ್ಣ ಮುಂದೆ ಬರುವುದು ಅಣು ಬಾಂಬ್, ಇಲ್ಲವೇ ಉಕ್ರೇನಿನ ಚರ್ನೋಬಿಲ್ ಸ್ಥಾವರದ ಅವಘಡ. ಈ ಚಿತ್ರಿಕೆಗಳನ್ನು ಮೀರಿದ ವಾಸ್ತವ ಅಣು ವಿಜ್ಞಾನಕ್ಕಿದೆ. ಮುರಿದ ಮೂಳೆಯ ಎಕ್ಸ್ ರೇ ಮುದ್ರಿಕೆ, ಕ್ಯಾನ್ಸರ್ ಚಿಕಿತ್ಸೆ, ಬೀಜ ಸಂಸ್ಕರಣೆ, ವೈದ್ಯಕೀಯ ಉಪಕರಣಗಳ ಸೋಂಕು ತೆಗೆಯುವಿಕೆ, ಕೈಗಾರಿಕೆಗಳಲ್ಲಿ ದ್ರಾವಣಗಳ ಕಲೆಸುವಿಕೆಯನ್ನು ಅಳೆಯುವುದು, ಲೋಹದಲ್ಲಿನ ಸೂಕ್ಷ್ಮ ಸೀಳುಗಳನ್ನು, ವೆಲ್ಡಿಂಗ್ ಗುಣಮಟ್ಟವನ್ನು ಅಳೆಯುವುದು ಹೀಗೆ ಅಸಂಖ್ಯಾತ ಬಳಕೆಗಳನ್ನು ಅಣು ವಿಜ್ಞಾನ ಹೊಂದಿದೆ.ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವಲ್ಲಿಯೂ ಪರಮಾಣು ಶಕ್ತಿಯ ಪಾತ್ರ ಬಗ್ಗೆ ಜಾಗತಿಕ ತಾಪಮಾನ ಏರಿಕೆಯ ಸಂದರ್ಭದಲ್ಲಿ ಮಹತ್ವದ್ದಾಗಿದೆ. ಒಂದು ಕಡೆ ಫ್ರಾನ್ಸ್ ತನ್ನ ಶೇ. ೭೦ರಷ್ಟು ವಿದ್ಯುಚ್ಛಕ್ತಿಯನ್ನು ಅಣುಶಕ್ತಿಯಿಂದ ಉತ್ಪಾದಿಸಿದರೆ ಪಕ್ಕದ ಜರ್ಮನಿ ತನ್ನೆಲ್ಲ ಅಣು ಸ್ಥಾವರಗಳನ್ನು ಮುಚ್ಚುವ ತಯಾರಿಯಲ್ಲಿದೆ. ರಷ್ಯಾದ ತೈಲ, ಅನಿಲದ ಮೇಲಿನ ಅವಲಂಬನೆ ಕೈಕಚ್ಚಿರುವಾಗ ತಮ್ಮ ನಿರ್ಧಾರವನ್ನು ಪುನರ್ವಿಮರ್ಶೆಗೆ ಒಡ್ಡಿದ್ದಾರೆ. ಭಾರತದಲ್ಲಿ ಕೇವಲ ಶೇ ೩ ರಷ್ಟು ವಿದ್ಯುಚ್ಛಕ್ತಿ ಅಣು ಸ್ಥಾವರಗಳಿಂದ ಲಭ್ಯವಾಗುತ್ತಿದೆ.ಅಣು ವಿಜ್ಞಾನದ ಕುರಿತ ಇವೆಲ್ಲ ಮಗ್ಗುಲುಗಳ ಚರ್ಚೆಯನ್ನು ಅರಳಿಕಟ್ಟೆ ಬಾಬಾ ಅಣುವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ವಿಜ್ಞಾನಿ ಡಾ ಎಂ ಎಸ್ ಶ್ರೀನಿವಾಸ ಮೂರ್ತಿಯವರೊಂದಿಗೆ ನಡೆಸಿದೆ. ಚರ್ಚೆಯು ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಮೊದಲನೆಯ ಭಾಗ ತೊಂಭತ್ತೇಳನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date: 20 February 2022Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2022-03-1150 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp96: ಕನ್ನಡ ರಂಗಭೂಮಿ ನಡೆದು ಬಂದ ದಾರಿ (ಭಾಗ ೨) - Evolution of Kannada theatre (Part 2)ಭರತ ಮುನಿಯ ನಾಟ್ಯಶಾಸ್ತ್ರದಿಂದ ಹಿಡಿದು, ಇಂದಿನ ಆಧುನಿಕ ರಂಗಭೂಮಿಯವರೆಗೆ ನಾಟಕ ರಂಗ ನಡೆದು ಬಂದ ದಾರಿ ನೇರವಾದುದಲ್ಲ. ಲಿಖಿತ ಇತಿಹಾಸದ ದಾಖಲೆಗಳ ಕೊರತೆಯಿಂದಾಗಿ ನಾವು ರಂಗಭೂಮಿಯ ಉಗಮವನ್ನು ತಿಳಿಯುವುದು ಕಷ್ಟ.ಕರ್ನಾಟಕದಲ್ಲಿ ಜನಿಸಿದ ಯಕ್ಷಗಾನ ದೊಡ್ಡಾಟ, ಸಣ್ಣಾಟಗಳು ಮುಂಬಯಿಯ ಫಾರ್ಸಿ ರಂಗಭೂಮಿಯನ್ನು ಪ್ರಭಾವಿಸಿದ್ದು, ತದನಂತರ ಇಲ್ಲಿನ ಕಂಪೆನಿ ನಾಟಕಗಳು ಫಾರ್ಸಿ ನಾಟಕಗಳ ಪ್ರಭಾವಕ್ಕೆ ಒಳಗಾಗಿದ್ದು, ಆಧುನಿಕ ರಂಗಭೂಮಿ ಪಾಶ್ಚಾತ್ಯ ಪ್ರಭಾವದಲ್ಲಿ ಬೆಳೆದಿದ್ದು ಹೀಗೆ ಅನೇಕ ಒಳಸುಳಿಗಳಿರುವ ಚರ್ಚೆಗೆ ಜೊತೆಯಾದವರು ಧಾರವಾಡದ ಗೊಂಬೆಮನೆ (ಗೊಂಬೆಯಾಟ ಮತ್ತು ರಂಗ ತರಬೇತಿ ಕೇಂದ್ರ)ಯ ಸ್ಥಾಪಕಿ ರಜನಿ ಗರುಡ.ಈ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಎರಡನೆಯ ಹಾಗೂ ಅಂತಿಮ ಭಾಗ ತೊಂಭತ್ತಾರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date: 30 January 2022Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2022-02-2852 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp95: ಕನ್ನಡ ರಂಗಭೂಮಿ ನಡೆದು ಬಂದ ದಾರಿ - Evolution of Kannada theatreಭರತ ಮುನಿಯ ನಾಟ್ಯಶಾಸ್ತ್ರದಿಂದ ಹಿಡಿದು, ಇಂದಿನ ಆಧುನಿಕ ರಂಗಭೂಮಿಯವರೆಗೆ ನಾಟಕ ರಂಗ ನಡೆದು ಬಂದ ದಾರಿ ನೇರವಾದುದಲ್ಲ. ಲಿಖಿತ ಇತಿಹಾಸದ ದಾಖಲೆಗಳ ಕೊರತೆಯಿಂದಾಗಿ ನಾವು ರಂಗಭೂಮಿಯ ಉಗಮವನ್ನು ತಿಳಿಯುವುದು ಕಷ್ಟ.ಕರ್ನಾಟಕದಲ್ಲಿ ಜನಿಸಿದ ಯಕ್ಷಗಾನ ದೊಡ್ಡಾಟ, ಸಣ್ಣಾಟಗಳು ಮುಂಬಯಿಯ ಫಾರ್ಸಿ ರಂಗಭೂಮಿಯನ್ನು ಪ್ರಭಾವಿಸಿದ್ದು, ತದನಂತರ ಇಲ್ಲಿನ ಕಂಪೆನಿ ನಾಟಕಗಳು ಫಾರ್ಸಿ ನಾಟಕಗಳ ಪ್ರಭಾವಕ್ಕೆ ಒಳಗಾಗಿದ್ದು, ಆಧುನಿಕ ರಂಗಭೂಮಿ ಪಾಶ್ಚಾತ್ಯ ಪ್ರಭಾವದಲ್ಲಿ ಬೆಳೆದಿದ್ದು ಹೀಗೆ ಅನೇಕ ಒಳಸುಳಿಗಳಿರುವ ಚರ್ಚೆಗೆ ಜೊತೆಯಾದವರು ಧಾರವಾಡದ ಗೊಂಬೆಮನೆ (ಗೊಂಬೆಯಾಟ ಮತ್ತು ರಂಗ ತರಬೇತಿ ಕೇಂದ್ರ)ಯ ಸ್ಥಾಪಕಿ ರಜನಿ ಗರುಡ.ಈ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಮೊದಲನೆಯ ಭಾಗ ತೊಂಭತ್ತೈದನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date: 30 January 2022Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2022-02-1743 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp94: ಸ್ಟಾರ್ಟಪ್ ಹಾಗೂ ವೆಂಚರ್ ಕ್ಯಾಪಿಟಲ್ ಜಗತ್ತಿನಲ್ಲೊಂದು ಸುತ್ತು 2/2 - A tour into startups and venture capital world 2/2ಜನವರಿ ೧೬ನ್ನು ರಾಷ್ಟ್ರೀಯ ಸ್ಟಾರ್ಟಪ್ ಗಳ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿ ಹೊಸ ಭಾರತಕ್ಕೆ ಈ ಸ್ಟಾರ್ಟಪ್ಗಳು ಬೆನ್ನೆಲುಬಾಗಲಿ ಎಂದು ಆಶಿಸಿದರು.ಐದು ವರ್ಷಗಳಲ್ಲಿ ಸುಮಾರು ಐನೂರರಿಂದ ಅರವತ್ತು ಸಾವಿರದಷ್ಟು ಸ್ಟಾರ್ಟಪ್ ಗಳು ಭಾರತದಲ್ಲಿ ಹುಟ್ಟಿವೆ. ಅಮೇರಿಕಾ, ಚೀನಾ ನಂತರ ಅತಿ ಹೆಚ್ಚು ಯೂನಿಕಾರ್ನ್ - ಒಂದು ಬಿಲಿಯನ್ ಡಾಲರ್ ಗಿಂತ ಹೆಚ್ಚು ಮೌಲ್ಯವುಳ್ಳ ಕಂಪೆನಿಗಳು - ಗಳಿಗೆ ಭಾರತ ಮನೆಯಾಗಿದೆ.ಈ ಸಂದರ್ಭದಲ್ಲಿ ಎಲ್ಲೆಲ್ಲೂ ಸ್ಟಾರ್ಟಪ್ ಕಲ್ಚರ್, ಬಂಡವಾಳ ಹೂಡಿಕೆ, ಸೀಡ್ ಇನ್ವೆಸ್ಟರ್, ವೆಂಚರ್ ಕ್ಯಾಪಿಟಲ್ (ವೀಸಿ) ಹೀಗೆ ಹಲವು ಪಾರಿಭಾಷಿಕ ಪದಗಳನ್ನು ಹರಿದಾಡುವುದನ್ನು ಕೇಳಿರುತ್ತೀರಿ. ಜತೆಗೆ ನಾವು ಅನಾದಿಕಾಲದಿಂದಲೂ ಕಾಣುತ್ತ ಬಂದಿರುವ ಸಣ್ಣ ಉದ್ದಿಮೆಗಳು, ಬೀದಿ ಬದಿಯ ಕಿರಾಣಿ ಅಂಗಡಿ, ಮಲಯಾಳಿ ಬೇಕರಿ, ಬೈಕ್ ಗ್ಯಾರೇಜು ಇವೆಲ್ಲ ಸ್ಟಾರ್ಟಪ್ ಹೌದೇ ಅಲ್ಲವೇ ಎನ್ನುವಂತಹ ಸಂದೇಹಗಳೂ ಇರುತ್ತವೆ.ಇವೆಲ್ಲ ಪ್ರಶ್ನೆಗಳಿಗೆ ಅರಳಿಕಟ್ಟೆಯ ಈ ಚರ್ಚೆಯಲ್ಲಿ ಉತ್ತರಿಸಲು ರಾಜೀವ್ ರಘುನಂದನ್ ನಮ್ಮೊಂದಿಗಿದ್ದಾರೆ. ಬೆಂಗಳೂರಿನ ಐಐಎಂನಲ್ಲಿ ಎಂಬಿಎ ಪದವಿ ಪಡೆದಿರುವ ರಾಜೀವ್ ಅರಳಿ ವೆಂಚರ್ಸ್ ಎಂಬ ಸಂಸ್ಥೆಯ ಮೂಲಕ ಸ್ಟಾರ್ಟಪ್ ಗಳಲ್ಲಿ ಬಂಡವಾಳ ಹೂಡುತ್ತಾರೆ. ಕನ್ನಡದಲ್ಲಿ ಹೆಸರಿಸಿದ ಏಕೈಕ ವಿಸಿ ವೆಂಚರ್ ಎಂಬ ಖ್ಯಾತಿ ಅರಳಿ ವೆಂಚರ್ಸ್ ನದ್ದು.ರಾಜೀವ್ ಜತೆಗಿನ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಎರಡನೆಯ ಹಾಗೂ ಅಂತಿಮ ಭಾಗ ತೊಂಭತ್ನಾಲ್ಕನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date: 08 January 2022Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2022-02-0745 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp93: ಸ್ಟಾರ್ಟಪ್ ಹಾಗೂ ವೆಂಚರ್ ಕ್ಯಾಪಿಟಲ್ ಜಗತ್ತಿನಲ್ಲೊಂದು ಸುತ್ತು - A tour into startups and venture capital worldಜನವರಿ ೧೬ನ್ನು ರಾಷ್ಟ್ರೀಯ ಸ್ಟಾರ್ಟಪ್ ಗಳ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿ ಹೊಸ ಭಾರತಕ್ಕೆ ಈ ಸ್ಟಾರ್ಟಪ್ಗಳು ಬೆನ್ನೆಲುಬಾಗಲಿ ಎಂದು ಆಶಿಸಿದರು.ಐದು ವರ್ಷಗಳಲ್ಲಿ ಸುಮಾರು ಐನೂರರಿಂದ ಅರವತ್ತು ಸಾವಿರದಷ್ಟು ಸ್ಟಾರ್ಟಪ್ ಗಳು ಭಾರತದಲ್ಲಿ ಹುಟ್ಟಿವೆ. ಅಮೇರಿಕಾ, ಚೀನಾ ನಂತರ ಅತಿ ಹೆಚ್ಚು ಯೂನಿಕಾರ್ನ್ - ಒಂದು ಬಿಲಿಯನ್ ಡಾಲರ್ ಗಿಂತ ಹೆಚ್ಚು ಮೌಲ್ಯವುಳ್ಳ ಕಂಪೆನಿಗಳು - ಗಳಿಗೆ ಭಾರತ ಮನೆಯಾಗಿದೆ.ಈ ಸಂದರ್ಭದಲ್ಲಿ ಎಲ್ಲೆಲ್ಲೂ ಸ್ಟಾರ್ಟಪ್ ಕಲ್ಚರ್, ಬಂಡವಾಳ ಹೂಡಿಕೆ, ಸೀಡ್ ಇನ್ವೆಸ್ಟರ್, ವೆಂಚರ್ ಕ್ಯಾಪಿಟಲ್ (ವೀಸಿ) ಹೀಗೆ ಹಲವು ಪಾರಿಭಾಷಿಕ ಪದಗಳನ್ನು ಹರಿದಾಡುವುದನ್ನು ಕೇಳಿರುತ್ತೀರಿ. ಜತೆಗೆ ನಾವು ಅನಾದಿಕಾಲದಿಂದಲೂ ಕಾಣುತ್ತ ಬಂದಿರುವ ಸಣ್ಣ ಉದ್ದಿಮೆಗಳು, ಬೀದಿ ಬದಿಯ ಕಿರಾಣಿ ಅಂಗಡಿ, ಮಲಯಾಳಿ ಬೇಕರಿ, ಬೈಕ್ ಗ್ಯಾರೇಜು ಇವೆಲ್ಲ ಸ್ಟಾರ್ಟಪ್ ಹೌದೇ ಅಲ್ಲವೇ ಎನ್ನುವಂತಹ ಸಂದೇಹಗಳೂ ಇರುತ್ತವೆ.ಇವೆಲ್ಲ ಪ್ರಶ್ನೆಗಳಿಗೆ ಅರಳಿಕಟ್ಟೆಯ ಈ ಚರ್ಚೆಯಲ್ಲಿ ಉತ್ತರಿಸಲು ರಾಜೀವ್ ರಘುನಂದನ್ ನಮ್ಮೊಂದಿಗಿದ್ದಾರೆ. ಬೆಂಗಳೂರಿನ ಐಐಎಂನಲ್ಲಿ ಎಂಬಿಎ ಪದವಿ ಪಡೆದಿರುವ ರಾಜೀವ್ ಅರಳಿ ವೆಂಚರ್ಸ್ ಎಂಬ ಸಂಸ್ಥೆಯ ಮೂಲಕ ಸ್ಟಾರ್ಟಪ್ ಗಳಲ್ಲಿ ಬಂಡವಾಳ ಹೂಡುತ್ತಾರೆ.ರಾಜೀವ್ ಜತೆಗಿನ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ತೊಂಭತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.00:00 - Intro01:02 - Education and background01:23 - Ad: Ipaaka Foods17:28 - Lack of initiatives among Kannadigas24:23 - Entrepreneurship and startup culture27:08 - What qualifies as a VC fundable startup30:21 - Examples for businesses that VC are interested39:31 - Developing idea in to business44:24 - Raising money from banks is a no go48:19 - Big companies vs startups53:29 - Role of technology in startups59:41 - Startup culture as a function of environmentShow Notes- Israel - A startup nation episode part1:   https://www.youtube.com/watch?v=NEkmjYnj0FcPart2: https://www.youtube.com/watch?v=33Bc3mrpsIARecording date: 08 January 2022Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2022-01-281h 04AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp92: ಹಳೇ ಬೆಂಗಳೂರು, ದೇವಮಾನವರು ಹಾಗೂ ಗೌರಿ ಲಂಕೇಶ್ ನೆನಪು (ಭಾಗ ೨) - Old Bangalore, God-men & Gauri Lankesh (2/2)ಅರಳಿಕಟ್ಟೆಯ ತೊಂಭತ್ತೆರಡನೆಯ  ಸಂಚಿಕೆಯಲ್ಲಿ ಜೊತೆಯಾಗಿರುವವರು ಚಿದಾನಂದ ರಾಜಘಟ್ಟ. ಪತ್ರಕರ್ತರಾಗಿ ಕೆಲಸಮಾಡುತ್ತಿರುವ ಚಿದು ಅಮೇರಿಕಾದಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ಐಟಿ ಕ್ರಾಂತಿಯನ್ನು ಅಭ್ಯಸಿಸುವ "The Horse That Flew", ತಮ್ಮ ವಿಚ್ಛೇದಿತ ಪತ್ನಿ ಗೌರಿ ಲಂಕೇಶ್ ಹತ್ಯೆಯ ನಂತರ ಬರೆದ "Illeberal India", ತಮಿಳು ನಾಡು ಮೂಲದ ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕುರಿತ "Kamala Harris: Phenomenal Woman" ಸೇರಿದಂತೆ ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಇದಲ್ಲದೆ ಕ್ರಿಕೆಟ್, ವಿದೇಶಾಂಗ ನೀತಿ , ದೇವಮಾನವರು ಹೀಗೆ ಹಲವಾರು ಆಸಕ್ತಿಯ ವಿಚಾರಗಳ ಕುರಿತು ಬರೆಯುತ್ತಾ ಬಂದಿದ್ದಾರೆ.ಅರಳಿಕಟ್ಟೆಯ ಲೋಕಾಭಿರಾಮದ ಚರ್ಚೆಯಲ್ಲಿ ಚಿದು ತಮ್ಮ ಬಾಲ್ಯ, ಓದು, ಎಚ್ ನರಸಿಂಹಯ್ಯ ಹಾಗೂ ವಿಚಾರವಾದದ ಪ್ರಭಾವದ ಕುರಿತು ತೆರೆದು ಕೊಂಡಿದ್ದಾರೆ. ಪರಮಹಂಸ ಯೋಗಾನಂದ, ಸತ್ಯ ಸಾಯಿ ಬಾಬ, ಜಗ್ಗಿ ವಾಸುದೇವ್, ಮಾತಾ ಅಮೃತಾನಂದ ಮಯಿ ಮೊದಲಾದ ದೇವ ಮಾನವರ ಲೋಕದ ಅವಲೋಕನ, ಭಾರತ ಸಾಫ್ಟವೇರ್ ರಫ್ತು ಮಾಡುವುದಕ್ಕೆ ಶುರು ಮಾಡುವ ಮೊದಲೇ ಜಗತ್ತಿಗೆ ಆಧ್ಯಾತ್ಮವನ್ನು ರಫ್ತು ಮಾಡಲು ಈ ದೇವಮಾನವರ "ಗ್ಲೋಬಲ್ ಅಪ್ರೋಚ್" ಎಷ್ಟರಮಟ್ಟಿಗೆ ಕಾರಣ?  ಅಮೇರಿಕಾದ ಕಂಪೆನಿಗಳನ್ನು ನಿರ್ವಹಿಸಲು ಭಾರತೀಯ ಮೂಲ ಸಿಇಓಗಳು ನೇಮಿಸಲ್ಪಟ್ಟಾಗ ಭಾರತೀಯರು ಹಾಗೂ ಇಲ್ಲಿನ ಮಾಧ್ಯಮಗಳು ಸಂಭ್ರಮಿಸುತ್ತವೆ, ಆದರೆ ಅದರ ಜೊತೆಗೇ ಅಮೇರಿಕಾದಲ್ಲಿ ಅಸಹಾಯಕ ವೃದ್ಧರನ್ನು ಪೀಡಿಸಿ ದುಡ್ಡು ಕದಿಯುವ ಜಾಲದ ಮೂಲವೂ ಕೂಡ ಭಾರತವೇ ಆಗಿರುವುದನ್ನು ಭಾರತೀಯರು ಏಕೆ ಎಚ್ಚರದಿಂದ ಕಾಣುತ್ತಿಲ್ಲ? - ಹೀಗೆ ಹಲವು ಕುತೂಹಲ ಪ್ರಶ್ನೆಗಳನ್ನು ಬಳಸಿ ಹರಿಯುವ ಚರ್ಚೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ.ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ.Recording date: 18 December 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2022-01-161h 24AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp91: ಹಳೇ ಬೆಂಗಳೂರು, ದೇವಮಾನವರು ಹಾಗೂ ಗೌರಿ ಲಂಕೇಶ್ ನೆನಪು - Old Bangalore, God-men & remembering Gauri Lankeshಅರಳಿಕಟ್ಟೆಯ ತೊಂಭತ್ತೊಂದನೆಯ ಸಂಚಿಕೆಯಲ್ಲಿ ಜೊತೆಯಾಗಿರುವವರು ಚಿದಾನಂದ ರಾಜಘಟ್ಟ. ಪತ್ರಕರ್ತರಾಗಿ ಕೆಲಸಮಾಡುತ್ತಿರುವ ಚಿದು ಅಮೇರಿಕಾದಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ಐಟಿ ಕ್ರಾಂತಿಯನ್ನು ಅಭ್ಯಸಿಸುವ "The Horse That Flew", ತಮ್ಮ ವಿಚ್ಛೇದಿತ ಪತ್ನಿ ಗೌರಿ ಲಂಕೇಶ್ ಹತ್ಯೆಯ ನಂತರ ಬರೆದ "Illeberal India", ತಮಿಳು ನಾಡು ಮೂಲದ ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕುರಿತ "Kamala Harris: Phenomenal Woman" ಸೇರಿದಂತೆ ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಇದಲ್ಲದೆ ಕ್ರಿಕೆಟ್, ವಿದೇಶಾಂಗ ನೀತಿ , ದೇವಮಾನವರು ಹೀಗೆ ಹಲವಾರು ಆಸಕ್ತಿಯ ವಿಚಾರಗಳ ಕುರಿತು ಬರೆಯುತ್ತಾ ಬಂದಿದ್ದಾರೆ.ಅರಳಿಕಟ್ಟೆಯ ಲೋಕಾಭಿರಾಮದ ಚರ್ಚೆಯ ಮೊದಲ ಭಾಗದಲ್ಲಿ ಚಿದು ತಮ್ಮ ಬಾಲ್ಯ, ಓದು, ಎಚ್ ನರಸಿಂಹಯ್ಯ ಹಾಗೂ ವಿಚಾರವಾದದ ಪ್ರಭಾವದ ಕುರಿತು ತೆರೆದು ಕೊಂಡಿದ್ದಾರೆ. ಪರಮಹಂಸ ಯೋಗಾನಂದ, ಸತ್ಯ ಸಾಯಿ ಬಾಬ, ಜಗ್ಗಿ ವಾಸುದೇವ್, ಮಾತಾ ಅಮೃತಾನಂದ ಮಯಿ ಮೊದಲಾದ ದೇವ ಮಾನವರ ಲೋಕದ ಅವಲೋಕನ, ಭಾರತ ಸಾಫ್ಟವೇರ್ ರಫ್ತು ಮಾಡುವುದಕ್ಕೆ ಶುರು ಮಾಡುವ ಮೊದಲೇ ಜಗತ್ತಿಗೆ ಆಧ್ಯಾತ್ಮವನ್ನು ರಫ್ತು ಮಾಡಲು ಈ ದೇವಮಾನವರ "ಗ್ಲೋಬಲ್ ಅಪ್ರೋಚ್" ಎಷ್ಟರಮಟ್ಟಿಗೆ ಕಾರಣ?  ಅಮೇರಿಕಾದ ಕಂಪೆನಿಗಳನ್ನು ನಿರ್ವಹಿಸಲು ಭಾರತೀಯ ಮೂಲ ಸಿಇಓಗಳು ನೇಮಿಸಲ್ಪಟ್ಟಾಗ ಭಾರತೀಯರು ಹಾಗೂ ಇಲ್ಲಿನ ಮಾಧ್ಯಮಗಳು ಸಂಭ್ರಮಿಸುತ್ತವೆ, ಆದರೆ ಅದರ ಜೊತೆಗೇ ಅಮೇರಿಕಾದಲ್ಲಿ ಅಸಹಾಯಕ ವೃದ್ಧರನ್ನು ಪೀಡಿಸಿ ದುಡ್ಡು ಕದಿಯುವ ಜಾಲದ ಮೂಲವೂ ಕೂಡ ಭಾರತವೇ ಆಗಿರುವುದನ್ನು ಭಾರತೀಯರು ಏಕೆ ಎಚ್ಚರದಿಂದ ಕಾಣುತ್ತಿಲ್ಲ? - ಹೀಗೆ ಹಲವು ಕುತೂಹಲ ಪ್ರಶ್ನೆಗಳನ್ನು ಬಳಸಿ ಹರಿಯುವ ಚರ್ಚೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ.Recording date: 18 December 2021Credits: Music: Crescents by Ketsa Licensed under creative commons. Icon made by Freepik from www.flaticon.comhttps://youtu.be/vessSrMIDfA--- Send in a voice message: https://anchor.fm/aralikatte/message2022-01-091h 04AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp90: ಸಾಮಾಜಿಕ ಜಾಲತಾಣಗಳ ಸಂದರ್ಭದಲ್ಲಿ ಸಮೂಹ ಸನ್ನಿ (ಭಾಗ ೨), Mass hysteria in the age of social media (Part 2)ಮೆಂಟಲ್ ಮಾಡೆಲ್ ಗಳು, ನಮ್ಮ ಆಲೋಚನಾ ಕ್ರಮಗಳಲ್ಲಿರುವ ದೋಷಗಳು- ಇವೇ ಮೊದಲಾದ ವಿಷಯಗಳನ್ನು ಕುರಿತು ಅರಳಿಕಟ್ಟೆ ಪ್ರಕಟಿಸಿದ ಪಾಡ್ ಕಾಸ್ಟ್ ಗಳು ಜನಪ್ರಿಯವಾಗಿವೆ. ಇದೇ ಪ್ರಯತ್ನವನ್ನು ಮುಂದುವರೆಸಿ ನಾವು ನಮ್ಮ ಸುತ್ತಮುತ್ತಲಿನ ಇತ್ತೀಚಿನ ಕೆಲವು ರಾಜಕೀಯ, ಸಾಂಸ್ಕೃತಿಕ ಪ್ರಕರಣಗಳನ್ನು ಪ್ರಸ್ತಾಪಿಸಿ ನಮ್ಮ ಆಲೋಚನಾ ಕ್ರಮಗಳಲ್ಲಿನ ದೋಷವನ್ನು ತಮ್ಮ ಅನುಕೂಲಕ್ಕೆ ದುರ್ಬಳಕೆ ಮಾಡಿಕೊಳ್ಳುವ ವ್ಯವಸ್ಥೆಯ ಬಗ್ಗೆ ಚರ್ಚಿಸಿದ್ದೇವೆ.ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ನಂದಿತಾ ಪ್ರಕರಣ, ಡಿಕೆ ರವಿ ಆತ್ಮಹತ್ಯೆ, ನಟ ಸುಶಾಂತ್ ಸಿಂಗ್ ಆತ್ಮಹತ್ಯೆ, ಇತ್ತೀಚೆಗೆ ನಮ್ಮನ್ನು ಅಗಲಿದ ನಟ ಪುನೀತ್ ರಾಜ್ ಕುಮಾರ್, ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಜನರಲ್ ಬಿಪಿನ್ ರಾವತ್ - ಇವೆಲ್ಲ ಹೇಗೆ ಸಮೂಹ ಸನ್ನಿಯನ್ನು ಸೃಷ್ಠಿಸುತ್ತವೆ? ಕಾರ್ಯ ಕಾರಣ ಸಂಬಂಧವಿಲ್ಲದ ಸುದ್ದಿಯನ್ನು ಅರ್ಥ ಮಾಡಿಕೊಳ್ಳಲು, ಅದನ್ನು ಅರಗಿಸಿಕೊಳ್ಳಲು ಜನ ಸಮೂಹ ನೆಚ್ಚುವ coping mechanisms ಎಂಥವು? ಇವುಗಳನ್ನು ತಮ್ಮ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುವ ಪಟ್ಟಭದ್ರ ಹಿತಾಸಕ್ತಿಗಳು, ಈ ಎಲ್ಲವನ್ನೂ ಉದ್ರೇಕಿಸಲು ಅನುಕೂಲ ಮಾಡಿಕೊಡುವ ಸಾಮಾಜಿಕ ಜಾಲತಾಣಗಳು - ಇವೆಲ್ಲವುಗಳನ್ನು ಒಳಗೊಂಡ ಗಹನವಾದ ಚರ್ಚೆಗೆ ನಮ್ಮನ್ನು ಸೇರಿದವರು ದಿ ಹಿಂದೂ ಪತ್ರಿಕೆಯಲ್ಲಿ ಪತ್ರಕರ್ತರಾಗಿರುವ ಆದಿತ್ಯ ಭಾರದ್ವಜ್ ಹಾಗೂ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿರುವ ಸುಶ್ಮ ಜೈನ್.ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು, ಎರಡನೆಯ ಹಾಗೂ ಅಂತಿಮ ಭಾಗ ತೊಂಭತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date: 12 December 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-12-301h 07AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp89: ಸಾಮಾಜಿಕ ಜಾಲತಾಣಗಳ ಸಂದರ್ಭದಲ್ಲಿ ಸಮೂಹ ಸನ್ನಿ, Mass hysteria in the age of social mediaಮೆಂಟಲ್ ಮಾಡೆಲ್ ಗಳು, ನಮ್ಮ ಆಲೋಚನಾ ಕ್ರಮಗಳಲ್ಲಿರುವ ದೋಷಗಳು- ಇವೇ ಮೊದಲಾದ ವಿಷಯಗಳನ್ನು ಕುರಿತು ಅರಳಿಕಟ್ಟೆ ಪ್ರಕಟಿಸಿದ ಪಾಡ್ ಕಾಸ್ಟ್ ಗಳು ಜನಪ್ರಿಯವಾಗಿವೆ. ಇದೇ ಪ್ರಯತ್ನವನ್ನು ಮುಂದುವರೆಸಿ ನಾವು ನಮ್ಮ ಸುತ್ತಮುತ್ತಲಿನ ಇತ್ತೀಚಿನ ಕೆಲವು ರಾಜಕೀಯ, ಸಾಂಸ್ಕೃತಿಕ ಪ್ರಕರಣಗಳನ್ನು ಪ್ರಸ್ತಾಪಿಸಿ ನಮ್ಮ ಆಲೋಚನಾ ಕ್ರಮಗಳಲ್ಲಿನ ದೋಷವನ್ನು ತಮ್ಮ ಅನುಕೂಲಕ್ಕೆ ದುರ್ಬಳಕೆ ಮಾಡಿಕೊಳ್ಳುವ ವ್ಯವಸ್ಥೆಯ ಬಗ್ಗೆ ಚರ್ಚಿಸಿದ್ದೇವೆ.ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ನಂದಿತಾ ಪ್ರಕರಣ, ಡಿಕೆ ರವಿ ಆತ್ಮಹತ್ಯೆ, ನಟ ಸುಶಾಂತ್ ಸಿಂಗ್ ಆತ್ಮಹತ್ಯೆ, ಇತ್ತೀಚೆಗೆ ನಮ್ಮನ್ನು ಅಗಲಿದ ನಟ ಪುನೀತ್ ರಾಜ್ ಕುಮಾರ್, ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಜನರಲ್ ಬಿಪಿನ್ ರಾವತ್ - ಇವೆಲ್ಲ ಹೇಗೆ ಸಮೂಹ ಸನ್ನಿಯನ್ನು ಸೃಷ್ಠಿಸುತ್ತವೆ? ಕಾರ್ಯ ಕಾರಣ ಸಂಬಂಧವಿಲ್ಲದ ಸುದ್ದಿಯನ್ನು ಅರ್ಥ ಮಾಡಿಕೊಳ್ಳಲು, ಅದನ್ನು ಅರಗಿಸಿಕೊಳ್ಳಲು ಜನ ಸಮೂಹ ನೆಚ್ಚುವ coping mechanisms ಎಂಥವು? ಇವುಗಳನ್ನು ತಮ್ಮ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುವ ಪಟ್ಟಭದ್ರ ಹಿತಾಸಕ್ತಿಗಳು, ಈ ಎಲ್ಲವನ್ನೂ ಉದ್ರೇಕಿಸಲು ಅನುಕೂಲ ಮಾಡಿಕೊಡುವ ಸಾಮಾಜಿಕ ಜಾಲತಾಣಗಳು - ಇವೆಲ್ಲವುಗಳನ್ನು ಒಳಗೊಂಡ ಗಹನವಾದ ಚರ್ಚೆಗೆ ನಮ್ಮನ್ನು ಸೇರಿದವರು ದಿ ಹಿಂದೂ ಪತ್ರಿಕೆಯಲ್ಲಿ ಪತ್ರಕರ್ತರಾಗಿರುವ ಆದಿತ್ಯ ಭಾರದ್ವಜ್ ಹಾಗೂ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿರುವ ಸುಶ್ಮ ಜೈನ್.ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು, ಮೊದಲನೆಯ ಭಾಗ ಎಂಭತ್ತೊಂಭತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date: 12 December 2021Credits: Music: Crescents by Ketsa Licensed under creative commons. Icon made by Freepik from www.flaticon.com**Show notes**- The art of conjuring alternate realities - Shivam Shankar Singh - https://www.amazon.in/Art-Conjuring-Alternate-Realities-Information/dp/9354227406- Soujanya Case : https://www.deccanherald.com/content/596297/soujanya-case-court-slams-cbi.html--- Send in a voice message: https://anchor.fm/aralikatte/message2021-12-221h 05AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp88: ಕನ್ನಡದಲ್ಲಿ ತಾಂತ್ರಿಕ ಶಿಕ್ಷಣದ ಸಾಧ್ಯತೆ ಮತ್ತು ಸವಾಲುಗಳು (2)- Feasibility and challenges of technical education in Kannada (2)ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಅಧ್ಯಕ್ಷರಾದ ಮಹೇಶ್ ಜೋಶಿಯವರು ಸಾಹಿತ್ಯ ಪರಿಷತ್ ಕನ್ನಡದಲ್ಲಿ ಕಾನೂನು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಅನುಕೂಲವಾಗುವ ಪಠ್ಯಗಳನ್ನು ಸಿದ್ಧ ಪಡಿಸುವುದರಲ್ಲಿ ತೊಡಗುತ್ತದೆ ಎಂದು ಹೇಳಿದ್ದಾರೆ.ಕನ್ನಡದಲ್ಲಿ ಉನ್ನತ ಶಿಕ್ಷಣದ ಸಾಧ್ಯತೆಗಳೇನು? ಕನ್ನಡದಲ್ಲಿಯೇ ಎಲ್ಲಾ ಶಿಕ್ಷಣ ದೊರೆಯಬೇಕು ಎನ್ನುವ ನಿಲುವಿಗೂ, ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಒಮ್ಮೆಗೇ ಇಂಗ್ಲೀಷ್ ಮಾಧ್ಯಮದ ಉನ್ನತ ಶಿಕ್ಷಣಕ್ಕೆ ಜಿಗಿಯಲು ಕೊಂಚ ಮಟ್ಟಿಗಿನ ನೆರವು ನೀಡುವ ಕೆಲಸವನ್ನಷ್ಟೇ ಕನ್ನಡದ ಪಠ್ಯ ಮಾಡಿದರೆ ಸಾಕು ಎನ್ನುವ ನಿಲುವಿಗೂ ಇರುವ ವ್ಯತ್ಯಾಸವೇನು?ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ (Signals, Systems and control) ಎನ್ನುವ ಇಂಜಿನಿಯರಿಂಗ್ ವಿಷಯಕ್ಕೆ ಕನ್ನಡದಲ್ಲಿ ಪಠ್ಯವನ್ನು ಬರೆದು ಪ್ರಕಟಿಸಿರುವ ಡಾ. ಸುದರ್ಶನ್ ಪಾಟೀಲ ಕುಲಕರ್ಣಿ ಅರಳಿಕಟ್ಟೆಯ ಈ ವಾರದ ಅತಿಥಿ.ಇವರೊಂದಿಗೆ ನಾವು ನಡೆಸಿದ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಎರಡನೆಯ ಹಾಗೂ ಅಂತಿಮ ಭಾಗ ಎಂಭತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date:  14 November 2021Credits: Music: Crescents by Ketsa Licensed under creative commons. Icon made by Freepik from www.flaticon.com**Show notes**- ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ: Signals, Systems and Control - https://play.google.com/store/books/details/Dr_Sudarshan_Patilkulkarni_%E0%B2%B8_%E0%B2%95_%E0%B2%A4_%E0%B2%B5_%E0%B2%AF%E0%B2%B5%E0%B2%B8_%E0%B2%A5_%E0%B2%AE%E0%B2%A4_%E0%B2%A4_%E0%B2%A8_%E0%B2%AF?id=wBf-DwAAQBAJ- Stop calling everything AI - Michail Jordan : https://spectrum.ieee.org/stop-calling-everything-ai-machinelearning-pioneer-says- Episode Sponsor : Chewda coffee - order from +91-8073317932 - use promo code AK10 to claim 10% discount--- Send in a voice message: https://anchor.fm/aralikatte/message2021-12-1449 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp87: ಕನ್ನಡದಲ್ಲಿ ತಾಂತ್ರಿಕ ಶಿಕ್ಷಣದ ಸಾಧ್ಯತೆ ಮತ್ತು ಸವಾಲುಗಳು - Feasibility and challenges of technical education in Kannadaಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಅಧ್ಯಕ್ಷರಾದ ಮಹೇಶ್ ಜೋಶಿಯವರು ಸಾಹಿತ್ಯ ಪರಿಷತ್ ಕನ್ನಡದಲ್ಲಿ ಕಾನೂನು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಅನುಕೂಲವಾಗುವ ಪಠ್ಯಗಳನ್ನು ಸಿದ್ಧ ಪಡಿಸುವುದರಲ್ಲಿ ತೊಡಗುತ್ತದೆ ಎಂದು ಹೇಳಿದ್ದಾರೆ.ಕನ್ನಡದಲ್ಲಿ ಉನ್ನತ ಶಿಕ್ಷಣದ ಸಾಧ್ಯತೆಗಳೇನು? ಕನ್ನಡದಲ್ಲಿಯೇ ಎಲ್ಲಾ ಶಿಕ್ಷಣ ದೊರೆಯಬೇಕು ಎನ್ನುವ ನಿಲುವಿಗೂ, ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಒಮ್ಮೆಗೇ ಇಂಗ್ಲೀಷ್ ಮಾಧ್ಯಮದ ಉನ್ನತ ಶಿಕ್ಷಣಕ್ಕೆ ಜಿಗಿಯಲು ಕೊಂಚ ಮಟ್ಟಿಗಿನ ನೆರವು ನೀಡುವ ಕೆಲಸವನ್ನಷ್ಟೇ ಕನ್ನಡದ ಪಠ್ಯ ಮಾಡಿದರೆ ಸಾಕು ಎನ್ನುವ ನಿಲುವಿಗೂ ಇರುವ ವ್ಯತ್ಯಾಸವೇನು?ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ (Signals, Systems and control) ಎನ್ನುವ ಇಂಜಿನಿಯರಿಂಗ್ ವಿಷಯಕ್ಕೆ ಕನ್ನಡದಲ್ಲಿ ಪಠ್ಯವನ್ನು ಬರೆದು ಪ್ರಕಟಿಸಿರುವ ಡಾ. ಸುದರ್ಶನ್ ಪಾಟೀಲ ಕುಲಕರ್ಣಿ ಅರಳಿಕಟ್ಟೆಯ ಈ ವಾರದ ಅತಿಥಿ.ಇವರೊಂದಿಗೆ ನಾವು ನಡೆಸಿದ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ಎಂಭತ್ತೇಳನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Show notes- ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ: Signals, Systems and Control - https://play.google.com/store/books/details/Dr_Sudarshan_Patilkulkarni_%E0%B2%B8_%E0%B2%95_%E0%B2%A4_%E0%B2%B5_%E0%B2%AF%E0%B2%B5%E0%B2%B8_%E0%B2%A5_%E0%B2%AE%E0%B2%A4_%E0%B2%A4_%E0%B2%A8_%E0%B2%AF?id=wBf-DwAAQBAJ- Episode Sponsor : Chewda coffee - order from +91-8073317932 - use promo code AK10 to claim 10% discount--- Send in a voice message: https://anchor.fm/aralikatte/message2021-12-0746 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp86: ಸಂಸ್ಥೆಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದ ಪಾತ್ರವೇನು? (ಭಾಗ ೨) - Role of Human Resources in an organization (Part 2)ಸಂಸ್ಥೆಯೊಂದರಲ್ಲಿ ಎಚ್ ಆರ್ ಅಥವಾ ಮಾನವ ಸಂಪನ್ಮೂಲ ಅಧಿಕಾರಿಗಳು ಮಾಡುವ ಕೆಲಸವೇನು? ಸಂಸ್ಥೆಗಳಲ್ಲಿ ಈ ಹುದ್ದೆಯ ಅಗತ್ಯ ಯಾವಾಗಿನಿಂದ ಶುರುವಾಯಿತು? ರಂಗೋಲಿ ಸ್ಪರ್ಧೆ, ಎಥ್ನಿಕ್ ಡೇ, ಪಾರ್ಟಿಗಳನ್ನು ಆಯೋಜಿಸುವುದಷ್ಟೇ ಈ ವಿಭಾಗದ ಕೆಲಸವೇ?ರಾಜ ಮಹಾರಾಜರು, ಕೈಗಾರಿಕಾ ಕ್ರಾಂತಿಯಿಂದ ಹಿಡಿದು ಈಗಿನ ಗಿಗ್ ಎಕಾನಮಿಯ ಸಮಯದಲ್ಲಿ ಎಚ್ ಆರ್ ಹುದ್ದೆಯ ಜವಾಬ್ದಾರಿಗಳು ಹೇಗೆ ವಿಸ್ತರಿಸುತ್ತಾ, ವಿಕಸಿಸುತ್ತಾ ಬಂದಿವೆ? ಕಾಲೇಜಿನಿಂದ ಹೊರ ಬರುವ ವಿದ್ಯಾರ್ಥಿಗಳು ಉದ್ದಿಮೆಗಳಲ್ಲಿ ತೊಡಗಲು ಏನು ತರಬೇತಿ ಪಡೆಯಬೇಕು? ಎಚ್ ಆರ್ ಗಮನ ಸೆಳೆಯುವಂತಹ ರೆಸ್ಯೂಮೆ ಹೇಗೆ ರೆಡಿ ಮಾಡಬೇಕು?ಇವೇ ಮೊದಲಾದ ಉಪಯುಕ್ತ ಪ್ರಶ್ನೆಗಳೊಂದಿಗೆ ಅರಳಿಕಟ್ಟೆ ಕೃಪಾ ಎನ್ ಎಸ್ ರೊಂದಿಗೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಕೃಪಾ ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯೊಂದರಲ್ಲಿ ಎಚ್ ಆರ್ ವಿಭಾಗದಲ್ಲಿ ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.ಚರ್ಚೆಯ ಎರಡನೆಯ ಭಾಗ ಎಂಭತ್ತಾರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date:  30 October 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-11-2647 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp85: ಸಂಸ್ಥೆಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದ ಪಾತ್ರವೇನು? - Role of Human Resources in an organizationಸಂಸ್ಥೆಯೊಂದರಲ್ಲಿ ಎಚ್ ಆರ್ ಅಥವಾ ಮಾನವ ಸಂಪನ್ಮೂಲ ಅಧಿಕಾರಿಗಳು ಮಾಡುವ ಕೆಲಸವೇನು? ಸಂಸ್ಥೆಗಳಲ್ಲಿ ಈ ಹುದ್ದೆಯ ಅಗತ್ಯ ಯಾವಾಗಿನಿಂದ ಶುರುವಾಯಿತು? ರಂಗೋಲಿ ಸ್ಪರ್ಧೆ, ಎಥ್ನಿಕ್ ಡೇ, ಪಾರ್ಟಿಗಳನ್ನು ಆಯೋಜಿಸುವುದಷ್ಟೇ ಈ ವಿಭಾಗದ ಕೆಲಸವೇ?ರಾಜ ಮಹಾರಾಜರು, ಕೈಗಾರಿಕಾ ಕ್ರಾಂತಿಯಿಂದ ಹಿಡಿದು ಈಗಿನ ಗಿಗ್ ಎಕಾನಮಿಯ ಸಮಯದಲ್ಲಿ ಎಚ್ ಆರ್ ಹುದ್ದೆಯ ಜವಾಬ್ದಾರಿಗಳು ಹೇಗೆ ವಿಸ್ತರಿಸುತ್ತಾ, ವಿಕಸಿಸುತ್ತಾ ಬಂದಿವೆ? ಕಾಲೇಜಿನಿಂದ ಹೊರ ಬರುವ ವಿದ್ಯಾರ್ಥಿಗಳು ಉದ್ದಿಮೆಗಳಲ್ಲಿ ತೊಡಗಲು ಏನು ತರಬೇತಿ ಪಡೆಯಬೇಕು? ಎಚ್ ಆರ್ ಗಮನ ಸೆಳೆಯುವಂತಹ ರೆಸ್ಯೂಮೆ ಹೇಗೆ ರೆಡಿ ಮಾಡಬೇಕು?ಇವೇ ಮೊದಲಾದ ಉಪಯುಕ್ತ ಪ್ರಶ್ನೆಗಳೊಂದಿಗೆ ಅರಳಿಕಟ್ಟೆ ಕೃಪಾ ಎನ್ ಎಸ್ ರೊಂದಿಗೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಕೃಪಾ ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯೊಂದರಲ್ಲಿ ಎಚ್ ಆರ್ ವಿಭಾಗದಲ್ಲಿ ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.ಚರ್ಚೆಯ ಮೊದಲ ಭಾಗ ಎಂಭತ್ತೈದನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date:  30 October 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-11-1745 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp84: ಇಮೇಜ್ ಕನ್ಸಲ್ಟೆಂಟ್ ಜೊತೆಗೊಂದು ಮಾತುಕತೆ (ಭಾಗ ೨)- A conversation with an image consultant (Part 2)ಕೆಲಸಕ್ಕೆಂದು ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳು, ಬಾಳ ಸಂಗಾತಿಯನ್ನು ಅರಸಿ ಡೇಟಿಂಗಿಗೆ ಹೋಗುವ ಯುವಕ ಯುವತಿಯರು, ದೂರದ ದೇಶಕ್ಕೆ ಓದುವುದಕ್ಕೆ ಹೋಗುವ ವಿದ್ಯಾರ್ಥಿಗಳು, ಟಿವಿ ಸಂದರ್ಶನದಲ್ಲಿ ಭಾಗವಹಿಸಲು ಹೊರಡುವ ಅತಿಥಿಗಳು, ಸಿನಿಮಾ ತಾರೆಯರು, ರಾಜಕಾರಣಿಗಳು ಹೀಗೆ ಹಲವರಿಗೆ ತಾವು ಮತ್ತೊಬ್ಬರ ಮೇಲೆ ಒಳ್ಳೆಯ ಪ್ರಭಾವ ಬೀರಬೇಕು ಎನ್ನುವ ಬಯಕೆ ಇರುತ್ತದೆ.ಇಂತಹ ಸನ್ನಿವೇಶಗಳಲ್ಲಿ ಹೇಗೆ ವರ್ತಿಸಬೇಕು, ಯಾವ ರೀತಿಯ ವೇಷಭೂಷಣ ತೊಡಬೇಕು, ಹೇಗೆ ಮಾತನಾಡಬೇಕು, ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವ ತರಬೇತಿಯನ್ನು ನೀಡುವ ವೃತ್ತಿಪರರನ್ನು ಇಮೇಜ್ ಕನ್ಸಲ್ಟೆಂಟ್ಸ್ ಎಂದು ಕರೆಯುತ್ತಾರೆ.ಈ ಬಗೆಯ ಇಮೇಜ್ ಕನ್ಸಲ್ಟಿಂಗ್ ಮಾಡುವ ಕನ್ನಡತಿ ವಿದ್ಯಾ ನಾಗ್ ರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.ಎರಡನೆಯ ಹಾಗೂ ಅಂತಿಮ ಭಾಗ ಎಂಭತ್ನಾಲ್ಕನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date:  23 October 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-11-1230 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp83: ಇಮೇಜ್ ಕನ್ಸಲ್ಟೆಂಟ್ ಜೊತೆಗೊಂದು ಮಾತುಕತೆ - A conversation with an image consultantಕೆಲಸಕ್ಕೆಂದು ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳು, ಬಾಳ ಸಂಗಾತಿಯನ್ನು ಅರಸಿ ಡೇಟಿಂಗಿಗೆ ಹೋಗುವ ಯುವಕ ಯುವತಿಯರು, ದೂರದ ದೇಶಕ್ಕೆ ಓದುವುದಕ್ಕೆ ಹೋಗುವ ವಿದ್ಯಾರ್ಥಿಗಳು, ಟಿವಿ ಸಂದರ್ಶನದಲ್ಲಿ ಭಾಗವಹಿಸಲು ಹೊರಡುವ ಅತಿಥಿಗಳು, ಸಿನಿಮಾ ತಾರೆಯರು, ರಾಜಕಾರಣಿಗಳು ಹೀಗೆ ಹಲವರಿಗೆ ತಾವು ಮತ್ತೊಬ್ಬರ ಮೇಲೆ ಒಳ್ಳೆಯ ಪ್ರಭಾವ ಬೀರಬೇಕು ಎನ್ನುವ ಬಯಕೆ ಇರುತ್ತದೆ.ಇಂತಹ ಸನ್ನಿವೇಶಗಳಲ್ಲಿ ಹೇಗೆ ವರ್ತಿಸಬೇಕು, ಯಾವ ರೀತಿಯ ವೇಷಭೂಷಣ ತೊಡಬೇಕು, ಹೇಗೆ ಮಾತನಾಡಬೇಕು, ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವ ತರಬೇತಿಯನ್ನು ನೀಡುವ ವೃತ್ತಿಪರರನ್ನು ಇಮೇಜ್ ಕನ್ಸಲ್ಟೆಂಟ್ಸ್ ಎಂದು ಕರೆಯುತ್ತಾರೆ.ಈ ಬಗೆಯ ಇಮೇಜ್ ಕನ್ಸಲ್ಟಿಂಗ್ ಮಾಡುವ ಕನ್ನಡತಿ ವಿದ್ಯಾ ನಾಗ್ ರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.ಮೊದಲ ಭಾಗ ಎಂಭತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date:  23 October 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-11-0755 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp82: ಕಸ ವಿಲೇವಾರಿ ಮಾಡುವವರ ಬಗ್ಗೆ ನಿಮಗೆಷ್ಟು ಗೊತ್ತು? (ಭಾಗ ೨) - What do you know about waste pickers? (Part 2)ಹಸಿ ಕಸ, ಒಣ ಕಸ ಎಂದು ಮನೆಯ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರ ಕೈಗೆ ಕೊಟ್ಟ ನಂತರ ಏನಾಗುತ್ತದೆ? ಮನೆ ಮನೆಯಿಂದ ಕಸ ಸಂಗ್ರಹಿಸುವ ಪೌರಕಾರ್ಮಿಕರನ್ನು ಹೊರತು ಪಡಿಸಿ ಕಸ ಆಯುವ ಸಾವಿರಾರು ಕೆಲಸಗಾರರ ಬಗ್ಗೆ ನಿಮಗೆಷ್ಟು ಗೊತ್ತು?ನಾವು ಎಸೆಯುವ ಪ್ಲಾಸ್ಟಿಕ್ ಕಸದಲ್ಲಿ ಶೇಕಡಾ ೪೦ರಷ್ಟು ಕಸ ಪುನರ್ಬಳಕೆಗೆ ಅನರ್ಹವಾದದ್ದು ಎಂಬುದು ನಿಮಗೆ ತಿಳಿದಿದೆಯೇ? ಎಪ್ಪತ್ತಕ್ಕಿಂತ ಹೆಚ್ಚು ಬಗೆಯ ಪ್ಲಾಸ್ಟಿಕ್ ಕಸದಲ್ಲಿ ಚಿಪ್ಸ್ ಪ್ಯಾಕೆಟ್ ನ ಪ್ಲಾಸ್ಟಿಕ್ ಅತ್ಯಂತ ಮಾರಕವಾದದ್ದು ಏಕೆ?ಬೆಂಗಳೂರಿನ ಕಸ ವಿಲೇವಾರಿಯ ಬಜೆಟ್ ಒಂದು ಸಾವಿರ ಕೋಟಿ ರುಪಾಯಿ ಎಂಬುದು ನಿಮಗೆ ಗೊತ್ತೆ? ಹಳ್ಳಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದಕ್ಕೆ ಸ್ಯಾಶೆ ಬಳಕೆ ಅತ್ಯಂತ ಉಪಯುಕ್ತವಾದದ್ದು ಆದರೆ ಅದರಿಂದ ಉತ್ಪನ್ನವಾಗುವ ತ್ಯಾಜ್ಯ ನಿರ್ವಹಣೆ ಕಷ್ಟ ಏಕೆ?ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ನಮ್ಮ ಈ ವಾರದ ಅತಿಥಿ ನಳಿನಿ ಶೇಖರ್. ನನ್ನನ್ನು ಮೇಡಂ ಎಂದು ಕರೆದರೆ ಐದು ರುಪಾಯಿ ದಂಡ ತೆರಬೇಕು ಎಂದು ತಾಕೀತು ಮಾಡಿ ಮಾತು ಶುರುಮಾಡಿದ ನಳಿನಿ ಹಸಿರು ದಳ ಎಂಬ ಸಂಸ್ಥೆಯ ಮೂಲಕ ಕಸ ಆಯುವ ಕೆಲಸಗಾರರನ್ನು ಸಂಘಟಿಸುವಲ್ಲಿ ಕೆಲಸಮಾಡುತ್ತಿದ್ದಾರೆ. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ.ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ.ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ.Recording date:  19 September 2021Credits: Music: Crescents by Ketsa Licensed under creative commons. Icon made by Freepik from www.flaticon.comShow Notes- Episode sponsored by MyLang Books : https://mylang.in/Use exclusive promo code AK20 to get flat 20% off on your first purchase.Use exclusive promo code AK10 to get flat 10% off on every purchase.--- Send in a voice message: https://anchor.fm/aralikatte/message2021-11-0238 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp81: ಕಸ ವಿಲೇವಾರಿ ಮಾಡುವವರ ಬಗ್ಗೆ ನಿಮಗೆಷ್ಟು ಗೊತ್ತು? - What do you know about waste pickers?ಹಸಿ ಕಸ, ಒಣ ಕಸ ಎಂದು ಮನೆಯ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರ ಕೈಗೆ ಕೊಟ್ಟ ನಂತರ ಏನಾಗುತ್ತದೆ? ಮನೆ ಮನೆಯಿಂದ ಕಸ ಸಂಗ್ರಹಿಸುವ ಪೌರಕಾರ್ಮಿಕರನ್ನು ಹೊರತು ಪಡಿಸಿ ಕಸ ಆಯುವ ಸಾವಿರಾರು ಕೆಲಸಗಾರರ ಬಗ್ಗೆ ನಿಮಗೆಷ್ಟು ಗೊತ್ತು?ನಾವು ಎಸೆಯುವ ಪ್ಲಾಸ್ಟಿಕ್ ಕಸದಲ್ಲಿ ಶೇಕಡಾ ೪೦ರಷ್ಟು ಕಸ ಪುನರ್ಬಳಕೆಗೆ ಅನರ್ಹವಾದದ್ದು ಎಂಬುದು ನಿಮಗೆ ತಿಳಿದಿದೆಯೇ? ಎಪ್ಪತ್ತಕ್ಕಿಂತ ಹೆಚ್ಚು ಬಗೆಯ ಪ್ಲಾಸ್ಟಿಕ್ ಕಸದಲ್ಲಿ ಚಿಪ್ಸ್ ಪ್ಯಾಕೆಟ್ ನ ಪ್ಲಾಸ್ಟಿಕ್ ಅತ್ಯಂತ ಮಾರಕವಾದದ್ದು ಏಕೆ?ಬೆಂಗಳೂರಿನ ಕಸ ವಿಲೇವಾರಿಯ ಬಜೆಟ್ ಒಂದು ಸಾವಿರ ಕೋಟಿ ರುಪಾಯಿ ಎಂಬುದು ನಿಮಗೆ ಗೊತ್ತೆ? ಹಳ್ಳಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದಕ್ಕೆ ಸ್ಯಾಶೆ ಬಳಕೆ ಅತ್ಯಂತ ಉಪಯುಕ್ತವಾದದ್ದು ಆದರೆ ಅದರಿಂದ ಉತ್ಪನ್ನವಾಗುವ ತ್ಯಾಜ್ಯ ನಿರ್ವಹಣೆ ಕಷ್ಟ ಏಕೆ?ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ನಮ್ಮ ಈ ವಾರದ ಅತಿಥಿ ನಳಿನಿ ಶೇಖರ್. ನನ್ನನ್ನು ಮೇಡಂ ಎಂದು ಕರೆದರೆ ಐದು ರುಪಾಯಿ ದಂಡ ತೆರಬೇಕು ಎಂದು ತಾಕೀತು ಮಾಡಿ ಮಾತು ಶುರುಮಾಡಿದ ನಳಿನಿ ಹಸಿರು ದಳ ಎಂಬ ಸಂಸ್ಥೆಯ ಮೂಲಕ ಕಸ ಆಯುವ ಕೆಲಸಗಾರರನ್ನು ಸಂಘಟಿಸುವಲ್ಲಿ ಕೆಲಸಮಾಡುತ್ತಿದ್ದಾರೆ. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ.ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ.Recording date:  19 September 2021Credits: Music: Crescents by Ketsa Licensed under creative commons. Icon made by Freepik from www.flaticon.comShow Notes- Episode sponsored by MyLang Books : https://mylang.in/Use exclusive promo code AK20 to get flat 20% off on your first purchase.Use exclusive promo code AK10 to get flat 10% off on every purchase.--- Send in a voice message: https://anchor.fm/aralikatte/message2021-11-0153 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp81: ಕಸ ವಿಲೇವಾರಿ ಮಾಡುವವರ ಬಗ್ಗೆ ನಿಮಗೆಷ್ಟು ಗೊತ್ತು? - What do you know about waste pickers?ಹಸಿ ಕಸ, ಒಣ ಕಸ ಎಂದು ಮನೆಯ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರ ಕೈಗೆ ಕೊಟ್ಟ ನಂತರ ಏನಾಗುತ್ತದೆ? ಮನೆ ಮನೆಯಿಂದ ಕಸ ಸಂಗ್ರಹಿಸುವ ಪೌರಕಾರ್ಮಿಕರನ್ನು ಹೊರತು ಪಡಿಸಿ ಕಸ ಆಯುವ ಸಾವಿರಾರು ಕೆಲಸಗಾರರ ಬಗ್ಗೆ ನಿಮಗೆಷ್ಟು ಗೊತ್ತು? ನಾವು ಎಸೆಯುವ ಪ್ಲಾಸ್ಟಿಕ್ ಕಸದಲ್ಲಿ ಶೇಕಡಾ ೪೦ರಷ್ಟು ಕಸ ಪುನರ್ಬಳಕೆಗೆ ಅನರ್ಹವಾದದ್ದು ಎಂಬುದು ನಿಮಗೆ ತಿಳಿದಿದೆಯೇ? ಎಪ್ಪತ್ತಕ್ಕಿಂತ ಹೆಚ್ಚು ಬಗೆಯ ಪ್ಲಾಸ್ಟಿಕ್ ಕಸದಲ್ಲಿ ಚಿಪ್ಸ್ ಪ್ಯಾಕೆಟ್ ನ ಪ್ಲಾಸ್ಟಿಕ್ ಅತ್ಯಂತ ಮಾರಕವಾದದ್ದು ಏಕೆ? ಬೆಂಗಳೂರಿನ ಕಸ ವಿಲೇವಾರಿಯ ಬಜೆಟ್ ಒಂದು ಸಾವಿರ ಕೋಟಿ ರುಪಾಯಿ ಎಂಬುದು ನಿಮಗೆ ಗೊತ್ತೆ? ಹಳ್ಳಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದಕ್ಕೆ ಸ್ಯಾಶೆ ಬಳಕೆ ಅತ್ಯಂತ ಉಪಯುಕ್ತವಾದದ್ದು ಆದರೆ ಅದರಿಂದ ಉತ್ಪನ್ನವಾಗುವ ತ್ಯಾಜ್ಯ ನಿರ್ವಹಣೆ ಕಷ್ಟ ಏಕೆ? ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ನಮ್ಮ ಈ ವಾರದ ಅತಿಥಿ ನಳಿನಿ ಶೇಖರ್. ನನ್ನನ್ನು ಮೇಡಂ ಎಂದು ಕರೆದರೆ ಐದು ರುಪಾಯಿ ದಂಡ ತೆರಬೇಕು ಎಂದು ತಾಕೀತು ಮಾಡಿ ಮಾತು ಶುರುಮಾಡಿದ ನಳಿನಿ ಹಸಿರು ದಳ ಎಂಬ ಸಂಸ್ಥೆಯ ಮೂಲಕ ಕಸ ಆಯುವ ಕೆಲಸಗಾರರನ್ನು ಸಂಘಟಿಸುವಲ್ಲಿ ಕೆಲಸಮಾಡುತ್ತಿದ್ದಾರೆ. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ. ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ. Recording date:  19 September 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message2021-10-2451 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp80: ಫೋಟೊಗ್ರಾಫರ್ ಮನಸ್ಸಿನ ಕಣ್ಣಲ್ಲಿ ಬೆಂಗಳೂರು (ಭಾಗ ೨) - Bengaluru in photographer's eye in the mind (Part 2)ಕೋಡಿಯಾಲ್ ಬೈಲಿನಲ್ಲಿ ಬೀದಿ ಗುಡಿಸುವ ವೃದ್ಧೆ ಲಕ್ಷ್ಮಿ ಅಕ್ಕ, ಬೆಂಗಳೂರಿನ ಜೆ ಪಿ ನಗರದ ಅಪಾರ್ಟ್ಮೆಂಟೊಂದರಿಂದ ಕಸ ವಿಲೇವಾರಿ ಮಾಡುತ್ತಿದ್ದ ಮಲ್ಲಯ್ಯರಂತಹ ಜನಸಾಮಾನ್ಯರ ಭಿತ್ತಿಚಿತ್ರಗಳನ್ನು ಮಹೇಶ್ ಭಟ್ ತೆಗೆದಿದ್ದಾರೆ. ಜೊತೆಗೆ ಖ್ಯಾತನಾಮರಾದ ರಾಮಕೃಷ್ಣ ಹೆಗಡೆ, ಮೈಕೆಲ್ ಜಾಕ್ಸನ್, ಶಂಕರ್ ಹಾಗೂ ಅರುಂಧತಿ ನಾಗ್ ರ ಭಿತ್ತಿಚಿತ್ರಗಳನ್ನೂ ತೆಗೆದಿದ್ದಾರೆ. ಈ ಹರವು ತೆರೆದಿಟ್ಟ ಅನುಭವಗಳು ಎಂಥವು?ಕ್ಷಣಭಂಗುರ ಸಾಮಾಜಿಕ ಜಾಲತಾಣಗಳಲ್ಲಿ ಜನರು ಮುಳುಗಿರುವಾಗ ಫೋಟೊಗ್ರಫಿ ಆಧರಿಸಿ ಪುಸ್ತಗಳನ್ನು ಪ್ರಕಟಿಸುವ ಹುಮ್ಮಸ್ಸಿನ ಹಿಂದಿರುವ ನಂಬಿಕೆ ಯಾವುದು?ಇವೇ ಮೊದಲಾದ ಕುತೂಹಲಕಾರಿ ಸಂಗತಿಗಳೊಂದಿಗೆ ಅರಳಿಕಟ್ಟೆ ಛಾಯಾಗ್ರಾಹಕ ಮಹೇಶ್ ಭಟ್ ರೊಂದಿಗೆ ನಡೆಸಿದ ಮಾತುಕತೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ...Recording date:  15 August 2021Credits: Music: Crescents by Ketsa Licensed under creative commons. Icon made by Freepik from www.flaticon.comShow Notes-  Malliah - https://www.facebook.com/photo?fbid=10158040946501171&set=a.10158027842836171- Project UNSUNG - https://www.unsung.in/- I am 20 film - https://www.youtube.com/watch?v=fA8h74ZW8Ok- Wishes for a new world - https://www.maheshbhat.com/wishes-for-a-new-world-1/- Episode sponsored by MyLang Books : https://mylang.in/Use exclusive promo code AK20 to get flat 20% off on your first purchase.Use exclusive promo code AK10 to get flat 10% off on every purchase.--- Send in a voice message: https://anchor.fm/aralikatte/message2021-10-1551 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp79: ಫೋಟೊಗ್ರಾಫರ್ ಮನಸ್ಸಿನ ಕಣ್ಣಲ್ಲಿ ಬೆಂಗಳೂರು - Bengaluru in photographer's eye in the mindಇವತ್ತು ಪ್ರತಿಯೊಬ್ಬರ ಕಿಸೆಯಲ್ಲಿ ವೃತ್ತಿಪರ ಫೋಟೊಗಳನ್ನು ತೆಗೆಯುವ ಸಾಮರ್ಥ್ಯವಿರುವ ಸ್ಮಾರ್ಟ್ ಫೋನುಗಳಿವೆ ಆದರೆ ಜೀವಂತಿಕೆಯಿರುವ ಫೋಟೊ ತೆಗೆಯುವುದಕ್ಕೆ ಬೇಕಿರುವುದು ಮನಸ್ಸಿನ ಕಣ್ಣು. ಎಂಬತ್ತರ ದಶಕದಲ್ಲಿ ನಿಯಮಿತ ರೀಲುಗಳನ್ನು ಬಳಸಿ ಫೋಟೊ ತೆಗೆಯಲು ಶುರುಮಾಡಿದ ಮಹೇಶ್ ಭಟ್ ಈ ಶಿಸ್ತನ್ನು ಅಳವಡಿಸಿಕೊಂಡದ್ದು ಹೇಗೆ?ಶ್ರೀಲಂಕೆಯ ಯುದ್ಧ ಭೂಮಿಯಲ್ಲಿ ಎಲ್.ಟಿ.ಟಿ.ಇ ಆತ್ಮಹತ್ಯಾ ಬಾಂಬರ್ ಮಹಿಳೆಯನ್ನು ಸಂದರ್ಶಿಸಿದ ಅನುಭವ ಎಂಥದ್ದು? ಯುದ್ಧದಲ್ಲಿ ಮುಳುಗಿರುವವರು, ಅದರಿಂದ ಸಂತ್ರಸ್ತರಾದವರು ಬೇರೊಬ್ಬರ ಕನಸಿನಲ್ಲಿ ಸಿಕ್ಕಿಕೊಂಡವರು ಎನ್ನುವ ಮಹೇಶ್ ಭಟ್ ರಿಗೆ  ಅಲ್ಲಿಂದ ಹಿಂತಿರುಗಿದ ಮೇಲೆ ಮತ್ತೆ ಯುದ್ಧ ಭೂಮಿಗೆ ಹೋಗಬೇಕು ಎನ್ನುವ ತವಕ ಏಕೆ ಉಂಟಾಯಿತು?ಇವೇ ಮೊದಲಾದ ಕುತೂಹಲಕಾರಿ ಸಂಗತಿಗಳೊಂದಿಗೆ ಅರಳಿಕಟ್ಟೆ ಛಾಯಾಗ್ರಾಹಕ ಮಹೇಶ್ ಭಟ್ ರೊಂದಿಗೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ಎಪ್ಪತ್ತೊಂಭತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ...Recording date:  15 August 2021Credits: Music: Crescents by Ketsa Licensed under creative commons. Icon made by Freepik from www.flaticon.comShow Notes-  Muliya Timmappaiah - https://shastriyakannada.org/DataBase/KannwordHTMLS/CLASSICAL%20KANNADA%20SCHOLARS%20HTML/MULIYA%20TIMMAPPAIAH%20HTML.htm- Ansel Adams' classic book trilogy - https://blog.depositphotos.com/ansel-adams-classic-book-trilogy.html- Chandralekha - https://www.asianage.com/life/more-features/150119/archive-of-a-dancer-who-created-modern-dance-on-its-own-indian-terms.html- Bangalore scenes from an Indian city - https://www.maheshbhat.com/shop/bangalore-scenes-from-an-indian-city/- Barrage across river Krishna - https://www.maheshbhat.com/they-built-a-barrage-across-river-krishna/- LTTE female suicide bombers - https://www.maheshbhat.com/speaking-of-conflicts/- Episode sponsored by MyLang Books : https://mylang.in/Use exclusive promo code AK20 to get flat 20% off on your first purchase.Use exclusive promo code AK10 to get flat 10% off on every purchase.--- Send in a voice message: https://anchor.fm/aralikatte/message2021-10-071h 04AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp78: ನಮ್ಮ ಡೈರಿ ನಂದಿನಿ ಡೈರಿ (ಭಾಗ ೨) - What do you know about Nandini dairy? (Part 2)ಬೆಳಿಗ್ಗೆ ಎದ್ದೊಡನೆಯ ಮನೆಯ ಹೊಸ್ತಿಲೆದುರು ತಣ್ಣಗೆ ಮಲಗಿರುವ ನಂದಿನಿ ಹಾಲಿನ ಪಾಕೆಟ್ ನ ಹಿಂದಿರುವ ದೊಡ್ಡ ಸಹಕಾರಿ ಉದ್ದಿಮೆಯ ಬಗ್ಗೆ ನಿಮಗೆಷ್ಟು ಗೊತ್ತು?ಗುಜರಾತಿನ ಆನಂದ್ ನಲ್ಲಿ ವರ್ಗೀಸ್ ಕುರಿಯನ್ ನೇತೃತ್ವದಲ್ಲಿ ಶುರುವಾದ ಅಮುಲ್ ಭಾರತದ ಪ್ರಪ್ರಥಮ ಸಹಕಾರಿ ಡೈರಿ. ಇದರಲ್ಲಿ ಹಾಲು ಕರೆಯುವ ರೈತ ಮಹಿಳೆ, ಪುರುಷರೇ ಪಾಲುದಾರರು.ಇಂಥದ್ದೇ ಮಾದರಿಯಲ್ಲಿ ಭಾರತದ ಇತರೆ ರಾಜ್ಯಗಳಲ್ಲಿ ಸಹಕಾರಿ ಡೈರಿಗಳು ಶುರುವಾದರೂ ಕರ್ನಾಟಕದಲ್ಲಿ ಮಾತ್ರ ಇದುವರೆಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.ನಂದಿನಿ ಹಾಲನ್ನು ಉತ್ಪಾದಿಸುವ ಕೆ ಎಂ ಎಫ್ ಸಹಕಾರಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಪ್ರೇಮ್ ನಾಥ್ . ಏ.ಎಸ್ ರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ.Recording date:  22 August 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-10-0357 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp77: ನಮ್ಮ ಡೈರಿ ನಂದಿನಿ ಡೈರಿ - What do you know about Nandini dairy?ಬೆಳಿಗ್ಗೆ ಎದ್ದೊಡನೆಯ ಮನೆಯ ಹೊಸ್ತಿಲೆದುರು ತಣ್ಣಗೆ ಮಲಗಿರುವ ನಂದಿನಿ ಹಾಲಿನ ಪಾಕೆಟ್ ನ ಹಿಂದಿರುವ ದೊಡ್ಡ ಸಹಕಾರಿ ಉದ್ದಿಮೆಯ ಬಗ್ಗೆ ನಿಮಗೆಷ್ಟು ಗೊತ್ತು?ಗುಜರಾತಿನ ಆನಂದ್ ನಲ್ಲಿ ವರ್ಗೀಸ್ ಕುರಿಯನ್ ನೇತೃತ್ವದಲ್ಲಿ ಶುರುವಾದ ಅಮುಲ್ ಭಾರತದ ಪ್ರಪ್ರಥಮ ಸಹಕಾರಿ ಡೈರಿ. ಇದರಲ್ಲಿ ಹಾಲು ಕರೆಯುವ ರೈತ ಮಹಿಳೆ, ಪುರುಷರೇ ಪಾಲುದಾರರು.ಇಂಥದ್ದೇ ಮಾದರಿಯಲ್ಲಿ ಭಾರತದ ಇತರೆ ರಾಜ್ಯಗಳಲ್ಲಿ ಸಹಕಾರಿ ಡೈರಿಗಳು ಶುರುವಾದರೂ ಕರ್ನಾಟಕದಲ್ಲಿ ಮಾತ್ರ ಇದುವರೆಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.ನಂದಿನಿ ಹಾಲನ್ನು ಉತ್ಪಾದಿಸುವ ಕೆ ಎಂ ಎಫ್ ಸಹಕಾರಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಪ್ರೇಮ್ ನಾಥ್ . ಏ.ಎಸ್ ರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಮೊದಲ ಭಾಗ ನಿಮ್ಮ ಮುಂದಿದೆ.Recording date:  22 August 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-09-261h 07AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp76: ಕಥೆಗಾರ ಪ್ರಕಾಶಕ ವಸುಧೇಂದ್ರರ ಜತೆ ಸ್ವಚ್ಛಂದ ಮಾತುಕತೆ (೨) - A refreshing conversation with Vasudhendra (2)ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಸರಣಿ ಎಪ್ಪತ್ತೈದು ಸಂಚಿಕೆಗಳ ಮೈಲಿಗಲ್ಲು ತಲುಪುತ್ತಿದೆ. ಈ ವಿಶಿಷ್ಟ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದವರು ಕನ್ನಡದ ಖ್ಯಾತ ಕಥೆಗಾರ ಹಾಗೂ ಛಂದ ಪ್ರಕಾಶನದ ರೂವಾರಿ ವಸುಧೇಂದ್ರ.ವಸುಧೇಂದ್ರರ ಬಾಲ್ಯ, ಮೊದಲ ಕಥೆ, ಅವರ ಓದುವ ಕ್ರಮ, ಬರವಣಿಗೆಯ ಶಿಸ್ತು ಹೀಗೆ ಹಲವು ವಿಷಯಗಳ ಕುರಿತ ಸ್ವಚ್ಛಂದವಾದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ.ಎರಡನೆಯ ಭಾಗದಲ್ಲಿ ನಾವು ಕನ್ನಡದಲ್ಲಿ ಸಾಹಿತ್ಯೇತರ ಪುಸ್ತಕಗಳ ಪ್ರಕಟಣೆ ಏಕೆ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿಲ್ಲ, ವಸುಧೇಂದ್ರ ತಮ್ಮ ಇತ್ತೀಚಿನ ಪುಸ್ತಕ "ತೇಜೋ ತುಂಗಭದ್ರ"ವನ್ನು ಕುಮಾರವ್ಯಾಸ, ಕನಕದಾಸ, ಪುರಂದರದಾಸರ ಜತೆಗೆ ಇಂಟರ್ನೆಟ್ ಗೆ ಅರ್ಪಿಸಿರುವುದಕ್ಕೆ ಕಾರಣವೇನು? ವರ್ಷವೊಂದಕ್ಕೆ ಐದು-ಆರು ಪುಸ್ತಕಗಳನ್ನಷ್ಟೇ ತಮ್ಮ ಛಂದ ಪ್ರಕಾಶನ ಪ್ರಕಟಿಸುತ್ತದೆ ಎಂಬ ಸ್ವಯಂ ನಿರ್ಬಂಧ ಹಾಕಿಕೊಳ್ಳಲು ಏನು ಕಾರಣ ಹೀಗೆ ಹಲವಾರು ವಿಷಯಗಳನ್ನು ಚರ್ಚಿಸಿದ್ದೇವೆ.Recording date:  28 August 2021Credits: Music: Crescents by Ketsa Licensed under creative commons. Icon made by Freepik from www.flaticon.comShow notesYoutube link: https://youtu.be/s_yVCm6HjLk1. ಕಾವೇರಿ ತೀರದ ಪಯಣ - https://www.navakarnatakaonline.com/kaveri-teerada-payana2. ಭಾಸ್ಕರ್ ಆನಂದ ಸಾಲೆತೊರೆ - https://en.wikipedia.org/wiki/B._A._Saletore3. Social and political life in the Vijayanagar empire - https://indianculture.gov.in/social-and-political-life-vijayanagara-empire-ad1346-ad1646-vol-14. Archive dot org - https://archive.org/4. The Elephant Whisperer - https://www.amazon.in/Elephant-Whisperer-Learning-Remarkable-Elephants/dp/1509838538/ref=sr_1_15. The hidden life of Trees: What they feel, how they communicate - https://www.amazon.in/Hidden-Life-Trees-Communicate-Discoveries/dp/0670089346/ref=sr_1_26. Chinmay Tambe's The age of pandemics - https://www.amazon.in/Age-Pandemics-1817-1920-shaped-India/dp/9353579457/ref=sr_1_17. Robert Sewell - A forgotten empire - https://www.amazon.in/Forgotten-Empire-Vijayanagar-Hampi/dp/81846829058. Chanda Pustaka - https://chandapustaka.com/--- Send in a voice message: https://anchor.fm/aralikatte/message2021-09-181h 03AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp75: ಕಥೆಗಾರ ಪ್ರಕಾಶಕ ವಸುಧೇಂದ್ರರ ಜತೆ ಸ್ವಚ್ಛಂದ ಮಾತುಕತೆ - A refreshing conversation with Vasudhendraಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಸರಣಿ ಎಪ್ಪತ್ತೈದು ಸಂಚಿಕೆಗಳ ಮೈಲಿಗಲ್ಲು ತಲುಪುತ್ತಿದೆ. ಈ ವಿಶಿಷ್ಟ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದವರು ಕನ್ನಡದ ಖ್ಯಾತ ಕಥೆಗಾರ ಹಾಗೂ ಛಂದ ಪ್ರಕಾಶನದ ರೂವಾರಿ ವಸುಧೇಂದ್ರ.ವಸುಧೇಂದ್ರರ ಬಾಲ್ಯ, ಮೊದಲ ಕಥೆ, ಅವರ ಓದುವ ಕ್ರಮ, ಬರವಣಿಗೆಯ ಶಿಸ್ತು ಹೀಗೆ ಹಲವು ವಿಷಯಗಳ ಕುರಿತ ಸ್ವಚ್ಛಂದವಾದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ.Recording date:  28 August 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-09-0953 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp74: ಸಸ್ಯ ವಿಜ್ಞಾನಿಯೊಂದಿಗೆ ತಳಿಗಳ ಕುರಿತೊಂದು ಮಾತುಕತೆ (ಭಾಗ ೨) - A conversation with genomics specialist (Part 2)ಮೊಬೈಲ್ ಕೊಳ್ಳಲು ಗ್ರಾಹಕರಾದ ನಮಗೆ ಅನೇಕ ಆಯ್ಕೆಗಳಿವೆ. ದೇಶಭಕ್ತರು ಸ್ವದೇಶಿ ಕಂಪೆನಿಗಳ ಮೊಬೈಲ್ ಖರೀದಿಸಬಹುದು, ಪ್ರೈವೆಸಿ ಮುಖ್ಯವಾದವರು ಐಫೋನ್ ಕೊಳ್ಳಬಹುದು, ಕಡಿಮೆ ಬೆಲೆಯಲ್ಲಿ ಉತ್ತಮವಾದ ಫೋನ್ ಬೇಕಾದವರು ಆಂಡ್ರಾಯ್ಡ್ ಫೋನ್ ಕೊಳ್ಳಬಹುದು, ಬರೀ ಕರೆಗಳಿಗಾಗಿ ಫೋನ್ ಬಳಸುವವರು ಫೀಚರ್ ಫೋನ್ ಕೊಳ್ಳಬಹುದು. ಇದೇ ಆಯ್ಕೆಯನ್ನು ರೈತರು ತಮ್ಮ ಬೀಜಗಳನ್ನು ಕೊಳ್ಳಲು ಏಕೆ ನಿರಾಕರಿಸಬೇಕು?ಸಾವಯವ ಕೃಷಿಯ ಇಳುವರಿಯಿಂದ ಇಡೀ ದೇಶದ ಹಸಿವು ನೀಗಿಸಲು ಸಾಧ್ಯವಾಗುತ್ತದೆ ಎಂದಾದರೆ ಆಧುನಿಕ ಕೃಷಿ ಪದ್ಧತಿ ಜಾರಿಗೆ ತರುವ ಮುನ್ನ ದೇಶದಲ್ಲಿ ಅಪೌಷ್ಟಿಕತೆ, ಹಸಿವು ಏಕೆ ಸರ್ವವ್ಯಾಪಿಯಾಗಿತ್ತು? ಏರುತ್ತಿರುವ ಜನಸಂಖ್ಯೆ ಹಾಗೂ ಇಳಿಯುತ್ತಿರುವ ಕೃಷಿ ಭೂಮಿಯ ಗಾತ್ರಗಳಿಂದ ಸಾವಯವ ಕೃಷಿ ಎಷ್ಟರ ಮಟ್ಟಿಗೆ ಪ್ರಾಯೋಗಿಕ?ಮಾವು, ಸೀತಾಫಲ, ಸೇಬು, ಕಿತ್ತಳೆ, ಟೊಮೆಟೋ ಇವೆಲ್ಲ ದಿನೇದಿನೇ ಗಾತ್ರದಲ್ಲಿ ಹಿಗ್ಗುತ್ತಿದ್ದರೆ ಕುಂಬಳ ಕಾಯಿ, ಕಲ್ಲಂಗಡಿಗಳು ಗಾತ್ರದಲ್ಲಿ ಕುಗ್ಗುತ್ತಿರುವುದರ ಹಿಂದಿರುವ ಮರ್ಮವೇನು?ಹೊಸ ತಂತ್ರಜ್ಞಾನ, ವಿಜ್ಞಾನದ ಹೊಸ ಬೆಳವಣಿಗೆಗಳ ಬಗ್ಗೆ ಜನ ಸಾಮಾನ್ಯರಿಗೆ ಇರುವ ಅಪನಂಬಿಕೆ ಹಾಗೂ ಭಯವನ್ನು ನಿವಾರಿಸುವಲ್ಲಿ ಮಾಧ್ಯಮ, ವಿಜ್ಞಾನಿ ಹಾಗೂ ತಜ್ಞರ ಜವಾಬ್ದಾರಿ ಏನು? ಇವೇ ಮೊದಲಾದ ಪ್ರಶ್ನೆಗಳೊಂದಿಗೆ ನಾವು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಡಾ. ರವಿಶಂಕರ್ ಕೆ.ವಿಯವರೊಂದಿಗೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ಎಪ್ಪತ್ನಾಲ್ಕನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.Recording date:  08 August 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-09-0139 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp73: ಸಸ್ಯ ವಿಜ್ಞಾನಿಯೊಂದಿಗೆ ತಳಿಗಳ ಕುರಿತೊಂದು ಮಾತುಕತೆ - A conversation with genomics specialistಅಲೆಮಾರಿ ಮನುಷ್ಯ ಒಂದೆಡೆ ನೆಲೆನಿಂತು ತನ್ನ ಸುತ್ತಮುತ್ತಲ ಪರಿಸರವನ್ನು ಪಳಗಿಸಿ ತನಗೆ ಬೇಕಾದ ಆಹಾರ ಬೆಳೆಯಲು ಶುರುಮಾಡಿದಾಗಲೇ ವಿಜ್ಞಾನಿಯಾದ. ವೈವಿಧ್ಯಮಯವಾದ ಸಸ್ಯಗಳಲ್ಲಿ ತನಗೆ ಅಗತ್ಯವಾದ ಗುಣಗಳುಳ್ಳ ಸಸ್ಯಗಳನ್ನು ತಳಿ ಮಾಡುವ ವಿದ್ಯೆಯನ್ನು ಸಾವಿರಾರು ವರ್ಷಗಳ ಕಾಲ ಬೆಳೆಸಿಕೊಂಡು ಬಂದ. ಈ ವಿದ್ಯೆಯ ಹಿಂದಿರುವ ತತ್ವವನ್ನು ಅರಿಯುವುದಕ್ಕೆ ನಾವು ಹದಿನೆಂಟನೆಯ ಶತಮಾನದವರೆಗೂ ಕಾಯಬೇಕಾಯ್ತು.ತಳಿ, ಕುಲಾಂತರಿ ಸಸ್ಯಗಳಿಂದ ಮನುಕುಲಕ್ಕೆ ಒದಗುವ ಅನುಕೂಲಗಳೇನು? ಕುಲಾಂತರಿ ಬೆಳೆಗಳ ವಿರುದ್ಧದ ವಾದಗಳು, ಸಾವಯವ ಕೃಷಿಯ ಪ್ರತಿಪಾದನೆ ಕೋಟ್ಯಂತರ ಜನರ ಆಹಾರ ಭದ್ರತೆಯ ಮೇಲೆ ಯಾವ ಪರಿಣಾಮ ಬೀರುತ್ತದೆ? ಕೋವಿಡ್ ವೈರಾಣುವನ್ನು ಪತ್ತೆ ಹಚ್ಚುವ ಪಿಸಿಆರ್ ಪರೀಕ್ಷೆಗೂ ಉಪ್ಪಿಟ್ಟಿನಲ್ಲಿ ಹಾಕಿದ ಟೊಮೆಟೋ ರುಚಿಗೂ ಏನು ಸಂಬಂಧ? - ಇವೇ ಮೊದಲಾದ ಪ್ರಶ್ನೆಗಳೊಂದಿಗೆ ನಾವು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಡಾ. ರವಿಶಂಕರ್.ಕೆ.ವಿ ಯವರೊಂದಿಗೆ ಚರ್ಚಿಸಿದ್ದೇವೆ.ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಅರಳಿಕಟ್ಟೆಯಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ಎಪ್ಪತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date:  08 August 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-08-2644 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp72: ಮಾನಸಿಕ ಆರೋಗ್ಯದ ಕುರಿತೊಂದು ಮುಕ್ತ ಚರ್ಚೆ (ಭಾಗ ೨) - An open discussion on mental health (Part 2)ದೇಹ ಆರೋಗ್ಯ ತಪ್ಪಿದಂತೆಯೇ ಮನಸ್ಸಿನ ಆರೋಗ್ಯವೂ ತಪ್ಪುವ ಸಾಧ್ಯತೆ ಇರುತ್ತದೆ. ಆದರೆ ಮಾನಸಿಕ ರೋಗದ ಕುರಿತು ನಮ್ಮಲ್ಲಿ ಅನೇಕ ತಪ್ಪು ಕಲ್ಪನೆಗಳು ಇಂದಿಗೂ ಇವೆ.ಈ ಪೀಳಿಗೆಯ ಮಕ್ಕಳಲ್ಲಿ ಏಕಾಂಗಿತನ ಹೆಚ್ಚು ಕಾಡುತ್ತದೆಯೇ? ಆತ್ಮಹತ್ಯೆ ಪ್ರಯತ್ನಗಳು ಗಂಡಸರಲ್ಲೇ ಹೆಚ್ಚು ಏಕೆ? ಮಾನಸಿಕ ಆರೋಗ್ಯದ ಕುರಿತು ನೆರವು ಅರಸುವುದರಲ್ಲಿ ಪುರುಷರಿಗೆ ಇರುವ ಅಡೆತಡೆಗಳೇನು? ಸ್ಕಿಜೊಫ್ರೇನಿಯ ಅಂದರೇನು? ಸೋಶಿಯಲ್ ಮೀಡಿಯಾ ವ್ಯಸನದಿಂದ ಮಾನಸಿಕ ಸ್ವಾಸ್ಥ್ಯದ ಮೇಲೆ ಉಂಟಾಗುವ ಪರಿಣಾಮವೇನು?  ಇನ್ನೂ ಹಲವು ಆಸಕ್ತಿದಾಯಕ ಹಾಗೂ ಮಾಹಿತಿ ಪೂರ್ಣ ವಿಷಯಗಳ ಚರ್ಚೆ ಡಾ. ದಿವ್ಯ ಗಣೇಶ್ ನಲ್ಲೂರ್ ರೊಂದಿಗೆ ನಿಮ್ಮ ನೆಚ್ಚಿನ ಅರಳಿಕಟ್ಟೆಯಲ್ಲಿ!ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಿದೆ. ಚರ್ಚೆಯ ಎರಡನೆಯ ಭಾಗ ಎಪ್ಪತ್ತೆರಡನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.Recording date:  04 July 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-08-2048 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp71: ಮಾನಸಿಕ ಆರೋಗ್ಯದ ಕುರಿತೊಂದು ಮುಕ್ತ ಚರ್ಚೆ - An open discussion on mental healthಮಾನಸಿಕ ರೋಗ ಅನ್ನುವುದರ ಬಗ್ಗೆ ಎಷ್ಟೋ ತಪ್ಪು ಕಲ್ಪನೆಗಳು ಇವತ್ತಿಗೂ ಇದೆ. ಅದರ ಜೊತೆಗೆ ಅದರ ಬಗ್ಗೆ ಮುಕ್ತವಾಗಿ ಮಾತಾಡೋ ವಾತಾವರಣ ನಮ್ಮಲ್ಲಿ ಇನ್ನೂ ಸೃಷ್ಟಿಯಾಗಿ ಇಲ್ಲ. ಮಾನಸಿಕ ಒತ್ತಡ, ಆತಂಕ, ಖಿನ್ನತೆ ಮುಂತಾದ ಸಮಸ್ಯೆಗಳು ಸರ್ವೇಸಾಮಾನ್ಯವಾಗುತ್ತಿರುವ ಈ ದಿನಗಳಲ್ಲಿ ಇದರ ಬಗೆಗಿನ ಒಳನೋಟಗಳು ಬಹಳ ಮುಖ್ಯವಾಗುತ್ತದೆ. ಮಾನಸಿಕ ರೋಗ ಎಲ್ಲರಿಗೂ ಬರಬಹುದಾ? ಅಥವಾ 'ದುರ್ಬಲರು' ಅನ್ನಿಸಿಕೊಂಡವರಿಗೆ ಮಾತ್ರ ಬರುವುದಾ? ಇದು 'ಬೇಡದೆ ಇರುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವ' ಒಂದು ದುರಭ್ಯಾಸವಾ? ಅಥವಾ ನಮ್ಮ ನಿಯಂತ್ರಣಕ್ಕೂ ಮೀರಿದ ಜೀನ್ಸ್ ಕೈವಾಡವಿದೆಯಾ? ಇನ್ನೂ ಹತ್ತು ಹಲವಾರು ಆಯಾಮಗಳ ಬಗ್ಗೆ ಒಂದು ಮುಕ್ತ ಚರ್ಚೆ ಡಾ. ದಿವ್ಯ ಗಣೇಶ್ ನಲ್ಲೂರ್ ರೊಂದಿಗೆ ನಿಮ್ಮ ನೆಚ್ಚಿನ ಅರಳಿಕಟ್ಟೆಯಲ್ಲಿ!ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಚರ್ಚೆಯ ಮೊದಲ ಭಾಗ ಎಪ್ಪತ್ತೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.Recording date:  04 July 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-08-111h 01AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp70: ಪಾರಂಪರಿಕ ಬೀಜ ವೈವಿಧ್ಯ (ಭಾಗ ೨) - Traditional seed diversity (Part 2)ಫುಕುವೋಕಾ ಅನ್ನುವ ಜಪಾನಿನ ವಿಜ್ಞಾನಿ ಆರಂಭಿಸಿದ ಸಹಜ ಕೃಷಿ ಎದುರಿಸಿದ ಮೊದಲ ಸವಾಲುಗಳೇನು, ಭಾರತದಲ್ಲಿ ಬೆಳೆದುಬಂದ  ಕೃಷಿ ಪ್ರಯೋಗಗಳ ಇತಿಹಾಸ, ಆಧುನಿಕ ಕೃಷಿ ಪದ್ಧತಿಗಳ ಭ್ರಮೆಯನ್ನು ಹೇಗೆ ಸಾವಯವ ಕೃಷಿ ಎದುರಿಸಿತು, ಕುಲಾಂತರಿ ತಳಿಗಳ ಅನಾಹುತಗಳು ಮತ್ತು ಅದರ ಬಗ್ಗೆ ನಡೆದ ಹೋರಾಟ, ಭಾರತದಲ್ಲಿ ಬೀಜಗಳ ಸಂಸ್ಕೃತಿ ಮತ್ತು ಬೀಜಗಳ ವೈವಿಧ್ಯ ಎಂಥದ್ದು, ಬೀಜಗಳು ಹೇಗೆ ಒಂದು ಸಮುದಾಯದ ಸ್ವತ್ತು, ಇವತ್ತು ಸಮುದಾಯ ಬೀಜ ಬ್ಯಾಂಕ್ ಹೇಗೆ ಕಾರ್ಯ ನಿರ್ವಹಿಸುತ್ತಿವೆ, ಕೃಷಿ ವಲಯ ಎದುರಿಸುತ್ತಿರುವ ಸಮಸ್ಯೆಗಳು, ಇಂದು ಕಾಣುತ್ತಿರುವ ಆಶಾಕಿರಣ, ಆರ್ಗಾನಿಕ್ ಫಾರ್ಮಿಂಗ್ ವಿಚಾರದಲ್ಲಿ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ಪಾತ್ರ - ಮುಂತಾದ ಎಷ್ಟೋ  ವಿಚಾರಗಳ ಬಗ್ಗೆ ತಮ್ಮ ಅಮೂಲ್ಯವಾದ ಜೀವನದ ಅನುಭವಗಳನ್ನು 'ಸಹಜ ಸೀಡ್ಸ್' ಸಂಸ್ಥೆಯ ಕೃಷ್ಣ ಪ್ರಸಾದ್ ಮಾತನಾಡಿದ್ದಾರೆ.Recording date: 13 June 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-08-0656 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp69: ಪಾರಂಪರಿಕ ಬೀಜ ವೈವಿಧ್ಯ - Traditional seed diversityಫುಕುವೋಕಾ ಅನ್ನುವ ಜಪಾನಿನ ವಿಜ್ಞಾನಿ ಆರಂಭಿಸಿದ ಸಹಜ ಕೃಷಿ ಎದುರಿಸಿದ ಮೊದಲ ಸವಾಲುಗಳೇನು, ಭಾರತದಲ್ಲಿ ಬೆಳೆದುಬಂದ  ಕೃಷಿ ಪ್ರಯೋಗಗಳ ಇತಿಹಾಸ, ಆಧುನಿಕ ಕೃಷಿ ಪದ್ಧತಿಗಳ ಭ್ರಮೆಯನ್ನು ಹೇಗೆ ಸಾವಯವ ಕೃಷಿ ಎದುರಿಸಿತು, ಕುಲಾಂತರಿ ತಳಿಗಳ ಅನಾಹುತಗಳು ಮತ್ತು ಅದರ ಬಗ್ಗೆ ನಡೆದ ಹೋರಾಟ, ಭಾರತದಲ್ಲಿ ಬೀಜಗಳ ಸಂಸ್ಕೃತಿ ಮತ್ತು ಬೀಜಗಳ ವೈವಿಧ್ಯ ಎಂಥದ್ದು, ಬೀಜಗಳು ಹೇಗೆ ಒಂದು ಸಮುದಾಯದ ಸ್ವತ್ತು, ಇವತ್ತು ಸಮುದಾಯ ಬೀಜ ಬ್ಯಾಂಕ್ ಹೇಗೆ ಕಾರ್ಯ ನಿರ್ವಹಿಸುತ್ತಿವೆ, ಕೃಷಿ ವಲಯ ಎದುರಿಸುತ್ತಿರುವ ಸಮಸ್ಯೆಗಳು, ಇಂದು ಕಾಣುತ್ತಿರುವ ಆಶಾಕಿರಣ, ಆರ್ಗಾನಿಕ್ ಫಾರ್ಮಿಂಗ್ ವಿಚಾರದಲ್ಲಿ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ಪಾತ್ರ - ಮುಂತಾದ ಎಷ್ಟೋ  ವಿಚಾರಗಳ ಬಗ್ಗೆ ತಮ್ಮ ಅಮೂಲ್ಯವಾದ ಜೀವನದ ಅನುಭವಗಳನ್ನು 'ಸಹಜ ಸೀಡ್ಸ್' ಸಂಸ್ಥೆಯ ಕೃಷ್ಣ ಪ್ರಸಾದ್ ಮಾತನಾಡಿದ್ದಾರೆ.Recording date: 13 June 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-07-301h 04AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp68: ಬಿಟ್ ಕಾಯಿನ್ ಎಂಬ ನಿಗೂಢ ನಾಣ್ಯ(ಭಾಗ ೨) - Bitcoin and crypto currencies (Part 2)ಬಿಟ್ ಕಾಯಿನ್ ಕಳ್ಳ ಕಾಕರು, ಹ್ಯಾಕರ್ ಗಳು, ಅಪಹರಣಕಾರರು, ಡ್ರಗ್ ಡೀಲರುಗಳ ದುಡ್ಡು ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ಹೊಸ ತಂತ್ರಜ್ಞಾನವನ್ನು ಕುರಿತ ಈ ಅಪನಂಬಿಕೆ, ಭಯ ಸಹಜವಾದದ್ದೇ. ಇಂದು ಪ್ರತಿಯೊಬ್ಬರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಅಂತರ್ಜಾಲದ ಪ್ರಾರಂಭದ ದಿನಗಳಲ್ಲಿ ಇದೇ ರೀತಿಯ ಅಪನಂಬಿಕೆ ಜಾರಿಯಲ್ಲಿತ್ತು.ಬಿಟ್ ಕಾಯಿನ್ ಗೂ ಈಗಾಗಲೇ ಬಳಕೆಯಲ್ಲಿರುವ ಡಿಜಿಟಲ್ ಹಣಕ್ಕೂ ಇರುವ ವ್ಯತ್ಯಾಸಗಳೇನು? ಬಿಟ್ ಕಾಯಿನ್ ಬಳಕೆಯನ್ನು ಅನುವು ಮಾಡಿಕೊಡುವ ಬ್ಲಾಕ್ ಚೈನ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ? ಬಿಟ್ ಕಾಯಿನ್ ಆವಿಷ್ಕರಿಸಿದ ಸತೋಷಿ ನಾಕಮೊಟೊ ಎಂಬ ಗುಪ್ತನಾಮದ ಹಿಂದಿರುವ ರಹಸ್ಯವೇನು?ಬಿಟ್ ಕಾಯಿನ್ ಕುರಿತ ಕಾದಂಬರಿ ರೂಪದ ಸೃಜನಶೀಲ ಕೃತಿ "ನಿಗೂಢ ನಾಣ್ಯ"ದ ಲೇಖಕರಾದ ವಿಟ್ಠಲ್ ಶೆಣೈ ನಮ್ಮ ಅತಿಥಿ. ಬಿಟ್ ಕಾಯಿನ್, ಬ್ಲಾಕ್ ಚೈನ್, ಕ್ರಿಪ್ಟೋ ನಾಣ್ಯಗಳ ಕುರಿತು ಅಬ್ಬರದ ಮಾಧ್ಯಮಗಳಲ್ಲಿ ಚರ್ಚೆಯಾಗದ ವಿಚಾರಗಳನ್ನು ಕುರಿತ ಚರ್ಚೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ. ಸರಣಿಯ ಎರಡನೆಯ ಹಾಗೂ ಅಂತಿಮ ಭಾಗ ಅರವತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date: 2 May 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-07-2358 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp67: ಬಿಟ್ ಕಾಯಿನ್ ಎಂಬ ನಿಗೂಢ ನಾಣ್ಯ - Bitcoin and crypto currenciesಬಿಟ್ ಕಾಯಿನ್ ಕಳ್ಳ ಕಾಕರು, ಹ್ಯಾಕರ್ ಗಳು, ಅಪಹರಣಕಾರರು, ಡ್ರಗ್ ಡೀಲರುಗಳ ದುಡ್ಡು ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ಹೊಸ ತಂತ್ರಜ್ಞಾನವನ್ನು ಕುರಿತ ಈ ಅಪನಂಬಿಕೆ, ಭಯ ಸಹಜವಾದದ್ದೇ. ಇಂದು ಪ್ರತಿಯೊಬ್ಬರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಅಂತರ್ಜಾಲದ ಪ್ರಾರಂಭದ ದಿನಗಳಲ್ಲಿ ಇದೇ ರೀತಿಯ ಅಪನಂಬಿಕೆ ಜಾರಿಯಲ್ಲಿತ್ತು.ಬಿಟ್ ಕಾಯಿನ್ ಗೂ ಈಗಾಗಲೇ ಬಳಕೆಯಲ್ಲಿರುವ ಡಿಜಿಟಲ್ ಹಣಕ್ಕೂ ಇರುವ ವ್ಯತ್ಯಾಸಗಳೇನು? ಬಿಟ್ ಕಾಯಿನ್ ಬಳಕೆಯನ್ನು ಅನುವು ಮಾಡಿಕೊಡುವ ಬ್ಲಾಕ್ ಚೈನ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ? ಬಿಟ್ ಕಾಯಿನ್ ಆವಿಷ್ಕರಿಸಿದ ಸತೋಷಿ ನಾಕಮೊಟೊ ಎಂಬ ಗುಪ್ತನಾಮದ ಹಿಂದಿರುವ ರಹಸ್ಯವೇನು?ಬಿಟ್ ಕಾಯಿನ್ ಕುರಿತ ಕಾದಂಬರಿ ರೂಪದ ಸೃಜನಶೀಲ ಕೃತಿ "ನಿಗೂಢ ನಾಣ್ಯ"ದ ಲೇಖಕರಾದ ವಿಟ್ಠಲ್ ಶೆಣೈ ನಮ್ಮ ಅತಿಥಿ. ಬಿಟ್ ಕಾಯಿನ್, ಬ್ಲಾಕ್ ಚೈನ್, ಕ್ರಿಪ್ಟೋ ನಾಣ್ಯಗಳ ಕುರಿತು ಅಬ್ಬರದ ಮಾಧ್ಯಮಗಳಲ್ಲಿ ಚರ್ಚೆಯಾಗದ ವಿಚಾರಗಳನ್ನು ಕುರಿತ ಚರ್ಚೆ ಎರಡು ಸಂಚಿಕೆಗಳಲ್ಲಿ ನಿಮ್ಮ ಮುಂದಿದೆ.Recording date: 2 May 2021Credits: Music: Crescents by Ketsa Licensed under creative commons. Icon made by Freepik from www.flaticon.comShow notes- TV Anchors musing what is the internet, anyway: https://www.youtube.com/watch?v=UlJku_CSyNg- Bitcoin white paper: https://bitcoin.org/bitcoin.pdf--- Send in a voice message: https://anchor.fm/aralikatte/message2021-07-1555 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp66: ಅನಿಮೇಶನ್ ಚಿತ್ರಗಳ ಕುರಿತು ನಿಮಗೆಷ್ಟು ಗೊತ್ತು? (ಭಾಗ ೨) - A discussion on Animation films (Part 2)ಅನಿಮೇಶನ್ ಕೇವಲ ಮಕ್ಕಳ ಕಾರ್ಟೂನುಗಳಿಗೆ ಸೀಮಿತವಾಗಿಲ್ಲ, ಆಸ್ಕರ್ ಪ್ರಶಸ್ತಿ ಗೆದ್ದ ಕ್ರಿಸ್ಟೋಫರ್ ನೋಲನ್ ರ ಟೆನೆಟ್ ನಂತಹ ಹಾಲಿವುಡ್ ಚಿತ್ರಗಳ ಸಿಜಿಐ, ತಾಂತ್ರಿಕ ಶಿಕ್ಷಣ, ಗೇಮಿಂಗ್ ನಿಂದ ಹಿಡಿದು ಐಪಿಎಲ್ ನ ಸ್ಕೋರ್ ಕಾರ್ಡ್ಗಳವರೆಗೆ ಅನಿಮೇಶನ್ ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್ ನ ಬಳಕೆ ವಿಸ್ತರಿಸಿದೆ.ಅನಿಮೇಶನ್, ವಿಶ್ಯುಯಲ್ ಎಫೆಕ್ಟ್ಸ್ ಹಾಗೂ ಚಿತ್ರ ನಿರ್ಮಾಣದ ದಿಕ್ಕನ್ನೇ ಬದಲಿಸುವ ಪರಿಣಾಮಕಾರಿ ತಂತ್ರಜ್ಞಾನಗಳು ಬಳಕೆಯಲ್ಲಿವೆ. ನಟ ಅಥವಾ ನಟಿಯೊಬ್ಬರ ಡಿಜಿಟಲ್ ನಕಲನ್ನು ಬಳಸಿ ನೂರಾರು ವರ್ಷಗಳ ಕಾಲ ಅವರು ನಟಿಸಿದ ಚಿತ್ರಗಳನ್ನು ನಿರ್ಮಿಸಲು ಸಾಧ್ಯ. ನೃತ್ಯ ಬರದ ನಟ ನಾಟ್ಯ ಪಟುವಾಗಬಲ್ಲ, ಈಜಲು ಬಾರದ ನಟಿ ಮೀನಿನಂತೆ ಈಜಬಲ್ಲಳು, ಅಳಲು ಬಾರದ ನಟರು ಪ್ರೇಕ್ಷಕರನ್ನು ಅಳುವ ಕಡಲಲ್ಲಿ ಮುಳುಗಿಸಬಲ್ಲರು. ಇವೆಲ್ಲವನ್ನು ಸಾಧ್ಯವಾಗಿಸುವ ಫೋಟೊ ಗ್ಯಾಮಿಟ್ರಿ ತಂತ್ರಜ್ಞಾನ ನಮ್ಮ ಬೆಂಗಳೂರಿನಲ್ಲೇ ಇರುವುದು ಎಷ್ಟು ಜನರಿಗೆ ತಿಳಿದಿದೆ?ಕೋವಿಡ್ ನಂತರ ಚಿತ್ರ ನಿರ್ಮಾಣವನ್ನು ಆಮೂಲಾಗ್ರವಾಗಿ ಬದಲಿಸಬಲ್ಲ ಮತ್ತೊಂದು ತಂತ್ರಜ್ಞಾನ ವರ್ಚುಯಲ್ ಪ್ರೊಡಕ್ಷನ್. ದೈತ್ಯವಾದ ಅತ್ಯಾಧುನಿಕ ಎಲ್ ಇ ಡಿ ಗೋಡೆ, ತಾರಸಿಗಳನ್ನು ಕಟ್ಟಿ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಲೋಕೇಶನ್ನನ್ನು ಸ್ಟುಡಿಯೋದಲ್ಲೇ ನಿರ್ಮಿಸಲು ಸಾಧ್ಯ. ಈ ತಂತ್ರಜ್ಞಾನ ಬಳಸಿ ಡಿಸ್ನಿ ದಿ ಮ್ಯಾಂಡಲೋರಿಯನ್ ಸರಣಿಯನ್ನು ನಿರ್ಮಿಸಿದೆ. ಭಾರತದಲ್ಲೂ ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಬಳಸಿದ ದೊಡ್ಡ ಬಜೆಟ್ ನ ಚಿತ್ರಗಳು ತೆರೆಕಾಣಲಿವೆ.ಅನಿಮೇಟರ್ ಕೈಲಿ ಪೆನ್ಸಿಲ್ ಹಿಡಿದ ಒಬ್ಬ ನಟ ಎನ್ನುವ ಶ್ರೀನಿವಾಸ್ ಶ್ರೀಭಕ್ತ ಕರ್ನಾಟಕದಲ್ಲಿ ಅನಿಮೇಶನ್ ಶಿಕ್ಷಣ ಹಾಗೂ ಉದ್ಯಮವನ್ನು ಕಟ್ಟಿದವರಲ್ಲಿ ಮೊದಲಿಗರು. ಅರೇನ ಅನಿಮೇಶನ್ ಸಂಸ್ಥೆಯ ಸ್ಥಾಪಕರು, ಅಬೈ (ABAI) ಒಕ್ಕೂಟದ ಸದಸ್ಯರು. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯು ಎರಡು ಭಾಗಗಳಲ್ಲಿ ಪ್ರಸಾರವಾಗಲಿದೆ.ನಿಮ್ಮ ಮುಂದಿರುವ ಅರವತ್ತಾರನೆಯ ಸಂಚಿಕೆ ನಮ್ಮ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ. ಚರ್ಚೆಯಲ್ಲಿ ಭಾಗವಹಿಸಿದವರು ಶ್ರೀನಿವಾಸ್ ಶ್ರೀಭಕ್ತ, ಮುಕುಂಗ್ ಸೆತ್ಲೂರ್ ಹಾಗೂ ಸುಪ್ರೀತ್.ಕೆ.ಎಸ್.Recording date: 19 June 2021Credits: Music: Crescents by Ketsa Licensed under creative commons. Icon made by Freepik from www.flaticon.comShow notes- Bhimsain Khurana - https://www.dsource.in/course/story-indian-animation/video/bhimsain-khurana- Ram Mohan - https://www.dsource.in/course/story-indian-animation/video/ram-mohan- Cricket flip book - https://www.youtube.com/watch?v=vBxFBgZy8OA- Infobells Govina Haadu - https://www.youtube.com/watch?v=Lix-XLkFuvE- ABAI - https://twitter.com/abai_avgc- AVGC policy - https://www.thehindu.com/news/national/karnataka/karnataka-unveils-policy-to-propel-bengaluru-as-a-global-hub-in-avgc/article19545916.ece--- Send in a voice message: https://anchor.fm/aralikatte/message2021-07-0844 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp65: ಅನಿಮೇಶನ್ ಚಿತ್ರಗಳ ಕುರಿತು ನಿಮಗೆಷ್ಟು ಗೊತ್ತು? - A discussion on Animation filmsಅನಿಮೇಶನ್ ಕೇವಲ ಮಕ್ಕಳ ಕಾರ್ಟೂನುಗಳಿಗೆ ಸೀಮಿತವಾಗಿಲ್ಲ, ಆಸ್ಕರ್ ಪ್ರಶಸ್ತಿ ಗೆದ್ದ ಕ್ರಿಸ್ಟೋಫರ್ ನೋಲನ್ ರ ಟೆನೆಟ್ ನಂತಹ ಹಾಲಿವುಡ್ ಚಿತ್ರಗಳ ಸಿಜಿಐ, ತಾಂತ್ರಿಕ ಶಿಕ್ಷಣ, ಗೇಮಿಂಗ್ ನಿಂದ ಹಿಡಿದು ಐಪಿಎಲ್ ನ ಸ್ಕೋರ್ ಕಾರ್ಡ್ಗಳವರೆಗೆ ಅನಿಮೇಶನ್ ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್ ನ ಬಳಕೆ ವಿಸ್ತರಿಸಿದೆ.ಜಂಗಲ್ ಬುಕ್, ಲಯನ್ ಕಿಂಗ್, ಲೈಫ್ ಆಫ್ ಪೈ, ಶೇಪ್ ಆಫ್ ವಾಟರ್, ೧೯೧೭ ಈ ಎಲ್ಲಾ ಚಿತ್ರಗಳಿಗೆ ಇರುವ ಸಾಮ್ಯತೆಯೇನು? ಈ ಚಿತ್ರಗಳಲ್ಲಿ ಬಳಕೆಯಾಗಿರುವ ಕಂಪ್ಯೂಟರ್ ಗ್ರಾಫಿಕ್ಸ್ ಹಾಗೂ ಅನಿಮೇಶನ್ ಕೆಲಸ ನಡೆದಿದ್ದು ಕರ್ನಾಟಕದಲ್ಲಿ. ದೇಶದಲ್ಲೇ ಮೊಟ್ಟ ಮೊದಲ ಅನಿಮೇಶನ್ ಹಾಗೂ ಗ್ರಾಫಿಕ್ಸ್ ಕುರಿತ ಯೋಜನೆ ಜಾರಿಗೆ ಬಂದದ್ದು ಕರ್ನಾಟಕದಲ್ಲಿ. ಐಟಿ ಬಿಟಿ ಕ್ಷೇತ್ರದ ನೆರಳಲ್ಲೇ ಬೆಳೆದ ಅನಿಮೇಶನ್ ತನ್ನದೇ ರೆಕ್ಕೆಗಳನ್ನು ಚಾಚಿ ಹಾರುವ ಹೊಸ್ತಿಲಲ್ಲಿ ಇರುವ ಉದ್ಯಮ. ಇದು ಬೆಳೆದು ಬಂದ ದಾರಿ ಯಾವುದು? ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಚಿಸುವವರು ಹೇಗೆ ತೊಡಗಿಕೊಳ್ಳಬೇಕು? ಈ ಪ್ರಶ್ನೆಗಳಿಗೆ ಉತ್ತರಗಳು ಈ ವಾರದ ಸಂಚಿಕೆಯಲ್ಲಿವೆ.ಅನಿಮೇಟರ್ ಕೈಲಿ ಪೆನ್ಸಿಲ್ ಹಿಡಿದ ಒಬ್ಬ ನಟ ಎನ್ನುವ ಶ್ರೀನಿವಾಸ್ ಶ್ರೀಭಕ್ತ ಕರ್ನಾಟಕದಲ್ಲಿ ಅನಿಮೇಶನ್ ಶಿಕ್ಷಣ ಹಾಗೂ ಉದ್ಯಮವನ್ನು ಕಟ್ಟಿದವರಲ್ಲಿ ಮೊದಲಿಗರು. ಅರೇನ ಅನಿಮೇಶನ್ ಸಂಸ್ಥೆಯ ಸ್ಥಾಪಕರು, ಅಬೈ (ABAI) ಒಕ್ಕೂಟದ ಸದಸ್ಯರು. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯು ಎರಡು ಭಾಗಗಳಲ್ಲಿ ಪ್ರಸಾರವಾಗಲಿದೆ.ಚರ್ಚೆಯಲ್ಲಿ ಭಾಗವಹಿಸಿದವರು ಶ್ರೀನಿವಾಸ್ ಶ್ರೀಭಕ್ತ, ಮುಕುಂಗ್ ಸೆತ್ಲೂರ್ ಹಾಗೂ ಸುಪ್ರೀತ್.ಕೆ.ಎಸ್.Recording date: 19 June 2021Credits: Music: Crescents by Ketsa Licensed under creative commons. Icon made by Freepik from www.flaticon.comShow notes- Bhimsain Khurana - https://www.dsource.in/course/story-indian-animation/video/bhimsain-khurana- Ram Mohan - https://www.dsource.in/course/story-indian-animation/video/ram-mohan- Cricket flip book - https://www.youtube.com/watch?v=vBxFBgZy8OA- Infobells Govina Haadu - https://www.youtube.com/watch?v=Lix-XLkFuvE- ABAI - https://twitter.com/abai_avgc- AVGC policy - https://www.thehindu.com/news/national/karnataka/karnataka-unveils-policy-to-propel-bengaluru-as-a-global-hub-in-avgc/article19545916.ece--- Send in a voice message: https://anchor.fm/aralikatte/message2021-06-301h 03AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp64: ಖಾಸಗಿ ಹಕ್ಕುಗಳನ್ನು ಕುರಿತೊಂದು ಸಾರ್ವಜನಿಕ ಚರ್ಚೆ (ಭಾಗ ೨) - A public discussion on privacy rights (Part 2)ಕೆಲವು ಪ್ರಶ್ನೆಗಳಿಗೆ ಕಾನೂನಿನಲ್ಲಿ ಉತ್ತರ ಹುಡುಕುವುದು ತಪ್ಪು, ಬದಲಾಗಿ ರಾಜಕೀಯವನ್ನು ನೆಚ್ಚಬೇಕು. ಆದರೆ ನಮ್ಮ ದೇಶದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಂಸದರು, ಶಾಸಕರು ಹಾಗೂ ಅಧಿಕಾರಿಗಳು ಪ್ರತಿಯೊಂದಕ್ಕೂ ನ್ಯಾಯಾಂಗದ ಮೊರೆಹೋಗುತ್ತಾರೆ. ಇದರಿಂದಾಗಿ ನ್ಯಾಯಾಲಯಗಳ ಎದುರು ಇರುವ ಮೊಕದ್ದಮೆಗಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಕಡಿಮೆ ಮಾಡಲು ಇರುವ ಉಪಾಯಗಳೇನು?ತ್ರಿವಳಿ ತಲಾಕ್, ರಾಮ ಮಂದಿರ ನಿರ್ಮಾಣದ ವಿವಾದ, ಶಬರಿಮಲೈ ದೇವಾಲಯ ಪ್ರವೇಶದ ವಿವಾದ ಇವುಗಳಲೆಲ್ಲ ಜನ ಸಮಾನ್ಯರು ಕಾಣದ ಕಾನೂನು, ರಾಜಕೀಯ, ಸಾಂಸ್ಕೃತಿಕ ಅಂಶಗಳ ಪ್ರಭಾವ, ದೇಶದಲ್ಲಿ ನಮ್ಮ ಸರ್ಕಾರವೇ ಅತಿದೊಡ್ಡ ದಾವೆದಾರನಾಗಿರುವ ವಿಪರ್ಯಾಸ.ವಕೀಲರಾದ ಅಶೋಕ್ ಗುಬ್ಬಿ ವೆಂಕಟೇಶಮೂರ್ತಿಯವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಎರಡನೆಯ ಭಾಗದಲ್ಲಿ ಇವೆಲ್ಲ ಕೇಳಬಹುದು. ಅರಳಿಕಟ್ಟೆಯ ಅರವತ್ನಾಲ್ಕನೆಯ  ಸಂಚಿಕೆಯಲ್ಲಿ ಅತಿಥಿಯೊಂದಿಗೆ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್ ಹಾಗೂ ವಾಸುಕಿ ರಾಘವನ್.Recording date: 25 April 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-06-2248 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp63: ಖಾಸಗಿ ಹಕ್ಕುಗಳನ್ನು ಕುರಿತೊಂದು ಸಾರ್ವಜನಿಕ ಚರ್ಚೆ - A public discussion on privacy rightsನಮ್ಮ ಮನೆ, ಸೈಟು, ಕಾರು, ಬಳೆ, ಸರ, ಕಾಲುಂಗುರ ಹೀಗೆ ಭೌತಿಕ ಸಂಪತ್ತಿನ ರಕ್ಷಣೆಗೆ ಇರುವ ಕಾನೂನುಗಳಂತೆಯೇ ಬೌದ್ದಿಕ ಸಂಪತ್ತಿನ ರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ನಿಮಗೆ ತಿಳಿದಿದೆಯೇ? ಪೇಟೆಂಟ್, ಕಾಪಿ ರೈಟ್, ಟ್ರೇಡ್ ಮಾರ್ಕ್, ಡಿಸೈನ್ ರಕ್ಷಣೆ, ವ್ಯಾಪಾರ ರಹಸ್ಯ (ಟ್ರೇಡ್ ಸೀಕ್ರೇಟ್) ಹೀಗೆ ನಾನಾ ಬಗೆಯ ರಕ್ಷಣೆಗಳನ್ನು ವಿವಿಧ ರಾಷ್ಟ್ರಗಳ ಕಾನೂನುಗಳು ಒದಗಿಸುತ್ತವೆ ಎನ್ನುವುದು ನಿಮಗೆ ಗೊತ್ತೆ?ಯುರೋಪಿನಲ್ಲಿ ಪ್ರಭಾವಶಾಲಿಯಾಗಿರುವ ಪ್ರೈವೆಸಿ ಹಕ್ಕುಗಳ ಬಗೆಗಿನ ಅರಿವು ನಮ್ಮ ದೇಶದಲ್ಲಿ ದುರ್ಬಲವಾಗಿರುವುದು ಏಕೆ? ಈ ದೌರ್ಬಲ್ಯಕ್ಕೆ ನಮ್ಮ ಸಂಸ್ಕೃತಿ, ಭಾಷೆಯೇ ಹೇಗೆ ಇಂಬು ನೀಡುತ್ತವೆ?  ದಾಂಪತ್ಯದಲ್ಲಿನ ಅತ್ಯಾಚಾರವನ್ನು ಕಾನೂನು ಬಾಹಿರ ಎಂದು ಪರಿಗಣಿಸುವುದಕ್ಕೆ ಅಡ್ಡಿಯಾಗಿ ಮುಂದೊತ್ತುವ ದಾಂಪತ್ಯದ ಖಾಸಗಿತನದ ಹಕ್ಕು, ವಿವಾಹ ಬಾಹಿರ ಸಂಬಂಧವನ್ನು ಕಾನೂನು ಬಾಹಿರವಾಗಿಸುವಾಗ ನಮಗೇಕೆ ನೆನಪಾಗುವುದಿಲ್ಲ? ಹೀಗೆ ನಮ್ಮ ಅನುಕೂಲಕ್ಕೆ ತಕ್ಕಂತೆ ಖಾಸಗಿ ಹಕ್ಕುಗಳ ಚರ್ಚೆಯ ದಾರಿ ತಪ್ಪಿಸುವ ಇನ್ನಷ್ಟು ನಿದರ್ಶನಗಳ ಬಗ್ಗೆ ತಿಳಿಯಬೇಕೆ?ವಕೀಲರಾದ ಅಶೋಕ್ ಗುಬ್ಬಿ ವೆಂಕಟೇಶಮೂರ್ತಿಯವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಮೊದಲ ಭಾಗದಲ್ಲಿ ಇವೆಲ್ಲ ಕೇಳಬಹುದು. ಅರಳಿಕಟ್ಟೆಯ ಅರತ್ಮೂರನೆಯ ಸಂಚಿಕೆಯಲ್ಲಿ ಅತಿಥಿಯೊಂದಿಗೆ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್ ಹಾಗೂ ವಾಸುಕಿ ರಾಘವನ್.Recording date: 25 April 2021Credits: Music: Crescents by Ketsa Licensed under creative commons. Icon made by Freepik from www.flaticon.comShow notes- Puttaswamy vs union of India judgement - https://indiankanoon.org/doc/127517806/- Article 14 of Indian constitution - https://en.wikipedia.org/wiki/Article_14_of_the_Constitution_of_India- Article 19 of Indian constitution - https://en.wikipedia.org/wiki/Freedom_of_expression_in_India- Article 21 of Indian constitution - https://www.constitutionofindia.net/constitution_of_india/fundamental_rights/articles/Article%2021- Jay Shaw defamation case against The Wire - https://thewire.in/media/the-wire-withdraws-its-sc-petitions-will-see-jay-amit-shah-in-trial-court-now--- Send in a voice message: https://anchor.fm/aralikatte/message2021-06-1656 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp62: ಹ್ಯಾಟ್ರಿಕ್ ವೈದ್ಯರೊಂದಿಗೆ ಲೋಕಾಭಿರಾಮ ಹರಟೆ (ಭಾಗ ೨)- A conversation with a 'hat-trick` doctor (Part 2)ವೃತ್ತಿಯಲ್ಲಿ ವೈದ್ಯರಾಗಿರುವ ಡಾ ಶಾಂತಲಾ ಸೈನ್ಸ್ ಫಿಕ್ಷನ್ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ (ಇವರ "೩೦೧೯ ಎಡಿ" ಪುಸ್ತಕವನ್ನು ಮೈಲ್ಯಾಂಗ್ ಪ್ರಕಾಶನ ಪ್ರಕಟಿಸಿದೆ), ಜೊತೆಗೆ ಪೇಂಟಿಂಗಿನಲ್ಲೂ ಆಸಕ್ತಿ ಹೊಂದಿದ್ದಾರೆ. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.ಎರಡನೆಯ ಸಂಚಿಕೆಯಲ್ಲಿ ನಾವು ಶಾಂತಲಾರ ೩೦೧೯ ಎಡಿ ಎನ್ನುವ ಸೈನ್ಸ್ ಫಿಕ್ಷನ್ ಪುಸ್ತಕದ ಕುರಿತ ಚರ್ಚೆಯಿಂದ ತೊಡಗಿ ಭಾರತದ ಪುರಾಣ ಕಥೆಗಳಿಗೂ, ಆಧುನಿಕ ವಿಜ್ಞಾನಕ್ಕೂ ಇರುವ ನಂಟು, ನಮ್ಮ ಭೌತಿಕ ಜಗತ್ತನ್ನು ಅರ್ಥ ಮಾಡಿಕೊಳ್ಳುವಲ್ಲಿ ಮನುಷ್ಯರಿಗೆ ಇರುವ ಮಿತಿ, ಸೈನ್ಸ್ ಫಿಕ್ಷನಿಗೂ ಕಾವ್ಯಕ್ಕೂ ಇರುವ ಸಾಮ್ಯ, ವೈದ್ಯಕೀಯ ವೃತ್ತಿ, ಕುಟುಂಬ ನಿರ್ವಹಣೆ, ಬರವಣಿಗೆ, ಜತೆಗೆ ಚಿತ್ರಕಲೆ - ಇವೆಲ್ಲಕ್ಕೂ ಹೇಗೆ ಸಮಯ ಹೊಂದಿಸಿಕೊಳ್ಳುವುದು -  ಹೀಗೆ ಹಲವು ಕುತೂಹಲಕಾರಿ ವಿಷಯಗಳ ಚರ್ಚೆ ಅರಳಿಕಟ್ಟೆಯ ಅರವತ್ತೆರಡನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.ಈ ಚರ್ಚೆಯಲ್ಲಿ ಭಾಗವಹಿಸಿದವರು ಡಾ. ಶಾಂತಲಾ, ಮುಕುಂದ್ ರಂಗ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸುಪ್ರೀತ್.ಕೆ.ಎಸ್.Recording date: 18 April 2021Credits: Music: Crescents by Ketsa Licensed under creative commons. Icon made by Freepik from www.flaticon.comShow Notes- Dr. Shantala's book 3019 AD - https://mylang.in/products/3019ad-inr- Episode sponsored by MyLang Books : https://mylang.in/Use exclusive promo code AK20 to get flat 20% off on your first purchase.Use exclusive promo code AK10 to get flat 10% off on every purchase.--- Send in a voice message: https://anchor.fm/aralikatte/message2021-06-0951 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp61: ಹ್ಯಾಟ್ರಿಕ್ ವೈದ್ಯೆಯೊಂದಿಗೆ ಲೋಕಾಭಿರಾಮ ಹರಟೆ - A conversation with a 'hat-trick` doctorವೃತ್ತಿಯಲ್ಲಿ ವೈದ್ಯರಾಗಿರುವ ಡಾ ಶಾಂತಲಾ ಸೈನ್ಸ್ ಫಿಕ್ಷನ್ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ (ಇವರ "೩೦೧೯ ಎಡಿ" ಪುಸ್ತಕವನ್ನು ಮೈಲ್ಯಾಂಗ್ ಪ್ರಕಾಶನ ಪ್ರಕಟಿಸಿದೆ), ಜೊತೆಗೆ ಪೇಂಟಿಂಗಿನಲ್ಲೂ ಆಸಕ್ತಿ ಹೊಂದಿದ್ದಾರೆ. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.ಮೊದಲ ಭಾಗದಲ್ಲಿ ನಾವು ವೈದ್ಯರಾಗಿ ತರಬೇತಿ ಪಡೆಯುವಾಗಿನ ಡಾ ಶಾಂತಲಾರ ಅನುಭವ, ಜನರಲ್ ಸರ್ಜರಿಯಲ್ಲಿ ಆಸಕ್ತಿ ಇದ್ದರೂ ವೈದ್ಯಕೀಯ ವ್ಯವಸ್ಥೆಯಲ್ಲಿನ ಪಕ್ಷಪಾತಿ ಧೋರಣೆಯಿಂದಾಗಿ ಅದು ಕೈತಪ್ಪಿದ್ದು, ದೆಹಲಿಯ ಆಸ್ಪತ್ರ್ಯೆಯಲ್ಲಿ "ಮದರಾಸಿ" ಎಂಬ ಮೂದಲಿಕೆಯನ್ನು ಎದುರಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದು ಹೀಗೆ ಮಹಿಳೆಯಾಗಿ ವೈದ್ಯಕೀಯ ವೃತ್ತಿಯಲ್ಲಿ ನೆಲೆನಿಲ್ಲುವಲ್ಲಿ ಎದುರಿಸಿದ ಸವಾಲುಗಳನ್ನು ಚರ್ಚಿಸಿದ್ದೇವೆ."ಮನಸ್ಸು ತಿಳಿಯದ್ದನ್ನು ಕಣ್ಣು ಕಾಣದು" (Eyes don't see what the mind doesn't know) ಎನ್ನುವ ವಿವೇಕವಾಣಿ ವೈದ್ಯ ವೃತ್ತಿಯಲ್ಲಿ ಹೇಗೆ ಅನ್ವಯವಾಗುತ್ತದೆ? ವೃತ್ತಿಯಲ್ಲಿ ಕಲಿತ ಶಿಸ್ತು ದಿನನಿತ್ಯದ ಜೀವನದಲ್ಲಿ ಹೇಗೆ ಬಳಕೆಗೆ ಬರುತ್ತದೆ? ತಂತ್ರಜ್ಞಾನದಲ್ಲಿನ ಪ್ರಗತಿಯಿಂದ ವೈದ್ಯಕೀಯ ಕ್ಷೇತ್ರದಲ್ಲಾಗಿರುವ ಬದಲಾವಣೆಗಳೇನು? - ಹೀಗೆ ಅನೇಕ ಕುತೂಹಲಕಾರಿ ವಿಷಯಗಳ ಕುರಿತ ಚರ್ಚೆ ಅರಳಿಕಟ್ಟೆಯ ಅರವತ್ತೊಂದನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.ಈ ಚರ್ಚೆಯಲ್ಲಿ ಭಾಗವಹಿಸಿದವರು ಡಾ. ಶಾಂತಲಾ, ಮುಕುಂದ್ ರಂಗ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸುಪ್ರೀತ್.ಕೆ.ಎಸ್.Recording date: 18 April 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-06-031h 02AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp60: ನಸೀಮ್ ತಲೆಬ್ ಸ್ಕಿನ್ ಇನ್ ದಿ ಗೇಮ್ (ಭಾಗ ೨) - Nassim Taleb's Skin in the game (Part 2)ಪ್ರಭಾವಶಾಲಿ, ಅದಕ್ಕಿಂತ ಹೆಚ್ಚಾಗಿ ವಿವಾದಾಸ್ಪದವಾದ ನಮ್ಮ ಕಾಲದ ಲೇಖಕರಲ್ಲಿ ಒಬ್ಬರಾದ ನಸೀಂ ತಲೆಬ್ ರ ಸ್ಕಿನ್ ಇನ್ ದಿ ಗೇಮ್ (Skin in the game) ಪುಸ್ತಕದ ಚರ್ಚೆಯ ಎರಡನೆಯ ಭಾಗ ಅರಳಿಕಟ್ಟೆಯ ಅರವತ್ತನೆಯ ಸಂಚಿಕೆಯಲ್ಲಿ...ತಲೆಬ್ ಬೌದ್ಧಿಕ ಜಗತ್ತಿನ ರಾಕ್ ಸ್ಟಾರ್ ಹಾಗೂ ರೆಬೆಲ್ ಎಂದೇ ಪರಿಗಣಿಸಲ್ಪಡುತ್ತಾರೆ. ವಿಶ್ವವಿದ್ಯಾಲಯಗಳಿಂದ ಹಿಡಿದು ಬಹುರಾಷ್ಟ್ರೀಯ ಕಂಪೆನಿಗಳ ಬೋರ್ಡ್ ರೂಮ್ ಚರ್ಚೆಗಳವರೆಗೆ, ಜಿಮ್ ಗಳಿಂಗ ಹಿಡಿದು ಕ್ರೀಡಾಂಗಣಗಳಲ್ಲಿನ ಮಾತುಕತೆಗಳವರೆಗೆ ಈತನ ವಿಚಾರಗಳು ಪ್ರಭಾವಶಾಲಿಯಾಗಿವೆ.ನಮ್ಮೆಲ್ಲರ ಜಾಣ್ಮೆಗಿಂತ ಹಿರಿದಾದ ಜಾಣ್ಮೆಯೊಂದಿದೆ. ಇದನ್ನು ತಲೆಬ್ ಲಿಂಡಿ ಪರಿಣಾಮ ಎಂದು ಗುರುತಿಸುತ್ತಾರೆ. ಇದು ನಮ್ಮ ದಿನನಿತ್ಯದ ಆಯ್ಕೆಗಳಲ್ಲಿ ಯಾವ ಪಾತ್ರವನ್ನು ವಹಿಸುತ್ತದೆ? ವಾದದಲ್ಲಿ ಗೆಲ್ಲುವುದಕ್ಕೂ, ಗೆಲ್ಲುವುದಕ್ಕೂ ಇರುವ ವ್ಯತ್ಯಾಸವೇನು? ಸಾಮಾಜಿಕ ತಾಣಗಳಲ್ಲಿ ನಡೆಯುವ ವಾಕ್ ಸಮರ ಮುಖತಃ ಭೇಟಿಗಳಲ್ಲಿ ನಡೆಯುವುದು ಅತಿ ವಿರಳವೇಕೆ?ಬರಾಕ್ ಒಬಾಮರ "ಲಂಚಕೋರ"ತನದ ಬಗ್ಗೆ ನಿಮಗೆ ತಿಳಿದಿದೆಯೇ? ವಿಚಾರವಾದ, ಧಾರ್ಮಿಕತೆ ಹಾಗೂ ಮೂಢನಂಬಿಕೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಎಡವುವುದು ಎಲ್ಲಿ? ಇನ್ನಷ್ಟು ಆಸಕ್ತಿಕರ ವಿಷಯಗಳ ಚರ್ಚೆ ಈ ಸಂಚಿಕೆಯಲ್ಲಿ. ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ.ಎಸ್ ಹಾಗೂ ವಾಸುಕಿ ರಾಘವನ್.ಈ ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ.ಎಸ್ ಹಾಗೂ ವಾಸುಕಿ ರಾಘವನ್.Recording date: 11 April 2021Credits: Music: Crescents by Ketsa Licensed under creative commons. Icon made by Freepik from www.flaticon.comShow notes- Sebi regulation skin in the game - https://www.newindianexpress.com/business/2021/may/03/the-optics-intent-and-impact-ofskin-in-the-game-2297767.html- Link to Aralikatte episode on Mental models: https://youtu.be/C8FfMHzJ2ro- Episode sponsored by MyLang Books : https://mylang.in/Use exclusive promo code AK20 to get flat 20% off on your first purchase.Use exclusive promo code AK10 to get flat 10% off on every purchase.--- Send in a voice message: https://anchor.fm/aralikatte/message2021-05-261h 16AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp59: ನಸೀಮ್ ತಲೆಬ್ ಸ್ಕಿನ್ ಇನ್ ದಿ ಗೇಮ್ - Nassim Taleb's Skin in the game್ರಭಾವಶಾಲಿ, ಅದಕ್ಕಿಂತ ಹೆಚ್ಚಾಗಿ ವಿವಾದಾಸ್ಪದವಾದ ನಮ್ಮ ಕಾಲದ ಲೇಖಕರಲ್ಲಿ ಒಬ್ಬರಾದ ನಸೀಂ ತಲೆಬ್ ರ ಸ್ಕಿನ್ ಇನ್ ದಿ ಗೇಮ್ (Skin in the game) ಪುಸ್ತಕದ ಚರ್ಚೆ ಅರಳಿಕಟ್ಟೆಯ ಐವತ್ತೊಂಭತ್ತನೆಯ ಸಂಚಿಕೆಯಲ್ಲಿ...ತಲೆಬ್ ಬೌದ್ಧಿಕ ಜಗತ್ತಿನ ರಾಕ್ ಸ್ಟಾರ್ ಹಾಗೂ ರೆಬೆಲ್ ಎಂದೇ ಪರಿಗಣಿಸಲ್ಪಡುತ್ತಾರೆ. ವಿಶ್ವವಿದ್ಯಾಲಯಗಳಿಂದ ಹಿಡಿದು ಬಹುರಾಷ್ಟ್ರೀಯ ಕಂಪೆನಿಗಳ ಬೋರ್ಡ್ ರೂಮ್ ಚರ್ಚೆಗಳವರೆಗೆ, ಜಿಮ್ ಗಳಿಂಗ ಹಿಡಿದು ಕ್ರೀಡಾಂಗಣಗಳಲ್ಲಿನ ಮಾತುಕತೆಗಳವರೆಗೆ ಈತನ ವಿಚಾರಗಳು ಪ್ರಭಾವಶಾಲಿಯಾಗಿವೆ."ಕಣ್ಣಿಗೆ ಕಣ್ಣು" ಎಂದು ಗುರುತಿಸುವ ಹಮ್ಮುರಬಿಯ ಶಾಸನವನ್ನು ನಾವು ಆಧುನಿಕರು ಸರಿಯಾಗಿ ಅರ್ಥೈಸಿಕೊಂಡಿದ್ದೇವೆಯೇ? ನಾವು ಅನಾಗರೀಕ ಎಂದು ಭಾವಿಸುವ ಪುರಾತಾನ ಸಂಸ್ಕೃತಿಗಳು ಕಂಡುಕೊಂಡ ನೀತಿ ಶಾಸ್ತ್ರಗಳು ಪ್ರಬುದ್ಧವಾಗಿದ್ದವು ಎಂದು ತಲೆಬ್ ವಾದಿಸುವುದು ಏಕೆ?ಬೆಂಗಳೂರಿನಲ್ಲಿ ಚಿಕನ್ ಮಾರಲು ಅಂಗಡಿ ತೆರೆದ ಕೆ ಎಫ್ ಸಿ ಜಗತ್ತಿನ ತನ್ನ ಬೇರೆ ಯಾವುದೇ ಅಂಗಡಿಗಳಲ್ಲಿ ಇರದ ಅನ್ನದ ಬಟ್ಟಲು "ರೈಸ್ ಬೌಲ್" ಪರಿಚಯಿಸಲು ಕಾರಣವೇನು? ನಮ್ಮ ಬೀದಿಗಳಲ್ಲಿ ಒಂದೆರೆಡೆಂಬಂತೆ ಶುರುವಾದ ಆಕ್ಟೀವ್ ಹೊಂಡಾ ಮಾದರಿಯ ದ್ವಿಚಕ್ರವಾಹನಗಳು ಏಕಾಏಕಿ ರಸ್ತೆಗಳನ್ನು ಆವರಿಸಿದ್ದರ ಹಿಂದಿರುವ ತತ್ವವೇನು?ಇಸ್ರೇಲ್ ಪ್ಯಾಲಸ್ತೀನ್ ನಡುವಿನ ಬಿಕ್ಕಟ್ಟಿಗೂ, ಸಂಸಾರವೊಂದರಲ್ಲಿನ ಗಂಡ ಹೆಂಡತಿಯರ ನಡುವಿನ ಜಗಳಕ್ಕೂ ಇರುವ ನಂಟೇನು? - ಇವೇ ಮೊದಲಾದ ಕುತೂಹಲಕರ ಉದಾಹರಣೆಗಳೊಂದಿಗೆ ನಾವು ಈ ಪುಸ್ತಕಗ ಒಳನೋಟಗಳನ್ನು ನಮಗೆ ದಕ್ಕಿದ ರೀತಿಯಲ್ಲಿ ಚರ್ಚಿಸಿದ್ದೇವೆ. ನಿಮಗೂ ಈ ಚರ್ಚೆ ಖುಷಿಕೊಡಬಹುದು ಎನ್ನುವ ನಂಬಿಕೆ ನಮ್ಮದು.ಈ ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ.ಎಸ್ ಹಾಗೂ ವಾಸುಕಿ ರಾಘವನ್.Recording date: 11 April 2021Credits: Music: Crescents by Ketsa Licensed under creative commons. Icon made by Freepik from www.flaticon.comShow notesTaleb's appearances on Econ Talk Podcast: https://nassimtaleb.org/tag/econtalk/Taleb's podcast with Gad Saad: https://www.youtube.com/watch?v=ezhjumayRsgEpisode sponsored by MyLang Books : https://mylang.in/Use exclusive promo code AK20 to get flat 20% off on your first purchase.Use exclusive promo code AK10 to get flat 10% off on every purchase.--- Send in a voice message: https://anchor.fm/aralikatte/message2021-05-181h 24AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp58: ಸೃಜನಶೀಲ ಕಾರ್ಟೂನಿಸ್ಟ್ ಜತೆಗೊಂದು ಮಾತುಕತೆ (ಭಾಗ ೨) - A conversation with a creative cartoonist (Part 2)ಸೋಶಿಯಲ್ ಮೀಡಿಯಾದಲ್ಲಿ ಪೊಲಿಟಿಕಲ್ ಕಾರ್ಟೂನುಗಳು ಹೆಚ್ಚು ಜನರನ್ನು ತಲುಪುವುದು ಕಾರ್ಟೂನಿಸ್ಟರಿಗೆ ವರವೂ ಹೌದು, ಶಾಪವೂ ಹೌದು. ನಳ ಪೊನ್ನಪ್ಪ ಈ ಮಾಧ್ಯಮಗಳಲ್ಲಿ ಎದುರಾಗುವ ಟ್ರೋಲ್ ಗಳನ್ನು ಹೇಗೆ ನಿರ್ವಹಿಸುತ್ತಾರೆ?ನಳ ಪೊನ್ನಪ್ಪರ ಕಾರ್ಟೂನುಗಳ ಶೈಲಿಯ ಹಿಂದಿರುವ ಆಯ್ಕೆಗಳೇನು? ಭಾರತದಲ್ಲಷ್ಟೇ ಅಲ್ಲ, ಜಾಗತಿಕವಾಗಿ ಕಾರ್ಟೂನಿಂಗ್ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ ಕಡಿಮೆ ಇರಲು ಕಾರಣಗಳೇನಿರಬಹುದು? ಪೊಲಿಟಿಕಲ್ ಕಾರ್ಟೂನುಗಳಿಗೆ ಹೊರತಾಗಿ ಬದುಕಿನ ಇತರೆ ಸಂಗತಿಗಳ ಕುರಿತ ಕಾರ್ಟೂನುಗಳು ನಮ್ಮಲ್ಲಿ ವಿರಳವಾಗಿರಲು ಕಾರಣವೇನು? ಕಾರ್ಟೂನಿಸ್ಟ್ ಆಗಿ ಜೀವನ ನಿರ್ವಹಣೆ ಮಾಡಲು ಸಾಧ್ಯವೇ?ಇವೇ ಮೊದಲಾದ ಪ್ರಶ್ನೆಗಳೊಂದಿಗೆ ನಾವು ಕಾರ್ಟೂನಿಸ್ಟ್ ನಳ ಪೊನ್ನಪ್ಪರೊಂದಿಗೆ ನಡೆಸಿದ ಮಾತುಕತೆಯ ಎರಡನೆಯ ಭಾಗ ಅರಳಿಕಟ್ಟೆಯ ಐವತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದೆ.Recording date: 27 March 2021Credits: Music: Crescents by Ketsa Licensed under creative commons. Icon made by Freepik from www.flaticon.com Show notes- Cartoonist Sunil Cotton : https://www.facebook.com/sunil.cotton- Cartoonist Ashwini Menon : https://www.ashvinimenon.com/- Cartoonist Maya Kamath : https://en.wikipedia.org/wiki/Maya_Kamath--- Send in a voice message: https://anchor.fm/aralikatte/message2021-05-121h 03AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp57: ಸೃಜನಶೀಲ ಕಾರ್ಟೂನಿಸ್ಟ್ ಜತೆಗೊಂದು ಮಾತುಕತೆ - A conversation with a creative cartoonistಸುದೀರ್ಘವಾದ ಸಂಪಾದಕೀಯ ಹೇಳಲು ಸಾಧ್ಯವಿಲ್ಲದ ಸತ್ಯವನ್ನು ನಿಷ್ಠುರವಾಗಿ, ಸುತ್ತಿ ಬಳಸದೆ ನೇರವಾಗಿ, ಮೊನಚಾಗಿ, ಓದುಗರ ತುಟಿಯಂಚಲ್ಲಿ ನಗೆ ಮೂಡಿಸುವಂತೆ ಹೇಳಲು ಕಾರ್ಟೂನುಗಳಿಗೆ ಸಾಧ್ಯ.ಉಳಿದವರೆಲ್ಲರೂ ಕಣ್ಣು ಮುಚ್ಚಿ ಬೆತ್ತಲೆ ರಾಜ ಬಟ್ಟೆ ತೊಟ್ಟಿದ್ದಾನೆ ಎಂದು ನಟಿಸುವಾಗ ಬೆರಳು ತೋರಿ ಬಯಲು ಮಾಡುವುದಕ್ಕೆ ಮುಗ್ಧ ಮಗುವಿನ ನಗೆ ಸಾಕು. ಇಂಥ ಮುಗ್ಧತೆ ಹಾಗೂ ಪ್ರಾಮಾಣಿಕತೆಯನ್ನು ಕಾಯ್ದುಕೊಂಡ ಕಾರ್ಟೂನಿಸ್ಟುಗಳಲ್ಲಿ ನಳ ಪೊನ್ನಪ್ಪ ಪ್ರಮುಖರು.ತರಬೇತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದ ನಳ ಪೊನ್ನಪ್ಪ ಕಾರ್ಟೂನುಗಳನ್ನು ಬರೆಯುವ ಹವ್ಯಾಸವನ್ನು ವೃತ್ತಿಯಾಗಿ ಆಯ್ದುಕೊಂಡದ್ದು ಏಕೆ? ಆರ್ಕಿಟೆಕ್ಚರ್ ತರಬೇತಿ ಅವರ ಕಾರ್ಟೂನುಗಳನ್ನು ಹೇಗೆ ಪ್ರಭಾವಿಸುತ್ತದೆ? ಕೆಲಸ ಮಾಡುವ ಎಂಟು ಘಂಟೆಯಲ್ಲಿ ಪ್ರತಿದಿನ ಸೃಜನಶೀಲವಾದ, ನಗಿಸುವ, ಜತೆಗೆ ಹರಿತವಾದ ಕಾರ್ಟೂನುಗಳನ್ನು ಬರೆಯಲು ಬೇಕಾದ ಸಿದ್ಧತೆ, ಮನಸ್ಥಿತಿ ಎಂಥದ್ದು? - ಹೀಗೆ ಅನೇಕ ಆಸಕ್ತಿಕರ ಪ್ರಶ್ನೆಗಳೊಂದಿಗೆ ಅರಳಿಕಟ್ಟೆ ನಳ ಪೊನ್ನಪ್ಪರೊಂದಿಗೆ ನಡೆಸಿದ ಚರ್ಚೆಯ ಮೊದಲ ಭಾಗ ಐವತ್ತೇಳನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Recording date: 27 March 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-05-0454 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp56: ನಿವೃತ್ತ ಪೊಲೀಸ್ ಅಧಿಕಾರಿಯೊಂದಿಗೆ ದಿಟ್ಟ ಮಾತು (ಭಾಗ ೨) - A candid talk with a retired Police officer (Part 2)ಪೊಲೀಸ್ ವ್ಯವಸ್ಥೆ ಹಾಗೂ ಪೊಲೀಸರು ಬಳಸುವ ಮಾರ್ಗಗಳ ಕುರಿತು ದಿಟ್ಟವಾಗಿ ಹಾಗೂ ಪ್ರಾಮಾಣಿಕವಾಗಿ ಮಾತನಾಡುವ ಜೆ.ಬಿ.ರಂಗಸ್ವಾಮಿಯವರೊಂದಿಗಿನ ನಮ್ಮ ಚರ್ಚೆಯ ಮೊದಲ ಭಾಗ ಬಹು ಜನಪ್ರಿಯವಾಗಿದೆ.ಪೊಲೀಸರು ರಜೆ, ಹಬ್ಬ ಎನ್ನದೆ ಡ್ಯೂಟಿ ಮಾಡಬೇಕು, ಸಾರ್ವಜನಿಕರು, ಮಾಧ್ಯಮಗಳಲ್ಲಿನ ಅವಹೇಳನಕಾರಿ ಚಿತ್ರಣಗಳನ್ನು ಸಹಿಸಿಕೊಂಡು ಕೆಲಸ ಮಾಡಬೇಕು, ರಾಜಕಾರಣಿಗಳ ಒತ್ತಡವನ್ನು ನಿರ್ವಹಿಸುವ ಛಾತಿ ಇರಬೇಕು ಹೀಗೆ ಹಲವಾರು ಸವಾಲುಗಳಿದ್ದರೂ ತಮ್ಮ ೭೨ರಡನೆಯ ವಯಸ್ಸಿನಲ್ಲಿ ಪೊಲೀಸ್ ಕೆಲಸ ಹೆಚ್ಚು ತೃಪ್ತಿಕೊಟ್ಟ ಕೆಲಸ ಎಂದು ರಂಗಸ್ವಾಮಿಯವರು ಹೇಳುವುದೇಕೆ?ಹಲವರು ಪೊಲಿಟಿಕಲಿ ಇನ್ ಕರಕ್ಟ್ ಎಂದು ಭಾವಿಸಬಹುದಾದ ಅನೇಕ ವಿಚಾರಗಳನ್ನು ದಿಟ್ಟವಾಗಿ, ಪ್ರಾಮಾಣಿಕವಾಗಿ ರಂಗಸ್ವಾಮಿಯವರು ಚರ್ಚಿಸಿದ್ದಾರೆ. ಈ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ಐವತ್ತಾರನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.ಚರ್ಚೆಯಲ್ಲಿ ಭಾಗವಹಿಸಿದವರು ಜೆ.ಬಿ.ರಂಗಸ್ವಾಮಿ, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್.Recording date: 7 March 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-04-2754 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp55: ನಿವೃತ್ತ ಪೊಲೀಸ್ ಅಧಿಕಾರಿಯೊಂದಿಗೆ ದಿಟ್ಟ ಮಾತು - A candid talk with a retired Police officerನಮ್ಮಲ್ಲಿ ಬಹುತೇಕರಿಗೆ ಪೊಲೀಸ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ, ಪೊಲೀಸರು ಹೇಗೆ ಕ್ರೈಂ ಪತ್ತೆ ಹಚ್ಚುತ್ತಾರೆ ಎನ್ನುವುದಕ್ಕೆ ಸಿನಿಮಾ, ಕಾದಂಬರಿಗಳು ಕಟ್ಟಿಕೊಡುವ ಚಿತ್ರಣಗಳಷ್ಟೇ ತಿಳಿದಿರುತ್ತವೆ. ಈ ಚಿತ್ರಣಗಳು ವಾಸ್ತವಕ್ಕೆ ಹತ್ತಿರವಾಗಿರುತ್ತವೆಯೇ?ಪೊಲೀಸರಿಗೆ ತಮ್ಮ ಕೆಲಸ ನಿರ್ವಹಣೆಯಲ್ಲಿರುವ ಒತ್ತಡಗಳು ಯಾವುವು? ಪೊಲೀಸ್ ಪರಿಭಾಷೆಯಲ್ಲಿ ಚಪಾತಿ ಒತ್ತಿಸುವುದು, ಹಗ್ಗ ಹಾಕುವುದು, ಏರೋಪ್ಲೇನ್ ಹತ್ತಿಸುವುದು ಅಂದರೇನು? ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕಳ್ಳರು "ನಮಗೆ ಕರೆಂಟ್ ಮಾಡ್ಸಿ ಸಾರ್" ಎಂದು ಪೊಲೀಸರನ್ನು ಗೋಗರೆಯುವುದು ಏಕೆ?ಇವೇ ಮೊದಲಾದ ಕುತೂಹಲಕಾರಿ ವಿಷಯಗಳನ್ನು ಸೇವೆಗೆ ಸೇರಿದ ಮೂರೇ ವರ್ಷಗಳಲ್ಲಿ ಹದಿಮೂರು ಬಾರಿ ಎತ್ತಂಗಡಿಗೊಂಡ (ಅವರದೇ ಭಾಷೆಯಲ್ಲಿ ಹೇಳುವುದಾದರೆ "unceremoniously kicked out") ಮೈಸೂರಿನ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ. ರಂಗಸ್ವಾಮಿಯವರ ಜತೆಗೆ ಚರ್ಚಿಸಿದ್ದೇವೆ.ಮೈಸೂರಿನ ಕುಖ್ಯಾತ ರೌಡಿ ಮರ್ಡರ್ ರಿಯಾಜನ ಪೈಜಾಮದಲ್ಲಿ ಹಾವು ಬಿಟ್ಟು ಕೇಸಿಗೆ ಬೇಕಾದ ಮಾಹಿತಿಯನ್ನು ಬಾಯಿ ಬಿಡಿಸಿದ್ದು, ಹೈದರಾಬಾದಿನಲ್ಲಿ ವಿಸಿ ಸಜ್ಜನರ್ ಎಂಬ ಪೊಲೀಸ್ ಅಧಿಕಾರಿ ಅತ್ಯಾಚಾರ ಆರೋಪಿಗಳನ್ನು ಗುಂಡಿಕ್ಕಿ ಕೊಂದಿದ್ದು, ಪೊಲೀಸರು ಮಾಹಿತಿ ಕಲೆಹಾಕಲು ಬಳಸುವ ಮಾರ್ಗಗಳು ಹೀಗೆ ಹಲವರು ಪೊಲಿಟಿಕಲಿ ಇನ್ ಕರಕ್ಟ್ ಎಂದು ಭಾವಿಸಬಹುದಾದ ಅನೇಕ ವಿಚಾರಗಳನ್ನು ದಿಟ್ಟವಾಗಿ, ಪ್ರಾಮಾಣಿಕವಾಗಿ ರಂಗಸ್ವಾಮಿಯವರು ಚರ್ಚಿಸಿದ್ದಾರೆ. ಈ ಚರ್ಚೆಯ ಮೊದಲ ಭಾಗ ಅರಳಿಕಟ್ಟೆಯ ಐವತ್ತೈದನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.ಚರ್ಚೆಯಲ್ಲಿ ಭಾಗವಹಿಸಿದವರು ಜೆ.ಬಿ.ರಂಗಸ್ವಾಮಿ, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್.Recording date: 7 March 2021Credits: Music: Crescents by Ketsa Licensed under creative commons. Icon made by Freepik from www.flaticon.comShow notes- Hyderabad case: Police kill suspects in rape and murder of Indian vet - https://www.bbc.com/news/world-asia-india-50682262- Julio Ribeiro - https://en.wikipedia.org/wiki/Julio_Ribeiro_(police_officer)- Polygraph test - https://indianexpress.com/article/explained/explained-polygraph-narco-analysis-lie-detector-test-5926426/--- Send in a voice message: https://anchor.fm/aralikatte/message2021-04-1944 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp54: ಪಕ್ಷಿ ವೀಕ್ಷಕಿಯ ಕಲರವ - Musings of a birderಪಕ್ಷಿ ವೀಕ್ಷಣೆ ಅಂದರೆ ಏನು, ಪಕ್ಷಿ ಪ್ರಬೇಧಗಳು ಎಷ್ಟಿವೆ, ಪಕ್ಷಿಗಳ ವೈವಿಧ್ಯತೆಯಲ್ಲಿ ಭಾರತ ಹೇಗಿದೆ, ಪಕ್ಷಿ ವೀಕ್ಷಕರ ಸಂಖ್ಯೆ ಹೆಚ್ಚುತ್ತಿರುವ ದಿನಗಳಲ್ಲಿ ಯಾವ ಯಾವ ರೀತಿಯ ಪಕ್ಷಿ ಪ್ರೇಮಿಗಳನ್ನು ಕಾಣಬಹುದು, ಪರಿಸರದಲ್ಲಿ ಪಕ್ಷಿಗಳ ಪಾತ್ರ ಏನು, ಪಕ್ಷಿಗಳನ್ನು ಸಾಕುವುದರ ಬಗ್ಗೆ ಕಾನೂನು ಏನು ಹೇಳುತ್ತದೆ?ಪಕ್ಷಿಗಳಲ್ಲಿ ಗಂಡು ಯಾವುದು ಹೆಣ್ಣು ಯಾವುದು ಎಂದು ತಿಳಿಯುವ ಬಗೆ ಹೇಗೆ, ಪಕ್ಷಿಗಳ ಸಂರಕ್ಷಣೆಯಲ್ಲಿ ಮೂಲನಿವಾಸಿಗಳಿಂದ ಉಂಟಾಗುವ ಸಹಾಯ ಮತ್ತು ವಿಪತ್ತುಗಳು ಯಾವ ರೀತಿಯವು?ಫಿಲಂ ಫೆಸ್ಟಿವಲ್ ಅಲ್ಲಿ ಅರುಣಾಚಲ ಪ್ರದೇಶದ ಚಿತ್ರ ನೋಡಲು ಕಾತುರಳಾಗಿದ್ದಿದ್ದು ಯಾಕೆ - ಹೀಗೆ ಬಹಳಷ್ಟು ವಿಷಯಗಳ ಬಗ್ಗೆ ಒಂದು ಮುಕ್ತ ಚಿಲಿಪಿಲಿ ಮಂಜುಳಾ ದೇಸಾಯಿ ಜೊತೆ ಅರಳಿಕಟ್ಟೆಯ ಐವತ್ನಾಲ್ಕನೆಯ ಸಂಚಿಕೆಯಲ್ಲಿ...ಚರ್ಚೆಯಲ್ಲಿ ಭಾಗವಹಿಸಿದವರು ಮಂಜುಳಾ ದೇಸಾಯಿ, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್.Recording date: 14 March 2021Credits: Music: Crescents by Ketsa Licensed under creative commons. Icon made by Freepik from www.flaticon.comShow Notes- Bugun Liochicla - Photo courtesy: www.ebird.org- Kakapo - Photo courtesy: Wikipedia Commons--- Send in a voice message: https://anchor.fm/aralikatte/message2021-04-121h 10AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp53: ಐಪಾಕ ಪ್ರವೀಣೆಯ ಜೊತೆಗೊಂದು ಮಾತುಕತೆ - A conversation with food entrepreneurಕನ್ನಡಿಗರು ತಮ್ಮ ವಿಶಿಷ್ಟ ತಿನಿಸುಗಳ ಬಗ್ಗೆ ಕೊಚ್ಚಿಕೊಳ್ಳಲು ಯಾಕೆ ಹಿಂದುಮುಂದು ನೋಡುತ್ತಾರೆ? ರೆಡಿ ಟು ಈಟ್ ಮತ್ತು ರೆಡಿ ಟು ಕುಕ್ ನಡುವೆ ಇರುವ ವ್ಯತ್ಯಾಸ ಏನು? ಫುಡ್ ಸಂಬಂಧೀ ಕಂಪನಿ ಶುರು ಮಾಡುವ ವಿಧಿವಿಧಾನ ಏನು, ಅದಕ್ಕೆ ಲೈಸೆನ್ಸ್ ಪಡೆದುಕೊಳ್ಳುವ ಪ್ರಕ್ರಿಯೆ ಏನು, ಅದರಲ್ಲಿರುವ ಛಾಲೆಂಜುಗಳು ಯಾವುವು?ಕೆಲವರಿಗೆ ಖಾರ ಜಾಸ್ತಿ ಇಷ್ಟ ಕೆಲವರಿಗೆ ಎಣ್ಣೆ ಕಮ್ಮಿ ಹೀಗೆ ಒಬ್ಬೊಬ್ಬರ ರುಚಿಯೂ ಬೇರೆಯಾಗಿರುವಾಗ ಬಹುತೇಕ ಎಲ್ಲರಿಗೂ ಸರಿಹೋಗುವಂತೆ ಒಂದು ಐಟಂ ಮಾಡುವುದು ಹೇಗೆ? ರೆಡಿ ಅಡಿಗೆ ಪದಾರ್ಥದಲ್ಲಿ ಬಳಸುವ ಸಾವಿರಾರು ಪ್ರಿಸರ್ವೇಟಿವ್ಸ್ ಯಾವ್ಯಾವ ಕಾರಣಕ್ಕೆ ಹಾಕುತ್ತಾರೆ, ಪ್ಯಾಕೆಟ್ ಹಿಂದೆ ಹಾಕಿರುವ ಮಾಹಿತಿಯಿಂದ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಅಂತ ಹೇಗೆ ತಿಳಿದುಕೊಳ್ಳುವುದು? ತಮ್ಮದೇ ಒಂದು ಫುಡ್ ಸಂಬಂಧೀ ಕಂಪನಿ ಶುರುಮಾಡುವವರಿಗೆ ಕೊಡುವ ಸಲಹೆ ಸೂಚನೆಗಳು ಏನು?ಹೀಗೆ ಹತ್ತು ಹಲವಾರು ವಿಚಾರಗಳ ಬಗ್ಗೆ ಐಪಾಕ ಓನರ್ ಬಿಂದು ಸುಶೀಲ್ ಜೊತೆ ಒಂದು ವಿಶೇಷ ಮಾತುಕತೆ ಅರಳಿಕಟ್ಟೆಯ ಐವತ್ಮೂರನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ!ಚರ್ಚೆಯಲ್ಲಿ ಭಾಗವಹಿಸಿದವರು ಬಿಂದು ಸುಶೀಲ್, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್.Recording date: 27 February 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-04-051h 10AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp52: ಆರೋಗ್ಯ ಹಾಗೂ ದೈಹಿಕ ಸ್ವಾಸ್ಥ್ಯ (ಭಾಗ ೨) - Health and physical wellness (Part 2)ಐವತ್ತು ಅರವತ್ತರ ವಯಸ್ಸಿನ ಆಸುಪಾಸಿನಲ್ಲಿ ಮನುಷ್ಯರನ್ನು ಕಾಡುತ್ತಿದ್ದವು ಮಧುಮೇಹ, ರಕ್ತದೊತ್ತಡ ಮೊದಲಾದ ಜೀವನಶೈಲಿ ಸಂಬಂಧಿತ ಖಾಯಿಲೆಗಳು ಈಗೀಗ ಮುವತ್ತು ನಲವತ್ತರ ವಯಸ್ಕರನ್ನೇ ನಲುಗಿಸುತ್ತಿವೆ. ದೈಹಿಕ ಶ್ರಮದಿಂದ ದೂರದವಾದ ಆಧುನಿಕ ಜೀವನಶೈಲಿಯಿಂದಾಗಿ ಈ ರೋಗಗಳಷ್ಟೇ ಅಲ್ಲದೆ ಕೀಲು ಸವೆತ, ಬೆನ್ನು, ಭುಜ, ಮೊಣಕೈ ನೋವು ಹೀಗೆ ಹಲವು ವಿಧದ ನೋವುಗಳು ಇಪ್ಪತ್ತರ ಹರೆಯದವರಲ್ಲೂ ಸಾಮಾನ್ಯವಾಗುತ್ತಿವೆ.ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಎಲ್ಲ ವಯಸ್ಸಿನಲ್ಲೂ ಏಕೆ ಅವಶ್ಯಕ? ಇದಕ್ಕೆ ಜಿಮ್ ಸೇರುವುದೊಂದೇ ಉಪಾಯವೇ? ಕೇವಲ ವಾಕ್ ಮಾಡುವುದರಿಂದ ಏನೂ ಉಪಯೋಗವಿಲ್ಲವೇ? ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಅತಿ ಸುಲಭವಾದ ಹಾಗೂ ಆಪ್ಯಾಯಮಾನವಾದ ಪರಿಹಾರ ದೀರ್ಘವಾದ ರಾತ್ರಿಯ ಸವಿನಿದ್ದೆ ಎನ್ನುವುದು ನಿಮಗೆ ತಿಳಿದಿದೆಯೇ?ಅರಳಿಕಟ್ಟೆಯ ಐವತ್ತೆರಡನೆಯ ಸಂಚಿಕೆಯಲ್ಲಿ ನಾವು ದಿಲ್ಲಿ ಡೇರ್ ಡೆವಿಲ್ ಐಪಿಎಲ್ ತಂಡ ಸೇರಿದಂತ ಅನೇಕ ವೃತ್ತಿಪರ ಕ್ರೀಡಾಪಟುಗಳ ಫಿಟ್ ನೆಸ್ ತರಬೇತುದಾರರಾಗಿ ಕೆಲಸ ಮಾಡಿರುವ ಕನ್ನಡಿಗ ಜೀತ್ ದೇವಯ್ಯರೊಂದಿಗೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ.ಚರ್ಚೆಯಲ್ಲಿ ಭಾಗವಹಿಸಿದವರು ಜೀತ್ ದೇವಯ್ಯ, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Recording date: 7 February 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-03-3057 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp51: ಆರೋಗ್ಯ ಹಾಗೂ ದೈಹಿಕ ಸ್ವಾಸ್ಥ್ಯ - Health and physical wellnessಐವತ್ತು ಅರವತ್ತರ ವಯಸ್ಸಿನ ಆಸುಪಾಸಿನಲ್ಲಿ ಮನುಷ್ಯರನ್ನು ಕಾಡುತ್ತಿದ್ದವು ಮಧುಮೇಹ, ರಕ್ತದೊತ್ತಡ ಮೊದಲಾದ ಜೀವನಶೈಲಿ ಸಂಬಂಧಿತ ಖಾಯಿಲೆಗಳು ಈಗೀಗ ಮುವತ್ತು ನಲವತ್ತರ ವಯಸ್ಕರನ್ನೇ ನಲುಗಿಸುತ್ತಿವೆ. ದೈಹಿಕ ಶ್ರಮದಿಂದ ದೂರದವಾದ ಆಧುನಿಕ ಜೀವನಶೈಲಿಯಿಂದಾಗಿ ಈ ರೋಗಗಳಷ್ಟೇ ಅಲ್ಲದೆ ಕೀಲು ಸವೆತ, ಬೆನ್ನು, ಭುಜ, ಮೊಣಕೈ ನೋವು ಹೀಗೆ ಹಲವು ವಿಧದ ನೋವುಗಳು ಇಪ್ಪತ್ತರ ಹರೆಯದವರಲ್ಲೂ ಸಾಮಾನ್ಯವಾಗುತ್ತಿವೆ.ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಎಲ್ಲ ವಯಸ್ಸಿನಲ್ಲೂ ಏಕೆ ಅವಶ್ಯಕ? ಇದಕ್ಕೆ ಜಿಮ್ ಸೇರುವುದೊಂದೇ ಉಪಾಯವೇ? ಕೇವಲ ವಾಕ್ ಮಾಡುವುದರಿಂದ ಏನೂ ಉಪಯೋಗವಿಲ್ಲವೇ? ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಅತಿ ಸುಲಭವಾದ ಹಾಗೂ ಆಪ್ಯಾಯಮಾನವಾದ ಪರಿಹಾರ ದೀರ್ಘವಾದ ರಾತ್ರಿಯ ಸವಿನಿದ್ದೆ ಎನ್ನುವುದು ನಿಮಗೆ ತಿಳಿದಿದೆಯೇ?ಅರಳಿಕಟ್ಟೆಯ ಐವತ್ತೊಂದನೆಯ ಸಂಚಿಕೆಯಲ್ಲಿ ನಾವು ದಿಲ್ಲಿ ಡೇರ್ ಡೆವಿಲ್ ಐಪಿಎಲ್ ತಂಡ ಸೇರಿದಂತ ಅನೇಕ ವೃತ್ತಿಪರ ಕ್ರೀಡಾಪಟುಗಳ ಫಿಟ್ ನೆಸ್ ತರಬೇತುದಾರರಾಗಿ ಕೆಲಸ ಮಾಡಿರುವ ಕನ್ನಡಿಗ ಜೀತ್ ದೇವಯ್ಯರೊಂದಿಗೆ ನಡೆಸಿದ ಚರ್ಚೆಯ ಮೊದಲ ಭಾಗ ನಿಮ್ಮ ಮುಂದಿದೆ.ಚರ್ಚೆಯಲ್ಲಿ ಭಾಗವಹಿಸಿದವರು ಜೀತ್ ದೇವಯ್ಯ, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Recording date: 7 February 2021Credits: Music: Crescents by Ketsa Licensed under creative commons. Icon made by Freepik from www.flaticon.comShow Notes- Coorg hockey Kuttappa - https://www.deccanchronicle.com/sports/in-other-news/080520/this-kuttappa-was-the-baahubali-of-coorg-hockey.html- Kodava Hockey Festival - https://en.wikipedia.org/wiki/Kodava_Hockey_Festival- Aralikatte Episode on Sleep: https://www.youtube.com/watch?v=HHP1kkUBBTY--- Send in a voice message: https://anchor.fm/aralikatte/message2021-03-2258 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp50: ಐವತ್ತು ಸಂಚಿಕೆಗಳ ಸಂಭ್ರಮ! - Celebrating 50 episodes!ಎಂ.ಜಿ ರೋಡಿನ ಹೊಟೇಲೊಂದರಲ್ಲಿನ ಹರಟೆಯಲ್ಲಿ ಹೀಗೆ ಬಂದು ಹಾಗೆ ಮಾಯವಾಗಿದ್ದ ಐಡಿಯಾವೊಂದು ಕಾರ್ಯರೂಪಕ್ಕೆ ಬಂದು ಇವತ್ತಿಗೆ ಐವತ್ತು ವಾರಗಳು ಸಂದಿವೆ. ಏಪ್ರಿಲ್ ೫, ೨೦೨೦ರಂದು ಅರಳಿಕಟ್ಟೆಯ ಪಾಡ್ಕಾಸ್ಟಿನ ಮೊದಲ ಸಂಚಿಕೆ ಪ್ರಕಟವಾಯಿತು. ಈ ಪ್ರಯತ್ನ ಎಷ್ಟು ದಿನ ನಡೆಯಬಹುದು ಎನ್ನುವ ಸಂಶಯ ನಮಗೂ ಇತ್ತು.ವಾರಕ್ಕೊಂದು ಸಂಚಿಕೆಯಂತೆ ಕಳೆದ ನಲತ್ತೊಂಭತ್ತು ವಾರಗಳಲ್ಲಿ ಸಂಚಿಕೆಗಳನ್ನು ಪ್ರಕಟಿಸಿ ಈ ವಾರ ನಾವು ಐವತ್ತನೆಯ ಸಂಚಿಕೆಗೆ ಕಾಲಿರಿಸಿದ್ದೇವೆ. ಈ ವಿಶೇಷ ಸಂಚಿಕೆಯನ್ನು ನಾವು ಅರಳಿಕಟ್ಟೆ ಪಾಡ್ ಕಾಸ್ಟ್ ಯೋಜನೆ ಶುರುವಾದ ಬಗೆ, ಈ ಸಣ್ಣ ಪ್ರಯತ್ನಕ್ಕೆ ನಮಗೆ ಸಿಕ್ಕ ಅರ್ಥಪೂರ್ಣವಾದ ಬೆಂಬಲ ಹಾಗೂ ವಿಚಾರಪೂರ್ಣವಾದ ಪ್ರತಿಕ್ರಿಯೆ, ಪಾಡ್ ಕಾಸ್ಟ್ ಎಂಬ ಮಾಧ್ಯಮದ ಗುಣಲಕ್ಷಣಗಳು ಹೀಗೆ ಅನೇಕ ವಿಚಾರಗಳನ್ನು ಅವಲೋಕಿಸುವಕ್ಕೆ ಮೀಸಲಿಟ್ಟಿದ್ದೇವೆ.ಅರಳಿಕಟ್ಟೆಯ ಚರ್ಚೆಗಳನ್ನು ಮಾಹಿತಿಪೂರ್ಣವೂ, ಕುತೂಹಲಕಾರಿಯೂ ಆಗುವಂತೆ ಮಾಡಿದ ನಮ್ಮೆಲ್ಲ ಅತಿಥಿಗಳಿಗೆ ಈ ಸಂಚಿಕೆಯನ್ನು ಸಮರ್ಪಿಸುತ್ತಿದ್ದೇವೆ. ನಿಮ್ಮೆಲ್ಲರ ಬೆಂಬಲ ಹೀಗೇ ಮುಂದುವರೆಯಲಿ ಕನ್ನಡದಲ್ಲಿ ಇನ್ನಷ್ಟು ಇಂತಹ ಪ್ರಯತ್ನಗಳಿಗೆ ಅದು ಸ್ಪೂರ್ತಿಯಾಗಲಿ ಎಂದು ಆಶಿಸುತ್ತೇವೆ.ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Recording date: 17 January 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-03-151h 11AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp49: ಬೆಂಗಳೂರಿನ ಪರಂಪರೆ ಹಾಗೂ ಶಾಸನಗಳು (ಭಾಗ ೨) - Heritage and inscriptions of Bengaluru (Part 2)ಬೆಂಗಳೂರು ಶುರುವಾಗಿದ್ದು ಯಾವಾಗ? ತಾವು ಐಟಿ ಬಿಟಿ ನೌಕರಿಗಾಗಿ ಪರರಾಜ್ಯದಿಂದ ವಲಸೆ ಬಂದು ನೆಲೆಸಿದಾಗ ಎಂದು ಕೆಲವರು ಉತ್ತರಿಸಬಹುದು. ಇನ್ನು ಸ್ವಲ್ಪ ಹಿಂದಕ್ಕೆ ಹೋದರೆ, ಎಚ್ ಎ ಎಲ್ ನಂತಹ ಉದ್ದಿಮೆಗಳನ್ನು ಭಾರತ ಸರಕಾರ ಪ್ರಾರಂಭಿಸಿದಾಗ ಎಂದು ಉತ್ತರಿಸಬಹುದು. ಹಿಂದೆ ಇನ್ನಷ್ಟು ಹೋದರೆ ಬ್ರಿಟೀಷರು ಕಂಟೋನ್ ಮೆಂಟ್ ಕಟ್ಟಿದಾಗ ಎಂದು ಹೇಳಬಹುದು. ಅಲ್ಲಿಗೆ ನಿಲ್ಲದೆ ಹಿಂದಕ್ಕೆ ಹೋದರೆ ಕೆಂಪೇಗೌಡರು ಕೋಟೆ ಕಟ್ಟಿ ಸಂಸ್ಥಾನ ಸ್ಥಾಪಿಸಿದಾಗ ಎಂಬ ಉತ್ತರ ಕೊಡಬಹುದು. ಜೊತೆಗೆ ವೃದ್ಧೆಯೊಬ್ಬಳ ಕೈಯಿಂದ ಬೆಂದ ಕಾಳನ್ನು ತಿಂದು ಈ ನೆಲವನ್ನು ಬೆಂಗಳೂರು ಎಂದು ಕೆಂಪೇಗೌಡರು ಕರೆದರು ಎಂಬ ದಂತಕತೆಯನ್ನೂ ನೆನಪಿಸಬಹುದು.ಆದರೆ ಬೆಂಗಳೂರಿನ ಇತಿಹಾಸ ಹಾಗೂ ಪರಂಪರೆ ಅದಕ್ಕಿಂತ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ನಿಮಗೆ ತಿಳಿದಿದೆಯೇ? ಜಾಲಹಳ್ಳಿಯಲ್ಲಿ ದೊರಕಿದ ಮೈಕ್ರೊಲಿಥ್ ಕಲ್ಲಿನ ಸಲಕರಣೆಗಳು, ಚಿಕ್ಕಜಾಲದಲ್ಲಿ ದೊರಕಿದ ರೋಮನ್ ನಾಣ್ಯಗಳು ಬೆಂಗಳೂರಿನ ಅಸ್ಪಷ್ಟ ಆದರೆ ಪುರಾತನವಾದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ.ಅಮೇರಿಕಾದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಏರೋ ಸ್ಪೇಸ್ ಇಂಜಿನಿಯರಿಂಗ್ ಓದುತ್ತ, ಆಸಕ್ತಿಯಿಂದ ಇತಿಹಾಸದ ಓದನ್ನೂ ಕೈಗೆತ್ತಿಕೊಂಡು ಬೆಂಗಳೂರಿನ ಇತಿಹಾಸಕ್ಕೆ ದರ್ಪಣಹಿಡಿಯುವ ಶಾಸನಗಳ ಹುಡುಕಾಟ, ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವಿನಯ್ ಕುಮಾರ್ ರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಲವತ್ತೊಂಭತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ!ಚರ್ಚೆಯಲ್ಲಿ ಭಾಗವಹಿಸಿದವರು ವಿನಯ್ ಕುಮಾರ್, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Recording date: 24 January 2021Credits: Music: Crescents by Ketsa Licensed under creative commons. Icon made by Freepik from www.flaticon.comShow Notes- Great Trigonometrical Survey of India: https://issuu.com/udayakumarp.l/docs/the_story_of_the_bangalore_baseline- Inscription stones of Bengaluru: https://www.facebook.com/groups/inscriptionstones/   https://scroll.in/magazine/874966/a-hunt-for-bengalurus-forgotten-inscription-stones-is-tracing-the-history-of-kannada-and-the-city   https://twitter.com/inscriptionblr/status/1111103216723202048/photo/1- Beguru inscription implies that Bengaluru is atleast 1,129 years old : https://www.deccanherald.com/state/top-karnataka-stories/what-s-in-a-stone-a-city-s-age-780799.html- Hebbal Kittayya inscription: https://en.wikipedia.org/wiki/Hebbal-Kittayya_inscription- Pattandur lake inscription: https://timesofindia.indiatimes.com/city/bengaluru/11th-century-stone-inscription-found-in-graveyard/articleshow/63790576.cms- Abraham flexner essay Usefulness of useless knowledge: https://press.princeton.edu/books/hardcover/9780691174761/the-usefulness-of-useless-knowledgeEpisode sponsored by MyLang Books : https://mylang.in/Use exclusive promo code AK20 to get flat 20% off on your first purchase.Use exclusive promo code AK10 to get flat 10% off on every purchase.--- Send in a voice message: https://anchor.fm/aralikatte/message2021-03-081h 01AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp48: ಬೆಂಗಳೂರಿನ ಪರಂಪರೆ ಹಾಗೂ ಶಾಸನಗಳು - Heritage and inscriptions of Bengaluruಬೆಂಗಳೂರು ಶುರುವಾಗಿದ್ದು ಯಾವಾಗ? ತಾವು ಐಟಿ ಬಿಟಿ ನೌಕರಿಗಾಗಿ ಪರರಾಜ್ಯದಿಂದ ವಲಸೆ ಬಂದು ನೆಲೆಸಿದಾಗ ಎಂದು ಕೆಲವರು ಉತ್ತರಿಸಬಹುದು. ಇನ್ನು ಸ್ವಲ್ಪ ಹಿಂದಕ್ಕೆ ಹೋದರೆ, ಎಚ್ ಎ ಎಲ್ ನಂತಹ ಉದ್ದಿಮೆಗಳನ್ನು ಭಾರತ ಸರಕಾರ ಪ್ರಾರಂಭಿಸಿದಾಗ ಎಂದು ಉತ್ತರಿಸಬಹುದು. ಹಿಂದೆ ಇನ್ನಷ್ಟು ಹೋದರೆ ಬ್ರಿಟೀಷರು ಕಂಟೋನ್ ಮೆಂಟ್ ಕಟ್ಟಿದಾಗ ಎಂದು ಹೇಳಬಹುದು. ಅಲ್ಲಿಗೆ ನಿಲ್ಲದೆ ಹಿಂದಕ್ಕೆ ಹೋದರೆ ಕೆಂಪೇಗೌಡರು ಕೋಟೆ ಕಟ್ಟಿ ಸಂಸ್ಥಾನ ಸ್ಥಾಪಿಸಿದಾಗ ಎಂಬ ಉತ್ತರ ಕೊಡಬಹುದು. ಜೊತೆಗೆ ವೃದ್ಧೆಯೊಬ್ಬಳ ಕೈಯಿಂದ ಬೆಂದ ಕಾಳನ್ನು ತಿಂದು ಈ ನೆಲವನ್ನು ಬೆಂಗಳೂರು ಎಂದು ಕೆಂಪೇಗೌಡರು ಕರೆದರು ಎಂಬ ದಂತಕತೆಯನ್ನೂ ನೆನಪಿಸಬಹುದು.ಆದರೆ ಬೆಂಗಳೂರಿನ ಇತಿಹಾಸ ಹಾಗೂ ಪರಂಪರೆ ಅದಕ್ಕಿಂತ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ನಿಮಗೆ ತಿಳಿದಿದೆಯೇ? ಜಾಲಹಳ್ಳಿಯಲ್ಲಿ ದೊರಕಿದ ಮೈಕ್ರೊಲಿಥ್ ಕಲ್ಲಿನ ಸಲಕರಣೆಗಳು, ಚಿಕ್ಕಜಾಲದಲ್ಲಿ ದೊರಕಿದ ರೋಮನ್ ನಾಣ್ಯಗಳು ಬೆಂಗಳೂರಿನ ಅಸ್ಪಷ್ಟ ಆದರೆ ಪುರಾತನವಾದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ.ಅಮೇರಿಕಾದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಏರೋ ಸ್ಪೇಸ್ ಇಂಜಿನಿಯರಿಂಗ್ ಓದುತ್ತ, ಆಸಕ್ತಿಯಿಂದ ಇತಿಹಾಸದ ಓದನ್ನೂ ಕೈಗೆತ್ತಿಕೊಂಡು ಬೆಂಗಳೂರಿನ ಇತಿಹಾಸಕ್ಕೆ ದರ್ಪಣಹಿಡಿಯುವ ಶಾಸನಗಳ ಹುಡುಕಾಟ, ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವಿನಯ್ ಕುಮಾರ್ ರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಮೊದಲ ಭಾಗ ನಲವತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ!ಚರ್ಚೆಯಲ್ಲಿ ಭಾಗವಹಿಸಿದವರು ವಿನಯ್ ಕುಮಾರ್, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Recording date: 24 January 2021Credits: Music: Crescents by Ketsa Licensed under creative commons. Icon made by Freepik from www.flaticon.comShow Notes- Lal bagh Peninsular Gneiss: https://en.wikipedia.org/wiki/Peninsular_Gneiss- Commander KRU Todd : http://journal.antiquity.ac.uk/projgall/ruikar340- A Microlithic Industry in Eastern Mysore - https://www.jstor.org/stable/2792452?seq=1- Bangalore Science Forum started by H Narasimhaiah - https://www.facebook.com/BangaloreScienceForum/- B L Rice - https://en.wikipedia.org/wiki/B._Lewis_Rice- ಬೆಂಗಳೂರು ಪರಂಪರೆ : https://mylang.in/products/bengaluru-parampare-inr- ಪುರಾತತ್ವ ಪಿತಾಮಹ ಬಿ ಎಲ್ ರೈಸ್ : https://munnota.com/product/puratatva-pitamaha-b-l-rice/Episode sponsored by MyLang Books : https://mylang.in/Use exclusive promo code AK20 to get flat 20% off on your first purchase.Use exclusive promo code AK10 to get flat 10% off on every purchase.--- Send in a voice message: https://anchor.fm/aralikatte/message2021-03-011h 05AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp47: ಡೆಕ್ಕನ್ ಸುಲ್ತಾನರ ಇತಿಹಾಸ ಹಾಗೂ ಭಾಷಾಂತರದ ಸವಾಲುಗಳು - History of the Deccan sultanate and challenges of translationಇಷ್ಟವಾದ ಪುಸ್ತಕ ಹೆಚ್ಚು ಜನರಿಗೆ ತಲುಪಿಸ ಬೇಕೆಂಬ  ಹುಮ್ಮಸಿನಿಂದ ತರ್ಜುಮೆ ಕೆಲಸ ಪ್ರಾರಂಭಿಸಿದ ಸಂಯುಕ್ತ ಪುಲಿಗಲ್ ಇದೀಗ ಎರಡು ಪುಸ್ತಕಗಳ ಮುಗಿಸಿದ್ದಾರೆ! ಪರ್ವತದಲ್ಲಿ ಪವಾಡ ಹಾಗು ತುಂಬಾ ಮೆಚ್ಚಿಗೆ ಪಡೆದ  ಮನು ಪಿಳ್ಳೈ ಅವರ  "ರೆಬೆಲ್ ಸುಲ್ತಾನ್ಸ್" ಪುಸ್ತಕವನ್ನು ಅನುವಾದಿಸಿದ್ದಾರೆ. ಈ ಪುಸ್ತಕದ ಬಗ್ಗೆ ,ತರ್ಜುಮೆ ಮಾಡುವಾಗ ಬರುವ ಸವಾಲುಗಳ ಹಾಗು  ಇತಿಹಾಸ ಅಧ್ಯನ ಯಾಕೆ ಮಾಡ ಬೇಕು ಅನ್ನುವುದರ ಕುರಿತ ಮಾತುಕತೆ ಅರಳಿಕಟ್ಟೆಯ ನಲವತ್ತೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸಂಯುಕ್ತ ಪುಲಿಗಲ್.Recording date: 10 January 2021Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-02-221h 02AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp46: ಈಲಾನ್ ಮಸ್ಕ್ ಎಂಬ ದಾರ್ಶನಿಕ (ಭಾಗ ೨) - Elon Musk : A Visionary (Part 2)ಈ ವರ್ಷ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಮಸ್ಕ್ ತನ್ನ ದಣಿವರಿಯದ ಪರಿಶ್ರಮದಿಂದ ಹೆಸರುವಾಸಿ. ಆದರೆ ಆತನ ವ್ಯಕ್ತಿತ್ವಕ್ಕೆ ಕರಾಳ ಮುಖವೂ ಇದೆ. ವರ್ಷಗಟ್ಟಲೆ ತನ್ನ ಕಂಪೆನಿಯಲ್ಲಿ ನಿಯತ್ತಿನಿಂದ ಕೆಲಸ ಮಾಡಿದವರನ್ನು ಆತ ಚೂರೂ ಅನುಕಂಪವಿಲ್ಲದೆ ಮನೆಗೆ ಕಳುಹಿಸಿದ ಉದಾಹರಣೆಗಳಿವೆ. ತನ್ನ ಕಂಪೆನಿಗಳಲ್ಲಿ ನೌಕರಿಗೆ ಆಯ್ಕೆಯಾಗುವವರಿಗೆ ಗೆಳೆಯ/ಗೆಳತಿಯರು ಇರಬಾರದು ಹಾಗೂ ಅವರು ತಮ್ಮ ಸಂಪೂರ್ಣ ಸಮಯವನ್ನು ಕೆಲಸಕ್ಕೆ ಮೀಸಲಿಡಬೇಕು ಎಂದು ಅಪೇಕ್ಷಿಸುತ್ತಾನೆ. ತನ್ನ ಮಗುವಿನ ಜನನಕ್ಕೆ ಸಾಕ್ಷಿಯಾಗಲು ಕೆಲಸ ತಪ್ಪಿಸಿಕೊಂಡ ನೌಕರನಿಗೆ ಮಸ್ಕ್ ಕಟ್ಟುನಿಟ್ಟಾದ ಟಿಪ್ಪಣಿ ಬರೆಯುತ್ತಾನೆ: "ನಮ್ಮ ಸಂಸ್ಥೆಯಲ್ಲಿ ನಾವು ಜಗತ್ತನ್ನೇ ಬದಲಿಸುವ ಮಹತ್ಕಾರ್ಯದಲ್ಲಿ ತೊಡಗಿದ್ದೇವೆ. ನಿನಗೆ ಕೆಲಸ ಮುಖ್ಯವೋ ಅಥವಾ ಕುಟುಂಬ ಮುಖ್ಯವೋ ಎಂದು ನಿರ್ಧರಿಸು."!ಆದಾಗ್ಯೂ ಅಮೇರಿಕಾದ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿ, ವಿದ್ಯಾಥಿನಿಯರು ಈಲಾನ್ ನ ಕಂಪೆನಿಗಳಲ್ಲಿ ಕೆಲಸ ಮಾಡಲು ಹಾತೊರೆಯುತ್ತಾರೆ. ಪ್ರತಿಷ್ಠಿತ ಕಂಪೆನಿಗಳಲ್ಲಿ ಉನ್ನತ ಹುದ್ದೆಯಲ್ಲಿರುವವರು ಅಲ್ಲಿನ ಬ್ಯೂರಕ್ರಸಿಯಿಂದ ಬೇಸತ್ತು ಈಲಾನ್ ನ ಕಂಪೆನಿಗಳಲ್ಲಿ ತಮ್ಮ ಸೃಜನಶೀಲತೆಗೆ ದೊರೆಯುವ ಸ್ವಾತಂತ್ರ್ಯಕ್ಕಾಗಿ ಕೆಲಸಕ್ಕೆ ಸೇರುತ್ತಾರೆ.ಹೀಗೆ ಅನೇಕ ದ್ವಂದ್ವಗಳ ಪ್ರತಿರೂಪವಾದ ಈಲಾನ್ ಮಸ್ಕ್ ಕುರಿತು ಅಮೇರಿಕಾದ ಪತ್ರಕರ್ತ ಆಶ್ಲೀ ವ್ಯಾನ್ಸ್ ಬರೆದಿರುವ ಅಧಿಕೃತ ಜೀವನ ಚರಿತ್ರೆ ಕುರಿತ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ನಲವತ್ತಾರನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್, ಸುಪ್ರೀತ್ ಹಾಗೂ ವಾಸುಕಿ.Recording date: 26 December 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-02-1457 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp45: ಈಲಾನ್ ಮಸ್ಕ್ ಎಂಬ ದಾರ್ಶನಿಕ - Elon Musk : A Visionaryಈಲಾನ್ ಮಸ್ಕ್ ಹೆಸರು ಈಗ ಜನಜನಿತವಾಗಿದೆ. ಇದಕ್ಕೆ ಕಾರಣ ಆತ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಎಂಬ ಮನ್ನಣೆಗೆ ಪಾತ್ರನಾಗಿದ್ದು. ಕೆಲವರಿಗೆ ಆತನ ಟೆಸ್ಲಾ ಕಾರ್ ಕಂಪೆನಿಯ ಪರಿಚಯವಿರಬಹುದು. ಹಲವರಿಗೆ ಆತನ ಸ್ಪೇಸ್ ಎಕ್ಸ್ ಎಂಬ ರಾಕೆಟ್ ಕಂಪೆನಿಯ ಪರಿಚಯವಿರಬಹುದು.ಆದರೆ ಆಧುನಿಕ ಎಡಿಸನ್ ಎಂದೇ ಕರೆಯಲ್ಪಡುವ ಈಲಾನ್ ಮಸ್ಕ್ ಒಬ್ಬ ವ್ಯಕ್ತಿಯಾಗಿ ಎಷ್ಟು ಜನರಿಗೆ ತಿಳಿದಿದ್ದಾನೆ? ವೈಯಕ್ತಿಕ ಜೀವನದಲ್ಲಿ ತನ್ನ ಕಾಲದ ಸರಕಾರದ ಮೂಗುತೂರಿಸುವಿಕೆಯಿಂದ ಕಿರಿಕಿರಿಗೊಳಗಾಗಿ ಕೆನಡಾದಿಂದ ದಕ್ಷಿಣ ಆಫ್ರಿಕಾಗೆ ವಲಸೆಹೋದ ಈಲಾನ್ ಮಸ್ಕ್ ತಾತನ ವ್ಯಕ್ತಿತ್ವ ಎಂಥದ್ದು? ಚಿಕ್ಕಂದಿನಲ್ಲೇ ಅಪ್ರತಿಮ ಬುದ್ದಿಮತ್ತೆಯ ಕಿಡಿ ಬೆಳಗಿದ ಆದರೆ ಕ್ರೂರ ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಒಳಗಾದ ಈಲಾನ್ ಬಾಲ್ಯ ಹೇಗಿತ್ತು?ಮೊದಲ ಎರಡು ಸಾಫ್ಟ್ ವೇರ್ ಕಂಪೆನಿಗಳನ್ನು ಮಾರಿ ಕೋಟ್ಯಾಧಿಪತಿಯಾದ ಈಲಾನ್ ಆ ಎಲ್ಲ ಸಂಪತ್ತನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದು ಆಕಾಶದೆಡೆಗೆ ದೃಷ್ಟಿ ನೆಟ್ಟು ರಾಕೆಟ್ ನಿರ್ಮಿಸುವ ಕಂಪೆನಿ ಪ್ರಾರಂಭಿಸಿದಾಗ, ಸತ್ತು ಸತ್ತು ಬದುಕುಳಿದ ಟೆಸ್ಲಾ ಕಾರು ಕಂಪೆನಿಯ ನಿರ್ವಹಣೆ ಹೊತ್ತಾಗ.ಸಣ್ಣ ಸೂಜಿಯಿಂದ ಹಿಡಿದು ಅತ್ಯಾಧುನಿಕ ಕಂಪ್ಯೂಟರ್ ಚಿಪ್ ವರೆಗೆ ಕೈಗಾರಿಕೆಗಳು ಅಮೇರಿಕಾದಿಂದ ಕಾಲ್ಕಿತ್ತ ಸಂದರ್ಭದಲ್ಲಿ ಈಲಾನ್ ಸ್ಪೇಸ್ ಎಕ್ಸ್ ಹಾಗೂ ಟೆಸ್ಲಾ ಎರಡೂ ಕಂಪೆನಿಗಳ ಸಮಸ್ತ ಉತ್ಪಾದನೆಯನ್ನು ಅಮೇರಿಕಾದಲ್ಲಿಯೇ ಸ್ಥಾಪಿಸಿದ. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಹಾಗೂ ಮಧ್ಯ ಪ್ರಾಚ್ಯದಲ್ಲಿ ಕೊನೆಯಿಲ್ಲದ ಯುದ್ಧಗಳಿಗೆ ದಾರಿ ಮಾಡಿಕೊಡುವ ತೈಲದ ಅವಲಂಬನೆಯಿಂದ ಮನುಕುಲವನ್ನು ಮುಕ್ತಗೊಳಿಸುವ ಕನಸನ್ನು ಟೆಸ್ಲಾ ಮೂಲಕ ಸಾಕಾರ ಮಾಡಹೊರಟ. ಒಮ್ಮೆ ಬಳಸಿ ಬಿಸಾಡುವ ದುಬಾರಿ ರಾಕೆಟ್ ಗಳ ಬದಲಿಗೆ ಮರುಬಳಕೆಗೆ ಸಿದ್ಧವಾದ ರಾಕೆಟ್ ಗಳಿಂದ ಬಾಹ್ಯಾಂತರಿಕ್ಷವನ್ನು ಅನ್ವೇಷಿಸುವ ಮನುಕುಲದ ಆಕಾಂಕ್ಷೆಗೆ ಕುಮ್ಮಕ್ಕು ನೀಡಹೊರಟ. ಆಧುನಿಕ ಅನ್ವೇಷಣೆಗಳೆಲ್ಲ ಮುಗಿದು ಹೋದವು ಎನ್ನುವ ಮನಸ್ಥಿತಿಯ ಸಮಾಜದ ನಡುವೆ ಹೊಸತನ್ನು ಅರಸಿ ಹೊರಡುವುದು ಈಲಾನ್ ನ ಹಿರಿಮೆ. ಈಲಾನ್ ಮಸ್ಕ್ ಮುಖ್ಯವಾಗುವುದು ಈ ಕಾರಣಗಳಿಗಾಗಿ.ಅಮೇರಿಕಾದ ಪತ್ರಕರ್ತ ಆಶ್ಲೀ ವ್ಯಾನ್ಸ್ ಬರೆದಿರುವ ಈಲಾನ್ ಮಸ್ಕ್ ಕುರಿತ ಅಧಿಕೃತ ಜೀವನ ಚರಿತ್ರೆ ಅರಳಿಕಟ್ಟೆಯ ನಲವತ್ತೈದನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. ಚರ್ಚೆಯಲ್ಲಿ ಭಾಗಬಹಿಸಿದವರು ಮುಕುಂದ್, ಸುಪ್ರೀತ್ ಹಾಗೂ ವಾಸುಕಿ.Recording date: 26 December 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-02-0959 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp44: ವಿನ್ಯಾಸ ಚಿಂತನೆ - Design thinkingದಿನನಿತ್ಯದ ಬಳಕೆಯ ವಸ್ತುಗಳಿಂದ ಹಿಡಿದು ಐಫೋನ್ ವರೆಗೆ ವಿನ್ಯಾಸ ಅಡಕಗೊಂಡಿರುತ್ತದೆ. ತಾಂತ್ರಿಕವಾಗಿ ಒಂದೇ ಗುಣಮಟ್ಟವಿದ್ದರೂ ಕೆಲವು ಉಪಕರಣಗಳು ತಮ್ಮ ಅತ್ಯುತ್ತಮವಾದ ವಿನ್ಯಾಸದಿಂದ ಬಳಸುವವರ ಜೀವನವನ್ನು ಉತ್ತಮಗೊಳಿಸಿದರೆ ಮತ್ತೆ ಕೆಲವು ಕಳಪೆ ವಿನ್ಯಾಸದಿಂದಾಗಿ ಕಿರಿಕಿರಿಯುಂಟು ಮಾಡುತ್ತವೆ.ಬಳಕೆದಾರರ ಅನುಭವವನ್ನು ಉತ್ತಮಗೊಳಿಸುವ ಉದ್ದೇಶದಿಂದ ಉಪಕರಣಗಳನ್ನು, ಸೇವೆಗಳನ್ನು ವಿನ್ಯಾಸಗೊಳಿಸುವ ಶಿಸ್ತಿಗೆ ವಿನ್ಯಾಸ ಚಿಂತನೆ ಅಥವಾ ಡಿಸೈನ್ ಥಿಂಕಿಂಗ್ ಎಂದು ಕರೆಯುತ್ತಾರೆ. ಈ ವಾರದ ಸಂಚಿಕೆಯಲ್ಲಿ ನಾವು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ನಲ್ಲಿ ಪದವಿ ಪಡೆದ ಅರವಿಂದ ದೇವರಮನೆಯವರೊಂದಿಗೆ ಡಿಸೈನ್ ಥಿಂಕಿಂಗಿನ ಹಲವು ಆಯಾಮಗಳನ್ನು ಚೇತೋಹಾರಿಯಾದ ಉದಾಹರಣೆಗಳೊಂದಿಗೆ ಚರ್ಚಿಸಿದ್ದೇವೆ.ಜರ್ಮನಿಯಲ್ಲಿ ನಿರ್ಮಾಣವಾಗುವ ಉಪಕರಣಗಳು, ಜಪಾನ್, ಸ್ಕಾಂಡಿನೇವಿಯಾದಲ್ಲಿ ನಿರ್ಮಾಣವಾಗುವ ಉಪಕರಣಗಳ ವಿನ್ಯಾಸದಲ್ಲಿರುವ ಲಕ್ಷಣಗಳೇನು? ನಮ್ಮ ದೇಶದ ಚೊಂಬಿನ ವಿನ್ಯಾಸ ವಿಶ್ವದಲ್ಲೇ ವಿಶಿಷ್ಟವಾದದ್ದು ಏಕೆ? ದೇವರಮನೆಯ ಇರುವೆ ಚಟ್ನಿ ಕುರಿತು ಕೇಳಿದ್ದೀರಾ? ಬೆಂಗಳೂರಿನಲ್ಲಿ ದರ್ಶಿನಿ ಹೋಟೆಲ್ ಪ್ರಾರಂಭಿಸಿದವರು ಯಾರು ಗೊತ್ತೆ? ಪಾರಂಪರಿಕ ಭಾರತೀಯ ಶೌಚಾಲಯ ಹಾಗೂ ಅಡುಗೆ ಮನೆಗಳಲ್ಲಿ ಅಡಗಿರುವ ವಿನ್ಯಾಸದ ತತ್ವಗಳೇನು? ಹೀಗೆ ಹಲವು ಒಳಸುಳಿಗಳುಳ್ಳ ಆಸಕ್ತಿಕರ ಚರ್ಚೆ ಅರಳಿಕಟ್ಟೆಯ ನಲವತ್ನಾಲ್ಕನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.Recording date: 23 November 2020Credits: Music: Crescents by Ketsa Licensed under creative commons. Icon made by Freepik from www.flaticon.comShow Notes:- volkswagen designer giorgetto jujiro- Dieter Rams: 10 Timeless Commandments for Good Design: https://www.interaction-design.org/literature/article/dieter-rams-10-timeless-commandments-for-good-design- R Prabhakar founder of Darshini hotels - https://economictimes.indiatimes.com/small-biz/startups/r-prabhakar-the-man-behind-bengalurus-darshinis/articleshow/45224627.cms- ChewDa.com is a platform to bring together amazing ladies who can prepare yummy snacks, pickles, instant food mixes, masalas and much more.. https://www.chewda.com--- Send in a voice message: https://anchor.fm/aralikatte/message2021-01-311h 29AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp43: ಹೊಸ ಜಾಗತಿಕ ವ್ಯವಸ್ಥೆಯಲ್ಲಿ ಚೀನಾದ ಪಾತ್ರ - China’s role in the new world orderಒಂದು ಬೆಲ್ಟ್ ಒಂದು ರೋಡ್ ಚೀನಾದ ಕಮ್ಯುನಿಸ್ಟ್ ಪಕ್ಷದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ. ೨೦೧೩ರಲ್ಲಿ ಚಾಲನೆಗೊಂಡಿತು. ೭೦ಕ್ಕಿಂತ ಹೆಚ್ಚು ರಾಷ್ಟ್ರಗಳ ನಡುವೆ ನಿಕಟವಾದ ವ್ಯಾಪಾರದ ನಂಟು ಬೆಸೆಯುವ ದೊಡ್ಡ ಕನಸನ್ನು ಚೀನಾ ಹೊಂದಿದೆ. ಇದರ ಭೌಗೋಳಿಕ ವ್ಯಾಪ್ತಿಯಷ್ಟೇ ದೊಡ್ಡದು ಇದರ ಕಾಲಾವಧಿ. ೨೦೪೯ರಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಚೀನಾದ್ದು.ಈ ಯೋಜನೆ ಚೀನಾದ ವಿದೇಶಾಂಗ ನೀತಿಗೆ ಎಷ್ಟು ಮುಖ್ಯವೆಂದರೆ, ೨೦೧೭ರಲ್ಲಿ ಯೋಜನೆಯ ಅನುಷ್ಠಾನದ ಗುರಿಯನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು. ೨೦೪೯ರೊಳಗೆ ಸರಕಾರದಲ್ಲಿ ಏನೇ ಬದಲಾವಣೆಗಳಾದರೂ ಯೋಜನೆಯ ಅನುಷ್ಠಾನದಲ್ಲಿ ವ್ಯತ್ಯಯ ಉಂಟಾಗದು.ಈ ಯೋಜನೆಯ ಹಿಂದಿರುವ ಚೀನಾದ ಮಹತ್ವಾಕಾಂಕ್ಷೆ ಏನು? ನಮ್ಮ ನೆರೆಯ ಪಾಕಿಸ್ತಾನ, ಶ್ರೀಲಂಕದಿಂದ ಮೊದಲುಗೊಂಡು ದೂರದ ಆಫ್ರಿಕಾ ಖಂಡದ ದೇಶಗಳು ಸೇರಿದಂತೆ ಇದರಲ್ಲಿ ಪಾಲುಗೊಂಡಿರುವ ರಾಷ್ಟ್ರಗಳ ಭವಿಷ್ಯವೇನು? ಭಾರತ, ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳು ಈ ಯೋಜನೆಯನ್ನು ವಿರೋಧಿಸುತ್ತಿರುವುದೇಕೆ? ಇವೇ ಮೊದಲಾದ ಕುತೂಹಲಕಾರಿ ಅಂಶಗಳನ್ನು ವಿವರವಾಗಿ ಚರ್ಚಿಸುವ ಪೋರ್ಚುಗೀಸ್ ಲೇಖಕ ಬ್ರುನೋ ಮಶೆಸ್ ರ ಪುಸ್ತಕ "ಬೆಲ್ಟ್ ಅಂಡ್ ರೋಡ್, ಎ ಚೈನೀಸ್ ವರ್ಲ್ಡ್ ಆರ್ಡರ್" ಕುರಿತ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ನಲವತ್ಮೂರನೆಯ ಸಂಚಿಕೆಯಲ್ಲಿ...Recording date: 8 November 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-01-2544 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp42: ಬೆಲ್ಟ್ ಮತ್ತು ರೋಡ್ ಎಂಬ ಚೀನಿ ಮಹತ್ವಾಕಾಂಕ್ಷೆ - Belt and road a chinese ambitionಒಂದು ಬೆಲ್ಟ್ ಒಂದು ರೋಡ್ ಚೀನಾದ ಕಮ್ಯುನಿಸ್ಟ್ ಪಕ್ಷದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ. ೨೦೧೩ರಲ್ಲಿ ಚಾಲನೆಗೊಂಡಿತು. ೭೦ಕ್ಕಿಂತ ಹೆಚ್ಚು ರಾಷ್ಟ್ರಗಳ ನಡುವೆ ನಿಕಟವಾದ ವ್ಯಾಪಾರದ ನಂಟು ಬೆಸೆಯುವ ದೊಡ್ಡ ಕನಸನ್ನು ಚೀನಾ ಹೊಂದಿದೆ. ಇದರ ಭೌಗೋಳಿಕ ವ್ಯಾಪ್ತಿಯಷ್ಟೇ ದೊಡ್ಡದು ಇದರ ಕಾಲಾವಧಿ. ೨೦೪೯ರಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಚೀನಾದ್ದು.ಈ ಯೋಜನೆ ಚೀನಾದ ವಿದೇಶಾಂಗ ನೀತಿಗೆ ಎಷ್ಟು ಮುಖ್ಯವೆಂದರೆ, ೨೦೧೭ರಲ್ಲಿ ಯೋಜನೆಯ ಅನುಷ್ಠಾನದ ಗುರಿಯನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು. ೨೦೪೯ರೊಳಗೆ ಸರಕಾರದಲ್ಲಿ ಏನೇ ಬದಲಾವಣೆಗಳಾದರೂ ಯೋಜನೆಯ ಅನುಷ್ಠಾನದಲ್ಲಿ ವ್ಯತ್ಯಯ ಉಂಟಾಗದು.ಈ ಯೋಜನೆಯ ಹಿಂದಿರುವ ಚೀನಾದ ಮಹತ್ವಾಕಾಂಕ್ಷೆ ಏನು? ನಮ್ಮ ನೆರೆಯ ಪಾಕಿಸ್ತಾನ, ಶ್ರೀಲಂಕದಿಂದ ಮೊದಲುಗೊಂಡು ದೂರದ ಆಫ್ರಿಕಾ ಖಂಡದ ದೇಶಗಳು ಸೇರಿದಂತೆ ಇದರಲ್ಲಿ ಪಾಲುಗೊಂಡಿರುವ ರಾಷ್ಟ್ರಗಳ ಭವಿಷ್ಯವೇನು? ಭಾರತ, ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳು ಈ ಯೋಜನೆಯನ್ನು ವಿರೋಧಿಸುತ್ತಿರುವುದೇಕೆ? ಇವೇ ಮೊದಲಾದ ಕುತೂಹಲಕಾರಿ ಅಂಶಗಳನ್ನು ವಿವರವಾಗಿ ಚರ್ಚಿಸುವ ಪೋರ್ಚುಗೀಸ್ ಲೇಖಕ ಬ್ರುನೋ ಮಶೆಸ್ ರ ಪುಸ್ತಕ "ಬೆಲ್ಟ್ ಅಂಡ್ ರೋಡ್, ಎ ಚೈನೀಸ್ ವರ್ಲ್ಡ್ ಆರ್ಡರ್" ಕುರಿತ ಚರ್ಚೆ ಅರಳಿಕಟ್ಟೆಯ ನಲವತ್ತೆರಡನೆಯ ಸಂಚಿಕೆಯಲ್ಲಿ...Recording date: 8 November 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-01-1853 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp40: ಸೈಕಲ್ ಯಾತ್ರಿಕರ ಅನುಭವಗಳು - Experiences of hobby cyclistsಸೈಕ್ಲಿಂಗ್ ಅನ್ನುವುದು ಇತ್ತೀಚಿಗೆ ಭಾರತದಲ್ಲಿ ಅದರಲ್ಲೂ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಒಂದು ಟ್ರೆಂಡ್. ಸೈಕ್ಲಿಂಗ್ ಅನ್ನುವುದು ಸಮಾನಮನಸ್ಕರೊಡನೆ ಸುತ್ತಾಡುವ ಒಂದು ಪ್ರಕ್ರಿಯೆ ಮಾತ್ರವಾ ಅಥವಾ ತಮ್ಮನ್ನು ತಾವು ಅರಿತುಕೊಳ್ಳಲು ಇರುವ ಸಾಧನವಾ?ಸೈಕ್ಲಿಂಗ್ ಹೆಚ್ಚಾಗಿ ನಮ್ಮ ದೈಹಿಕ ಸಾಮರ್ಥ್ಯ ಬೇಡುತ್ತದಾ ಅಥವಾ ಮಾನಸಿಕ ಶಕ್ತಿ ಹೆಚ್ಚು ಮುಖ್ಯವಾ? ಸೈಕಲ್ ಸವಾರರು ಬೇರೆ ಬೇರೆ ಛಾಲೆಂಜುಗಳಿಗೆ ತಮ್ಮನ್ನು ಹೇಗೆ ಒಡ್ಡಿಕೊಳ್ಳುತ್ತಾರೆ? ದಿನಗಟ್ಟಲೆ ಸೈಕಲ್ ಪ್ರಯಾಣ ಮಾಡುವಾಗ ಉಂಟಾಗುವ ಅಡೆತಡೆಗಳೇನು, ಅದಕ್ಕಾಗಿ ಹೇಗೆ ತಮ್ಮನ್ನು ತಾವು ತಯಾರಿ ಮಾಡಿಕೊಳ್ಳುತ್ತಾರೆ? ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಮಂಜುಳಾ ಹಾಗು ನೇತ್ರ ಜೊತೆ ನಾವು ನಡೆಸಿದ ಅಪರೂಪದ ಮಾತುಕತೆ ಅರಳಿಕಟ್ಟೆಯ ನಲವತ್ತೊಂದನೆಯ ಸಂಚಿಕೆಯಲ್ಲಿ.ಇನ್ನಷ್ಟು ಆಸಕ್ತಿಕರವಾದ ಚರ್ಚೆಗಳನ್ನು ಕನ್ನಡದಲ್ಲಿ ಕಟ್ಟಿಕೊಡಲು ನಿಮ್ಮ ಬೆಂಬಲ ಅತ್ಯಗತ್ಯ. ಯುಟ್ಯೂಬಿನಲ್ಲಿ ನಮ್ಮ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ ಇದರಿಂದ ನಾವು ನಿಮ್ಮಂತಹ ಇನ್ನಷ್ಟು ಕೇಳುಗರನ್ನು ತಲುಪಲು ನೆರವಾಗುತ್ತದೆ.Recording date: 2 November 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-01-1259 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp40: ಕ್ಯಾನ್ಸಲ್ ಕಲ್ಚರ್ - ಹಾಗೆಂದರೇನು? What do you know about Cancel Culture?ಅರಳಿಕಟ್ಟೆಯ ಸಮಸ್ತ ಕೇಳುಗರಿಗೆ ಹಾಗೂ ವೀಕ್ಷಕರಿಗೆ ಹೊಸ ವರ್ಷದ ಶುಭಾಶಯಗಳು. ೨೦೨೧ ನಿಮ್ಮೆಲ್ಲ ಕನಸುಗಳನ್ನು ನನಸಾಗಿಸಲಿ ಎಂದು ಹಾರೈಸುತ್ತೇವೆ.ಧಾರ್ಮಿಕ ಮೂಲಭೂತವಾದಿಗಳು, ದಮನಕಾರಿ ಸರಕಾರಗಳು ಖಾಸಗಿ ವ್ಯಕ್ತಿಗಳ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವುದರ ಉದಾಹರಣೆಗಳನ್ನು ನಾವು ಸಾಕಷ್ಟು ಕಂಡಿರುತ್ತೇವೆ. ಜಾತಿ ದ್ವೇಷದ ಹೆಸರಿನಲ್ಲಿ ಕುಟುಂಬಗಳನ್ನು ಬಹಿಷ್ಕಾರ ಹಾಕುವ ಅವರೊಂದಿಗೆ ಎಲ್ಲಾ ಬಗೆಯ ಸಾಮಾಜಿಕ ನಂಟನ್ನು ಕಡಿದುಕೊಳ್ಳುವ ಪದ್ಧತಿ ಹಲವು ಹಳ್ಳಿಗಳಲ್ಲಿ ಜಾರಿಯಲ್ಲಿರುವುದನ್ನು ನಾವು ಕೇಳಿ ತಿಳಿದಿರುತ್ತೇವೆ.ಆದರೆ ಅಮೆರಿಕಾದಿಂದ ಮೊದಲಾಗಿ ಅನೇಕ ಪಾಶ್ಬಿಮಾತ್ಯ ವಿಶ್ವವಿದ್ಯಾಲಯಗಳಲ್ಲಿ ಗುರುತಿಸಲಾಗಿರುವ ಕ್ಯಾನ್ಸಲ್ ಕಲ್ಚರ್ ಎಂಬ ಹೊಸತೊಂದು ಬಗೆಯ ದಮನಕಾರಿ ಸಂಸ್ಕೃತಿಯ ಬಗ್ಗೆ ನಿಮಗೆಷ್ಟು ಗೊತ್ತು? ಈ ಸಂಸ್ಕೃತಿಯು ವಿಶ್ವವೇ ಕೊಂಡಾಡುವ ಮಹಾತ್ಮ ಗಾಂಧಿಯ ಪ್ರತಿಮೆಯನ್ನು ತೆರವು ಗೊಳಿಸಬೇಕು ಎಂದು ಪಟ್ಟು ಹಿಡಿಯುತ್ತದೆ, ಎರಡನೆಯ ವಿಶ್ವಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ಬ್ರಿಟನ್ನನ್ನು ವಿಜಯದೆಡೆಗೆ ಮುನ್ನಡೆಸಿದ ನಾಯಕ ವಿನ್ಸ್ಟನ್ ಚರ್ಚಿಲ್ ಗೆ ಮನ್ನಣೆ ಕೊಡಬಾರದು ಎಂದು ಸಮರ್ಥಿಸುತ್ತದೆ. ಈ ಸಂಸ್ಕೃತಿಯ ಹರಿಕಾರರ ಕೋಪಕ್ಕೆ ಗುರಿಯಾದರೆ ಒಂದು ಸಣ್ಣ ತಪ್ಪಿಗೆ, ಕ್ಷಣಾರ್ಧದಲ್ಲಿ ವರ್ಷಗಳಿಂದ ಕಟ್ಟಿಕೊಂಡ ಕರಿಯರ್ ಸರ್ವನಾಶವಾಗಿ ಹೋಗುತ್ತದೆ.ಇಂತಹ ವಿಲಕ್ಷಣವಾದ ಸಂಸ್ಕೃತಿ ಬೆಳೆಯಲು ಕಾರಣವಾದ ಅಂಶಗಳೇನು, ಇದು ಜನಪ್ರಿಯವಾಗುವಕ್ಕೆ ಇರುವ ಮನಃಶಾಸ್ತ್ರೀಯ ಕಾರಣಗಳು ಯಾವುವು? ಕ್ಯಾನ್ಸಲ್ ಸಂಸ್ಕೃತಿಯಲ್ಲಿ ತೊಡಗಿದವರು ತಾವು ಮಾಡುವುದೆಲ್ಲ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಎಂದು ಪ್ರಾಮಾಣಿಕವಾಗಿ ನಂಬಿಕೊಂಡಿದ್ದರೂ ಅದರಿಂದ ತಮಗೆ ಹಾಗೂ ಸುತ್ತಲಿನ ಸಮಾಜದಲ್ಲಿ ಆಗುವ ಅನಾಹುತಗಳೇನು ಎನ್ನುವ ಕುತೂಹಲಕಾರಿ ಪ್ರಶ್ನೆಗಳನ್ನೆತ್ತಿಕೊಂಡು ನಾವು ನಡೆಸಿದ ಚರ್ಚೆ ಅರಳಿಕಟ್ಟೆಯ ನಲವತ್ತನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.ಇನ್ನಷ್ಟು ಆಸಕ್ತಿಕರವಾದ ಚರ್ಚೆಗಳನ್ನು ಕನ್ನಡದಲ್ಲಿ ಕಟ್ಟಿಕೊಡಲು ನಿಮ್ಮ ಬೆಂಬಲ ಅತ್ಯಗತ್ಯ. ಯುಟ್ಯೂಬಿನಲ್ಲಿ ನಮ್ಮ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ ಇದರಿಂದ ನಾವು ನಿಮ್ಮಂತಹ ಇನ್ನಷ್ಟು ಕೇಳುಗರನ್ನು ತಲುಪಲು ನೆರವಾಗುತ್ತದೆ.ಈ ಸಂಚಿಕೆಯಲ್ಲಿ ಉಲ್ಲೇಖಿಸಿದ ವಿಚಾರಗಳ ಕುರಿತ ಮಾಹಿತಿ:- Mental models to understand the world Part 1: https://www.youtube.com/watch?v=C8FfMHzJ2ro- Mental models to understand th world part 2: https://www.youtube.com/watch?v=oCiikEgeIAQ- Thomas Sowell's book - A conflict of visions : https://www.youtube.com/watch?v=COTkCUs0WKY- Yuval Noah Hariri's book Sapiens : https://www.youtube.com/watch?v=qaS7dvhNlisRecording date: 04 October 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2021-01-031h 24AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp39: Activism is not a journalist’s job! - ಆಕ್ಟಿವಿಸಂ ಪತ್ರಕರ್ತರ ಕೆಲಸವಲ್ಲ!ವರನಟ ರಾಜಕುಮಾರ್ ವೀರಪ್ಪನ್ ಸೆರೆಯಿಂದ ಬಿಡುಗಡೆಯಾದ ಸಂದರ್ಭದಲ್ಲಿ ಅವರನ್ನು ಭೇಟಿಯಾದ ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರರಾವ್ ಬಳಿ ಬೈಟ್ ಪಡೆದ ಪತ್ರಕರ್ತರೊಬ್ಬರು "ನಿಮ್ಮ ಹೆಸರು ಹಾಗೂ ವೃತ್ತಿಯೇನು ಸರ್?" ಎಂದು ಕೇಳಿದ್ದರು. ಇತ್ತೀಚೆಗೆ ಪ್ರತಿಭಟನೆಯೊಂದನ್ನು ವರದಿ ಮಾಡಲು ಇತಿಹಾಸಕಾರ ರಾಮಚಂದ್ರ ಗುಹಾರನ್ನು ಸಂದರ್ಶಿಸಿದ ಪತ್ರಕರ್ತೆ "ನೀವು ಯಾರು ಸರ್?" ಎಂದು ಮುಗ್ಧವಾಗಿ ಪ್ರಶ್ನಿಸಿದ್ದಳು. ಸುದ್ದಿಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಬೈಟ್ ಸಂಗ್ರಹಿಸುವ ನೌಕರರಾಗಿ ಕುಗ್ಗಿ ಹೋಗಿರುವುದು ಇಂದು ನಿನ್ನೆಯ ಬೆಳವಣಿಗೆಯೇನು ಅಲ್ಲ.ಇಂಥದ್ದೇ ಹತ್ತು ಹಲವು ರಸಭರಿತ ಒಳನೋಟಗಳುಳ್ಳ ಹಿರಿಯ ಪತ್ರಕರ್ತ ಸತೀಶ್.ಡಿ.ಪಿ ಜತೆ ಅರಳಿಕಟ್ಟೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಮುವತ್ತೊಂಭತ್ತನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.Recording date: 25 October 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2020-12-2753 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp38: Future of Indian journalism - ಭಾರತದಲ್ಲಿ ಪತ್ರಿಕೋದ್ಯಮದ ಭವಿಷ್ಯಸರಕಾರ ತಮ್ಮನ್ನು ನಿಯಂತ್ರಿಸಬಾರದು ಎಂದು ಟಿವಿ ಚಾನೆಲ್ಲುಗಳು ಸ್ವಯಂ ನಿಯಂತ್ರಣದ ವ್ಯವಸ್ಥೆಯೊಂದನ್ನು ಹೊಂದಿವೆ. ಜನ ಸಾಮಾನ್ಯರು ಈ ಮಾಧ್ಯಮಗಳ ವಿರುದ್ಧ ದೂರು ದಾಖಲಿಸಲು ಈ ವ್ಯವಸ್ಥೆ ಅನುಕೂಲ ಮಾಡಿಕೊಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ನಾವು ಓದುವ ದಿನಪತ್ರಿಕೆಯೊಂದನ್ನು ಮುದ್ರಿಸಿ ಹಂಚುವುದಕ್ಕೆ ಎಷ್ಟು ಹಣ ಖರ್ಚಾಗುತ್ತದೆ, ಇದಕ್ಕೆ ಬೇಕಾದ ಬಂಡವಾಳವನ್ನು ಪತ್ರಿಕೆಗಳು ಹೇಗೆ ಹೊಂದಿಸುತ್ತವೆ ಎನ್ನುವುದು ನಿಮಗೆ ಗೊತ್ತೆ? ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾಗಳಲ್ಲಿ ಸುದ್ದಿ ಪತ್ರಿಕೆಗಳ ಮುಖಬೆಲೆ ಭಾರತದ ಪತ್ರಿಕೆಗಳಿಗಿಂತ ಎರಡು ಮೂರು ಪಟ್ಟು ಹೆಚ್ಚು ಎನ್ನುವುದು ನಿಮಗೆ ತಿಳಿದಿದೆಯೇ?ಈ ವಾರದ ಸಂಚಿಕೆಯಲ್ಲಿ ನಾವು ಪತ್ರಿಕೋದ್ಯಮದಲ್ಲಿ ಇಪ್ಪತ್ಮೂರು ವರ್ಷ ವ್ಯಯಿಸಿ ಅಪಾರವಾದ ಅನುಭವ ಗಳಿಸಿರುವ ಕನ್ನಡಿಗ ಡಿ.ಪಿ.ಸತೀಶ್ ರೊಂದಿಗೆ ಭಾರತದಲ್ಲಿ ಪತ್ರಿಕೋದ್ಯಮಕ್ಕೆ ಇರುವ ಭವಿಷ್ಯದ ಕುರಿತು ಅನೇಕ ಕುತೂಹಲಕರವಾದ ವಿಷಯಗಳನ್ನು ಚರ್ಚಿಸಿದ್ದೇವೆ.Recording date: 25 October 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2020-12-2051 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp37: The psychology of persuasion (Part 2) - ಮನವೊಲಿಸುವಿಕೆಯ ತಂತ್ರಗಳು(ಭಾಗ ೨)ದಿನನಿತ್ಯದ ಸಾಮಾನ್ಯ ಬದುಕಿನಿಂದ ತೊಡಗಿ, ವ್ಯಾಪಾರಿಗಳು, ದೇಣಿಗೆ ಸಂಗ್ರಹಿಸುವ ಸರಕಾರೇತರ ಸಂಸ್ಥೆಗಳು, ರಾಜಕೀಯ ಪಕ್ಷಗಳು ಹೀಗೆ ಅನೇಕರು ಬಳಸುವ ಮನವೊಲಿಸುವ ತಂತ್ರಗಳನ್ನು ಕುರಿತು ಸುದೀರ್ಘವಾಗಿ ಸಂಶೋಧನೆ ನಡೆಸಿ ಡಾ. ರಾಬರ್ಟ್ ಚಲ್ದಿನಿ ಬರೆದ ಪುಸ್ತಕ ಇನ್ಫ್ಲುಯೆನ್ಸ್ (Influence, the psychology of persuasion) ಕುರಿತ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಮುವತ್ತೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ.Recording date: 20 September 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2020-12-1447 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp36: The psychology of persuasion - ಮನವೊಲಿಸುವಿಕೆಯ ತಂತ್ರಗಳುಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಭಗವದ್ಗೀತೆಯನ್ನೋ, ಸಣ್ನದೊಂದು ಗುಲಾಬಿಯನ್ನೋ ಉಚಿತವಾಗಿ ಹಂಚುವ ಹರೇ ಕೃಷ್ಣ ಸಂಸ್ಥೆಯ ಸದಸ್ಯರನ್ನು ನೀವು ಕಂಡಿರಬಹುದು. ಆದರೆ ಮನವೊಲಿಸುವಿಕೆಯ ಪರಿಣಾಮಕಾರಿ ತಂತ್ರವೊಂದನ್ನು ಬಳಸಿ ಮಿಲಿಯನ್ ಡಾಲರ್ ಗಟ್ಟಲೆ ದೇಣಿಗೆಯನ್ನು ಈ ಸಂಸ್ಥೆ ಗಳಿಸಿದ್ದು ಹೇಗೆ ಗೊತ್ತೆ?ಕೊರಿಯಾ ಯುದ್ಧದಲ್ಲಿ ಅಮೇರಿಕಾದ ಕೈದಿಗಳಿಂದ ಮಾಹಿತಿ ಸಂಗ್ರಹಿಸಲು ಉತ್ತರ ಕೊರಿಯಾ ಅವರಿಗೆ ಚಿತ್ರ ಹಿಂಸೆ ನೀಡಿದರೆ ಚೀನೀ ಸೆರೆಮನೆ ಅಧಿಕಾರಿಗಳು ಸೂಕ್ಷ್ಮವಾದ ಮನಶಾಸ್ತ್ರೀಯ ತಂತ್ರಗಳನ್ನು ಬಳಸಿ ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದು ಹೇಗೆ ಗೊತ್ತೆ?ದಿನನಿತ್ಯದ ಸಾಮಾನ್ಯ ಬದುಕಿನಿಂದ ತೊಡಗಿ, ವ್ಯಾಪಾರಿಗಳು, ದೇಣಿಗೆ ಸಂಗ್ರಹಿಸುವ ಸರಕಾರೇತರ ಸಂಸ್ಥೆಗಳು, ರಾಜಕೀಯ ಪಕ್ಷಗಳು ಹೀಗೆ ಅನೇಕರು ಬಳಸುವ ಮನವೊಲಿಸುವ ತಂತ್ರಗಳನ್ನು ಕುರಿತು ಸುದೀರ್ಘವಾಗಿ ಸಂಶೋಧನೆ ನಡೆಸಿ ಡಾ. ರಾಬರ್ಟ್ ಚಲ್ದಿನಿ ಬರೆದ ಪುಸ್ತಕ ಇನ್ಫ್ಲುಯೆನ್ಸ್ (Influence, the psychology of persuasion) ಕುರಿತ ಚರ್ಚೆ ಮುವತ್ತಾರನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ.Recording date: 20 September 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2020-12-0844 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp35: Rights of states in Indian Union - ಭಾರತದ ಒಕ್ಕೂಟದಲ್ಲಿ ರಾಜ್ಯಗಳ ಹಕ್ಕುಗಳುವ್ಯವಸ್ಥೆಯಲ್ಲಿ ಅಧಿಕಾರ ಒಂದೇ ಕಡೆ ಕೇಂದ್ರೀಕೃತವಾದರೆ ಕ್ರೌರ್ಯ ಹೆಚ್ಚುತ್ತದೆ. ಹೀಗೆ ಅಧಿಕಾರ ಒಂದೆಡೆ ಕೇಂದ್ರೀಕೃತವಾಗಬಾರದು ಎಂದು ಹಲವು ರಾಷ್ಟ್ರಗಳು ತಮ್ಮ ಸಂವಿಧಾನಗಳಲ್ಲಿ ಸ್ಪಷ್ಟವಾಗಿ ಕೇಂದ್ರ ಹಾಗೂ ಪ್ರಾದೇಶಿಕ ಸರಕಾರಗಳ ಅಧಿಕಾರಗಳನ್ನು ವಿಂಗಡಣೆ ಮಾಡಿಕೊಂಡಿವೆ. ಈ ಹೊಂದಾಣಿಕೆಗೆ ಒಕ್ಕೂಟ ವ್ಯವಸ್ಥೆ ಅಥವಾ ಫೆಡರಲಿಸಂ ಎಂದು ಕರೆಯಬಹುದು.ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಫೆಡರಲಿಸಂ ಅನೇಕ ರೀತಿಯಲ್ಲಿ ಬಳಕೆಗೆ ಬಂದಿದೆ. ಅಮೇರಿಕಾದಲ್ಲಿ ಪ್ರತಿ ರಾಜ್ಯವೂ ತನ್ನ ಸಂವಿಧಾನವನ್ನು ನಿರ್ಮಿಸಿಕೊಳ್ಳುವ ಅಧಿಕಾರ ಹೊಂದಿದ್ದರೆ ಭಾರತದಲ್ಲಿ ಕೇಂದ್ರ ಸರಕಾರ ರಾಜ್ಯಗಳನ್ನು ಒಡೆದು ವಿಂಗಡಿಸಿವೆ. ಶ್ರೀಮಂತ ರಾಷ್ಟ್ರ ಸ್ವಿಟ್ಜರ್ ಲ್ಯಾಂಡ್ ಫೆಡರಲಿಸಂನ ಅತ್ಯುತ್ತಮ ಉದಾಹರಣೆಯಾದರೆ ನಮ್ಮ ನೆರೆಯ ಪಾಕಿಸ್ಥಾನ ಕೂಡ ಫೆಡರಲ್ ರಾಷ್ಟ್ರ ಎಂದು ತಿಳಿದು ಗೊಂದಲ ಮೂಡುತ್ತದೆ.ಇಂಜಿನಿಯರಿಂಗ್ ಓದಿದ ನಂತರ ಪಬ್ಲಿಕ್ ಪಾಲಿಸಿ ಕಲಿಯಲು ತೊಡಗಿದ ರಕ್ಷಿತ್ ಪೊನ್ನತ್ಪುರ ಜೊತೆಗೆ ನಾವು ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ೩೫ ನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ.Recording date: 27 September 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2020-12-021h 14AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp34: On federalism - ಒಕ್ಕೂಟ ವ್ಯವಸ್ಥೆವ್ಯವಸ್ಥೆಯಲ್ಲಿ ಅಧಿಕಾರ ಒಂದೇ ಕಡೆ ಕೇಂದ್ರೀಕೃತವಾದರೆ ಕ್ರೌರ್ಯ ಹೆಚ್ಚುತ್ತದೆ. ಹೀಗೆ ಅಧಿಕಾರ ಒಂದೆಡೆ ಕೇಂದ್ರೀಕೃತವಾಗಬಾರದು ಎಂದು ಹಲವು ರಾಷ್ಟ್ರಗಳು ತಮ್ಮ ಸಂವಿಧಾನಗಳಲ್ಲಿ ಸ್ಪಷ್ಟವಾಗಿ ಕೇಂದ್ರ ಹಾಗೂ ಪ್ರಾದೇಶಿಕ ಸರಕಾರಗಳ ಅಧಿಕಾರಗಳನ್ನು ವಿಂಗಡಣೆ ಮಾಡಿಕೊಂಡಿವೆ. ಈ ಹೊಂದಾಣಿಕೆಗೆ ಒಕ್ಕೂಟ ವ್ಯವಸ್ಥೆ ಅಥವಾ ಫೆಡರಲಿಸಂ ಎಂದು ಕರೆಯಬಹುದು.ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಫೆಡರಲಿಸಂ ಅನೇಕ ರೀತಿಯಲ್ಲಿ ಬಳಕೆಗೆ ಬಂದಿದೆ. ಅಮೇರಿಕಾದಲ್ಲಿ ಪ್ರತಿ ರಾಜ್ಯವೂ ತನ್ನ ಸಂವಿಧಾನವನ್ನು ನಿರ್ಮಿಸಿಕೊಳ್ಳುವ ಅಧಿಕಾರ ಹೊಂದಿದ್ದರೆ ಭಾರತದಲ್ಲಿ ಕೇಂದ್ರ ಸರಕಾರ ರಾಜ್ಯಗಳನ್ನು ಒಡೆದು ವಿಂಗಡಿಸಿವೆ. ಶ್ರೀಮಂತ ರಾಷ್ಟ್ರ ಸ್ವಿಟ್ಜರ್ ಲ್ಯಾಂಡ್ ಫೆಡರಲಿಸಂನ ಅತ್ಯುತ್ತಮ ಉದಾಹರಣೆಯಾದರೆ ನಮ್ಮ ನೆರೆಯ ಪಾಕಿಸ್ಥಾನ ಕೂಡ ಫೆಡರಲ್ ರಾಷ್ಟ್ರ ಎಂದು ತಿಳಿದು ಗೊಂದಲ ಮೂಡುತ್ತದೆ.ಇಂಜಿನಿಯರಿಂಗ್ ಓದಿದ ನಂತರ ಪಬ್ಲಿಕ್ ಪಾಲಿಸಿ ಕಲಿಯಲು ತೊಡಗಿದ ರಕ್ಷಿತ್ ಪೊನ್ನತ್ಪುರ ಈ ವಾರದ ಅತಿಥಿ. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಕೇವಲ ಮೇಲ್ಪದರಲ್ಲಿ ಚರ್ಚಿಸಲ್ಪಡುವ ಈ ವಿಷಯವನ್ನು ಅದರ ಎಲ್ಲಾ ಸೂಕ್ಷ್ಮಗಳೊಂದಿಗೆ ನಾವು ಅರಳಿಕಟ್ಟೆಯ ೩೪ ನೆಯ ಸಂಚಿಕೆಯಲ್ಲಿ ಚರ್ಚಿಸಿದ್ದೇವೆ.ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ.Recording date: 27 September 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2020-11-2552 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp33: Israel, a startup nation (Part2) - ಇಸ್ರೇಲ್ ಎಂಬ ಸ್ಟಾರ್ಟಪ್ ರಾಷ್ಟ್ರ (ಭಾಗ೨)ಇಸ್ರೇಲ್ ಎಂಬ ಪುಟ್ಟ ರಾಷ್ಟ ರಕ್ಷಣೆ, ತಂತ್ರಜ್ಞಾನದ ಕ್ಷೇತ್ರದಲ್ಲಿ ದೈತ್ಯ ಹೆಜ್ಜೆಗಳನ್ನು ಇಟ್ಟಿರುವುದು ಅನೇಕರಿಗೆ ತಿಳಿದಿದೆ. ಆದರೆ ಇಸ್ರೇಲ್ ಕುರಿತ ಇನ್ನೂ ಹಲವು ಸೂಕ್ಷ್ಮ ವಿವರಗಳು ನಿಮಗೆ ತಿಳಿದಿವೆಯೇ? ಇಸ್ರೇಲಿ ಜನರು ಜಗತ್ತಿನಲ್ಲಿ ಅತಿ ಹೆಚ್ಚು ರಾಷ್ಟ್ರಗಳಿಗೆ ಪ್ರವಾಸ ಮಾಡುತ್ತಾರೆ ಏಕೆ? ಚೀನಾದಲ್ಲಿ ಹಲವು ಇಸ್ರೇಲಿ ಪ್ರಜೆಗಳು ಉದ್ದಿಮೆಗಳನ್ನು ಪ್ರಾರಂಭಿಸಿದ್ದಾರೆ ಏಕೆ? ಇಸ್ರೇಲಿನ ಯಶಸ್ಸಿನಿಂದ ಭಾರತ ಏನನ್ನು ಕಲಿಯಬಹುದು?ಇವೇ ಮೊದಲಾದ ಆಸಕ್ತಿಕರ ಪ್ರಶ್ನೆಗಳ ಚರ್ಚೆಯೊಂದಿಗೆ ಅರಳಿಕಟ್ಟೆಯ ಮುವತ್ತಮೂರನೆಯ ಸಂಚಿಕೆ ನಿಮ್ಮ ಮುಂದಿದೆ.ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ.Recording date: 06 September 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2020-11-1648 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp32: Israel, a startup nation - ಇಸ್ರೇಲ್ ಎಂಬ ಸ್ಟಾರ್ಟಪ್ ರಾಷ್ಟ್ರಬ್ರಿಟೀಷರ ಆಳ್ವಿಕೆಯಿಂದ ಭಾರತ ಮುಕ್ತವಾದ ಆಸುಪಾಸಿನಲ್ಲೇ ಅರಬ್ಬರ ನಾಡಿನಲ್ಲಿ ಸಣ್ಣದೊಂದು ಯಹೂದಿ ರಾಷ್ಟ್ರ ಸ್ಥಾಪನೆಯಾಯಿತು. ತನ್ನ ಗಡಿಯ ಸುತ್ತಲೂ ಶತ್ರು ರಾಷ್ಟ್ರಗಳ ದಾಳಿಯನ್ನು ಹಿಮ್ಮೆಟ್ಟಿಸುತ್ತಾ ಈ ಪುಟ್ಟ ರಾಷ್ಟ್ರ ಪವಾಡ ಸದೃಶವಾದ ಆರ್ಥಿಕ ಪ್ರಗತಿಯನ್ನು ಸಾಧಿಸಿತು. ಹನಿ ನೀರಾವರಿ ತಂತ್ರಜ್ಞಾನದ ಆವಿಷ್ಕರಿಸಿ ಬಂಜರು ಭೂಮಿಯನ್ನು ಹಸಿರಾಗಿಸಿತು. ಸಂಖ್ಯೆಯಲ್ಲಿ ತಾನು ಎಂದಿಗೂ ಅರಬ್ ರಾಷ್ಟ್ರಗಳನ್ನು ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಅತ್ಯಾಧುನಿಕ ತಂತ್ರಜ್ಞಾನವನ್ನು ನೆಚ್ಚಿಕೊಂಡಿತು.  ಜಗತ್ತಿನಲ್ಲೇ ಅತಿ ಹೆಚ್ಚು ಸ್ಟಾರ್ಟಪ್ ದಟ್ಟಣೆ ಹೊಂದಿರುವ ರಾಷ್ಟ್ರ ಎನ್ನುವ ಪಟ್ಟವನ್ನು ಏರಿತು.ಇಸ್ರೇಲಿನ ಸಾಧನೆಗೆ ಇರುವ ಕಾರಣಗಳೇನು? ಇಸ್ರೇಲಿನ ಅನುಭವ ಹಾಗೂ ಆಯ್ಕೆಗಳಿಂದ ಭಾರತವೂ ಸೇರಿದಂತೆ ಇತರೆ ದೇಶಗಳು ಕಲಿಯಬೇಕಾದ್ದು ಏನು?  ಈ ಕುತೂಹಲಕಾರಿ ಪ್ರಶ್ನೆಗಳೊಂದಿಗೆ ಅರಳಿಕಟ್ಟೆಯ ಮುವತ್ತೆರಡನೆಯ ಸಂಚಿಕೆ ನಿಮ್ಮ ಮುಂದಿದೆ.Recording date: 30 August 2020--- Send in a voice message: https://anchor.fm/aralikatte/message2020-11-0956 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp31: A conversation with relationship coach - ಬಾಳಸಂಗಾತಿ ಹುಡುಕಲು ಮಾರ್ಗದರ್ಶನಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ಹುಡುಕುವುದಕ್ಕೆ ಮಾರ್ಗದರ್ಶಕರು ಸಿಗುತ್ತಾರೆ, ಪಿಯುಸಿ ಮುಗಿಸಿದ ನಂತರ ಯಾವ ಕೋರ್ಸ್ ಮಾಡಬೇಕು ಎಂದು ಮಾರ್ಗದರ್ಶನ ಮಾಡುವುದಕ್ಕೆ ಕರಿಯರ್ ಕೌನ್ಸಿಲರ್ ಗಳು ಸಿಗುತ್ತಾರೆ ಆದರೆ ಬಾಳ ಸಂಗಾತಿಗಳನ್ನು ಹುಡುಕಿಕೊಳ್ಳುವುದಕ್ಕೆ ವೃತ್ತಿಪರವಾದ ಮಾರ್ಗದರ್ಶಕರು ಸಿಗುವುದು ಬಹಳ ಕಷ್ಟ. ಇಂಥದ್ದೊಂದು ಅಪರೂಪದ ಸೇವೆಯನ್ನು ಒದಗಿಸಲು ಲಂಡನ್ನಿನಲ್ಲಿದ್ದ ಕೆಲಸ ಬಿಟ್ಟು ಪ್ರಿಯಾಂಕ ಭಾರದ್ವಜ್ ಪ್ರಾರಂಭಿಸಿದ ಸಂಸ್ಥೆ: ಮ್ಯಾರೇಜ್ ಬ್ರೋಕರ್ ಆಂಟಿ.ಅರಳಿಕಟ್ಟೆಯ ಮುವತ್ತೊಂದನೆಯ ಸಂಚಿಕೆಯಲ್ಲಿ ವಾಸುಕಿ ರಾಘವನ್, ಮುಕುಂದ್ ಸೆತ್ಲೂರ್ ಪ್ರಿಯಾಂಕರೊಂದಿಗೆ ನಡೆಸಿದ ಮಾತುಕತೆ ನಿಮ್ಮ ಮುಂದಿದೆ.Recording date: 06 September 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2020-11-0250 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp30: American presidential election - ಅಮೇರಿಕಾದ ಅಧ್ಯಕ್ಷೀಯ ಚುನಾವಣೆಅಮೇರಿಕಾದಲ್ಲಿ ನಡೆಯುವ ಚುನಾವಣೆಗಳಿಗೂ ಭಾರತದ ಚುನಾವಣೆಗಳಿಗೂ ಇರುವ ಸಾಮ್ಯತೆ ಹಾಗೂ ವ್ಯತ್ಯಾಸಗಳೇನು? ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ ಖರ್ಚಿನ ಕುರಿತು ಅಕೌಂಟಬಿಲಿಟಿ ಹೇಗೆ ತರುತ್ತಾರೆ? ಕೋವಿಡ್ ನಿಂದಾಗಿ ಚುನಾವಣೆಗಳು ನಡೆಯುವ ಕ್ರಮದಲ್ಲಿ ಆಗಿರುವ ಬದಲಾವಣೆಗಳೇನು?ಹೀಗೆ ಇನ್ನಷ್ಟು ಕುತೂಹಲಕಾರಿ ಪ್ರಶ್ನೆಗಳೊಂದಿಗೆ ಅರಳಿಕಟ್ಟೆಯ ಮುವತ್ತನೆಯ ಸಂಚಿಕೆಯಲ್ಲಿ ನಾವು ರಘು ಹಲೂರ್ ರೊಂದಿಗೆ ಕಳೆದ ವಾರ ಪ್ರಾರಂಭಿಸಿದ ಚರ್ಚೆಯನ್ನು ಮುಂದುವರೆಸಿದ್ದೇವೆ.Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2020-10-2652 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp29: American political system - ಅಮೇರಿಕಾದ ರಾಜಕೀಯ ವ್ಯವಸ್ಥೆಜಗತ್ತಿನ ಅತಿ ಹಳೆಯ ಪ್ರಜಾಪ್ರಭುತ್ವಗಳಲ್ಲಿ ಒಂದಾದ ಅಮೇರಿಕಾ ತನ್ನ ನಲವತ್ತಾರನೆಯ ಅಧ್ಯಕ್ಷನನ್ನು ನವೆಂಬರ್ ೩ನೇ ತಾರೀಖು ಆಯ್ಕೆ ಮಾಡುತ್ತಿದೆ. ಈ ಸಂದರ್ಭದಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಇಲ್ಲವೇ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ಕುರಿತು ಕುಟ್ಟಿದ ತವಡನ್ನೇ ಕುಟ್ಟುವುದು ಬಿಟ್ಟು ಅರಳಿಕಟ್ಟೆಯಲ್ಲಿ ನಾವು ವಿಶಿಷ್ಟವಾದ ಚರ್ಚೆ ನಡೆಸಿದ್ದೇವೆ.ಇಪ್ಪತ್ತು ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗ ರಘು ಹಲೂರು ನಮ್ಮೊಂದಿಗೆ ಅಮೇರಿಕಾದ ರಾಜಕೀಯ ವ್ಯವಸ್ಥೆ ಹೇಗೆ ನಿರ್ಮಿತವಾಗಿದೆ. ಅಧಿಕಾರ ವಿಕೇಂದ್ರಿಕರಣಕ್ಕೆ ಇರುವ ಸರಕಾರದ ವಿವಿಧ ಅಂಗಗಳು ಯಾವುವು. ಫೆಡರಲಿಸಂ ಹೇಗೆ ಕೆಲಸ ಮಾಡುತ್ತದೆ. ಈ ವಿಷಯಗಳಲ್ಲಿ ಭಾರತಕ್ಕೂ ಅಮೇರಿಕಾಗೂ ಇರುವ ವ್ಯತ್ಯಾಸಗಳೇನು  ಹೇಗೆ ಹಲವು ಕುತೂಹಲಕಾರಿ ಪ್ರಶ್ನೆಗಳೊಂದಿಗೆ ನಡೆಸಿದ ಚರ್ಚೆಯ ಮೊದಲ ಭಾಗ ಇಪ್ಪತ್ತೊಂಭತ್ತನೆಯ ಸಂಚಿಕೆಯಲ್ಲಿ ನಿಮ್ಮ  ಮುಂದಿದೆ.ಚರ್ಚೆಯಲ್ಲಿ ಭಾಗವಹಿಸಿದವರು: ರಘು ಹಲೂರು, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್.ಕೆ.ಎಸ್.Recording date: 07 October 2020Credits: Music: Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2020-10-1955 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp28: Creativity and business in TV serials - ಧಾರಾವಾಹಿ ಸೃಜನಶೀಲತೆ ಮತ್ತು ವ್ಯಾಪಾರಅರಳಿಕಟ್ಟೆಯ ಎರಡನೆಯ ಸಂಚಿಕೆಯಲ್ಲಿ ಶ್ರೀನಿಧಿ ಡಿ. ಎಸ್ ರೊಂದಿಗಿನ ಟಿವಿ ಧಾರಾವಾಹಿಗಳ ಕುರಿತ ನಮ್ಮ ಕುತೂಹಲಕಾರಿ ಚರ್ಚೆ ಮುಂದುವರೆದಿದೆ.ಈ ಸಂಚಿಕೆಯಲ್ಲಿ ನಾವು ಟಿವಿ ಧಾರಾವಾಹಿಗಳ ಹಣಕಾಸಿನ ವಹಿವಾಟು, ನಟರು, ಬರಹಗಾರರು ಎಷ್ಟು ಸಂಭಾವನೆ ಪಡೆಯುತ್ತಾರೆ, ಕೋವಿಡ್ ನಿಂದಾಗಿ ಕನ್ನಡದ ಧಾರಾವಾಹಿಗಳ ಭವಿಷ್ಯ ಹೇಗೆ ಬದಲಾಗಬಹುದು, ಧಾರಾವಾಹಿ ಬರವಣಿಗೆಗೆ ಬೇಕಾದ ಶಿಸ್ತು, ಮನಸ್ಥಿತಿ ಹೀಗೆ ಇನ್ನಷ್ಟು ಆಸಕ್ತಿಕರವಾದ ವಿಷಯಗಳ ಚರ್ಚೆ ನಡೆಸಿದ್ದೇವೆ.ಚರ್ಚೆಯಲ್ಲಿ ಭಾಗವಹಿಸಿದವರು: ಶ್ರೀನಿಧಿ.ಡಿ.ಎಸ್, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್.ಕೆ.ಎಸ್ ಹಾಗೂ ವಾಸುಕಿ ರಾಘವನ್.Credits:  Music: Crescents by Ketsa Licensed under creative commons.  Icon made by Freepik from www.flaticon.com--- Send in a voice message: https://anchor.fm/aralikatte/message2020-10-111h 00AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp27: An insider's account of TV serials - ಧಾರಾವಾಹಿಗಳ ಜಗತ್ತಿನಲ್ಲೊಂದು ಸುತ್ತುಲಕ್ಷಾಂತರ ಮನೆಗಳಲ್ಲಿ ದಿನಚರಿಯ ಭಾಗವಾಗಿರುವ ಧಾರಾವಾಹಿಗಳ ಕುರಿತು ಆಳವಾದ ಚರ್ಚೆಗಳು ನಡೆಯುವುದು ವಿರಳ. ನಮ್ಮ ದೇಶದಲ್ಲಿ ಸಿನಿಮಾಗಳಿಗಿಂತ ಎರಡು ಪಟ್ಟು ಹೆಚ್ಚು ಬಂಡವಾಳ ಆಕರ್ಷಿಸುವ ಹಾಗೂ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸುವ ಧಾರಾವಾಹಿಗಳ ಬಗ್ಗೆ ನಮಗೆಷ್ಟು ಗೊತ್ತು? ಗೊತ್ತಿರುವ ಸಂಗತಿಗಳಲ್ಲಿ ಎಷ್ಟು ವಾಸ್ತವಕ್ಕೆ ದೂರವಾದ ಪೂರ್ವಾಗ್ರಹಗಳು?ಅತ್ತೆ ಸೊಸೆಯರ ಕಿತ್ತಾಟದ ವಿಷಯಗಳನ್ನು ದಾಟಿ ಇಂದಿನ ಧಾರಾವಾಹಿಗಳು ಮುಂದುವರೆದಿರುವ ಹಾದಿಯ ಪರಿಚಯ ನಿಮಗಿದೆಯೇ? ಎಲ್ಲರೂ ಜಪಿಸುವ ಟಿ ಆರ್ ಪಿ ಎನ್ನುವ ಮಂತ್ರದ ಹಿಂದಿರುವ ಗುಟ್ಟೇನು? ಈ ಮಾಪನ ಹೇಗೆ ಕೆಲಸ ಮಾಡುತ್ತದೆ?ಧಾರಾವಾಹಿಗಳಲ್ಲಿ ಕಥೆ, ಚಿತ್ರಕಥೆ , ಸಂಭಾಷಣೆ ಬರೆಯುವ ಲೇಖಕರು ಹೇಗೆ ಕೆಲಸ ಮಾಡುತ್ತಾರೆ? ಅವರ ಬರವಣಿಗೆಯ ವ್ಯವಸ್ಥೆ ಹೇಗಿರುತ್ತದೆ? ಧಾರಾವಾಹಿಯ ಕಥೆಗಳು ಪ್ರಗತಿಪರವಾಗಿರುವುದಿಲ್ಲ ಎನ್ನುವ ಆರೋಪದಲ್ಲಿ ಹುರುಳಿದೆಯೇ? ವೀಕ್ಷಕರು ಧಾರಾವಾಹಿಗಳಲ್ಲಿ ಏನನ್ನು ನೋಡಲು ಬಯಸುತ್ತಾರೆ? ಎಂಬತ್ತು, ತೊಂಭತ್ತರ ದಶಕಗಳಲ್ಲಿ ರಾಜಕುಮಾರ್, ವಿಷ್ಣುವರ್ಧನ್ ರಂತಹ ನಟರು ಅಭಿನಯಿಸಿದ ಚಿತ್ರದ ಕಥೆಗಳನ್ನು ಈ ದಿನದ ಧಾರಾವಾಹಿಗಳು ಹೋಲುತ್ತವೆಯೇಕೆ?ಹೀಗೆ ಹಲವು ಕುತೂಹಲಕರವಾದ ಪ್ರಶ್ನೆಗಳೊಂದಿಗೆ ನಾವು ಲೇಖಕ ಶ್ರೀನಿಧಿ.ಡಿ.ಎಸ್ ರೊಂದಿಗೆ ನಡೆಸಿದ ಚರ್ಚೆಯ ಮೊದಲ ಭಾಗ ಅರಳಿಕಟ್ಟೆಯ ಇಪ್ಪತ್ತೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.ಚರ್ಚೆಯಲ್ಲಿ ಭಾಗವಹಿಸಿದವರು ಶ್ರೀನಿಧಿ.ಡಿ.ಎಸ್,  ಮುಕುಂದ್ ಸೆತ್ಲೂರ್,  ವಾಸುಕಿ ರಾಘವನ್ ಹಾಗೂ ಸುಪ್ರೀತ್.ಕೆ.ಎಸ್.Credits:  Music: Crescents by Ketsa Licensed under creative commons.  Icon made by Freepik from www.flaticon.com--- Send in a voice message: https://anchor.fm/aralikatte/message2020-10-0459 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp26: Entrepreneurship and innovations in Kannada - ಕನ್ನಡದಲ್ಲಿ ಉದ್ದಿಮೆ ಹಾಗೂ ಹೊಸತನದ ಯೋಜನೆಗಳುಕನ್ನಡಿಗರು ದೊಡ್ಡ ಉದ್ದಿಮೆಗಳನ್ನು ತೆರೆಯುವಲ್ಲಿ, ಹೊಸತನದ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಏಕೆ ಹಿಂದೆ ಬೀಳುತ್ತಾರೆ? ನಮ್ಮ ನೆರೆಯ ತಮಿಳರು, ತೆಲುಗರು, ಮಲಯಾಳಿಗಳಿಗೆ ಹೋಲಿಸಿದರೆ ಕನ್ನಡಿಗರು ಏಕೆ ತಮ್ಮ ಭಾಷೆಯ ಕುರಿತ ಸಶಕ್ತವಾದ ಐಡೆಂಟಿಟಿ ಹೊಂದಿಲ್ಲ? ಇದಕ್ಕೆ ಐತಿಹಾಸಿಕ, ರಾಜಕೀಯ, ಭೌಗೋಳಿಕ, ಸಾಂಸ್ಕೃತಿಕ ಕಾರಣಗಳಿವೆಯೇ?ಕನ್ನಡವನ್ನು ಸೀಮಿತವಾದ ಭಾವನಾತ್ಮಕ ನೆಲೆಯಲ್ಲಿ ನೋಡದೆ ದಿನನಿತ್ಯದ ಬದುಕಿನಲ್ಲಿ ಕನ್ನಡಿಗರಿಗೆ ಅಗತ್ಯವಾದ ಸೇವೆಗಳನ್ನು ಒದಗಿಸುವುದು ಹೇಗೆ? ರಾಜಕೀಯ ಪಕ್ಷಗಳು ನಮ್ಮ ನುಡಿಯ ಕುರಿತಾದ ಸಮಸ್ಯೆಗಳಿಗೆ ಕಿವಿಗೊಡುವಂತೆ ಮಾಡುವುದು ಹೇಗೆ?ನಮ್ಮ ನುಡಿಯಲ್ಲಿ ಸೇವೆಗಳನ್ನು ಒದಗಿಸಲು ಸರ್ಕಾರ ಸೋತಿರುವಲ್ಲಿ ಮಾರುಕಟ್ಟೆ ಗೆದ್ದಿರುವುದು ಹೇಗೆ? ಕನ್ನಡಿಗರು ತಮ್ಮ ಕೀಳರಿಮೆಯನ್ನು ತೊಡೆದು ಆತ್ಮವಿಶ್ವಾಸದಿಂದ ನಮ್ಮದೇ ಭಾಷೆಯಲ್ಲಿ ಸೇವೆಗಳನ್ನು ಆಗ್ರಹಿಸುವುದು ಏಕೆ ಅಗತ್ಯ?ಇವೇ ಮೊದಲಾದ ಕುತೂಹಲಕರವಾದ ಪ್ರಶ್ನೆಗಳೊಂದಿಗೆ ನಾವು ಕನ್ನಡದ ಕೆಲಸಗಳಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿರುವ ವಸಂತ್ ಶೆಟ್ಟಿಯವರೊಂದಿಗೆ ಮಾತನಾಡಿದ್ದೇವೆ. ಕನ್ನಡದಲ್ಲಿ ಇ ಪುಸ್ತಕ, ಆಡಿಯೋ ಪುಸ್ತಕಗಳನ್ನು ಪ್ರಕಟಿಸಲು ಅವರು ಶುರು ಮಾಡಿರುವ ಮೈ ಲ್ಯಾಂಗ್ ಸಂಸ್ಥೆಯ ಕುರಿತೂ ಹಲವು ಒಳನೋಟಗಳುಳ್ಳ ಚರ್ಚೆ ಅರಳಿಕಟ್ಟೆಯ ೨೬ನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ಸೆತ್ಲೂರ್,  ವಾಸುಕಿ ರಾಘವನ್ ಹಾಗೂ ವಸಂತ ಶೆಟ್ಟಿ.Credits:  Music: Crescents by Ketsa Licensed under creative commons.  Icon made by Freepik from www.flaticon.com--- Send in a voice message: https://anchor.fm/aralikatte/message2020-09-291h 34AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp25: Mathew Walker's book "Why We sleep?" 2/2 - ನಾವೇಕೆ ನಿದ್ರಿಸುತ್ತೇವೆ? 2/2ನಿದ್ದೆಯ ವಿವಿಧ ಹಂತಗಳಾವುವು? ನಮಗೇಕೆ ಕನಸುಗಳು ಬೀಳುತ್ತವೆ? ಬೆಳಗಿನ ಹೊತ್ತು ಕಪ್ಪು ಕನ್ನಡಕ ಹಾಕಿಕೊಳ್ಳಬಾರದು ಏಕೆ? ನಿದ್ದೆ ಮಾತ್ರೆ, ಮದ್ಯಸೇವನೆಯಿಂದ ಒಳ್ಳೆ ನಿದ್ದೆ ಏಕೆ ಸಾಧ್ಯವಿಲ್ಲ? ನಿದ್ದೆಗೆಟ್ಟರೆ ದೇಹದ ತೂಕ ಹೆಚ್ಚುತ್ತದೆಯೇ? ಅಲಾರಾಂ ಗಡಿಯಾರದ ಸ್ನೂಜ್ ಬಟನ್ ಏಕೆ ಬಳಸಬಾರದು? - ಇವೇ ಮೊದಲಾದ ಕುತೂಹಲಕಾರಿ ವಿಚಾರಗಳನ್ನು ಒಳಗೊಂಡಿರುವ ಮ್ಯಾಥ್ಯು ವಾಕರ್ ರ ಪುಸ್ತಕ "ನಾವೇಕೆ ನಿದ್ರಿಸುತ್ತೇವೆ"ದ ಕುರಿತ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ.Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-09-2254 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp24: Mathew Walker's book "Why We sleep?" - ನಾವೇಕೆ ನಿದ್ರಿಸುತ್ತೇವೆ?ತಿನ್ನಲು ಆಹಾರವಿಲ್ಲದೆ ಮನುಷ್ಯ ದಿನಗಟ್ಟಲೆ ಬದುಕಿರಬಲ್ಲ ಆದರೆ ಸತತವಾಗಿ ನಿದ್ದೆಯನ್ನು ತಪ್ಪಿಸಿದರೆ ಬದುಕಿರಲು ಅಸಾಧ್ಯ. ದಿನದ ಮೂರನೇ ಒಂದು ಭಾಗವನ್ನು ನಾವು ನಿದ್ದೆಯಲ್ಲಿ ಕಳೆಯುತ್ತೇವೆ. ಮನುಷ್ಯರಷ್ಟೇ ಅಲ್ಲ, ಇದುವರೆಗೆ ಅಧ್ಯಯನ ಮಾಡಿರುವ ಪ್ರತಿಯೊಂದು ಪ್ರಾಣಿಗೂ ನಿದ್ದೆ ಅತ್ಯವಶ್ಯಕ.ಜೀವಿಗಳ ವಿಕಾಸದ ಹಾದಿಯನ್ನು ಗಮನಿಸಿದರೆ ನಿದ್ದೆ ಬಹುದೊಡ್ಡ ತೊಡಕಾಗಿ ಕಾಣುತ್ತದೆ. ನಿದ್ರಿಸುವಾಗ ಜೀವಿ ಆಹಾರವನ್ನು ಅರಸಲು ಸಾಧ್ಯವಿಲ್ಲ, ಪರಭಕ್ಷಕ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲ, ಸಂತಾನೋತ್ಪತ್ತಿ, ಪೋಷಣೆಯಲ್ಲಿ ತೊಡಗಲು ಸಾಧ್ಯವಿಲ್ಲ. ಇಷ್ಟೆಲ್ಲ ಅನನಕೂಲಗಳಿದ್ದರೂ ನಿಸರ್ಗದಲ್ಲಿ ನಿದ್ದೆ ಪ್ರತಿಯೊಂದು ಜೀವಿಗೂ ಏಕೆ ಅತ್ಯಗತ್ಯ? ನಿದ್ದೆಗೆಟ್ಟರೆ ಆಗುವ ಅನಾಹುತಗಳೇನು ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ಡಾ. ಮ್ಯಾಥ್ಯು ವಾಕರ್ ಬರೆದಿರುವ ಜನಪ್ರಿಯ ಪುಸ್ತಕ "ನಾವೇಕೆ ನಿದ್ರಿಸುತ್ತೇವೆ" (Why we sleep: Unlocking the Power of Sleep and Dreams) ಈ ಸಂಚಿಕೆಯ ಚರ್ಚೆಯ ವಿಷಯ.Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-09-1555 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp23: Online entertainment in Kannda Part 2/2 - ಕನ್ನಡದಲ್ಲಿ ಆನ್ ಲೈನ್ ಮನರಂಜನೆ ಭಾಗ ೨/೨ಕನ್ನಡ ಸಿನಿಮಾಗಳಿಗೆ ಮಿನಿಮಲ್ ಪೋಸ್ಟರ್ ವಿನ್ಯಾಸ, ಫಾರಿನ್ ರಿಟರ್ನ್ಡ್ ಕಿರು ಚಲನಚಿತ್ರ ನಿರ್ಮಾಣ, "ಕಥೆ" ಹೆಸರಿನ ವಿನೂತನವಾದ ಯೋಜನೆಯ ನಿರ್ವಹಣೆ, ಸಾಮಾಜಿಕ ತಾಣಗಳಲ್ಲಿ ಜನಪ್ರಿಯವಾದ ಅಂಕಲ್ ಪಾತ್ರದ ಅಭಿನಯ ನಂತರ ಹಾನೆಸ್ಟ್ ವರ್ಕ್ ಫ್ರಂ ಹೋಮ್ ಸರಣಿಯ ಮೂಲಕ ಹೆಸರುವಾಸಿಯಾದ ಪುನೀತ್ ಬಿ ಎರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆಯ ಎರಡನೆಯ ಹಾಗೂ ಅಂತಿಮ ಭಾಗ ಇಪ್ಪತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.ಈ ಸಂಚಿಕೆಯಲ್ಲಿ ನಾವು ಕನ್ನಡದಲ್ಲಿ ಹೊಸ ಪ್ರಯತ್ನಗಳು ಯಶಸ್ವಿಯಾಗುವುದಕ್ಕೆ ಏಕೆ ತುಂಬಾ ಸಮಯ ಹಿಡಿಯುತ್ತದೆ, ಯುಟ್ಯೂಬಿನಲ್ಲಿ ವಿಡಿಯೋಗಳನ್ನು ಮಾಡುವವರು ಎಷ್ಟು ಹಣ ಮಾಡುತ್ತಾರೆ, ಟಿಕ್ ಟಾಕ್, ಯುಟ್ಯೂಬ್ ಗಳಿಂದ ಎಲ್ಲರೂ ಚಲನಚಿತ್ರ ತಾರೆಯರಂತೆ ಜನಪ್ರಿಯರಾಗಬಹುದು ಎನ್ನುವ ಆಶಾವಾದ ಎಷ್ಟು ನಿಜ? ಹೀಗೆ ಹಲವು ಕುತೂಹಲಕಾರಿ ವಿಷಯಗಳನ್ನು ಚರ್ಚಿಸಿದ್ದೇವೆ.ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಪುನೀತ್ ಬಿ ಎ, ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Recording date: 09 August 2020Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-09-0644 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆEp22: Online entertainment in Kannada - ಕನ್ನಡದಲ್ಲಿ ಆನ್ ಲೈನ್ ಮನರಂಜನೆಕನ್ನಡ ಸಿನಿಮಾಗಳಿಗೆ ಮಿನಿಮಲ್ ಪೋಸ್ಟರ್ ವಿನ್ಯಾಸ, ಫಾರಿನ್ ರಿಟರ್ನ್ಡ್ ಕಿರು ಚಲನಚಿತ್ರ ನಿರ್ಮಾಣ, "ಕಥೆ" ಹೆಸರಿನ ವಿನೂತನವಾದ ಯೋಜನೆಯ ನಿರ್ವಹಣೆ, ಸಾಮಾಜಿಕ ತಾಣಗಳಲ್ಲಿ ಜನಪ್ರಿಯವಾದ ಅಂಕಲ್ ಪಾತ್ರದ ಅಭಿನಯ ನಂತರ ಹಾನೆಸ್ಟ್ ವರ್ಕ್ ಫ್ರಂ ಹೋಮ್ ಸರಣಿಯ ಮೂಲಕ ಹೆಸರುವಾಸಿಯಾದ ಪುನೀತ್ ಬಿ ಎರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆಯ ಮೊದಲ ಭಾಗ ಇಪ್ಪತ್ತೆರಡನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.ಈ ಸಂಚಿಕೆಯಲ್ಲಿ ನಾವು ಪುನೀತ್ ರ ಬಾಲ್ಯ, ಓದಿನ ಜೊತೆಗೆ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಪೋಷಕರ ಪಾತ್ರ, ಪುನೀತ್ ತಮ್ಮ ಸೃಜನಶೀಲ ಪ್ರಯತ್ನಗಳನ್ನು ಯೋಜಿಸುವ, ಕಾರ್ಯರೂಪಕ್ಕೆ ತರುವ ಕ್ರಮ, ಕನ್ನಡ ಅಂತರ್ಜಾಲದಲ್ಲಿ ಮನರಂಜನೆ ಬೆಳೆದು ಬಂದ ಬಗೆ ಹೀಗೆ ಅನೇಕ ಕುತೂಹಲಕಾರಿ ವಿಷಯಗಳನ್ನು ಚರ್ಚಿಸಿದ್ದೇವೆ.Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-08-311h 05AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp21: An introduction to share markets 2/2 - ಶೇರು ಮಾರುಕಟ್ಟೆ ಕುರಿತು ನಿಮಗೆಷ್ಟು ಗೊತ್ತು? - ಭಾಗ ೨/೨ಯುದ್ಧ, ಕ್ಷಾಮ ಹೀಗೆ ಏನೇ ಅವಘಡಗಳಾದರೂ ದೇಶವೊಂದರ ಶೇರು ಮಾರುಕಟ್ಟೆ ನಿಲ್ಲುವುದಿಲ್ಲವೇಕೆ? ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಇಡೀ ದೇಶ ತಿಂಗಳುಗಟ್ಟಲೆ ಬಂದ್ ಆಗಿದ್ದರೂ ಶೇರು ಮಾರುಕಟ್ಟೆ ಯಥಾವತ್ತಾಗಿ ನಡೆಯಲು ಹೇಗೆ ಸಾಧ್ಯ? ಒಂದೇ ದಿನದಲ್ಲಿ ಮುಕೇಶ್ ಅಂಬಾನಿಯ ಸಂಪತ್ತು ಇಷ್ಟು ಕೋಟಿ ಹೆಚ್ಚಿತು, ಅಮೇಜಾನಿನ ಜೆಫ್ ಬೇಜೋಸ್ ಇವತ್ತು ಬಿಲಿಯನ್ ಡಾಲರ್ ಕಳೆದುಕೊಂಡ ಎಂದು ಸುದ್ದಿ ಮಾಧ್ಯಮಗಳಲ್ಲಿ ಓದುತ್ತೀರಿ. ನಿಜಕ್ಕೂ ಇಲ್ಲಿ ಆಗುವುದೇನು? ದಿನವೊಂದರಲ್ಲಿ ಅಷ್ಟು ಹಣ ಸಂಪಾದಿಸಲು ಇಲ್ಲವೇ ಕಳೆದುಕೊಳ್ಳಲು ಹೇಗೆ ಸಾಧ್ಯ?ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳೊಂದಿಗೆ ನಾವು ನಿತಿನ್ ಜಗತಾಪ್ರೊಂದಿಗೆ ನಡೆಸಿದ ಮಾತುಕತೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ಇಪ್ಪತ್ತೊಂದನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-08-221h 01AraliKatte ಅರಳಿಕಟ್ಟೆAraliKatte ಅರಳಿಕಟ್ಟೆE20: An introduction to share markets - ಶೇರು ಮಾರುಕಟ್ಟೆ ಕುರಿತು ನಿಮಗೆಷ್ಟು ಗೊತ್ತು?ಶೇರು ಮಾರುಕಟ್ಟೆ ಅಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೇಗಾಗುತ್ತದೆ? ಶೇರು ಮಾರುಕಟ್ಟೆಯಲ್ಲಿ ಯಾರು ಹಣ ಹೂಡಿಕೆ ಮಾಡಬಹುದು?ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳೊಂದಿಗೆ ನಾವು ನಿತಿನ್ ಜಗತಾಪ್ರೊಂದಿಗೆ ನಡೆಸಿದ ಮಾತುಕತೆಯ ಮೊದಲ ಭಾಗ ಅರಳಿಕಟ್ಟೆಯ ಇಪ್ಪತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ನಿತಿನ್ ಜಗತಾಪ್, ಮುಕುಂದ್ ಸೆತ್ಲೂರ್ ಹಾಗೂ ಸುಪ್ರೀತ್ ಕೆ ಎಸ್.Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-08-161h 02AraliKatte ಅರಳಿಕಟ್ಟೆAraliKatte ಅರಳಿಕಟ್ಟೆE19: Parents who adopted home schooling - ಮನೆಯಲ್ಲೇ ಶಾಲೆ ಶುರುಮಾಡಿದ ಪೋಷಕರ ಅನುಭವಹನ್ನೊಂದು ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿದ ರಮ್ಯ ಭಾರದ್ವಾಜ್ ತಮ್ಮ ಅವಳಿ ಜವಳಿ ಹೆಣ್ಣು ಮಕ್ಕಳನ್ನು ಶಾಲೆಯಿಂದ ತೆಗೆಸಿ ಮನೆಯಲ್ಲಿಯೇ ಬೆಳೆಸುತ್ತಿದ್ದಾರೆ. ಅವರ ಪತಿ ಗಂಗಾಧರ್ ಕೃಷ್ಣನ್ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು ಹೊಸ ಅನುಭವಗಳಿಗೆ ಒಡ್ಡುತ್ತಾರೆ. ಇದನ್ನು ಅವರು ಹೋಮ್ ಸ್ಕೂಲಿಂಗ್, ರೋಡ್ ಸ್ಕೂಲಿಂಗ್, ಅನ್ ಸ್ಕೂಲಿಂಗ್ ಎಂದು ಕರೆಯುತ್ತಾರೆ. ದೇಶವ್ಯಾಪಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇ ಪಿ) ಕುರಿತು ಚರ್ಚೆಯಾಗುತ್ತಿದ್ದರೆ, ಶಾಲೆಯ ಶಿಕ್ಷಣವೇ ಬೇಡ ಮನೆಯಲ್ಲಿಯೇ ಮಕ್ಕಳನ್ನು ಬೆಳೆಸುತ್ತೇವೆ ಎನ್ನುವ ಈ ಪೋಷಕರ ಜೊತೆಗೆ ನಡೆಸಿದ ಮಾತುಕತೆ ಅರಳಿಕಟ್ಟೆಯ ಹತ್ತೊಂಭತ್ತನೆಯ ಸಂಚಿಯಲ್ಲಿ ನಿಮ್ಮ ಮುಂದಿದೆ.ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಗಂಗಾಧರ್ ಕೃಷ್ಣನ್,ರಮ್ಯ ಭಾರದ್ವಾಜ್, ಮುಕುಂದ್ ಸೆತ್ಲೂರ್ ಹಾಗೂ ಸುಪ್ರೀತ್ ಕೆ ಎಸ್.Recording date: 20 July 2020Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-08-101h 26AraliKatte ಅರಳಿಕಟ್ಟೆAraliKatte ಅರಳಿಕಟ್ಟೆE18: A few mental models to understand the world Part 2/2, ಕೆಲವು ಉಪಯುಕ್ತ ಮಾನಸಿಕ ಮಾದರಿಗಳು ಭಾಗ ೨/೨ಅರಳಿಕಟ್ಟೆಯ ಹದಿನಾರನೆಯ ಸಂಚಿಕೆಯಲ್ಲಿ ನಾವು ಜಗತ್ತನ್ನು ನೋಡಲು, ಅರ್ಥ ಮಾಡಿಕೊಳ್ಳಲು ಇರುವ ಕೆಲವು ಉಪಯುಕ್ತ ಮಾನಸಿಕ ಮಾದರಿಗಳನ್ನು ಚರ್ಚಿಸಿದ್ದೆವು. ಈ ಎರಡನೆಯ ಹಾಗೂ ಅಂತಿಮ ಭಾಗದಲ್ಲಿ ಪರೇಟೋ ಸಿದ್ಧಾಂತ, ಬೀದಿ ದೀಪದ ಪರಿಣಾಮ, ಎಮರ್ಜೆನ್ಸ್ ಇವೇ ಮೊದಲಾದ ಕುತೂಹಲಕಾರಿ ವಿಷಯಗಳನ್ನು ಚರ್ಚಿಸಿದ್ದೇವೆ. ಅರಳಿಕಟ್ಟೆಯ ಹದಿನೆಂಟನೆಯ ಸಂಚಿಕೆ ನಿಮ್ಮ ಮುಂದಿದೆ...ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Recording date: 05 July 2020Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-08-021h 24AraliKatte ಅರಳಿಕಟ್ಟೆAraliKatte ಅರಳಿಕಟ್ಟೆE17: Witty sayings in Kundapura Kannada - ಕುಂದಾಪ್ರ ಕನ್ನಡ ಚಾಟೂಕ್ತಿಗಳುಕ್ವಾಟ-ಕುಂದಾಪ್ರ ಕನ್ನಡ ಎನ್ನುವುದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು, ಶಿವಮೊಗ್ಗೆಯ ಕೆಲವು ಭಾಗಗಳಲ್ಲಿ ನೆಲೆಸಿದ ಹಾಗೂ ಅಲ್ಲಿಂದ ಇತರೆ ಪ್ರದೇಶಗಳಿಗೆ ವಲಸೆ ಹೋದ ಜನ ಸಮೂಹ ಬಳಸುವ ಭಾಷೆ. ಕ್ವಾಟ-ಕುಂದಾಪ್ರ ಭಾಷೆಯನ್ನು ಕನ್ನಡದ ಸಶಕ್ತ ಉಪಭಾಷೆ ಎಂದು ಭಾಷಾವಿಜ್ಞಾನಿಗಳು ಗ್ರಹಿಸಿದ್ದಾರೆ. ಕೆಲವರು ಕ್ವಾಟ-ಕುಂದಾಪ್ರ ಕನ್ನಡವನ್ನು ಹೋಯ್ಕ್-ಬರ್ಕ್ ಭಾಷೆ ಎಂದು ಪಚಾಯಿಸುವುದೂ ಉಂಟು. ಈ ಭಾಷೆಯಲ್ಲಿನ ಸುಮಾರು ಸಾವಿರ ಜನಪದ ಚಾಟೂಕ್ತಿ (ಚತುರ ಉಕ್ತಿ)ಗಳನ್ನು ತಮ್ಮ ಸಂಶೋಧನೆಯಲ್ಲಿ ಸಂಗ್ರಹಿಸಿದವರು ದಿವಂಗತ ಡಾ. ಪಾರಂಪಳ್ಳಿ ನರಸಿಂಹ ಮಯ್ಯ. ಇವರ ಪುತ್ರ ಮಂಥನ್ ಮಯ್ಯ ಆಯ್ದ ಕೆಲವು ಚಾಟೂಕ್ತಿಗಳನ್ನು ಮೊಬೈಲ್ ಅಪ್ಲಿಕೇಶನ್ ರೂಪದಲ್ಲಿ ಜನರಿಗೆ ಪರಿಚಯಿಸಿದ್ದಾರೆ.ಒಂದು ಅಂದಾಜಿನ ಪ್ರಕಾರ ಕುಂದಾಪ್ರ ಕನ್ನಡ ಭಾಷಿಕರ ಸಂಖ್ಯೆ ಹತ್ತು ಲಕ್ಷ ಇರಬಹುದಾದರೂ ಕಾಲಕ್ರಮೇಣ ಇದರ ಬಳಕೆ ಕಡಿಮೆಯಾಗುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿ ಭಾಷೆಯ ಜೀವಂತಿಕೆಯನ್ನು ಪೋಷಿಸುವುದು ಹೇಗೆ ಎನ್ನುವ ಕುತೂಹಲದಿಂದ ಕುಂದಾಪ್ರ ಚಾಟೂಕ್ತಿ ಎನ್ನುವ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿರುವ ಮಂಥನ್ ಮಯ್ಯರೊಂದಿಗೆ ನಾವು ನಡೆಸಿದ ಮಾತುಕತೆ ಅರಳಿಕಟ್ಟೆಯ ಹದಿನೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-07-261h 46AraliKatte ಅರಳಿಕಟ್ಟೆAraliKatte ಅರಳಿಕಟ್ಟೆE16: A few mental models to understand the world Part 1/2, ಕೆಲವು ಉಪಯುಕ್ತ ಮಾನಸಿಕ ಮಾದರಿಗಳು ಭಾಗ ೧/೨ಅರಳಿಕಟ್ಟೆಯ ಹದಿನಾರನೆಯ ಸಂಚಿಕೆಯಲ್ಲಿ ನಾವು ಜಗತ್ತನ್ನು ನೋಡಲು, ಅರ್ಥ ಮಾಡಿಕೊಳ್ಳಲು ಇರುವ ಕೆಲವು ಉಪಯುಕ್ತ ಮಾನಸಿಕ ಮಾದರಿಗಳನ್ನು ಚರ್ಚಿಸಿದ್ದೇವೆ. ಏನೂ ತಿಳಿದಿರದ ಜನರು ಏಕೆ ತಮ್ಮನ್ನು ತಾವು ಬುದ್ಧಿವಂತರು ಎಂದು ಭಾವಿಸುತ್ತಾರೆ? ಸರಾಸರಿ ನಾಲ್ಕು ಅಡಿ ಆಳವಿರುವ ನದಿಯನ್ನು ನೀವು ದಾಟಬಹುದೇ? ಸಿಂಪ್ಸನ್ಸ್ ಪ್ಯಾರಡಾಕ್ಸ್ ಎಂದರೇನು? ತಥ್ಯ, ಚಾರ್ಟುಗಳನ್ನು ಬಳಸಿ ಸುಳ್ಳನ್ನು ಹೇಳಲು ಸಾಧ್ಯವೇ? ಇವೇ ಮೊದಲಾದ ಕುತೂಹಲಕಾರಿ ವಿಷಯಗಳನ್ನು ಚರ್ಚಿಸಿದ್ದೇವೆ.ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-07-1956 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆE15: A doctor working in conflict zones Part 2/2 - ಗಡಿಯಿಲ್ಲದ ವೈದ್ಯರು ಅಂತಿಮ ಭಾಗಸಿರಿಯಾ, ಯೆಮೆನ್, ಅಫಘಾನಿಸ್ಥಾನ, ಭಾರತದೊಳಗಿನ ಕಾಶ್ಮೀರ, ಮಣಿಪುರ, ಛತ್ತೀಸ್ ಘಡ ಮೊದಲಾದ ಸಂಘರ್ಷಮಯ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಗಳನ್ನು ಒದಗಿಸುವ ಗಡಿಗಳಿಲ್ಲದ ವೈದ್ಯರು ಸಂಸ್ಥೆಯಲ್ಲಿ ಕೆಲಸ ಮಾಡುವ ವೈದ್ಯ ಡಾ. ಹಿಮಾಂಶು ಅಕ್ಕಮಹಾದೇವಿಯವರೊಂದಿಗಿನ ಮಾತುಕತೆಯ ಎರಡನೆಯ ಭಾಗ ಅರಳಿಕಟ್ಟೆಯ ಹದಿನೈದನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.ಈ ಸಂಚಿಕೆಯಲ್ಲಿ ನಾವು ರೆಡ್ ಕ್ರಾಸ್ ನಿಂದ ಎಂ ಎಫ್ ಎಸ್ (ಮೆಡಿಸಿನ್ ಸಾನ್ ಫ್ರಾಂಟಿಯೇರ್) ಹೇಗೆ ಭಿನ್ನ, ಸಂಸ್ಥೆ ಶುರುವಾದದ್ದು ಹೇಗೆ, ಅದು ಹೇಗೆ ಕೆಲಸ ಮಾಡುತ್ತದೆ, ಸಂಘರ್ಷಗಳಿರುವ ಪ್ರದೇಶಗಳಲ್ಲಿ ಕೆಲಸ ಮಾಡುವ ವೈದ್ಯರು ಎದುರಿಸುವ ಸಮಸ್ಯೆಗಳೇನು, ಭಾರತದಲ್ಲಿನ ಹಲವು ಪ್ರದೇಶಗಳಲ್ಲಿ ಕೆಲಸ ಮಾಡಿರುವ ಹಿಮಾಂಶು ಸಂಘರ್ಷಗಳ ಬಗ್ಗೆ ಪಡೆದ ಒಳನೋಟಗಳೇನು ಎಂದು ಚರ್ಚಿಸಿದ್ದೇವೆ.ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಡಾ. ಹಿಮಾಂಶು ಅಕ್ಕಮಹಾದೇವಿ, ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-07-121h 12AraliKatte ಅರಳಿಕಟ್ಟೆAraliKatte ಅರಳಿಕಟ್ಟೆE14: Experience of a doctor working in conflict zones - ಗಡಿಯಿಲ್ಲದ ವೈದ್ಯರುಸಿರಿಯಾ, ಯೆಮೆನ್, ಅಫಘಾನಿಸ್ಥಾನ, ಭಾರತದೊಳಗಿನ ಕಾಶ್ಮೀರ, ಮಣಿಪುರ, ಛತ್ತೀಸ್ ಘಡ ಮೊದಲಾದ ಸಂಘರ್ಷಮಯ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಗಳನ್ನು ಒದಗಿಸುವ ಗಡಿಗಳಿಲ್ಲದ ವೈದ್ಯರು ಸಂಸ್ಥೆಯಲ್ಲಿ ಕೆಲಸ ಮಾಡುವ ವೈದ್ಯ ಡಾ. ಹಿಮಾಂಶು ಅಕ್ಕಮಹಾದೇವಿ ಅರಳಿಕಟ್ಟೆಯ ಹದಿನಾಲ್ಕನೆಯ ಸಂಚಿಕೆಯಲ್ಲಿ ನಮ್ಮೊಂದಿಗಿದ್ದಾರೆ.ಈ ಸಂಚಿಕೆಯಲ್ಲಿ ನಾವು ರೆಡ್ ಕ್ರಾಸ್ ನಿಂದ ಎಂ ಎಫ್ ಎಸ್ (ಮೆಡಿಸಿನ್ ಸಾನ್ ಫ್ರಾಂಟಿಯೇರ್) ಹೇಗೆ ಭಿನ್ನ, ಸಂಸ್ಥೆ ಶುರುವಾದದ್ದು ಹೇಗೆ, ಅದು ಹೇಗೆ ಕೆಲಸ ಮಾಡುತ್ತದೆ, ಸಂಘರ್ಷಗಳಿರುವ ಪ್ರದೇಶಗಳಲ್ಲಿ ಕೆಲಸ ಮಾಡುವ ವೈದ್ಯರು ಎದುರಿಸುವ ಸಮಸ್ಯೆಗಳೇನು, ಭಾರತದಲ್ಲಿನ ಹಲವು ಪ್ರದೇಶಗಳಲ್ಲಿ ಕೆಲಸ ಮಾಡಿರುವ ಹಿಮಾಂಶು ಸಂಘರ್ಷಗಳ ಬಗ್ಗೆ ಪಡೆದ ಒಳನೋಟಗಳೇನು ಎಂದು ಚರ್ಚಿಸಿದ್ದೇವೆ.ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಡಾ. ಹಿಮಾಂಶು ಅಕ್ಕಮಹಾದೇವಿ, ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Note: Views expressed by the guest are personal, cannot be attributed to the employer.Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-07-051h 05AraliKatte ಅರಳಿಕಟ್ಟೆAraliKatte ಅರಳಿಕಟ್ಟೆE13: Frog loving conservationists final part - ಕಪ್ಪೆ ಪ್ರಿಯ ಪರಿಸರವಾದಿಗಳು ಅಂತಿಮ ಭಾಗಹುಲಿ, ಆನೆಯಂತಹ ದೊಡ್ಡ ಪ್ರಾಣಿಗಳ ಜೀವ ಪರಿಸರ ಶಾಸ್ತ್ರವನ್ನು ಅಧ್ಯಯನ ಮಾಡುವವರು ಅನೇಕರಿದ್ದಾರೆ. ಆದರೆ ಕಪ್ಪೆಗಳಂತಹ ಸಣ್ಣ ಜೀವಿಗಳ ಪರಿಸರವನ್ನು ಅಧ್ಯಯನ ಮಾಡುವುದರಿಂದ ನಾವು ಪರಿಸರದಲ್ಲಿನ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ನಂಬಿರುವ ಎಕಾಲಜಿಸ್ಟ್ ದಂಪತಿ ಗುರುರಾಜ್ ಹಾಗೂ ಪ್ರೀತಿಯವರ ಜತೆಗಿನ ನಮ್ಮ ಮಾತುಕತೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ಹದಿಮೂರನೆಯ ಸಂಚಿಕೆಯಲ್ಲಿ ನಿಮ್ಮೆದುರಿಗಿದೆ.Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-06-211h 05AraliKatte ಅರಳಿಕಟ್ಟೆAraliKatte ಅರಳಿಕಟ್ಟೆE12: Frog loving conservationists - ಕಪ್ಪೆ ಪ್ರಿಯ ಪರಿಸರವಾದಿಗಳು (Part1/2)ಹುಲಿ, ಆನೆಯಂತಹ ದೊಡ್ಡ ಪ್ರಾಣಿಗಳ ಜೀವ ಪರಿಸರ ಶಾಸ್ತ್ರವನ್ನು ಅಧ್ಯಯನ ಮಾಡುವವರು ಅನೇಕರಿದ್ದಾರೆ. ಆದರೆ ಕಪ್ಪೆಗಳಂತಹ ಸಣ್ಣ ಜೀವಿಗಳ ಪರಿಸರವನ್ನು ಅಧ್ಯಯನ ಮಾಡುವುದರಿಂದ ನಾವು ಪರಿಸರದಲ್ಲಿನ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ನಂಬಿರುವ ಎಕಾಲಜಿಸ್ಟ್ ದಂಪತಿ ಗುರುರಾಜ್ ಹಾಗೂ ಪ್ರೀತಿಯವರ ಜತೆಗಿನ ನಮ್ಮ ಮಾತುಕತೆಯ ಮೊದಲನೆಯ ಭಾಗ ಅರಳಿಕಟ್ಟೆಯ ಹನ್ನೆರಡನೆಯ ಸಂಚಿಕೆಯಲ್ಲಿ ನಿಮ್ಮೆದುರಿಗಿದೆ.Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-06-211h 00AraliKatte ಅರಳಿಕಟ್ಟೆAraliKatte ಅರಳಿಕಟ್ಟೆE11: Experiences of a teacher - ಮೇಷ್ಟ್ರೊಬ್ಬರ ಅನುಭವಗಳುಈ ಸಂಚಿಕೆಯಲ್ಲಿ ಬೆಂಗಳೂರಿನ ಶಾಲೆಯೊಂದರಲ್ಲಿ ಶಿಕ್ಷಕರಾಗಿರುವ ಅರುಣ್ ಎಲ್ ನಮ್ಮೊಂದಿಗಿದ್ದಾರೆ.ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಅರುಣ್ ಏಲ್, ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Recording date: 15 June 2020Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-06-141h 28AraliKatte ಅರಳಿಕಟ್ಟೆAraliKatte ಅರಳಿಕಟ್ಟೆE10: A conflict of visions by Thomas Sowell - ಥಾಮಸ್ ಸಾವೆಲ್ ರ ದರ್ಶನಗಳ ಸಂಘರ್ಷಅಮೇರಿಕಾದ ಸ್ಟಾನ್ಫರ್ಡ್ ವಿಶ್ವವಿದ್ಯಾಲಯದ ಹೂವರ್ ಪ್ರತಿಷ್ಠಾನದಲ್ಲಿ ಪ್ರಾಧ್ಯಾಪಕರಾಗಿರುವ ಥಾಮಸ್ ಸಾವೆಲ್ ರ ದರ್ಶನಗಳ ಸಂಘರ್ಷ ಕೃತಿಯ ವಿಚಾರಗಳನ್ನು ಈ ವಾರದ ಅರಳಿಕಟ್ಟೆ ಸಂಚಿಕೆಯಲ್ಲಿ ಚರ್ಚಿಸಿದ್ದೇವೆ.ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Recording date: 7 June 2020Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-06-071h 28AraliKatte ಅರಳಿಕಟ್ಟೆAraliKatte ಅರಳಿಕಟ್ಟೆEp09: Experiences of a Solo traveller - ಒಂಟಿ ಪ್ರವಾಸದ ಅನುಭವಗಳುಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಕಾಂತಿ ಹೆಗಡೆ, ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Recording date: 24 May 2020Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-05-311h 14AraliKatte ಅರಳಿಕಟ್ಟೆAraliKatte ಅರಳಿಕಟ್ಟೆE08: Yuval Noah Harari's Sapiens - ಯುವಾಲ್ ನೋಹ ಹರಾರಿ ಪುಸ್ತಕ ಸೇಪಿಯನ್ಸ್ಇಸ್ರೇಲಿನ ಹಿಬ್ರೂ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿರುವ ಯುವಲ್ ನೋಹ ಹರಾರಿಯವರ ಸುಪ್ರಸಿದ್ಧವಾದ ಪುಸ್ತಕ ಸೇಪಿಯನ್ಸ್ ೪೫ ಕ್ಕಿಂತ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ. ಈ ಪುಸ್ತಕದಲ್ಲಿರುವ ವಿಚಾರಗಳನ್ನು ಅರಳಿಕಟ್ಟೆಯ ಈ ಸಂಚಿಕೆಯಲ್ಲಿ ನಾವು ಚರ್ಚೆಗೆ ಎತ್ತಿಕೊಂಡಿದ್ದೇವೆ.ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಸುನೀಲ್ ದಾಸಪ್ಪನವರ್, ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-05-241h 36AraliKatte ಅರಳಿಕಟ್ಟೆAraliKatte ಅರಳಿಕಟ್ಟೆE07: Indian ancient financial systems - ಭಾರತದ ಪ್ರಾಚೀನ ಹಣಕಾಸು ಪದ್ಧತಿಗಳುವ್ಯಾಸಂಗದಲ್ಲಿ ಮೆಕಾನಿಕಲ್ ಇಂಜಿಯರ್, ವೃತ್ತಿಯಲ್ಲಿ ವರ್ತಕರು, ಪ್ರವೃತ್ತಿಯಲ್ಲಿ ಇತಿಹಾಸ ಪ್ರಿಯರು, ಟಿಪ್ಪು ಸುಲ್ತಾನನ ಆಳ್ವಿಕೆಯ ಕುರಿತು ಆಳವಾಗಿ ಸಂಶೋಧನೆ ಮಾಡಿರುವ ನಿತಿನ್ ಜಾರ್ಜ್ ಓಲಿಕಾರ ಈ ಸಂಚಿಕೆಯ ಅರಳಿಕಟ್ಟೆ ಪಾಡ್ ಕಾಸ್ಟಿನಲ್ಲಿ ನಮ್ಮೊಂದಿಗಿದ್ದಾರೆ.ಮಾರ್ವಾಡಿ, ಚೆಟ್ಟಿಯಾರ್, ಮುಲ್ತಾನಿ, ಸಿಂಧಿ, ಶೆಟ್ಟಿ ಮುಂತಾದ ಜನಾಂಗಗಳು ಪ್ರಾಚೀನ ಭಾರತದಲ್ಲಿನ ಹಣಕಾಸು ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಿದ್ದು ಹೇಗೆ? ಅವರ ಪ್ರಭಾವ ಎಷ್ಟರ ಮಟ್ಟಿಗೆ ಆವರಿಸಿತ್ತು?ಹಣಕಾಸು, ಲೇವಾದೇವಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೇವಲ ಕೆಲವು ಜಾತಿಯ ಜನರು ತೊಡಗಿಸಿಕೊಂಡಿದ್ದು ಭಾರತಕ್ಕೆ ವಿಶಿಷ್ಟವಾದ ವಿಚಾರವೇ ಅಥವಾ ಜಗತ್ತಿನ ಬೇರೆ ಪ್ರದೇಶಗಳಲ್ಲೂ ನಾವು ಈ ಬಗೆಯ ಪ್ರಭಾವವನ್ನು ಕಾಣಬಹುದೇ?--- Send in a voice message: https://anchor.fm/aralikatte/message2020-05-171h 13AraliKatte ಅರಳಿಕಟ್ಟೆAraliKatte ಅರಳಿಕಟ್ಟೆE06: About regional and world cinema - ಪ್ರಾದೇಶಿಕ ಹಾಗೂ ಜಾಗತಿಕ ಸಿನಿಮಾಅರಳಿಕಟ್ಟೆಯ ಆರನೆಯ ಸಂಚಿಕೆ ನಾವು ಬೆಂಗಳೂರಿನ ಸುಚಿತ್ರ ಫಿಲಂ ಸೊಸೈಟಿಯ ಸದಸ್ಯರಾದ ಹರೀಶ್ ಮಲ್ಯರೊಂದಿಗೆ ಸಿನೆಮ ಕುರಿತ ಮಾತುಕತೆಗೆ ಮೀಸಲಿಟ್ಟಿದ್ದೇವೆ.೨೦೦೦ ರ ಆಸುಪಾಸಿನಲ್ಲಿ ಜಾಗತಿಕ ಸಿನಿಮಾಸಕ್ತರು ಚಿತ್ರಮಂದಿರಗಳಿಗಿಂತ ಹೆಚ್ಚಾಗಿ ಬೆಂಗಳೂರಿನ ನ್ಯಾಶನಲ್ ಮಾರ್ಕೇಟಿಗೆ ಎಡತಾಕುತ್ತಿದ್ದುದರ ಉದ್ದೇಶವೇನು? 'ಫಾರಿನ್ ಫಿಲಂ'ಗಳನ್ನು ಅರಸಿಕೊಂಡು ನ್ಯಾಶನಲ್ ಮಾರುಕಟ್ಟೆಗೆ ಹೋಗಿದ್ದ ಮುಕುಂದ್ ರ ಮಜವಾದ ಅನುಭವ ಹೇಗಿತ್ತು?ಕೇರಳ, ತಮಿಳುನಾಡು, ಕಲ್ಕತ್ತಾದಲ್ಲಿರುವ ಸಿನೆಮಾ ಸಂಸ್ಕೃತಿ ಕನ್ನಡದಲ್ಲಿ ಕಾಣದಿರುವುದಕ್ಕೂ ಸಿಲಿಕಾನ್ ವ್ಯಾಲಿಗೂ ಏನು ಸಂಬಂಧ. ಆಟೋ ರಿಕ್ಷಾ ಡ್ರೈವರಿಗೆ ಕುವೆಂಪು ಗೊತ್ತು ಆದರೆ ಕಾಸರವಳ್ಳಿ ಗೊತ್ತಿಲ್ಲ, ಇದನ್ನ ಹೇಗೆ ತಿದ್ದುವುದು? ಸಿನಿಮಾವೊಂದನ್ನು ನಿರ್ಮಿಸುವುದಕ್ಕೆ ಕನಿಷ್ಠ ೭೫ ಲಕ್ಷದಿಂದ ಒಂದು ಕೋಟಿ ರುಪಾಯಿಗಳ ಹೂಡಿಕೆ ಬೇಕು. ನಾವು ಅತಿ ಸಣ್ಣ ಬಜೆಟ್ಟಿನಲ್ಲಿ ಸಿನಿಮಾ ಮಾಡುತ್ತೀವಿ ಎನ್ನುವುದು ಕೇವಲ ಕನಸಿನ ಕುದುರೆಯೇ? ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಹರೀಶ್ ಮಲ್ಯ, ಮುಕುಂದ್ ಸೆತ್ಲೂರ್ , ವಾಸುಕಿ ರಾಘವನ್ ಹಾಗೂ ಸುಪ್ರೀತ್ ಕೆ ಎಸ್.Recording date: 10 May 2020Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-05-101h 59AraliKatte ಅರಳಿಕಟ್ಟೆAraliKatte ಅರಳಿಕಟ್ಟೆE05: Ideas in Scott Adam's Loser Think - ಕಾರ್ಟೂನಿಸ್ಟ್ ಸ್ಕಾಟ್ ಆಡಮ್ಸ್ ರ ಲೂಸರ್ ಥಿಂಕ್ ಪುಸ್ತಕದ ಕೆಲವು ವಿಚಾರಗಳುನೂರು ಹಗ್ಗಗಳನ್ನ ಹಾವು ಅಂದುಕೊಂಡರೆ ಯಾವುದೇ ನಷ್ಟವಿಲ್ಲ ಆದರೆ ಒಂದು ಹಾವನ್ನು ಹಗ್ಗ ಎಂದು ಭಾವಿಸಿದರೆ ಅದು ಪ್ರಾಣಾಘಾತುಕವಾದೀತು ಎನ್ನುವ ಮನುಷ್ಯ ವಿಕಾಸದ ತಥ್ಯಕ್ಕೂ ಅರ್ನಬ್ ಗೋಸ್ವಾಮಿಯ ಬಫೆ ಮಾದರಿಯ ಪ್ಯಾನಲ್ ಚರ್ಚೆಗೂ ಏನು ಸಂಬಂಧ?ಪ್ರತಿ ತಲೆಮಾರಿನ ಹಿರಿಯರು ತಮ್ಮ ಬಾಲ್ಯದ ಅಥವಾ ಯೌವನದ ದಿನಗಳು ಸ್ವರ್ಣಯುಗ, ಆ ಯುಗದ ಸಂಗೀತ, ಹಾಡುಗಳು, ಸಿನೆಮಾಗಳು, ಜೀವನ ಪದ್ಧತಿಯೇ ಶ್ರೇಷ್ಠ ಎಂದು ಭಾವಿಸುವುದರಲ್ಲಿ ಸತ್ಯ ಎಷ್ಟಿದೆ?ಆಫೀಸಿನ ಮೀಟಿಂಗುಗಳಲ್ಲಿ, ಫೇಸ್ ಬುಕ್ಕಿನ ಚರ್ಚೆಗಳಲ್ಲಿ ಕೆಲವೊಮ್ಮೆ ದಡ್ದತನ ನಟಿಸುವುದು ನಿಜಕ್ಕೂ ಜಾಣತನ ಎಂದು ಸ್ಕಾಟ್ ಆಡಮ್ಸ್ ಹೇಳುವುದರ ಹಿಂದಿನ ತರ್ಕವೇನು?ಸಾಮಾಜಿಕ ತಾಣಗಳಲ್ಲಿ ನಾವು ರಾಜಕೀಯ, ಸಾಮಾಜಿಕ ವಿಷಯಗಳನ್ನ ಚರ್ಚೆ ಮಾಡುವಾಗ ನಿಜಕ್ಕೂ ಸತ್ಯವನ್ನು ಅರಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವಾ ಅಥವಾ ನಾವು ಓದುವ ಪತ್ರಿಕೆ, ನೋಡುವ ಸುದ್ದಿ ಮಾಧ್ಯಮದಿಂದ ಅಂಟಿಸಿಕೊಂಡ ಅಭಿಪ್ರಾಯಗಳನ್ನು ಇನ್ನೊಬ್ಬರಿಗೆ ದಾಟಿಸುತ್ತೇವಾ?ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಮುಕುಂದ್ ಸೆತ್ಲೂರ್ , ವಾಸುಕಿ ರಾಘವನ್ ಹಾಗೂ ಸುಪ್ರೀತ್ ಕೆ ಎಸ್ .Recording date: 03 May 2020Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-05-031h 36AraliKatte ಅರಳಿಕಟ್ಟೆAraliKatte ಅರಳಿಕಟ್ಟೆE04: Regulating tech companies - ತಂತ್ರಜ್ಞಾನ ಕಂಪನಿಗಳ ನಿಯಂತ್ರಣಫೇಸ್ ಬುಕ್ಕಿನ ಮಾರ್ಕ್ ಜುಕರ್ ಬರ್ಗ್ ನಲವತ್ತು ಮೂರುವರೆ ಸಾವಿರ ಕೋಟಿ ರೂಪಾಯಿಗಳನ್ನ ಅಂಬಾನಿಯ ರಿಲಾಯನ್ಸ್ ಜಿಯೋನಲ್ಲಿ ಹೂಡಿರುವುದು ಅರಕಲಗೂಡಿನ ದಿನಸಿ ಅಂಗಡಿಯ ಮೇಲೆ ಯಾವ ಪರಿಣಾಮ ಬೀರಬಹುದು?ಅಮೇಜಾನ್ ಕಂಪನಿ ಎಷ್ಟೋ ವರ್ಷಗಳಿಂದ ತೆರಿಗೆಯನ್ನೇ ಕಟ್ಟಿಲ್ಲ ಎನ್ನುವ ದೂರು ಎಷ್ಟು ಮಟ್ಟಿಗೆ ಸತ್ಯ?ಅಮೇರಿಕಾ, ಯುರೋಪಿನಲ್ಲಿ ಇರುವಂತೆ ಭಾರತದಲ್ಲಿ ರೆಗುಲೇಟರಿ ಸಿಸ್ಟಂ ಇದೆಯೇ?ದೊಡ್ಡ ಕಂಪೆನಿ, ಯಶಸ್ವಿ ಉದ್ದಿಮೆ, ಶ್ರಮಿಕ ಉದ್ಯಮಿಗಳ ಕುರಿತು ಹೆಚ್ಚಿನ ಜನರಿಗೆ ಇರುವ ರೇಜಿಗೆ, ಸಿಟ್ಟಿಗೆ ಇರುವ ಕಾರಣಗಳೇನು? ಇವು ಪ್ರಜಾಪ್ರಭುತ್ವವೊಂದರಲ್ಲಿ ರಾಜಕಾರಣಿಗಳಿಗೆ, ಹೋರಾಟಗಾರರಿಗೆ, ಪಾಲಿಸಿ ಬರೆಯುವವರಿಗೆ ಹಾಗೂ ಪತ್ರಕರ್ತರಿಗೆ ಯಾವ ರೀತಿಯ ಇನ್ಸೆಂಟೀವ್ ಗಳನ್ನು ಸೃಷ್ಟಿಸುತ್ತೆ?ಆಸ್ಟ್ರೇಲಿಯ, ಫ್ರಾನ್ಸಿನಲ್ಲಿ ಗೂಗಲ್ ವಿರುದ್ಧ ಸುದ್ದಿ ಮಾಧ್ಯಮ ಕಂಪೆನಿಗಳು ನಡೆಸುತ್ತಿರುವ ಹಣಾಹಣಿಗೂ ಐಪಿಎಲ್ ಗೂ ಎತ್ತಣಿಂದ ಸಂಬಂಧ?ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಮುಕುಂದ್ ಸೆತ್ಲೂರ್ ಹಾಗೂ ಸುಪ್ರೀತ್ ಕೆ ಎಸ್ .Recording date: 26 April 2020Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-04-261h 05AraliKatte ಅರಳಿಕಟ್ಟೆAraliKatte ಅರಳಿಕಟ್ಟೆE03: Universal Basic Income - ಸಾರ್ವತ್ರಿಕ ಮೂಲ ಆದಾಯಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಮುಕುಂದ್ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸುಪ್ರೀತ್ ಕೆ ಎಸ್.Recording date: 19 April 2020Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-04-191h 09AraliKatte ಅರಳಿಕಟ್ಟೆAraliKatte ಅರಳಿಕಟ್ಟೆE02: COVID impact in Italy, a Kannadiga's perspective - ಇಟಲಿ ಕನ್ನಡಿಗ ಕಂಡ ಕೋವಿದ್ ಪರಿಣಾಮಗಳುಇಟಲಿಯ ಮಿಲಾನ್ ನಲ್ಲಿ ವಾಸವಿರುವ ಕನ್ನಡಿಗ ಕಿರಣ್ ಕುಮಾರ್ ದಿನನಿತ್ಯದ ಜೀವನದ ಮೇಲೆ ಕೋವಿದ್ ಬೀರಿರುವ ಪರಿಣಾಮಗಳನ್ನು ನಮ್ಮೊಂದಿಗೆ ಚರ್ಚಿಸಿದ್ದಾರೆ.Recording date: 11 April 2020Credits:Music : Crescents by Ketsa Licensed under creative commons.Icon made by Freepik from www.flaticon.com--- Send in a voice message: https://anchor.fm/aralikatte/message2020-04-1153 minAraliKatte ಅರಳಿಕಟ್ಟೆAraliKatte ಅರಳಿಕಟ್ಟೆE01: Short and long term effects of COVID lockdown| ಕೋವಿದ್ ಬಿಕ್ಕಟ್ಟಿನ ಅಲ್ಪ ಹಾಗೂ ದೀರ್ಘಾವಧಿಯ ಪರಿಣಾಮಗಳುಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಮುಕುಂದ್ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸುಪ್ರೀತ್ ಕೆ ಎಸ್ .  Credits:Music : Crescents by Ketsa Licensed under creative commons. Icon made by Freepik from www.flaticon.com--- Send in a voice message: https://anchor.fm/aralikatte/message2020-04-041h 14