podcast
details
.com
Print
Share
Look for any podcast host, guest or anyone
Search
Showing episodes and shows of
Girish Chandra Ananthanarayana
Shows
Mankutimmana Kagga
Mukundamala Stotra
Mukunda mAla stotram: Gita-God-Hinduism: MukundamAla Stotram
2021-10-18
21 min
Mankutimmana Kagga
Mankutimmana Kagga - 84
ಅಣು ಭೂತ ಭೂಗೋಳ ತಾರಾಂಬರಾದಿಗಳ | ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ || ಕುಣಿಸುತಿರುವನು ತನ್ನ ಕೃತಿಕಂತುಕವನದರೊ|| ಳಣಗಿರ್ದು ಪರಬೊಮ್ಮ – ಮಂಕುತಿಮ್ಮ || 84 ಅಣು = ಅತ್ಯನ್ತ ಸಣ್ಣದಾದದ್ದು ಭೂತ = (ಇಲ್ಲಿ) ಬೃಹತ್ತಾದದು, ತಾರಾಂಬರಾದಿಗಳ = ನಕ್ಷತ್ರ ಗಗನಗಳು, ಅಣಿಮಾಡಿ = ಸಿದ್ಧಪಡಿಸಿ, ಬಿಗಿದು = ಒಂದು ಸೂತ್ರದಲ್ಲಿ ಬಂದಿಸಿ, ನಸು = ಸ್ವಲ್ಪ, ಸಡಿಲವನುಮಿರಿಸಿ = ಸಡಿಲವನು ಇರಿಸಿ, ಕೃತಿಕಂತುಕವನದರೊಳಣಗಿರ್ದು= ಅವನು ಮಾಡಿದ ಈ ಸೃಷ್ಟಿಯೆಂಬ ಚೆಂಡಿನೊಳಗೆ ತಾನೂ ಸೇರಿಕೊಂಡು.
2021-08-04
07 min
Mankutimmana Kagga
Mankutimmana Kagga - 361
ಧಾರಿಣಿಯ ವಾಸಿಗಳ್ಗಿಹುದೊಂದು ಹಿತವಾರ್ತೆ | ಆರವ್ಯುದಾರ್ತರ್ ಅತ್ಯಾರ್ತರಾಪದವ॥ ರೌರವಿಗೆ ಹಿತ ಮಹಾರೌರವಿಯ ಗೋಳುದನಿ । ನಾರಕದೊಳದುಪಾಯ – ಮಂಕುತಿಮ್ಮ ॥ 361 ವಾಸಿಗಳ್ಗಿಹುದೊಂದು = ವಾಸಿಗಳಿಗೆ+ಇಹುದು+ಒಂದು, ಆರವ್ಯುದಾರ್ತರ್ = ಆರವ್ಯುದು+ಆರ್ತರ್, ಅತ್ಯಾರ್ತರಾಪದವ = ಅತಿ+ಆರ್ತರ+ಆಪದವ, ನಾರಕದೊಳುದುಪಾಯ= ನಾರಕದೊಳು+ಅದು+ಉಪಾಯ. ಧಾರಿಣಿ = ಭೂಮಿ, ಜಗತ್ತು, ಆರವ್ಯುದು = ವಿಚಾರಮಾಡುವುದು,ಆರ್ತರ್=ಸಂಕಟದಿಂದ ಗೋಳಾಡುವವರು, ಅತ್ಯಾರ್ತರ್= ಅತಿಯಾಗಿ ಗೋಳಾಡುವವರು, ರೌರವಿ=ನರಕದಂತ ಕಷ್ಟ ಅನುಭವಿಸುವವನು, ನಾರಕದೊಳುದುಪಾಯ=ಹಿಂಸೆಯಲ್ಲೂ ಒಂದು ಉಪಾಯ.
2021-07-22
07 min
Mankutimmana Kagga
Mankutimmana Kagga - 451
ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ । ಶೈಲದಚಲತೆಯಿರಲು ಝರಿಯ ವೇಗ ಸೊಗ ।। ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು । ವೈಲಕ್ಷಣದೇ ಚೆಂದ – ಮಂಕುತಿಮ್ಮ ।। 451 ವಿಸ್ತರವಿರಲು=ವಿಸ್ತರವು+ಇರಲು ಶೈಲದಚಲತೆಯಿರಲು=ಶೈಲದ ಅಚಲತೆ+ಇರಲು, ಬಯಲಂತಿರಲು=ಬಯಲಂತೆ+ಇರಲು, ಮನೆಯಚ್ಚುಕಟ್ಟಿಂಬು=ಮನೆಯ+ಅಚ್ಚುಕಟ್ಟು+ಇಂಬು ನೀಲ=ಆಕಾಶ, ಸೊಗ=ಸೊಗಸು-ಚೆಂದ, ಝರಿಯ= ದುಮ್ಮಿಕ್ಕುವ ಜಲಪಾತ, ವೈಲಕ್ಷಣದೇ=ವೈವಿಧ್ಯತೆಯೇ
2021-07-19
06 min
Mankutimmana Kagga
Mankutimmana Kagga - 156
ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ | ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ || ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ | ಬಾಯ ಚಪ್ಪರಿಸುವನು – ಮಂಕುತಿಮ್ಮ || 156 ಈಯವನಿಯೊಲೆಯೊಳೆಮ್ಮಯ = ಈ + ಅವನಿ + ಒಲೆಯೊಳು + ಎಮ್ಮಯ// ಬಾಳನಟ್ಟು = ಬಾಳನು + ಅಟ್ಟು
2021-07-18
07 min
Mankutimmana Kagga
Mankutimmana Kagga - 535
ನೀರ ನೆರೆ ತನ್ನೆದುರಿನಣೆಕಟ್ಟನೊಡೆಯುವುದು । ಊರನದು ಕೊಚ್ಚುವುದು ಬದಿಯ ಕಟ್ಟದಿರೆ ।। ಏರಿಗಳನಿಕ್ಕೆಲದಿ ನಿಲಿಸೆ ಹರಿಯುವುದು ಸಮನೆ । ಪೌರುಷದ ನದಿಯಂತು – ಮಂಕುತಿಮ್ಮ ।। 535 ।। ತನ್ನೆದುರಿನಣೆಕಟ್ಟನೊಡೆಯುವುದು – ತನ್ನ+ಎಂದುರಿನ+ಅಣೆಕಟ್ಟನ್ನು+ಒಡೆಯುವುದು, ಊರನದು = ಊರನ್ನು+ಅದು, ಕಟ್ಟದಿರೆ=ಕಟ್ಟದೆ+ಇರೆ, ಏರಿಗಳನಿಕ್ಕೆಲದಿ =ಏರಿಗಳನು+ಇಕ್ಕೆಲದಿ,ನದಿಯಂತು=ನದಿಯು+ಅಂತು, ನೆರೆ=ಪ್ರವಾಹ, ಬದಿಯ=ಪಕ್ಕದ, ಇಕ್ಕೆಲದಿ=ಎರಡೂ ಕಡೆ, ನಿಲಿಸೆ=ನಿಲ್ಲಿಸಲು, ಪೌರುಷದ=ಶಕ್ತಿಯ
2021-07-13
07 min
Mankutimmana Kagga
Mankutimmana Kagga -132-131
ರಾಮನುಚ್ವಾಸವಲೆದಿರದೆ ರಾವಣನೆಡೆಗೆ | ರಾಮನುಂ ದಶಕಂಠನೆಲರನುಸಿರಿರನೆ || ರಾಮರಾವಣರಿಸಿರ್ಗಳಿಂದು ನಮ್ಮೊಳಗಿರವೇ? | ಭೂಮಿಯಲಿ ಪೋಸತೇನೋ ? – ಮಂಕುತಿಮ್ಮ || 132 || ರಾಮನುಚ್ವಾಸವಲೆದಿರದೆ = ರಾಮನ + ಉಚ್ವಾಸವು+ ಅಲೆದಿರದೆ// ರಾವಣನೆಡೆಗೆ = ರಾವಣನ ಎಡೆಗೆ//ದಶಕಂಠನೆಲರನುಸಿರಿರನೆ = ದಶ + ಕಂಠನ + ಎಲರನು+ ಉಸಿರಿರನೆ// ರಾಮರಾವಣರುಸಿರ್ಗಳಿಂದು = ರಾಮ + ರಾವಣರ + ಉಸಿರುಗಳು + ಇಂದು // ನಮ್ಮೊಳಗಿರವೇ = ನಮ್ಮೊಳಗೇ + ಇರವೇ // ಪೋಸತೇನೋ = ಪೊಸತು + ಏನೋ ಎಲರನು = ಗಾಳಿಯನು // ಉಚ್ವಾಸವು = ಶ್ವಾಶದ ಗಾಳಿ // ಪೋಸತೇನೋ = ಹೊಸದೇನೋ? ಪುಲಿಸಿಂಘದುಚ್ವಾಸ, ಹಸು ಹುಲ್ಲೆ ಹಯದುಸಿರು | ಹುಳು ಹಾವಿಲಿಯಸುಯ್ಲು, ಹಕ್ಕಿ ಹದ್ದುಯ್ಲು || ಕಲೆತಿರ್ಪುವೀಯಲ್ಲ ನಾಮುಸಿರ್ವೆಲರಿನಲಿ | ಕಲಬೆರಕೆ ಜಗದುಸಿರು – ಮಂಕುತಿಮ್ಮ || 131
2021-07-10
06 min
Mankutimmana Kagga
Manktuimmana Kagga - 771
ನೀರಧಿ ಬ್ರಹ್ಮ, ನೀರ್ಗಲ್ ಜೀವವೆನುತೊಂದು । ಕ್ಷೀರವದು, ಘೃತವಿದ-ದರೊಳ-ಗೆನ್ನುತೊಂದು ।। ಕೀರು ಪರಮಾನ್ನವದು, ದ್ರಾಕ್ಷಿಯಿದೆನುತ್ತೊಂದು । ಮೂರಿಂತು ಮತವಿವರ – ಮಂಕುತಿಮ್ಮ ।। 771
2021-07-09
06 min
Mankutimmana Kagga
Mankutimmana Kagga - 27
ಧರೆಯ ಬದುಕೇನದರ ಗುರಿಯೇನು ಫಲವೇನು? I ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ II ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ I ನರನು ಸಾದಿಪುದೇನು ? – ಮಂಕು ತಿಮ್ಮ II 27 ಧರೆ = ಭೂಮಿ, ಬಳಸು= ಸುತ್ತು, ಪರಿಭ್ರಮಣೆ = ಸುತ್ತಾಟ, ಮೃಗ= ಪ್ರಾಣಿ, ಖಗ = ಪಕ್ಷಿ
2021-07-08
07 min
Mankutimmana Kagga
Mankutimmana Kagga - 113
ಅಣುಸಂಖ್ಯೆಯೆಣಿಸುವನು ವಿಶ್ವದಲಿ ವಿಜ್ಞಾನಿ | ಗುಣಿಸುವನು ಭೂತಶಕ್ತಿಗಳನದರಿಂದೇಂ || ಗಣಿತಸಾಧ್ಯದ ಹಿಂದಗಣ್ಯದ ಮಹತ್ತತ್ವ | ವಣಗಿಹುದು ಮೂಲವದು – ಮಂಕುತಿಮ್ಮ|| 113 ಅಣುಸಂಖ್ಯೆಯೆಣಿಸುವನು = ಅಣುಸಂಖ್ಯೆಯನು + ಎಣಿಸುವನು | ಭೂತಶಕ್ತಿಗಳನದರಿಂದೇಂ = ಭೂತ + ಶಕ್ತಿಗಳನು + ಅದರಿಂದ+ ಏನು| ಗಣಿತಸಾಧ್ಯದ = ಗಣಿತ + ಸಾಧ್ಯದ | ಹಿಂದಗಣ್ಯದ = ಹಿಂದೆ+ ಅಗಣ್ಯದ | ಮಹತತ್ವವಣಗಿಹುದು= ಮಹತತ್ವವವು + ಅನಗಿಹುದು | ಮೂಲವದು = ಮೂಲವು + ಅದು
2021-07-07
07 min
Mankutimmana Kagga
Mankutimmana Kagga - 482
ಗುಹೆಯಡಕೆ, ಗುಹೆ ಬಲಕೆ, ನಡುವೆ ಮಲೆ; ಕಣಿವೆಯಲಿ । ವಿಹರಿಪೆಯ ಹುಲಿ ಬಾರದೆಂದು ನೀಂ ನಚ್ಚಿ? ।। ರಹಸಿಯದ ಭೂತ ಪಿಡಿಯದ ತೆರದಿ ಬದುಕ ನಿ- । ರ್ವಹಿಸುವುದೇ ಜಾಣ್ಮೆಯಲ – ಮಂಕುತಿಮ್ಮ।। 482
2021-07-05
07 min
Mankutimmana Kagga
Mankutimmana Kagga - 678
ಧನ್ಯತಮವಾ ಘಳಿಗೆ, ಪುಣ್ಯತಮವಾ ಘಳಿಗೆ । ನಿನ್ನ ಮಮತೆಯ ನೂಲ ವಿಧಿಯೆ ಪರಿದಂದು ।। ಉನ್ನತಿಯನಾತ್ಮವನು ತಡೆದಿಡುವ ಪಾಶಗಳು । ಛಿನ್ನವಾದಂದೆ ಸೊಗ – ಮಂಕುತಿಮ್ಮ ।। 678
2021-06-24
08 min
Mankutimmana Kagga
Mankutimmana Kagga - 151
ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ | ಜೀವವಾಸನೆಗಳಲಿ ಪೂರ್ವಕೃತವೆನಿಸಿ || ಧೀವರ್ತನೆಯಲಿ ಪೌರುಷವೆನಿಸಿ ಪರಸತ್ವ | ತ್ರೈವಿಧದೊಳಿರುತಿಹುದು – ಮಂಕುತಿಮ್ಮ || 151 ದೈವವೆನಿಸಿರುತೆ = ದೈವ+ಎನಿಸಿ+ ಇರುತೆ// ತ್ರೈವಿಧದೊಳಿರುತಿಹುದು = ತ್ರೈವಿಧದೊಳು + ಇರುತಿಹುದು.
2021-06-24
06 min
Mankutimmana Kagga
Mankutimmana Kagga - 505
ದೈವಕೃಪೆಯನುವುದೇಂ? ಪರಸತ್ವನವವೃಷ್ಟಿ । ಜೀವಗುಣ ಪಕ್ವಪಟ್ಟಂತದರ ವೇಗ ।। ಭಾವಚೋದನೆಗಳಲಿ ಭಾಹ್ಯಸಾಧನೆಗಳಲಿ। ತೀವಿ ದೊರೆಕೊಳುವುದದು – ಮಂಕುತಿಮ್ಮ ।। 505 ದೈವಕೃಪೆಯನುವುದೇಂ=ದೈವಕೃಪೆ+ಎನುವುದು+ಅದೇಂ, ಪಕ್ವಪಟ್ಟಂತದರ=ಪಕ್ವ+ಪಟ್ಟಂತೆ+ಅದರ, ದೊರೆಕೊಳುವುದದು=ದೊರೆ+ಕೊಳುವುದು+ಅದು ಪರಸತ್ವನವವೃಷ್ಟಿ= ಪರಮಾತ್ಮನ ನಿತ್ಯನೂತನ ಕೃಪಾಧಾರೆ, ಭಾವಚೋದನೆ= ಅಂತರಂಗದ ಆಲೋಚನೆಗಳಲ್ಲಿ, ಪಕ್ವಪಟ್ಟಂತೆ=ಅನುಭವಿಗಳಾದಂತೆ ದೊರೆಕೊಳುವು=ಸಿಗುವುದು,
2021-06-23
07 min
Mankutimmana Kagga
Mankutimmana Kagga - 561 - 560 - 559
ಒಂದು ಕಡೆ ಚಿಗುರುತಲಿ, ಒಂದು ಕಡೆ ಬಾಡುತಲಿ । ಕುಂದುತಿರೆ ಕೊಂಬೆ, ಮುಂಡದಲಿ ಹಬ್ಬುತಲಿ ।। ಎಂದೆಂದುಮಶ್ವತ್ತ ಹಳೆಹೊಸದು, ತಾನದಾ । ಸ್ಪಂದನವೋ ಬ್ರಹ್ಮನದು – ಮಂಕುತಿಮ್ಮ || 561 ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ । ತೀವಿರ್ಪುದದು ಕೆಳಗೆ ನಮ್ಮ ಲೋಕದಲ್ಲಿ ।। ನಾವದರ ಕಡ್ಡಿಯೆಲೆ, ಚಿಗುರುವೆವು, ಬಾಡುವೆವು । ಸಾವು ಮರಕೇನಿಲ್ಲ – ಮಂಕುತಿಮ್ಮ।। 560 ಪರಮಪದದಲಿ ನೋಡು; ಬೇರುಗಳ್ ವ್ಯೋಮದಲಿ । ಧರೆಗಿಳಿದ ಕೊಂಬೆರೆಂಬೆಗಳು, ಬಿಳಲುಗಳು ।। ಚಿರಜೀವಿವೃಕ್ಷವಿದು ವಿಶ್ವಜೀವಾಶ್ವತ್ಥ । ಪರಿಕಿಸಿದರರ್ಥವನು – ಮಂಕುತಿಮ್ಮ।। 559
2021-06-17
09 min
Mankutimmana Kagga
Mankutimmana Kagga - 913
ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು । ಕತ್ತಲೆಯ ಮೊಡಕು ಮೂಲೆಗಳ ಸೇರದಿರು ।। ಭಾಸ್ಕರನನುಗ್ರಹವೆ ನೂತ್ನ ಜೀವನಸತ್ವ । ಮೃತ್ಯು ನಿನಗಲ್ಪತೆಯೊ – ಮಂಕುತಿಮ್ಮ ।। 913
2021-06-15
07 min
Mankutimmana Kagga
Mankutimmana Kagga - 762
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ । ಮೇರುವನು ಮರೆತಂದೆ ನಾರಕಕೆ ದಾರಿ ।। ದೂರವಾದೊಡದೇನು ? ಕಾಲು ಕುಂಟಿರಲೇನು । ಊರ ನೆನಪೇ ಬಲವೋ – ಮಂಕುತಿಮ್ಮ ।। 762 ಗುರಿಯಿರಲಿ=ಗುರಿ+ಇರಲಿ, ಮರೆತಂದೆ=ಮರೆತ+ಅಂದೆ,ದೂರವಾದೊಡದೇನು=ದೂರವು+ಆದೊಡೆ+ಏನು, ಕುಂಟಿರಲೇನು=ಕುಂಟು+ಇರಲು+ಏನು ಧಾರುಣಿ=ಭೂಮಿ, ಮೇರು=(ಪರ್ವತ) ಉನ್ನತ, ನಾರಕ=ನರಕ(ಜಗತ್ತಿನ ಕಷ್ಟಭರಿತವಾದ ಜೀವನ )
2021-06-14
08 min
Mankutimmana Kagga
Mankutimmana Kaggaa - 629
ವೈವಿಧ್ಯವೊಂದು ಕೃಪೆ ನಮಗಿರುವ ಕಷ್ಟದಲಿ । ಆವರಿಸದಳಲ್ ಎಲ್ಲರನುಮೊಂದೆ ಸಮಯ ।। ನೋವಿಲ್ಲದವರು ನೊಂದವರನು ಸಂತಯಿಸುತಿರೆ । ಜೀವನವು ಕಡಿದಹುದೆ? – ಮಂಕುತಿಮ್ಮ ।।629
2021-06-10
05 min
Mankutimmana Kagga
Mankutimmana Kagga - 178
ದ್ವೇಷರೋಷಗಳವೊಲೆ ನೇಹಮುಂ ಮೋಹಮುಂ ಪಾಶವಾಗಲ್ಬಹುದು ನಿನಗೆ ಮೈ ಮರೆಸಿ ವಾಸನೆಗಳುರುಬಿ ಚಿತ್ತ ಜ್ವರಗಳಂ ಬಿತ್ತಿ ಮೋಸದಲಿ ಕೊಲ್ಲುವುವೋ – ಮಂಕುತಿಮ್ಮ || 178
2021-06-08
05 min
Mankutimmana Kagga
Mankutimmana Kagga - 616
ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ । ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ।। ಸತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ । ಶಕ್ತಿಯಧ್ಯಾತ್ಮಕದು – ಮಂಕುತಿಮ್ಮ।। 616 ಯುಕ್ತದಿಂದೆರಡುಮಂಚುಗಳೊಂದೆ =ಯುಕ್ತದಿಂದ+ಎರಡುಂ+ಅಂಚುಗಳು+ಒಂದೆ, ಶಕ್ತಿ+ಆಧ್ಯಾತ್ಮಕೆ+ಅದು, ಭುಕ್ತಿಪಥ = ಹೊಟ್ಟೆಪಾಡಿನ ದಾರಿ. ಮುಕ್ತಿಪಥ=ಪರಮಾರ್ಥದ ಹಾದಿ, ಯುಕ್ತದಿಂದ=ಮೂಲ ರೂಪದಿಂದ,
2021-06-07
05 min
Mankutimmana Kagga
Mankutimmana Kagga - 330
ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ । ಚೀಟಿ ತಾಂ ಬೀಳನೆನಲ್ ಆಟ ಸಾಗುವುದೆ? ಏಟಾಯ್ತೆ ಗೆಲುವಾಯ್ತೆಂದೆಂದು ಕೇಳುವುದದೇನು ಆಟದೋಟವೆ ಲಾಭ – ಮಂಕುತಿಮ್ಮ || 330 ಫಲವೇನು? = ಫಲವು + ಏನು?, ಬೀಳನೆನಲ್ = ಬೀಳೆನು+ಎನಲ್, ಏಟಾಯ್ತೆ=ಏಟು+ಆಯ್ತೆ, ಗೆಲುವಾಯ್ತೆಂದೆಂದು = ಗೆಲುವು+ಆಯ್ತೆ+ಎಂದು, ಕೇಳುವುದದೇನು = ಕೇಳುವುದು + ಅದೇನು ಆಟದೋಟವೆ= ಆಟದ+ಓಟವೆ, ಕೌತುಕ = ಕುತೂಹಲ, ಚೀಟಿ = ಇಸ್ಪೀಟಿನ ಎಲೆ,
2021-06-04
08 min
Mankutimmana Kagga
Mankutimmana Kagga - 238
ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ ತನುವಂಗಗಳೊಳೊಂದು ರೂಪ ಗುಣ ಬೇರೆ ಮನದೊಳೊಬ್ಬೊಬ್ಬನೊಂದೊಂದು ಪ್ರಪಂಚವಿಂ ತನುವೇಕದೊಳ್ ಬಹುಳ – ಮಂಕುತಿಮ್ಮ || 238 ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ = ಮನುಜಕುಲ + ಒಂದು +ಒಬ್ಬನು+ಇನೊಬ್ಬನಂತೆ + ಇಲ್ಲ // ತನುವಂಗಗಳೊಳೊಂದು = ತನು+ ಅಂಗಗಳು+ಒಂದು ಮನದೊಳೊಬ್ಬೊಬ್ಬನೊಂದೊಂದು = ಮನದೊಳು+ಒಬ್ಬಬ್ಬನದು+ಒಂದೊಂದು// ಪ್ರಪಂಚವಿಂತನುವೇಕದೊಳ್ = ಪ್ರಪಂಚವು+ ಇಂತು+ಅನುವು+ಏಕದೊಳ್ ಅನುವು+ ಅನೇಕವು//
2021-06-02
04 min
Mankutimmana Kagga
Mankutimmana Kagga - 623
ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ । ವಿಹಿತದ ಸ್ಥಾನದಿಂ ಸಹಜಗುಣಬಲದಿಂ-।। ದಿಹಪರ-ಸಮನ್ವಯದೆ ಸರ್ವಹಿತಸಂಸ್ಥಿತಿಗೆ । ಸಹಕರಿಪುದಲೆ ಧರ್ಮ-ಮಂಕುತಿಮ್ಮ ।। 623
2021-05-31
06 min
Mankutimmana Kagga
Mankutimmana Kagga - 856
ರಾಮಕಾರ್ಮುಕ, ಕೃಷ್ಣಯುಕ್ತಿ, ಗೌತಮಕರುಣೆ । ಭೂಮಿಭಾರವನಿಳುಸೆ ಸಾಲದಾಗಿರಲು ।। ಸಾಮಾನ್ಯರೆನಿತು ತಾಂ ಪೆಣಗಿದೊಡಮೇನಹುದು? । ಕ್ಷೇಮವೆಂದುಂ ಮೃಗ್ಯ – ಮಂಕುತಿಮ್ಮ ।। 856 ಭೂಮಿಭಾರವನಿಳುಸೆ=ಭೂಮಿ+ಭಾರವನು+ಇಳಿಸೆ, ಸಾಲದಾಗಿರಲು=ಸಾಲದು+ಆಗಿರಲು, ಸಾಮಾನ್ಯರೆನಿತು=ಸಾಮಾನ್ಯರು+ಎನಿತು, ಪೆಣಗಿದೊಡಮೇನಹುದು=ಪೆಣಗಿದೊಡೆಮ್+ಏನು+ಅಹುದು. ಕ್ಷೇಮವೆಂದುಂ=ಕ್ಷೇಮವು+ಎಂದುಂ ಕಾರ್ಮುಕ,= ಧನುಸ್ಸು, ಬಿಲ್ಲು, ಪೆಣಗಿದೊಡೆಮ್=ಹೆಣಗಿದರೆ, ಮೃಗ್ಯ=ಮರೀಚಿಕೆ, ಬಿಸಿಲ್ಗುದುರೆ.
2021-05-28
05 min
Mankutimmana Kagga
Mankutimmana Kagga - 792
ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು । ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ।। ಬೇಸರದ ಪಾತಕಸ್ಮೃತಿಯ ಚುಚ್ಚದಿರ್: ಎನ್ನು – । ತೀಶನನು ಬೇಡುತಿರೋ – ಮಂಕುತಿಮ್ಮ || 792
2021-05-27
07 min
Mankutimmana Kagga
Mankutimmana Kagga - 40
ನಿಶೆಯೊಳೇ೦ ಕಾಣಬಾರನು ಹಗಲನೊಲ್ಲದೊಡೆ? ಶಶಿರವಿಗಳವನ ಮನೆಕಿಟಕಿಯಾಗಿರರೇ೦? ಮಸುಕುಬೆಳಕೊಂದಾದ ಸಂಜೆಮಂಜೇನವನು ಮಿಸುಕಿ ಸುಳಿಯುವ ಸಮಯ? ಮಂಕುತಿಮ್ಮ|| ನಿಶೆಯೊಳೇ೦= ನಿಶೆಯೊಳು+ ಏಂ, ಹಗಲನೊಲ್ಲದೊಡೆ = ಹಗಲನು ಒಲ್ಲದೊಡೆ, ಮಸುಕುಬೆಳಕೊಂದಾದ = ಮಸುಕು + ಬೆಳಕು+ಒಂದಾದ, ಸಂಜೆಮಂಜೇನವನು = ಸಂಜೆ ಮಂಜೇನು+ ಅವನು ನಿಶೆಯೊಳು= ರಾತ್ರಿಯಲಿ, ಶಶಿರವಿಗಳು= ಸೂರ್ಯ ಚಂದ್ರರು, ಮಸುಕು= ಹಗಲು ರಾತ್ರಿಗಳೊಂದಾಗುವ ವೇಳೆ, ಮಂಜೇನು= ಕಂಡೂ ಕಾಣದ, ಮಿಸುಕಿ= ಅಲೆದಾಡುವ
2021-05-26
06 min
Mankutimmana Kagga
Mankutimmana Kagga - 338
ಓರ್ವ ನಾನೆಂದು ನೀನೆಂತು ತಿಳಿಯುವೆ ಜಗದಿ?। ನೂರ್ವರಣಗಿಹರು ನಿನ್ನಾತ್ಮ ಕೋಶದಲಿ ।। ಪೂರ್ವಿಕರು, ಜತೆಯವರು,ಬಂಧುಸಖಶತ್ರುಗಳು। ಸರ್ವರಿಂ ನಿನ್ನ ಗುಣ – ಮಂಕುತಿಮ್ಮ ।। 338
2021-05-26
08 min
Mankutimmana Kagga
Mankutimmana Kagga - 329
ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ । ಕಳೆವುದದರಲಿ ನಮ್ಮ ಜನುಮಜನುಮಗಳು ।। ಗೆಲುವಾರ್ಗೋ! ಸೋಲಾರ್ಗೋ! ಲೆಕ್ಕನೋಡುವುದೆಂದೋ ಫಲವು ಬರಿಯಾಟವೆಲೊ – ಮಂಕುತಿಮ್ಮ || 329 ಕೊನೆಯಿಲ್ಲದೀಯಾಟ= ಕೊನೆ+ಇಲ್ಲದ+ ಈ+ಆಟ, ಕಳೆವುದದರಲಿ= ಕಳೆವುದು+ಇದರಲಿ, ಗೆಲುವಾರ್ಗೋ= ಗೆಲುವು+ಯಾರಿಗೋ, ಸೋಲಾರ್ಗೋ=ಸೋಲು+ಯಾರಿಗೋ, ಲೆಕ್ಕನೋಡುವುದೆಂದೋ= ಲೆಕ್ಕ+ನೋಡುವುದು+ಎಂದೋ. ಬರಿಯಾಟವೆಲೊ= ಬರಿಯೆ+ಆಟವು+ಎಲೊ
2021-05-21
06 min
Mankutimmana Kagga
Kagga - 121
ತನುವೇನು? ಮನವೇನು? ಪರಮಾಣು ಸಂಧಾನ | ಕುಣಿಸುತಿಹುದುಭಯವನು ಮೂರನೆಯದೊಂದು || ತೃಣದ ಹಸುರಿನ ಹುಟ್ಟು ತಾರೆಯಸಕದ ಗುಟ್ಟು | ದಣಿಯದದನರಸು ನೀಂ – ಮಂಕುತಿಮ್ಮ || 121 ಕುಣಿಸುತಿಹುದುಭಯವನು = ಕುಣಿಸುತಿಹುದು + ಉಭಯವನು//ಮೂರನೆಯದೊಂದು = ಮೂರನೆಯದು +ಅದೊಂದು // ತಾರೆಯಸಕದ = ತಾರೆಯ + ಎಸಕದ // ದಣಿಯದದನರಸು = ದಣಿಯದೆ+ ಅದನು+ ಅರಸು ಪರಮಾಣು = ಸೂಕ್ಷ್ಮಾತಿ ಸೂಕ್ಷ್ಮ ಅಣುಗಳು // ಉಭಯವನು = ಎರಡನ್ನೂ // ಎಸಕದ = ಮಿನುಗುವಿಕೆಯ // ಅರಸು = ಹುಡುಕು.
2021-05-19
04 min
Mankutimmana Kagga
Mankutimmana - 580
ದೊರೆಯವೇಷವ ಧರಿಸಿ ಮರೆಯುವೆಯ ಮೀಸೆಯನು? । ತಿರುಕಹಾರುವನಾಗಿ ಮೀಸೆ ತಿರಿಚುವೆಯ? ।। ಇರುವುದವನವನಿಗವನವನ ತಾಣದಧರ್ಮ । ಅರಿವೆಋತುಗತಿಯಂತೆ – ಮಂಕುತಿಮ್ಮ ।। 580 ಇರುವುದವನವನಿಗವನವನ=ಇರುವುದು+ಅವನವನಿಗೆ+ಅವನವನ ತಾಣದ=ಸ್ಥಳದ, ಋತುಗತಿ=ಋತು ಬದಲಾವಣೆ, ಧರ್ಮ= ಇರಬೇಕಾದ ರೀತಿ ಮತ್ತು ಮಾಡಬೇಕಾದ ಕರ್ಮ.
2021-05-18
07 min
Mankutimmana Kagga
Mankutimmana Kagga - 665
ತನುವ ತಣಿಸುವ ತುತ್ತು ಮನಕೆ ನಂಜಾದೀತು । ಮನಮೋಹ ಜೀವಕ್ಕೆ ಗಾಳವಾದೀತು ।। ಅನುಭವದ ಪರಿಣಾಮವೊಂದರಿಂದೊದಕ್ಕೆ । ಗಣಿಸಾತ್ಮಲಾಭವನು – ಮಂಕುತಿಮ್ಮ ।। 665 ನಂಜಾದೀತು=ನಂಜು+ಆದೀತು ಗಾಳವಾದೀತು=ಗಾಳ +ಆದೀತು, ಪರಿಣಾಮವೊಂದರಿಂದೊಂದಕ್ಕೆ=ಪರಿಣಾಮವು+ಒಂದರಿಂದ+ಒಂದಕ್ಕೆ, ಗಣಿಸಾತ್ಮಲಾಭವನು=ಗಣಿಸು+ಆತ್ಮ+ಲಾಭವನು. ನಂಜು=ವಿಷ, ಮನಮೋಹ=ಮನಸ್ಸಿನ ಮೋಹ, ಗಣಿಸು=ಗಮನಿಸು.
2021-05-14
08 min
Mankutimmana Kagga
Mankutimmana Kagga - 6
ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? ಬಗೆದು ಬಿಡಿಸುವರಾರು ಸೋಜಿಗವನಿದನು ? ಜಗವ ನಿರವಿಸಿದ ಕೈಯೊಂದಾದೊಡೇಕಿಂತು ಬಗೆ ಬಗೆಯ ಜೀವಗತಿ ? – ಮಂಕುತಿಮ್ಮ || 6
2021-05-11
06 min
Mankutimmana Kagga
Mankutimmana Kagga - 340
ರೇಖಾರಹಸ್ಯಗಳು ನಿನ್ನ ಹಣೆಯವದಿರಲಿ । ನೀಂ ಕಾಣ್ಬ ರೂಪಭಾವಂಗಳೊಳಮಿಹವು॥ ತಾಕಿ ನಿನ್ನಾತುಮವ ನಾಕನರಕಂಗಳಂ । ಏಕವೆನಿಪುವುವು ನಿನಗೆ – ಮಂಕುತಿಮ್ಮ.॥ 340
2021-05-09
06 min
Mankutimmana Kagga
Mankutimmana Kagga - 176-177
ಇಂಗಿತಜ್ಞಾನವಿಲ್ಲದ ಬಂಧುಪರಿವಾರ ಹಂಗಿಸುವ ಛಲವುಳ್ಳ ಸತಿಪುತ್ರಸಖರು ಬಂಗಾರದಸಿ ಚುಚ್ಚಿ ಸಿಂಗಾರ ಬೊಟ್ಟೆನುವ ಮಂಗಬುದ್ಧಿಯ ಜನರು – ಮಂಕುತಿಮ್ಮ || 17 6 ಬಂಧುವುಂ ಮಿತ್ರನುಂ ಭ್ರುತ್ಯನುಂ ಶತ್ರುವೊಲೆ ದಂಡಧರನೋಲಗಕೆ ನಿನ್ನನೆಳೆವವರೋ ಅಂದದೊಡವೆಯ, ಮೊನೆಗಳಿಂದೆದೆಯನೊತ್ತುವಾ ಮಂದಹಸಿತ ಕೊಲೆಯೊ – ಮಂಕುತಿಮ್ಮ || 177
2021-05-06
08 min
Mankutimmana Kagga
Mankutimmana Kagga - 891
ನಿನ್ನ ಕಹಿಸಿಹಿಯೆಲ್ಲ ಕಡಲೊಳುಪ್ಪಾಗುವುದು । ನಿನ್ನೆಲ್ಲ ಗುಣಗಳುಂ ಬ್ರಹ್ಮದೊಳಗಂತು ।। ಪುಣ್ಯವೋ,ಪಾಪವೋ,ಅಹಿತವೋ, ಹಿತವೊ ಅದು । ಚೆನ್ನಹುದು ಬೊಮ್ಮನಲಿ – ಮಂಕುತಿಮ್ಮ ।। 891
2021-05-05
06 min
Mankutimmana Kagga
Mankutimmana Kagga - 135.136
ವಿಶ್ವಪರಿಧಿಯದೆಲ್ಲೊ ಸೂರ್ಯಚಂದ್ರರಿನಾಚೆ | ವಿಶ್ವಕೇಂದ್ರವು ನೀನೆ, ನೀನೆಣಿಸಿದೆಡೆಯೆ || ನಿಶ್ವಸಿತ ಸಂಬಂಧ ನಿನಗಂ ದಿಗಂತಕಂ | ಪುಷ್ಪವಾಗಿರು ನೀನು – ಮಂಕುತಿಮ್ಮ. || 136 ವಿಶ್ವಪರಿಧಿಯದೆಲ್ಲೊ = ವಿಶ್ವದ + ಪರಿಧಿ+ ಅದು + ಎಲ್ಲೊ // ಸೂರ್ಯಚಂದ್ರರಿನಾಚೆ = ಸೂರ್ಯ+ಚಂದ್ರರಿನ+ ಆಚೆ // ನೀನೆಣಿಸಿದೆಡೆಯೆ = ನೀನು + ಎಣಿಸಿದ + ಎಡೆಯೆ, ನಿಶ್ವಸಿತ = ಉಸಿರಾಡುವ // ದಿಗಂತ = ಆಕಾಶದ ವ್ಯಾಪ್ತಿ, ಸಂಪೂರ್ಣ ಗೋಳದಲಿ ನೆನೆದೆಡೆಯೆ ಕೇಂದ್ರವಲ | ಕಂಪಿಸುವ ಕೇಂದ್ರ ನೀಂ ಬ್ರಹ್ಮ ಕಂದುಕದಿ || ಶಂಪಾತರಂಗವದರೊಳು ತುಂಬಿ ಪರಿಯುತಿದೆ | ದಂಬೋಳಿ ನೀನಾಗು – ಮಂಕುತಿಮ್ಮ || 135 ನೆನೆದೆಡೆಯೆ = ನೆನೆದ +ಎಡೆಯೆ // ಶಂಪಾತರಂಗವದರೊಳು = ಶಂಪಾತರಂಗವು + ಅದರೊಳು ಶಂಪಾತರಂಗ= ಮಿಂಚಿನ ಅಲೆಗಳು // ದಂಬೋಳಿ = ವಜ್ರಾಯುಧ.
2021-05-04
07 min
Mankutimmana Kagga
Mankutimmana Kagga - 71 - 72 - 73
ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು | ಆವನಾ ಬಂಧುತೆಯ ಜಡೆಯ ಬಿಡಿಸುವನು? || ಜೀವ ಜೀವಕೆ ನಂಟು ಜಡ ಚೇತನಕೆ ನಂಟು | ಆವುದದಕಂಟಿರದು? – ಮಂಕುತಿಮ್ಮ|| 72 ವಿಶ್ವದಲಿ = ಜಗತ್ತಿನಲಿ, ನೋಡಲೆಲ್ಲರೆಲ್ಲರ = ನೋಡಲು+ಎಲ್ಲರ+ಎಲ್ಲರ, ನತು + ಬಾಂಧವ್ಯ, ಆವನಾ = ಯಾರು, ಬಂಧುತೆಯ=ಈಬಂಧನದ, ಆವುದದಕಂಟಿರದು = ಯಾವುದಕ್ಕೆ ಅಂಟಿರದು? ತರಣಿ ಕಿರಣದ ನಂಟು ಗಗನ ಸಲಿಲದ ನಂಟು | ಧರಣಿ ಚಲನೆಯ ನಂಟು ಮರುತನೊಳ್ ನಂಟು ll ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ | ಕಿರಿದು ಪಿರಿದೊಂದಂಟು – ಮಂಕುತಿಮ್ಮ || 71 ತರಣಿ = ಸೂರ್ಯ ಸಲಿಲ = ನೀರು, ಮರುತ = ಗಾಳಿ, ಕಿರಿದು = ಸಣ್ಣದು, ಪಿರಿದು = ದೊಡ್ಡದು. ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ | ಅಂಟಿಲ್ಲವೆನಗಿದರೊಳೆನ್ನದಿರದೆಂದುಂ || ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ | ಒಂಟಿಸಿಕೊ ಜೀವನವ – ಮಂಕುತಿಮ್ಮ || 73
2021-05-02
08 min
Mankutimmana Kagga
Mankutimma Kagga - 461 and 462
ಎಲ್ಲಿಯೋ ವಿಧಿಯ ಗೂಢದ ಕರ್ಮಶಾಲೆಯಲಿ। ನಿಲ್ಲದಾಡುತ್ತಿಹವು ಯಂತ್ರ ಕೀಲುಗಳು॥ ಎಲ್ಲಾಗುಹೋಗುಗಳುಮಾ ಚಕ್ರಗತಿಯಂತೆ। ತಲ್ಲಣವು ನಿನಗೇಕೆ? ಮಂಕುತಿಮ್ಮ ॥ 461 ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು । ತೇಲುತ್ತೆ ಭಯವ ಕಾಣದೆ ಸಾಗುತಿರಲು ॥ ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ ॥ ಮೇಲ ಕೀಳಾಗಿಪುದು – ಮಂಕುತಿಮ್ಮ ॥ 462
2021-04-27
07 min
Mankutimmana Kagga
Mankutimmana Kagga - 735-736
ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ । ಆಯವದರಿಂ ಭಟನ ಸತ್ವಶಿಕ್ಷಣಕೆ ।। ಸ್ವೀಯ ಸತ್ವವಿಕಾಸ ನಿಜಶಕ್ತಿಯಭ್ಯಾಸ । ಶ್ರೇಯಸಿಗೆ ಸೋಪಾನ – ಮಂಕುತಿಮ್ಮ ।। 735 ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ । ಆಯಸಂ-ಬಡಿಸದ-ವೊಲಂತರಾತ್ಮವನು ।। ಮಾಯೆಯೊಡನಾಡುತ್ತ,ಬೊಮ್ಮನನು ಭಜಿಸುತ್ತ । ಆಯುವನು ಸಾಗಿಸೆಲೋ – ಮಂಕುತಿಮ್ಮ ।। 736
2021-04-01
08 min
Mankutimmana Kagga
Mankutimmana Kagga - 908 - 909
ಮಗುವಾಗಿ ಬೊಂಬೆಗೆಂದತ್ತು ಪಿರಿಯರ ಕಾಡಿ । ಜಗದುಣಿಸುಗಳನುಂಡು ಬೆಳೆದವಂ ತಾನೆ ।। ಮಗುಗಳನು ಬೆಳಸುತ್ತ ಮನೆಯನಾಳುವವೋಲು । ಜಗವನಾಳ್ವನು ಜಾಣ – ಮಂಕುತಿಮ್ಮ || 909 ಬೊಂಬೆಗಂದತ್ತು=ಬೊಂಬೆಗೆ+ಅಂದು+ಅತ್ತು, ಜಗದುಣಿಸುಗಳನುಂಡು=ಜಗದ+ಉಣಿಸುಗಳನು+ಉಂಡು, ಮನೆಯನಾಳುವವೋಲು=ಮನೆಯನು+ಆಳುವ+ಓಲು, ಜಗವನಾಳ್ವನು=ಜಗವನು+ಆಳ್ವನು, ಪಿರಿಯರ =ಹಿರಿಯರ, ಉಣಿಸುಗಳನು=ತಿಂಡಿಗಳನು, ಓಲು=ಹಾಗೆ ತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ । ನಿಜಕುಕ್ಷಿ ಚಿಂತೆಯೇಂ ಮೊದಲು ಮನೆತಾಯ್ಗೆ ।। ಭುಜಿಪ ಪತಿಸುತರೊಪ್ಪ ತುಪ್ಪವವಳೂಟಕ್ಕೆ । ಭಜಿಸು ನೀನಾ ವ್ರತವ – ಮಂಕುತಿಮ್ಮ ।। 908
2021-03-31
07 min
Mankutimmana Kagga
Mankutimmana Kagga - 226
ಉಸಿರವೊಲನುಕ್ಷಣಂ ಪುರುಶನೊಳವೊಗುತವನ ಪೊಸಬನಂಗೆಯ್ದು ದೈವಿಕಸತ್ವಮವನುಂ ಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆ ಬೆಸಸುತಿಹುದೇಗಳುಂ – ಮಂಕುತಿಮ್ಮ || 226 ಉಸಿರವೊಲನುಕ್ಷಣಂ = ಉಸಿರ+ಒಲು+ಅನುಕ್ಷಣಂ// ಪುರುಶನೊಳವೊಗುತವನ = ಪುರುಷನ+ಒಳ+ಒಗುತ +ಅವನ // ದೈವಿಕಸತ್ವಮವನುಂ = ದೈವಿಕಸತ್ವವಂ + ಅವನುಂ// ಬೆಸಸುತಿಹುದೇಗಳುಂ = ಬೆಸಸುತಿಹುದು+ ಏಗಳುಂ ಬೆಸಸುತಿಹುದು= ಬೆಸೆಯುತಿಹುದು // ಏಗಳುಂ = ಯಾವಾಗಲೂ
2021-03-28
06 min
Mankutimmana Kagga
Mankutimmana Kagga - 255
ನಾಟಕದೊಳನುವಿಂದ ಬೆರೆತದನು ಮೆಚ್ಚೆನಿಸಿ | ನೋಟಕನುಮಾಗಿ ತಾಂ ನಲಿದು ನಲಿಯಿಸುವಾ || ಪಾಠವನು ಕಲಿತವನೆ ಬಾಳನಾಳುವ ಯೋಗಿ | ಆಟಕಂ ನಯವುಂಟು – ಮಂಕುತಿಮ್ಮ || 255 ನಾಟಕದೊಳನುವಿಂದ = ನಾಟಕದೊಳು+ಅನುವಿಂದ// ಬೆರೆತದನು = ಬೆರೆತು + ಅದನು// ಮೆಚ್ಚೆನಿಸಿ = ಮೆಚ್ಚು + ಎನಿಸಿ// ನೋಟಕನುಮಾಗಿ = ನೋಟಕನುಂ+ ಆಗಿ
2021-03-25
06 min
Mankutimmana Kagga
Mankutimmana Kagga - 466
ವ್ಯಸನಕಾರಣವೊಂದು ಹಸನಕಾರಣವೊಂದು । ರಸಗಳೀಯೆರಡಕಿಂತಾಳವಿನ್ನೊಂದು ।। ಭ್ರುಶವಿಶ್ವಜೀವಿತಗಭೀರತೆಯ ದರ್ಶನದ । ರಸವದದ್ಭುತಮೌನ – ಮಂಕುತಿಮ್ಮ || 466 ರಸಗಳೀಯೆರಡಕಿಂತಾಳವಿನ್ನೊಂದು = ರಸಗಳು+ಈ+ಎರಡಕಿಂತಾ+ಆಳವು+ಇನ್ನೊಂದು, ರಸವದದ್ಭುತಮೌನ = ರಸವು+ಅದು+ಅದ್ಭುತ+ಮೌನ. ಹಸನ=ನಗುವು, ಭ್ರುಶ=ವಿಚಿತ್ರ, ಗಭೀರತೆ=ಗಂಭೀರತೆ,
2021-03-24
06 min
Mankutimmana Kagga
Mankutimma Kagga - 41
ಕದಕಗಳಿಯನು ಬಿಗಿದು ಬೊಮ್ಮ ಗುಡಿಯಲಿರಲಿ ಅದರ ಕೀಲ್ಕುಂಚಿಕೆಯ ಹೊರಕೆಸೆಯೇ ಸಾಕು ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು ಒದವಿಪರು ದಿಟದರಿವ – ಮಂಕುತಿಮ್ಮ? 41 ಕದ – ಬಾಗಿಲು, ಅಗಳಿ = ಚಿಲಕ, ಕೀಲ್ಕುಂಚಿಕೆ = ಬೀಗದ ಕೈ, ಪದವಾಕ್ಯವಿದರು = ಪದ, ವಾಕ್ಯ, ವ್ಯಾಕರಣ ಇತ್ಯಾದಿಗಳನ್ನರಿತ ಪಂಡಿತರು, ವಾದ = ಚರ್ಚೆ, ಗಡಣೆ = ಆಡಂಬರ, ಒದವಿಪರು=ಸಹಾಯಮಾಡುತ್ತಾರೆ, ದಿಟದರಿವ= ಸತ್ಯವನ್ನು ಅರಿಯುವ. ಕದಕೆ + ಅಗಳಿಯನು = ಕದಕಗಳಿಯನು, ಪದ+ ವಾಕ್ಯ+ವಿದರು+ಆಗ = ಪದವಾಕ್ಯವಿದರಾಗ,
2021-03-22
06 min
Mankutimmana Kagga
Mankutimmana Kagga - 388
ದೇಹಾತುಮಂಗಳೆರಡಂಗಗಳು ಜೀವನಕೆ। ನೇಹದಿಂದೊಂದನೊಂದಾದರಿಸೆ ಲೇಸು ॥ ದಾಹಗೊಂಡಿರಲೊಂದು ಮಿಕ್ಕೊಂದಕೆಲ್ಲಿ ಸುಖ?। ದ್ರೋಹ ಬೇಡೊಂದಕಂ – ಮಂಕುತಿಮ್ಮ || 388
2021-03-19
06 min
Mankutimmana Kagga
Mankutimmana Kagga - 868
ಅರೆದಿನದ ನಮ್ಮ ಯತ್ನದಿನದೇನೆನ್ನದಿರು । ಕಿರಿದುಮೊಡಗೂಡಿರಲು ಸಿರಿಯಹುದು ಬಾಳ್ಗೆ ।। ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ? । ಕಿರಿಜಾಜಿ ಸೊಗಕುಡದೆ – ಮಂಕುತಿಮ್ಮ ।। 868 ಯತ್ನದಿನದೇನೆನ್ನದಿರು=ಯತ್ನದಿನ್+ಅದೇನು+ಎನ್ನದೆ+ಇರು, ಕಿರಿದುಮೊಡಗೂಡಿರಲು=ಕಿರಿದುಂ+ಒಡಗೂಡಿ+ಇರಲು, ಸಿರಿಯಹುದು=ಸಿರಿ+ಅಹುದು, ನಿನ್ನೊಡಲ=ನಿನ್ನ+ಒಡಲ,
2021-03-18
06 min
Mankutimmana Kagga
Mankutimmana Kaggas - done in the last 3 weeks
This is a tribute of Kagga mAla for DVG on the occasion of his 134th Birth anniversary.
2021-03-17
07 min
Mankutimmana Kagga
Mankutimmana Kagga - 884
ವಸ್ತು ವಿಜ್ಞಾನದಿಂ ಜೀವನಸಂವೃದ್ಧಿ ಮಿಗೆ । ವಿಸ್ತರಿಸೆ ವಿಶ್ವೈಕ್ಯಭಾವ ಜನಮನದೊಳ್ ।। ದೃಷ್ಟಲೋಕದ ಬೆಡಗದೃಷ್ಟವನು ಮರಸದಿರೆ । ಸ್ವಸ್ತಿ ಲೋಕಕ್ಕೆಲ್ಲ – ಮಂಕುತಿಮ್ಮ ।। 884 ಬೆಡಗದೃಷ್ಟವನು=ಬೆಡಗು+ಅದೃಷ್ಟವನು, ಮರಸದಿರೆ=ಮರಸದೆ+ಇರೆ
2021-03-16
06 min
Mankutimmana Kagga
Mankutimmana Kagga - 404
ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ । ಜಾವ ದಿನ ಬಂದು ಪೋಗುವುವು ; ಕಾಲ ಚಿರ ॥ ಜೀವದ ವ್ಯಕ್ತಿ ಸಾಯ್ವುದು; ಜೀವಸತ್ವ ಚಿರ । ಭಾವಿಸಾ ಕೇವಲವ – ಮಂಕುತಿಮ್ಮ ॥ 404 ದೇವರ್ಕಳುದಿಸಿ=ದೇವರ್ಗಳ್+ಉದಿಸಿ
2021-03-15
05 min
Mankutimmana Kagga
Mankutimmana Kagga - 530
ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ । ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।। ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ । ಸಣ್ಣತನ ಸವೆಯುವುದು – ಮಂಕುತಿಮ್ಮ ।। 530 ಮನಗಳರಿವಷ್ಟು=ಮನಗಳು+ಅರಿವಷ್ಟು, ನಿನ್ನಳಿಸುವ =ನಿನ್ನ+ಅಳಿಸುವ, ನಗಿಸುವೆಲ್ಲ =ನಗಿಸುವ +ಎಲ್ಲ, ನಿನ್ನಂಶ=ನಿನ್ನ +ಅಂಶ, ನೀನೇರಿದಂತೆ= ನೀನು+ಏರಿದಂತೆ,
2021-03-11
05 min
Mankutimmana Kagga
Mankutimmana Kagga - 680
ಉಂಡಾತನುಣುತಿರುವರನು ಕಾಣ್ಬ ನಲವಿಂದ । ಪಂಡಿತನು ವಿಧ್ಯಾರ್ಥಿಗಳಿಗೊರೆವ ನಯದಿಂ ॥ ಕಂಡು ಲೋಕವನು ಸಂತೈಸುತಿರುವಂ ಜ್ಞಾನಿ । ಕಂಡೆಲ್ಲರೊಳು ತನ್ನ – ಮಂಕುತಿಮ್ಮ || 680 ಉಂಡಾತನುಣುತಿರುವರನು=ಉಂಡಾತ +ಉಣುತ+ಇರುವರನು, ವಿಧ್ಯಾರ್ಥಿಗಳಿಗೊರೆವ=ವಿದ್ಯಾರ್ಥಿಗಳಿಗೆ+ಒರೆವ, ಸಂತೈಸುತಿರುವಂ=ಸಂತೈಸುತ+ಇರುವ, ಕಂಡೆಲ್ಲರೊಳು=ಕಂಡು+ಎಲ್ಲರೊಳು. ಕಾಣ್ಬ=ನೋಡುವ, ನಲವಿಂದ=ಪ್ರೀತಿಯಿಂದ, ಒರೆವ=ತಿಳಿಸುವ, ನಯದಿಂ=ನಯ ಮತ್ತು ನಾಜೂಕಿನಿಂದ, ಸಂತೈಸುತ=ಸಾಂತ್ವನವನ್ನು ಹೇಳುತ.
2021-03-09
06 min
Mankutimmana Kagga
Mankutimmana Kagga - 571
ನಿನಗಿರದ ಕಣ್ ಬಾಯಿ ವಾಲ್ಮೀಕಿಗೆಂತಾಯ್ತು? । ಮುನಿಕವಿತೆಗೆಂತು ನಿನ್ನೆದೆಯೊಳೆಡೆಯಾಯ್ತು? ।। ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತೆ । ಅನಲನೆಲ್ಲರೊಳಿಹನು – ಮಂಕುತಿಮ್ಮ ।। 571 ನಿನಗಿರದ= ನಿನಗೆ+ಇರದ, ವಾಲ್ಮೀಕಿಗೆಂತಾಯ್ತು=ವಾಲ್ಮೀಕಿಗೆ+ಎಂತು+ಆಯ್ತು, ಮುನಿಕವಿತೆಗೆಂತು+ಮುನಿಕವಿತೆಗೆ+ಎಂತು, ನಿನ್ನೆದೆಯೊಳೆಡೆಯಾಯ್ತು= ನಿನ್ನ+ಎದೆಯೊಳು+ಎಡೆಯಾಯ್ತು, ಘನಮಹಿಮನೊಳ್=ಘನ+ಮಹಿಮನ+ಒಳ್, ಜ್ವಲಿಸುತಿತರರೊಳು=ಜ್ವಲಿಸುತ+ಇತರರೊಳು,ಅನಲನೆಲ್ಲರೊಳಿಹನು=ಅನಲನು+ಎಲ್ಲರೊಳು+ಇಹನು.
2021-03-07
06 min
Mankutimmana Kagga
Mankutimmana Kagga - 523
ವೇದ ಶಾಸ್ತ್ರಗಳು ಲೋಕನೀತಿಗಳೆಲ್ಲ । ಹಾದಿ ತೋರಲು ನಿಶಿಯೊಳುರಿವ ಪಂಜುಗಳು ।। ಸೌಧವೇರಿದವಂಗೆ, ನಭವ ಸೇರಿದವಂಗೆ । ಬೀದಿ ಬೆಳಕಿಂದೇನೊ? ಮಂಕುತಿಮ್ಮ|| 523 ವೇದ ಲೋಕಾಚಾರ ನಿನ್ನನುಭವದ ಉಕ್ತಿ । ಶೋಧಿಸೀ ಮೂರನುಂ ಸಂವಾದಗೊಳಿಸು ।। ಸಾಧಿತಜ್ಞಾನ ನರಸಾಧ್ಯ ಪ್ರಮಾಣವದು । ಹಾದಿ ಬೆಳಕದು ನಿನಗೆ – ಮಂಕುತಿಮ್ಮ ।। 521
2021-03-04
06 min
Mankutimmana Kagga
Mankutimmana Kagga - 506
ದೊರೆಗೆ ನೀಂ ಬಿನ್ನಯಿಸೆ ನೂರೆಂಟು ಬಯಕೆಗಳ । ಸರಿ ತನಗೆ ತೋರ್ದೆನಿತನ್ ಅದರೊಳವನೀವಂ ।। ಅರಿಕೆಯೆಲ್ಲವನಡಸದಿರೆ ದೊರೆಯೆ ಸುಳ್ಳಹನೆ? । ಕರುಣೆ ನಿರ್ಬಂಧವೇಂ? – ಮಂಕುತಿಮ್ಮ ।। 506 ।।
2021-03-03
07 min
Mankutimmana Kagga
Mankutimmana Kagga - 907
ತನುರುಜೆಗೆ ಪಥ್ಯಾನ್ನ ಬಾಯ ಚಪಲಕ್ಕಲ್ಲ । ಮನದ ಶಿಕ್ಷೆಗೆ ಲೋಕ, ಮಮಕಾರಕಲ್ಲ ।। ಗುಣಚರ್ಯೆ ವಿಶ್ವಸಮರಸಕೆ, ಕಾಮಿತಕಲ್ಲ । ಮುನಿವೃತ್ತಿ ಸೂತ್ರವಿದು ಮಂಕುತಿಮ್ಮ ।। 907 ।।
2021-02-26
06 min
Mankutimmana Kagga
Mankutimmana Kagga - 304
ಗಿರಿಯ ಮೇಲಕೆ ದೊಡ್ಡ ಬಂಡೆಯನು ಸಿಸಿಫಸನು ಉರುಳಿಸಿರಲೊಂದೆರಡು ಮಾರು ಘಾಸಿಯಲಿ ಸರಿದು ಕೆಳಕದದೆಂತೊ ಜಾರುವುದು ಮರಮರಳಿ ಪುರುಷ ಪ್ರಗತಿಯಂತು – ಮಂಕುತಿಮ್ಮ ॥ 304 ॥ ಉರುಳಿಸಿರಲೊಂದೆರಡು = ಉರುಳಿಸಿರಲು +ಒಂದೆರಡು// ಕೆಳಕದದೆಂತೊ= ಕೆಳಕೆ+ಅದು+ಎಂತೊ// ಸಿಸಿಫಸನು = ಗ್ರೀಸ್ ದೇಶದ ಒಬ್ಬ ದೊರೆ//ಘಾಸಿಯಲಿ = ಕಷ್ಟಪಟ್ಟು.
2021-02-25
06 min
Mankutimmana Kagga
Mankutimmana Kagga - 268
ನಾಚಿಕೆಯದೇಕೆ ನೀಂ ಬದುಕಿನಲಿ ಸೊಗವಡಲು? ಚಾಚುತಿಹುದಾತ್ಮ ನಾಲಗೆಯ ದೆಸೆದೆಸೆಗೆ. ಬಾಚಿಕೊಳಲಮೃತಕಣಗಳನೆಲ್ಲ ತನ್ನೆಡೆಗೆ ಸಾಜ ಸೊಗವಾತ್ಮಂಗೆ – ಮಂಕುತಿಮ್ಮ ॥ 268 ॥ ನಾಚಿಕೆಯದೇಕೆ = ನಾಚಿಕೆಯು + ಅದೇಕೆ//ಚಾಚುತಿಹುದಾತ್ಮ = ಚಾಚಿಹುದು+ ಆತ್ಮ// ಬಾಚಿಕೊಳಲಮೃತಕಣಗಳನೆಲ್ಲ = ಬಾಚಿಕೊಳ್ಳಲು+ಅಮೃತ+ ಕಣಗಳ +ಎಲ್ಲ // ಸೊಗವಾತ್ಮಂಗೆ= ಸೊಗವು+ ಆತ್ಮಂಗೆ.
2021-02-24
06 min
Mankutimmana Kagga
Mankutimmana Kagga 421
ತನುಭವವ್ಯಾಮೋಹ ಮುಸುಕಿತು ವ್ಯಾಸನಂ । ಜನಿಪುದದು ಪ್ರಕೃತಿತಂತ್ರದೆ ಹೃದಯತಳದೊಳ್ ॥ ಕ್ಷಣಮಾತ್ರಮಾನುಮದು ಕಣ್ಣೀರ ಬರಿಸುವುದು । ಗಣಿಸಬೇಡದನು ನೀಂ – ಮಂಕುತಿಮ್ಮ ॥ 421 ॥
2021-02-23
09 min
Mankutimmana Kagga
Mankutimmana Kagga - 707
ಒಡೆಯನೆಂದೋ ಬಂದು ಕೇಳ್ವನದಕ್ಕುತ್ತರವ । ಕೊಡಬೇಕು ತಾನೆನುವವೊಲು ಋಜತೆಯಿಂದ ।। ಒಡಲ, ಜಾಣಿನ, ಜೀವಶಕ್ತಿಗಳನೆಲ್ಲವನು । ಮುಡುಪುಕೊಟ್ಟನು ಭರತ – ಮಂಕುತಿಮ್ಮ ।। 707 ।।
2021-02-22
06 min
Mankutimmana Kagga
Mankutimmana Kagga - 16-17
ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ I ವಲೆವಂತೆ ಲೋಕ ತಲ್ಲಣಿಸಿಹುದಿಂದು II ಹಳೆಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ II ತಳಮಳಕೆ ಕಡೆಯೆಂದು – ಮಂಕು ತಿಮ್ಮ II 16 II ತಳಮಳವಿದೇನಿಳೆಗೆ? ದೇವದನುಜರ್ ಮಥಿಸೆ ಜಳಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ? ಹಾಲಾಹಲವ ಕುಡಿವ ಗಿರೀಶನಿರ್ದೊಡೀ ಕಳವಳವದೇತಕೆಲೋ? – ಮಂಕುತಿಮ್ಮ II 17 II
2021-02-20
06 min
Mankutimmana Kagga
Mankutimmana Kagga - 77
ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ | ರನ್ನವೋ ಬ್ರಹ್ಮ; ನೋಡವನು – ನಿಜಪಿಂಛ || ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲಿನೊಲು | ತನ್ಮಯನೋ ಸೃಷ್ಟಿಯಲಿ – ಮಂಕುತಿಮ್ಮ || 77
2021-02-18
05 min
Mankutimmana Kagga
Mankutimmana Kagga - 161
ವಿಧಿಯ ಹೊರೆಗಳನು ತಪ್ಪಿಸಿಕೊಳ್ಳುವನೆಲ್ಲಿಹನು I ಬೆದರಿಕೆಯನದರಿಂದ ನೀಗಿಪನು ಸಖನು II ಎದೆಯನುಕ್ಕಾಗಿಸಾನಿಸು ಬೆನ್ನ – ತುಟಿಯ ಬಿಗಿ I ವಿಧಿಯಗಸ , ನೀಂ ಕತ್ತೆ – ಮಂಕುತಿಮ್ಮ || 161 ತಪ್ಪಿಸಿಕೊಳ್ಳುವನೆಲ್ಲಿಹನು = ತಪ್ಪಿಸಿಕೊಳ್ಳುವನು + ಎಲ್ಲಿಹನು // ಬೆದರಿಕೆಯನದರಿಂದ = ಬೆದರಿಕೆಯನು + ಅದರಿಂದ // ಎದೆಯನುಕ್ಕಾಗಿಸಾನಿಸು = ಎದೆಯನು + ಉಕ್ಕಾಗಿಸಿ + ಆನಿಸು ನೀಗಿಪನು = ಹೋಗಲಾಡಿಸುವನು // ಸಖನು = ಸ್ನೇಹಿತನು
2021-02-17
06 min
Mankutimmana Kagga
Mankutimmana Kagga - 441
ಇಂತು ಹೊರಗೊಳಗುಗಳು ಬೇರೆಲೋಕಗಳಲ್ಲ । ಅಂತರಂಗದೊಳೂರಸಂತೆ ಸದ್ದಿಹುದು ॥ ಸಂತೆಯೊಳಮಂತರಂಗದ ಸದ್ದು ಕೇಳಿಪುದು । ಸ್ವಾಂತದಿಕ್ಕೆಲಗಳವು – ಮಂಕುತಿಮ್ಮ ॥ 441 ಹೊರಗೆ ಹೊಳೆವೊಂದು ಹೊಳಪಿನ ಕಿರಣವೆನ್ನೆದೆಯೊ- । ಳುರಿಯನೆಬ್ಬಿಸಿ ಹೊಗೆಯನೆರಚಿ ಕಂಗಳಿಗೆ ॥ ಕೆರಳಿಪುವು ಕರಣಗಳ, ಮರಳಿಪುದು ಹರಣಗಳ । ಹೊರಮೋಹವೊಳದಾಹ – ಮಂಕುತಿಮ್ಮ ॥ 440
2021-02-14
05 min
Mankutimmana Kagga
Mankutimmana Kagga - 381
ಅತಿಶಯದದೃಷ್ಟ ಹುಟ್ಟಿಂ ಮೃತೇಂದ್ರಿಯನದಲ?। ಇತರರೊಳು ವಿಷಪರೀಕ್ಷೆಗೆ ನಿಲುವವರಾರು ?॥ ಮಿತ ಕುಕ್ಷಿ ; ಮಿತಭುಕ್ತ; ಮತ್ತಾರ್ ಜಿತೇಂದ್ರಿಯ। ಅತಿಚರ್ಚೆ ಸಲದಿಲ್ಲಿ – ಮಂಕುತಿಮ್ಮ ॥ 381
2021-02-12
07 min
Mankutimmana Kagga
Mankutimmana Kagga - 890
ನಶ್ವರಾಕೃತಿ ನಾಮಮಯ ವಿಶ್ವವಾರ್ಧಿಯಿದು। ಶಾಶ್ವತಬ್ರಹ್ಮದುಚ್ವಾಸ ಘನಬಿಂದು ।। ಪ್ರಶ್ವಸಿತದಲೆಗಳನೆ ಪಿಡಿದು ಗುರಿಯರಿತೀಜೆ । ವಿಶ್ವಮೂಲಾಪ್ತಿಯಲ – ಮಂಕುತಿಮ್ಮ ।। 890
2021-02-09
07 min
Mankutimmana Kagga
Mankutimmana Kagga - 699
ಏಸು ಸಲ ತಪವಗೈದೇಸು ಬನ್ನವನಾಂತು । ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್ ।। ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ । ಲೇಸಾಗಿಸಾತ್ಮವನು – ಮಂಕುತಿಮ್ಮ ।। 699
2021-02-04
06 min
Mankutimmana Kagga
Mankutimmana Kagga - 170
ಉಣುವುದುಡುವುದು ಪಡುವುದಾಡುವುದು ಋಣಗಳೆಲ್ಲವು ಪೂರ್ವಸಂಚಿತಾಂಶಗಳು ಹಣೆಯೊಳದು ಲಿಖಿತಮಿರೆಯುಂ ವಾಚಿಸುವವನಿಲ್ಲ ಗೊಣಗಾಟವಳಿಸುವುದೇ ? – ಮಂಕುತಿಮ್ಮ || 170
2021-02-02
06 min
Mankutimmana Kagga
Mankutimmana Kagga - 576
ತನ್ನ ಶಕ್ತಿಯನಳೆದು, ತನ್ನ ಗುಣಗಳ ಬಗೆದು । ಸನ್ನಿವೇಶದ ಸೂಕ್ಷ್ಮವರಿತು, ಧೃತಿತಳೆದು ।। ತನ್ನ ಕರ್ತವ್ಯಪರಿಧಿಯ ಮೀರದುಜ್ಜುಗಿಸೆ । ಪುನ್ಯಶಾಲಿಯ ಪಾಡು – ಮಂಕುತಿಮ್ಮ ।। 576
2021-02-01
07 min
Mankutimmana Kagga
Mankutimmana Kagga - 581-582
ದೇವರದಿದೆಲ್ಲ ದೇವರಿಗೆಲ್ಲವೊಂದೊರಲು- । ತಾವುದನುಮವನ ನಿರ್ಣಯಕೆ ಬಿಡದೆಯೆ ತಾಂ ।। ದಾವಂತಬಡುತ ತನ್ನಿಚ್ಚೆಯನೆ ಘೋಷಿಸುವ । ಭಾವವೆಂತಹ ಬಕುತಿ ? – ಮಂಕುತಿಮ್ಮ ।। 581 ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ । ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ ।। ಕೊರೆಯಾದೊಡೇನೊಂದು, ನೆರೆದೊಡೇನಿನ್ನೊಂದು?। ಒರಟು ಕೆಲಸವೋ ಬದುಕು – ಮಂಕುತಿಮ್ಮ || 582
2021-01-30
06 min
Mankutimmana Kagga
Manakutimmana Kagga - 849
ಒಮ್ಮನಸಿನಿಂದ ನೀನೀ ತತ್ವವಂ ಗ್ರಹಿಸು । ಬ್ರಹ್ಮಲೀಲೆಗೆ ಗೊತ್ತುಗುರಿ ಲೆಕ್ಕವಿಲ್ಲ ।। ಸುಮ್ಮನಿರು ನಿನ್ನ ಪಾಡನು ಪಡುತ ತುಟಿ ಬಿಗಿದು । ನೆಮ್ಮದಿಗೆ ದಾರಿಯಿದು – ಮಂಕುತಿಮ್ಮ ।। 849
2021-01-28
07 min
Mankutimmana Kagga
Mankutimma - 923 - 922
ಎಲ್ಲರಿಗಮೀಗ ನಮೊ – ಬಂಧುಗಳೆ, ಭಾಗಿಗಳೆ । ಉಲ್ಲಾಸವಿತ್ತವರೆ, ಮನವ ತೊಳೆದವರೆ ।। ಟೊಳ್ಳು ಜಗ, ಸಾಕು ಬಾಳ್ – ಎನಿಸಿ ಗುರುವಾದವರೆ । ಕೊಳ್ಳಿರೀ ನಮನವನು – ಮಂಕುತಿಮ್ಮ ।। 922 ನಿನಗಾರು ಗುರುವಹರು? ನೀನೊಬ್ಬ ತಬ್ಬಲಿಗ । ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು ।। ದಿನವ ಕಳೆ ; ಗುರುಶಿಷ್ಯಪಟ್ಟಗಳು ನಿನಗೇಕೆ ?। ನಿನಗೆ ನೀನೇ ಗುರುವೊ – ಮಂಕುತಿಮ್ಮ ।। 923
2021-01-27
07 min
Mankutimmana Kagga
Mankutimmana Kagga - 430
ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ । ಇಬ್ಬರಾಗುವೆನೆಂದನಂತೆ ಪರಬೊಮ್ಮಂ ॥ ಹೆಬ್ಬದುಕನೊಂಟಿತನದೊಳದೇನು ಬದುಕುವೆಯೊ? । ತಬ್ಬಿಕೊಳೊ ವಿಶ್ವವನು – ಮಂಕುತಿಮ್ಮ || 430
2021-01-26
09 min
Mankutimmana Kagga
Mankutimmana Kagga - 566
ಅರಣ್ಯಕದ ಪುಷ್ಪಗಳ ಮೂಸುವವರಾರು ? । ಆರಿಹರು ಪತಗ-ದುಡುಪನು ಹುಡುಕಿ ಮೆಚ್ಚಲ್ ? ।। ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ । ಸ್ವಾರಸ್ಯಬೆಸಗುವಳೊ – ಮಂಕುತಿಮ್ಮ ।। 566
2021-01-25
08 min
Mankutimmana Kagga
Mankutimmana Kagga - 558
ಆಳವನು ನೋಡಿ ಬಗೆದಾಡುವಾ ಮಾತಿಂಗೆ । ರೂಢಿಯರ್ಥವದೊಂದು ಗಾಢಾರ್ಥವೊಂದು ।। ವಾರಿಧಿಯ ದಾಂಟುವುಡುಪಕೆ ಗಾಳಿಪಟವೊಂದು । ಕೋಲು ಹುಟ್ಟೊಂದು ಬಲ – ಮಂಕುತಿಮ್ಮ ।। 558 ಬಗೆದಾಡುವಾ=ಬಗೆದು+ಆಡುವಾ , ರೂಢಿಯರ್ಥವದೊಂದು=ರೂಢಿಯ+ಅರ್ಥವು+ಅದೊಂದು, ಗಾಢಾರ್ಥವೊಂದು=ಗಾಢ+ಅರ್ಥವು+ಒಂದು, ದಾಂಟುವುಡುಪಕೆ=ದಾಂಟುವ+ಉಡುಪಕೆ, ಹುಟ್ಟೊಂದು=ಹುಟ್ಟು+ಒಂದು
2021-01-24
08 min
Mankutimmana Kagga
Mankutimmana Kagga - 333
ಸತ್ಯಾನುಭವವೆಲ್ಲರಿಂಗಮೊಂದೆಂತಹುದು? । ಬೆಟ್ಟದಡಿಯೊಳಗೊಬ್ಬ; ಕೋಡಬಳಿಯೊಬ್ಬ ।। ಎತ್ತರದ ದೃಶ್ಯ ಕಣಿವೆ-ಯೊಳಿಹನಿಗಾದೀತೇ । ನೇತ್ರದಂದದೆ ನೋಟ – ಮಂಕುತಿಮ್ಮ || 333
2021-01-22
09 min
Mankutimmana Kagga
Mankutimmana Kagga - 814
ನ್ಯಾಯಾಧಿಪತಿ ತನ್ನ ಮತಿ ಮನಸುಗಳನೆಲ್ಲ । ಸ್ವೀಯಲಾಭಾಸ್ಮರಣೆಯುಳಿದು ವಿವದಿಗಳಾ- ।। ದಾಯನಿರ್ಣಯಕೆ ಯೋಜಿಸುವಂತೆ, ನೀಂ ಜಗದ । ಶ್ರೇಯಸ್ಸಿಗುಜ್ಜುಗಿಸು – ಮಂಕುತಿಮ್ಮ ।। 814
2021-01-21
06 min
Mankutimmana Kagga
Mankutimma Kagga - 827
ಗುಡಿಸಲೇನೊಣಹುಲ್ಲು ಕಡ್ಡಿ ಮಣ್ಣೆನ್ನುತಲಿ । ಬಡವನಲಿ ಕೊರತೆಗಳ ನೆಡುವು-ದರಿದಲ್ಲ ।। ಕೆಡಿಸಿದಾ ಗುಡಿಸಿಲಿನ ನೆಮ್ಮದಿಯ ಮತ್ತೆಂತು । ಕೊಡಲಹುದವಂಗೆ ನೀಂ – ಮಂಕುತಿಮ್ಮ ।। 872
2021-01-20
07 min