Look for any podcast host, guest or anyone
Showing episodes and shows of

Shivasharanappa Maddur

Shows

ಶಿವಶರಣಶಿವಶರಣಬಸವ ಜಯಂತಿ- 2021-ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರುಜಾಗತಿಕ ಲಿಂಗಾಯತ ಮಹಾಸಭಾ ಬಸವ ಜಯಂತಿಯ  ಶುಭ ದಿನ ಶುಕ್ರವಾರ ದಿನಾಂಕ; ೧೪.೫.೨೦೨೧ ವೇಳೆ ; ಬೆಳಗ್ಗೆ ೧೦.೩೦ನಿಮಿಷ ಕೆಳಗಿನ ಲಿಂಕ ಬಳಸಿ. To join the meeting on Google Meet, click this link: meet.google.com/nzy-agyi-wum ಊರೂರಗಳಲ್ಲಿ , ಮನೆ ಮನೆಗಳಲ್ಲಿ ಇಂದು  ಕೇವಲ ಒಂದೇ ಚರ್ಚೆ ಅದು ಕರೋನಾ. ಹಿರಿಯ ನಾಗರಿಕರು ಸಾಮಾನ್ಯವಾಗಿ ನೋಡುವದು ಸುದ್ದಿ ಮಾಧ್ಯಮಗಳನ್ನು, ಅವುಗಳಂತು ಕರೋನಾ ಬಿಟ್ಟು ಕದಲುತ್ತಿಲ್ಲ. ನಮ್ಮೆಲ್ಲ ಜೀವಗಳು ನಮ್ಮ ಪ್ರಿತಿಪಾತ್ರರ ಆರೋಗ್ಯದ ಮೇಲೆ ನೆಟ್ಟಿವೆ. ಪ್ರತಿ ಕ್ಷಣದಲ್ಲಿ ಆತಂಕದ ಘಳಿಗೆ ಕಾಡುತ್ತಿದೆ. ಆತಂಕದ  ಈ ಗಳಿಗಳನ್ನು ಸ್ವಲ್ಪ ಆಚೆ ಸರಿಸಲು ಶರಣರ ಅನುಭಾವದ ಅಮೃತದ ಅವಶ್ಯಕತೆಯಿದೆ. "ಬಂದದ್ದೆಲ್ಲಾ ಬರಲಿ ಆ ಭಗವಂತನ ದಯ ಒಂದರಲಿ"  ಎನ್ನುತ್ತ ಬಸವಣ್ಣನವರ ಮತ್ತು ಶರಣರ  ಆದ್ಯಾತ್ಮದ ಚಿಂತನೆಯಲ್ಲಿ  ಕೆಲ ಸಮಯ ಕಳೆಯೋಣ . ನೀವೆಲ್ಲ ನಮ್ಮೊಂದಿಗೆ ಇರಿ ಎಂದು ಕೇಳಿಕೊಳ್ಳುತ್ತೆವೆ.                        ಇಹ - ಪರ  ಚಿಂತನೆಯನ್ನು ಮಾಡಲಿದ್ದಾರೆ  ಅನುಭಾವಿಗಳಾದ  ಶ್ರಿ ನಿಜಗುಣಾನಂದ ಸ್ವಾಮಿಜಿ, ಶ್ರೀ  ತೊಂಟದಾರ್ಮಾ ಮಠ ಮುಂಡರಗಿಯವರು ಬಸವ ಶ್ರಿ ಪ್ರಶಸ್ತಿ ವೀಜೇತ  ಶರಣಶ್ರೀ ರಂಜಾನ ದರ್ಗಾರವರು ಇವರೊಂದಿಗೆ ಇರಲಿದ್ದಾರೆ ಇನ್ನೊಬ್ಬ  ಅನುಭಾವಿ ಶರಣ  ಶ್ರೀ  ಶಿವಶರಣಪ್ಪ ಮದ್ದೂರು ಅವರು.                           2021-05-161h 32ಶಿವಶರಣಶಿವಶರಣವಚನ ತರಂಗಿಣಿ Vachana-Tarangini podcastವಚನ ತರಂಗಿಣಿ  Vachana-Tarangini podcast2020-09-081h 01ಶಿವಶರಣಶಿವಶರಣಶರಣ ವೀಣೆ - ಸ್ವರವಚನಗಳು Sharana veene - Svara Vachana Podcastಶರಣ ವೀಣೆ - ಸ್ವರವಚನಗಳು Sharana veene - Svara Vachana Podcast2020-09-0852 minಶಿವಶರಣಶಿವಶರಣಶರಣ ಗೀತಾಂಜಲಿ - ಸ್ವರವಚನಗಳ ಧ್ವನಿಮುದ್ರಿಕೆ sharaNa geetanjali- swara vachana podcastಶರಣ ಗೀತಾಂಜಲಿ - ಸ್ವರವಚನಗಳ ಧ್ವನಿಮುದ್ರಿಕೆ sharaNa geetanjali- swara vachana podcast2020-09-081h 05ಶಿವಶರಣಶಿವಶರಣಅಲ್ಲಮನ ವಚನ ಚಂದ್ರಿಕೆ - ಅಲ್ಲಮ ಪ್ರಭುದೇವರ ವಚನಗಳು Allamaprabhudevara Vachanagalu. Podcastಅಲ್ಲಮನ ವಚನ ಚಂದ್ರಿಕೆ - ಅಲ್ಲಮ ಪ್ರಭುದೇವರ ವಚನಗಳು  Allamaprabhudevara Vachanagalu. podcast2020-09-0855 minಶಿವಶರಣಶಿವಶರಣಚಿನ್ಮಯ ಚಂದ್ರಿಕೆ-ಚನ್ನಬಸವಣ್ಣನವರ ವಚನಗಳು. ChannabasavaNNa Vachanas Podcastಚಿನ್ಮಯ ಚಂದ್ರಿಕೆ-ಚನ್ನಬಸವಣ್ಣನವರ ವಚನಗಳು. ChannabasavaNNa Vachanas Podcast2020-09-0858 minಶಿವಶರಣಶಿವಶರಣಸಿದ್ಧರಾಮ ಸಂದೇಶ - ವಚನಗಳ ಧ್ವನಿಮುದ್ರಿಕೆ Siddharama Sandesha-Vachana Audioಸಿದ್ಧರಾಮ ಸಂದೇಶ - ವಚನಗಳ ಧ್ವನಿಮುದ್ರಿಕೆ Siddharama Sandesha-Vachana Audio2020-09-081h 00ಶಿವಶರಣಶಿವಶರಣಅಕ್ಕಮಹಾದೇವಿಯವರ ಯೋಗಾಂಗ ತ್ರಿವಿಧಿಅಕ್ಕಮಹಾದೇವಿಯವರ ಯೋಗಾಂಗ ತ್ರಿವಿಧಿ Yoganga Trividhi by Akka Mahadevi2020-09-081h 00ಶಿವಶರಣಶಿವಶರಣವಚನ ಧ್ವನಿ ಮುದ್ರಿಕೆಗಳು ಕನ್ನಡ ಸಂಸ್ಕೃತಿ ಇಲಾಖೆವಚನ ಧ್ವನಿ ಮುದ್ರಿಕೆಗಳು ಕನ್ನಡ ಸಂಸ್ಕೃತಿ ಇಲಾಖೆ2020-09-077h 07ಶಿವಶರಣಶಿವಶರಣಎಲ್ಲರಿಗೆ ಬೆಲ್ಲಾದ ಕಲ್ಯಾಣ ಬಸವಯ್ಯ Ellarige Bellada Kalyana Basavayyaಎಲ್ಲರಿಗೆ ಬೆಲ್ಲಾದ ಕಲ್ಯಾಣ ಬಸವಯ್ಯ - ಜಾನಪದ  Ellarige Bellada Kalyana Basavayya2020-09-031h 00ಶಿವಶರಣಶಿವಶರಣವಚನ ಸುಮನ 08 Vachana Sumana 08ವಚನ ಸುಮನ 08  Vachana Sumana 082020-09-0343 minಶಿವಶರಣಶಿವಶರಣವಚನ ಸುಮನ 02 Vachana Sumana 02ವಚನ ಸುಮನ 02  Vachana Sumana 022020-09-0345 minಶಿವಶರಣಶಿವಶರಣವಚನ ಸುಮನ 01 Vachana Sumana 01ವಚನ ಸುಮನ 01 Vachana Sumana 012020-09-0344 minಶಿವಶರಣಶಿವಶರಣವಚನ ಸುಮನ 09 Vachana Sumana 09ವಚನ ಸುಮನ 09  Vachana Sumana 092020-09-0340 minಶಿವಶರಣಶಿವಶರಣವಚನ ಸುಮನ 07 Vachana Sumana 07ವಚನ ಸುಮನ 07  Vachana Sumana 07 2020-09-0340 minಶಿವಶರಣಶಿವಶರಣವಚನ ಸುಮನ 06 Vachana Sumana 06ವಚನ ಸುಮನ 06  Vachana Sumana 06 2020-09-0341 minಶಿವಶರಣಶಿವಶರಣವಚನ ಸುಮನ 05 Vachana Sumana 05ವಚನ ಸುಮನ 05 Vachana Sumana 052020-09-0346 minಶಿವಶರಣಶಿವಶರಣವಚನ ಸುಮನ 04 Vachana Sumana 04ವಚನ ಸುಮನ 04 Vachana Sumana 04 2020-09-0341 minಶಿವಶರಣಶಿವಶರಣವಚನ ಸುಮನ 03 Vachana Sumana 03ವಚನ ಸುಮನ 03  Vachana Sumana 032020-09-0345 minಶಿವಶರಣಶಿವಶರಣVachana Saurabha-Basava Samithi-ವಚನ ಸೌರಭ ಬಸವ ಸಮಿತಿ -169ವಚನ ಸೌರಭ ಬಸವ ಸಮಿತಿ  Vachana Saurabha-Basava Samithi ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ಕನ್ನಡ ಸಿರಿ ವಚನ ಸಾಹಿತ್ಯಧ್ವನಿಮುದ್ರಿತ ವಚನಗಳಿಂದ ಆಯ್ದ 169 ವಚನಗಳು. 2020-09-039h 33ಶಿವಶರಣಶಿವಶರಣದಿನಾಂಕ August 22-ಜಾಗತಿಕ ಅನುಭಾವ ಮಂಟಪ ವಚನಾನುಭಾವದ ಧ್ವನಿಮುದ್ರಿತ ವಚನಗಳು.ಜಾಗತಿಕ ಅನುಭಾವ ಮಂಟಪದಲ್ಲಿ ಶನಿವಾರ ಮತ್ತು ರವಿವಾರ ಸಾಯಂಕಾಲ 5 PM ರಿಂದ 6 PM ರ ವರೆಗೆ ಜರುಗುವ ವಚನಾನುಭಾವಕ್ಕೆ ಇಂಟರ್ನೆಟ್ ಮೂಲಕ ನೇರವಾಗಿ ಸೇರಲು  ಕೆಳಗಿನ ಲಿಂಕ್ ನ್ನು ಒತ್ತಿರಿ  https://join.freeconferencecall.com/shivasharana  ಡೈಯಲ್ ಮಾಡುವದರ ಮೂಲಕ ಕಾನ್ಫರೆನ್ಸ್ ಕಾಲ್ ನಲ್ಲಿ ಭಾಗವಹಿಸಲು: ಶುಲ್ಕ ರಹಿತ ದೂರವಾಣಿ ಸಂಖ್ಯ: 0172 510 0945 ಮೀಟಿಂಗ ಅಕ್ಸೆಸ್ ಕೋಡ್: 119500#  Free Conference Call App install ಮಾಡಲು ಈ ಕೆಳಗಿನ ಲಿಂಕ್ ಒತ್ತಿ.  https://play.google.com/store/apps/details?id=com.freeconferencecall.fccmeetingclient  ದಿನಾಂಕ 22-08-2020, ಶನಿವಾರ 5 PM ರಿಂದ 6 PM ರ ವರೆಗೆ *ವಚನಾನುಭಾವ*: ಶಿವಶರಣಪ್ಪ ಮದ್ದೂರ್ ರವರಿಂದ * ಈ ವಾರದಂಚಿನ ಅನುಭಾವಿಕ ಶಬ್ದಗಳು: ಹೆಣನೆದ್ದು ನಗುತ್ತಿದೆ, ಭವಬಂಧನ, ಇನ್ನು ಹುಟ್ಟಿದಡೆ ನಿಮ್ಮಾಣೆ. ಸಂಸಾರಸಾಗರ, ಮುಂದುಗೆಡಿಸಿತ್ತು ಮಾಯೆ, ಕಾಡಿತ್ತು ಮಾಯೆ, ನಾಳಿಂಗೆಂತು, ಜಗದ ನಂಟ, ಧರೆ ಹತ್ತಿ ಉರಿದಡೆ, ಅಂದಣವನೇರಿದ ಸೊಣಗ, ಮನೋವಿಕಾರ, ತನ್ನ ವಿಚಾರಿಸಲೊಲ್ಲದ ಮನ, ನಚ್ಚದ ಮನವ ಕಿಚ್ಚಿನೊಳಗಿಕ್ಕು, ವಿಷಯವೆಂಬ ಹಸುರು, ಅಕಟಕಟಾ, ಕಿವುಡನ ಮಾಡಯ್ಯಾ, ಆಸೆಯೆಂಬ ಪಾಶ, ವ್ಯಸನದಿಂದ ಕುದಿಯುವುದು, ಕುಲದಲಧಿಕನು, ಅಸ್ತಿ ಭಾತಿಯೆಂಬ. ಇದುವರೆಗೆ ನಾವು ಪಿಂಡಸ್ಥಲ ಮತ್ತು ಪಿಂಡಜ್ಞಾನ ಮತ್ತು ಮಾಯಾವಿಲಾಸ ವಿಡಂಬನಸ್ಥಲದ ವಚನಗಳನ್ನು ನೋಡಿದೆವು. ಇನ್ನು ಮುಂದೆ ಸಂಸಾರ ಹೇಯಸ್ಥಲದ ವಚನಗಳನ್ನು ನೋಡೋಣ. ಸಂಸಾರ ಹೇಯಸ್ಥಲ ವೆಂದರೇನು?. ಮಾಯೆಯ ವಿಲಾಸದಲ್ಲಿ ರೂಪುಗೊಂಡವುಗಳೇ ದೇಹ, ಮನಸ್ಸು ಮತ್ತು ಶಬ್ದಾದಿ ವಿಷಯಂಗಳು. ಇವೆಲ್ಲ ಆತ್ಮನಿಗೆ ಎದುರಾಗಿ ಕಾಣುವ ತೋರಿಕೆಗಳು. ಆದರೆ ಮಾಯೆಯ ಪರಿಣಾಮದಿಂದಾಗಿ ಅವನು ಈ ತೋರಿಕೆಯ ದೇಹಾದಿಗಳಲ್ಲಿ ಆತ್ಮ ಭಾವ ತಾಳುತ್ತಾನೆ. ಆಗ ದೇಹದ ಜನ್ಮ-ಮರಣ ಮುಂತಾದ ವಿಕಾರಗಳು, ಮನಸ್ಸಿನ ಕಾಮಾದಿ ಆವೇಗಗಳು ಅವನಲ್ಲಿ ಭಾಸವಾಗುತ್ತವೆ. ಅವು ತನಗೆಯೆ ಎಂದು ಭ್ರಮಿಸುತ್ತಾನೆ. ಈ ಭ್ರಮೆಯೆ ಸಂಸಾರ. ಈ ಭ್ರಮೆಯು ಆತ್ಮನಿಗೆ ತರವಲ್ಲ. ಇದು ತ್ಯಜನೀಯ, ಹೇಯ. ಇದು ಹೇಯವದಲ್ಲದೆ ಆತ್ಮನು ಸ್ವಸ್ಥನಾಗಲಾರ. ತನ್ನತಾನರಿವ ಪಥದಲ್ಲಿರುವ ಸಾಧಕನಿಗೆ ಇದು ಸಂಸಾರ ಹೇಯಸ್ಥಲ.  ನಿರ್ವಚಿಸಲ್ಪಡುವ ವಚನಗಳು: 1. ಸಂಸಾರವೆಂಬ ಹೆಣ ಬಿದ್ದಿದ್ದಡೆ, ತಿನಬಂದ ನಾಯ ಜಗಳವ ನೋಡಿರೆ ! ನಾಯ ಜಗಳವ ನೋಡಿ ಹೆಣನೆದ್ದು ನಗುತ್ತಿದೆ. ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೆ.  2. ಭವಬಂಧನ ಭವಪಾಶವಾದ ಕಾರಣವೇನಯ್ಯಾ ಹಿಂದಣ ಜನ್ಮದಲ್ಲಿ ಲಿಂಗವ ಮರೆದೆನಾಗಿ, ಹಿಂದಣ ಸಿರಿಯಲ್ಲಿ ಜಂಗಮವ ಮರೆದೆನಾಗಿ. ಅರಿದಡೀ ಸಂಸಾರವ ಹೊದ್ದಲೀವೆನೆ, ಕೂಡಲಸಂಗಮದೇವಾ  3. ಅರಿಯದೆ ಜನನಿಯ ಜಠರದಲ್ಲಿ ಬಾರದ ಭವಂಗಳ ಬರಿಸಿದೆ ತಂದೆ, ಹುಟ್ಟಿತ್ತೆ ತಪ್ಪಾಯಿತ್ತೆ, ಎಲೆ ಲಿಂಗವೆ ? ಮುನ್ನ ಹುಟ್ಟಿದುದಕ್ಕೆ ಕೃಪೆಯ ಮಾಡು ಲಿಂಗವೆ ! ಇನ್ನು ಹುಟ್ಟಿದಡೆ ಕೂಡಲಸಂಗಮದೇವಾ, ನಿಮ್ಮಾಣೆ.  4. ಸಂಸಾರಸಾಗರದ ತೆರೆ ಕೊಬ್ಬಿ ಮುಖದ ಮೇಲೆ ಅಲೆವುತ್ತಲಿದೆ, ಸಂಸಾರಸಾಗರ ಉರದುದ್ದವೆ ಹೇಳಾ ! ಸಂಸಾರಸಾಗರ ಕೊರಳುದ್ದವೆ ಹೇಳಾ ! ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯಾ ! ಅಯ್ಯಾ ಅಯ್ಯಾ ಎನ್ನ ಹುಯ್ಯಲ ಕೇಳಯ್ಯಾ ಕೂಡಲಸಂಗಮದೇವಾ ನಾನೇವೆನೇವೆನಯ್ಯಾ !  5. ನಾನೊಂದ ನೆನೆದಡೆ ತಾನೊಂದ ನೆನೆವುದು, ನಾನಿತ್ತಲೆಳೆದಡೆ ತಾನತ್ತಲೆಳೆವುದು. ತಾ ಬೇರೆ ಎನ್ನನಳಲಿಸಿ ಕಾಡಿತ್ತು, ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು. ಕೂಡಲಸಂಗನ ಕೂಡಿಹೆನೆಂದಡೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ.  6. ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ, ಇದಾವಾವ ಪರಿಯಲ್ಲಿ ಕಾಡಿತ್ತು ಮಾಯೆ. ಈ ಮಾಯೆಯ ಕಳೆವಡೆ ಎನ್ನಳವಲ್ಲ, ನೀವೆ ಬಲ್ಲಿರಿ ಕೂಡಲಸಂಗಮದೇವಾ ! 15  7. ಇಂದಿಂಗೆಂತು ನಾಳಿಂಗೆಂತು ಎಂದು- ಬೆಂದ ಒಡಲ ಹೊರೆಯ ಹೋಯಿತ್ತೆನ್ನ ಸಂಸಾರ ! ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ, ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ. ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ ಕೊಂದುದಯ್ಯಾ ಈ ಮಾಯೆ, ಕೂಡಲಸಂಗಮದೇವಾ.  8. ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯಾ, ಚಂದ್ರ ಕುಂದೆ, ಕುಂದುವುದಯ್ಯಾ. ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುದ್ಥಿ ಬೊಬ್ಬಿಟ್ಟಿತ್ತೆ ಅಯ್ಯಾ ಅಂಬುದ್ಥಿಯ ಮುನಿ ಆಪೋಶನವ ಕೊಂಬಲ್ಲಿ ಚಂದ್ರಮನಡ್ಡ ಬಂದನೆ, ಅಯ್ಯಾ ? ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ, ಜಗದ ನಂಟ ನೀನೆ, ಅಯ್ಯಾ, ಕೂಡಲಸಂಗಮದೇವಯ್ಯಾ!  9. ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ, ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ !  10. ಅಂದಣವನೇರಿದ ಸೊಣಗನಂತೆ ಕಂಡಡೆ ಬಿಡದು ತನ್ನ ಮುನ್ನಿನ ಸ್ವಭಾವವನು. ಸುಡು, ಸುಡು, ಮನವಿದು ವಿಷಯಕ್ಕೆ ಹರಿವುದು, ಮೃಡ ನಿಮ್ಮನನುದಿನ ನೆನೆಯಲೀಯದು. ಎನ್ನೊಡೆಯ ಕೂಡಲಸಂಗಮದೇವಾ ನಿಮ್ಮ ಚರಣವ ನೆನೆವಂತೆ ಕರುಣಿಸು- ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ.2020-08-211h 46ಶಿವಶರಣಶಿವಶರಣಅಕ್ಕಮಹಾದೇವಿ ವಿರಚಿತ ಸೃಷ್ಟಿ ವಚನ ಭಾಗ-2ಅಕ್ಕಮಹಾದೇವಿ ವಿರಚಿತ ಸೃಷ್ಟಿ ವಚನ ಭಾಗ-2 ಅನುಭಾವ: ಶಿವಶರಣಪ್ಪ ಮದ್ದೂರ್ 2020-08-0429 minಶಿವಶರಣಶಿವಶರಣವಚನಾನುಭಾವ-ದಿನಾಂಕ 18 ಜುಲೈ 2020-ಭಾಗ 2ವಚನಾನುಭಾವ ದಿನಾಂಕ 18 ಜುಲೈ 2020- ಭಾಗ 2  ಜಾಗತಿಕ ಅನುಭಾವ ಮಂಟಪದಲ್ಲಿ ಚರ್ಚೆಯ ವಿಷಯ: ಭ್ರಾಂತಿನ ಭ್ರಮೆ, ಶರಣ ತತ್ವ,  ಉದಯ, ಅಂದಿಂಗೆಳೆಯ ನೀನು ಹಳೆಯ ನಾನು, 36 ತತ್ವಗಳ ಚಾರ್ಟ್. ಚಿಂತನೆ: ಶಿವಶರಣಪ್ಪ ಮದ್ದೂರ್ Jagatika Anubhaava Mantapa Conference Call Date 18 July 2020 Discourse by: Shivasharanappa Maddur. ನಿರ್ವಾಚಿಸಲ್ಪಟ್ಟ ವಚನ: ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ? ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ ? ನಾನರಿದೆನೆಂಬಾತ ಇದಿರ ಕೇಳಲುಂಟೆ ? ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು ಮಾತಿನ ಮಾತಿನೊಳಗೆ ಅರಿವೆಂಬುದುಂಟೆ ? ಸೂತಕ ಹಿಂಗದೆ ಸಂದೇಹವಳಿಯದೆ, ಮುಂದಣ ಸೂಕ್ಷ್ಮವ ಕಾಬ ಪರಿಯೆಂತೊ? ಜ್ಯೋತಿಯ ಬಸಿರೊಳಗೆ ಜನಿಸಿದ ಕಾಂತಿಯುತ ಬೆಳಗು ಗುಹೇಶ್ವರಾ ನಿಮ್ಮ ಶರಣ ! 2. ಆದಿ ಆಧಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು ಸುರಾಳನಿರಾಳವಿಲ್ಲದಂದು, ಸಚರಾಚರವೆಲ್ಲ ರಚನೆಗೆ ಬಾರದಂದು, ಗುಹೇಶ್ವರಾ ನಿಮ್ಮ ಶರಣನುದಯಿಸಿದನಂದು. 3. ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ, ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ, ಗುಹೇಶ್ವರನೆಂಬ ಲಿಂಗವ ಕಾಣಬಾರದು2020-07-3138 minಶಿವಶರಣಶಿವಶರಣವಚನಾನುಭಾವ-ದಿನಾಂಕ 18 ಜುಲೈ 2020-ಭಾಗ 1ವಚನಾನುಭಾವ-ದಿನಾಂಕ 18 ಜುಲೈ 2020-ಭಾಗ 1 ಜಾಗತಿಕ ಅನುಭಾವ ಮಂಟಪದಲ್ಲಿ ಚರ್ಚೆಯ ವಿಷಯ: ಭ್ರಾಂತಿನ ಭ್ರಮೆ, ಶರಣ ತತ್ವ,  ಉದಯ, ಅಂದಿಂಗೆಳೆಯ ನೀನು ಹಳೆಯ ನಾನು, 36 ತತ್ವಗಳ ಚಾರ್ಟ್.  ಚಿಂತನೆ: ಶಿವಶರಣಪ್ಪ ಮದ್ದೂರ್ Jagatika Anubhaava Mantapa Conference Call Date 18 July 2020 Discourse by: Shivasharanappa Maddur. ನಿರ್ವಾಚಿಸಲ್ಪಟ್ಟ ವಚನ:  ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ? ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ ? ನಾನರಿದೆನೆಂಬಾತ ಇದಿರ ಕೇಳಲುಂಟೆ ? ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು ಮಾತಿನ ಮಾತಿನೊಳಗೆ ಅರಿವೆಂಬುದುಂಟೆ ? ಸೂತಕ ಹಿಂಗದೆ ಸಂದೇಹವಳಿಯದೆ, ಮುಂದಣ ಸೂಕ್ಷ್ಮವ ಕಾಬ ಪರಿಯೆಂತೊ? ಜ್ಯೋತಿಯ ಬಸಿರೊಳಗೆ ಜನಿಸಿದ ಕಾಂತಿಯುತ ಬೆಳಗು ಗುಹೇಶ್ವರಾ ನಿಮ್ಮ ಶರಣ ! 2. ಆದಿ ಆಧಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು ಸುರಾಳನಿರಾಳವಿಲ್ಲದಂದು, ಸಚರಾಚರವೆಲ್ಲ ರಚನೆಗೆ ಬಾರದಂದು, ಗುಹೇಶ್ವರಾ ನಿಮ್ಮ ಶರಣನುದಯಿಸಿದನಂದು. 3. ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ, ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ, ಗುಹೇಶ್ವರನೆಂಬ ಲಿಂಗವ ಕಾಣಬಾರದು2020-07-3132 minಶಿವಶರಣಶಿವಶರಣವಚನಾನುಭಾವ-ದಿನಾಂಕ 12-ಜುಲೈ 2020ಜಾಗತಿಕ ಅನುಭಾವ ಮಂಟಪದ ವಚನಾನುಭಾವ 12-ಜುಲೈ 2020 ಕಾನ್ಫರೆನ್ಸ್ ಕಾಲ್ ನಲ್ಲಿ ಇಂದಿನ ವಿಷಯ:-> ಅರಿವು.ನಿಜಾನುಭಾವಸಂಪಾದನೆ, ಸರ್ವಸಂದೇಹ ನಿವಾರಣೆ. ದೇವಸ್ಥಲ. ಪಿಂಡಸ್ಥಲ. ದೇವನ ಇರುವು. ಶಬ್ದದೊಳಗಣ ನಿಶ್ಯಬ್ದ. ಶರಣ ಸಂಬಂಧ ವಚನ ಚಿಂತನೆ: ಶಿವಶರಣಪ್ಪ. ಮದ್ದೂರು.  Jagatika Anubhava Mantapa. Vachanaanubhaava Date: 12 July 2020 Podcast ನಿರ್ವಚಿಸಲ್ಪಟ್ಟ ವಚನಗಳು:  1. ವೇದ ಘನವೆಂಬುದೊಂದು ಸಂಪಾದನೆ. ಶಾಸ್ತ್ರ ಘನವೆಂಬುದೊಂದು ಸಂಪಾದನೆ. ಪುರಾಣ ಘನವೆಂಬುದೊಂದು ಸಂಪಾದನೆ. ಆಗಮ ಘನವೆಂಬುದೊಂದು ಸಂಪಾದನೆ. ಅಹುದೆಂಬುದೊಂದು        ಸಂಪಾದನೆ. ಅಲ್ಲವೆಂಬುದೊಂದು ಸಂಪಾದನೆ. ಗುಹೇಶ್ವರನೆಂಬ ಮಹಾಘನದ ನಿಜಾನುಭಾವಸಂಪಾದನೆಯ ಅರಿಯದ ಕಾರಣ ಹಲವು ಸಂಪಾದನೆಗಳಾದವು 2. ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ ಶಿವನನರಿವರೆ ? ಮನವೆಂಬ ಸಂಕಲ್ಪದ ಕುಣಿಕೆಗೊಳಗಾದವರೆಲ್ಲರೂ ಮಾಯದ ಹೊಡೆಗಿಚ್ಚ ಗೆಲ್ಲಬಲ್ಲರೆ ?         ಗುಹೇಶ್ವರಲಿಂಗದಲ್ಲಿ ಸರ್ವಸಂದೇಹವ ಕಳೆದಿಪ್ಪ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು. 9. ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ,         ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಶಬ್ದದಂತೆ, ಗುಹೇಶ್ವರಾ ನಿಮ್ಮ ಶರಣಸಂಬಂಧ 3. ನೆಲದ ಮರೆಯ ನಿಧಾನದಂತೆ, ಮುಗಿಲ ಮರೆಯಲಡಗಿದ ಮಿಂಚಿನಂತೆ, ಬಯಲ ಮರೆಯಲಡಗಿದ ಮರೀಚನಂತೆ? ಕಂಗಳ ಮರೆಯಲಡಗಿದ ಬೆಳಗಿನಂತೆ_ಗುಹೇಶ್ವರಾ ನಿಮ್ಮ ನಿಲವು! 4. ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು, ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು. 5. ಫಲದೊಳಗಣ ಮಧುರಗೋಪ್ಯದಂತಿದ್ದಿತ್ತು, ಚಂದ್ರಕಾಂತದ ಉದಕದ ತೆರನಂತಿದ್ದಿತ್ತು, ಮಯೂರನ ತತ್ತಿಯ ಚಿತ್ರದಂತಿದ್ದಿತ್ತು, ಶಿಶುಕಂಡ ಕನಸಿನ ಪರಿಯಂತಿದ್ದಿತ್ತು,        ಕೂಡಲಚೆನ್ನಸಂಗಯ್ಯಾ ನಿಮ್ಮ ನಿಲವ ಸದ್ಗುರುಚಿತ್ತದ ಪದದಂತಿದ್ದಿತ್ತು. 6. ಕಲ್ಲೊಣಗಣ ಕಿಚ್ಚು ಉರಿಯದಂತೆ, ಬೀಜದೊಳಗಣ ವೃಕ್ಷ ಉಲಿಯದಂತೆ, ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು, ಗುಹೇಶ್ವರ ನಿಂದ ನಿಲವ ಅನುಭಾವ ಸುಖಿ ಬಲ್ಲ2020-07-2929 minಶಿವಶರಣಶಿವಶರಣಬಸವ ಪಂಚಮಿ Basava Panchami 25 Jul 2020ಬಸವ ಪಂಚಮಿ Basava Panchami 25 Jul 2020 Conference Call Podcast ಆನಂದ ನಾಮ  ಸಂವತ್ಸರದ ( ಕ್ರಿ ಶ 1134) ವೈಶಾಖ ಮಾಸದ ಅಕ್ಷಯ ತೃತೀಯ ದಂದು ಜನಿಸಿದ ಬಸವಣ್ಣನವರು ನಳನಾಮ ಸಂವತ್ಸರದ (ಕ್ರಿ ಶ 1196) ಶ್ರಾವಣ ಮಾಸದ ಪಂಚಮಿ ಯಂದು ಕಪ್ಪಡಿ ಸಂಗಮದಲ್ಲಿ  ಲಿಂಗೈಕ್ಯವಾದುದರಿಂದ ಶ್ರಾವಣ ಪಂಚಮಿಯು ಬಸವ ಪಂಚಮಿ ಎಂದೇ ಖ್ಯಾತಿವೆತ್ತಿದೆ. ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ ಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ194 ನೀರ ಕಂಡಲ್ಲಿ ಮುಳುಗುವರಯ್ಯಾ, ಮರನ ಕಂಡಲ್ಲಿ ಸುತ್ತುವರಯ್ಯಾ. ಬತ್ತುವ ಜಲವ, ಒಣಗುವ ಮರನ ಮಚ್ಚಿದವರು ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ. ಆಕಾರ ನಿರಾಕಾರವಾಯಿತ್ತಲ್ಲಾ ಬಸವಣ್ಣ. ಪ್ರಾಣ ನಿಃಪ್ರಾಣವಾಯಿತ್ತಲ್ಲಾ ಬಸವಣ್ಣ. ಅಂಗಜಂಗಮದ ಮಾಟ ಸಮಾಪ್ತಿಯಾಯಿತ್ತಲ್ಲಾ ಬಸವಣ್ಣ. ನಿಃಶಬ್ದವೇದ್ಯವಾದೆಯಲ್ಲಾ ಬಸವಣ್ಣ. ಕಲಿದೇವರದೇವನ ಹೃದಯಕಮಲವ ಹೊಕ್ಕು, ದೇವರಿಗೆ ದೇವನಾಗಿ ಹೋದೆಯಲ್ಲಾ ಸಂಗನಬಸವಣ್ಣ.2020-07-2847 minಶಿವಶರಣಶಿವಶರಣವಚನಾನುಭಾವ-ದಿನಾಂಕ 11-JUL-20 JAM Podcastವಚನಾನುಭಾವ- ಜಾಗತಿಕ ಅನುಭಾವ ಮಂಟಪ ದಿನಾಂಕ 11-JUL-20 Podcast ಶಿವಶರಣಪ್ಪ ಮದ್ದೂರ, ಬೆಂಗಳೂರು.  Jagatika Lingayata Mahasabha  Jagatika Anubhava Mantapa Shivasharanappa Maddur Bangalore ಜಾಗತಿಕ ಅನುಭಾವ ಮಂಟಪದಲ್ಲಿ ದಿನಾಂಕ 11-07-2020, ಶನಿವಾರ 5:30 ಕ್ಕೆ ಜರುಗುವ ಅರಿವು-ಆಚಾರ-ಅನುಭಾವ ಕಾನ್ಫರೆನ್ಸ್ ಕಾಲ್ ನಲ್ಲಿ ಚರ್ಚಿತವಾದ ವಿಷಯ: ಅರಿವಿನ ಪಥ: ವಚನ-ವಿಚಾರ ಮಂಡನೆಗಳು: ಸತ್ಯವೆಂಬ ಕೂರಲಗು, ಸತ್ಯದ ನಿಲುವು, ನಿಮ್ಮನರಿಯುವದು, ತನ್ನ ತಾನರಿಯುವದು, ಶಿವಪಥ, ಗುರುಪಥ ಚರ್ಚೆಯ ವಚನಗಳು: 1. ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ ಕೇಳಿರಯ್ಯಾ  2. ಆನೆಯನೇರಿಕೊಂಡು ಹೋದಿರೇ ನೀವು, ಕುದುರೆಯನೇರಿಕೊಂಡು ಹೋದಿರೇ ನೀವು, 3. ನೆಲನೊಂದೆ:ಹೊಲಗೇರಿ ಶಿವಾಲಯಕ್ಕೆ, 4. ಅಯ್ಯಾ, ಸಜ್ಜನ ಸದ್ಭಾವಿಗಳ ಸಂಗದಿಂದ ಮಹಾನುಭಾವಿಗಳ ಕಾಣಬಹುದಯ್ಯಾ. 5. ಮಡಕೆಯ ಮಾಡುವಡೆ ಮಣ್ಣೆ ಮೊದಲು, ತೊಡಿಗೆಯ ಮಾಡುವಡೆ ಹೊನ್ನೆ ಮೊದಲು, 6. ಸುಳಿವ ಸುತ್ತುವ ವ್ಯವಹರಣೆಯುಳ್ಳನ್ನಕ್ಕರ ಅರಿಯೆನರಿಯೆ ಶಿವಪಥವ 7. ವೇದ ಘನವೆಂಬುದೊಂದು ಸಂಪಾದನೆ. ಶಾಸ್ತ್ರ ಘನವೆಂಬುದೊಂದು 8. ದೇಹಭಾವವಳಿದಲ್ಲದೆ ಜೀವಭಾವವಳಿಯದು. 9. ಜ್ಞಾನದಿಂದ ನಿಮ್ಮನರಿದಿಹೆನೆಂದಡೆ: ಅರಿವಿಂಗೆ ಬಂದಾಗಲೆ ಕುರುಹು. ಯೋಗಿಶಿವಕೂಡಲ ಸಂಗಮದೇವನಲ್ಲ.  ಪೌರಾಣಿಕ ಶಿವ ಕೂಡಲಸಂಗಮದೇವನಲ್ಲ ಕಪ್ಪಡಿ ಸಂಗಮನಾಥ ಕೂಡಲಸಂಗಮದೇವನಲ್ಲ. ಕೂಡಲಸಂಗಮದೇವನೆಂಬುದು ಅನುಭಾವ2020-07-2839 minಶಿವಶರಣಶಿವಶರಣನೀಲಮ್ಮ ಷಷ್ಟಿ- ನೀಲಾಂಬಿಕಾ ತಾಯಿಯವರ ಲಿಂಗೈಕ್ಯ ಸಂಸ್ಮರಣೆ. Neelambika Shashti Podcast 26 July 2020ಗುರು ಬಸವಣ್ಣನವರ ಪತ್ನಿ ನೀಲಾಂಬಿಕಾ ತಾಯಿಯವರ ಲಿಂಗೈಕ್ಯ ಸಂಸ್ಮರಣೆ. ನೀಲಮ್ಮ ಷಷ್ಟಿ ಜಾಗತಿಕ ಅನುಭಾವ ಮಂಟಪ ಕಾನ್ಫರೆನ್ಸ್ ಕಾಲ್ ಚಿಂತನೆ: ಶಿವಶರಣಪ್ಪ ಮದ್ದೂರು. ದಿನಾಂಕ 26 ಜುಲೈ 2020.   Neelambika Shashti, A Podcast by: Shivasharanappa. Maddur 2020-07-2849 minಶಿವಶರಣಶಿವಶರಣವಚನಾನುಭಾವ-ದಿನಾಂಕ 5-JUL-20 JAM Podcastಜಾಗತಿಕ ಅನುಭಾವ ಮಂಟಪ ಕಾನ್ಫರೆನ್ಸ್ ಕಾಲ್ Jagatika Anubhava Mantapa Conference call 5-JUL-20 Podcast -Shivasharanappa Maddur2020-07-1134 minಶಿವಶರಣಶಿವಶರಣJagatika Anubhava Mantapa-Conference call Meetings Inaugural Speech by Dr. Shivanand JamdarJagatika Anubhava Mantapa-Conference call Meetings Inaugural Speech by Dr. Shivanand Jamdar. Jagatika Anubhava Mantapa is a spiritual wing of Jagatika Lingayata Mahasabha. These meetings are scheduled every Saturday and Sunday at 5:30 PM IST. The Aim is to understand Lingayata / Basava Tatva / Sharana Tatva.2020-07-0822 minಶಿವಶರಣಶಿವಶರಣಪೂಜ್ಯ ಲಿಂಗಾನಂದ ಸ್ವಾಮೀಜಿಯವರಿಗೆ ಗೀತ ನಮನ.. A tribute to Pujya Lingananda Swamijiಪೂಜ್ಯ ಲಿಂಗಾನಂದ ಸ್ವಾಮೀಜಿಯವರಿಗೆ ಗೀತ ನಮನ. .. A tribute to Pujya Lingananda Swamiji2020-06-2927 minಶಿವಶರಣಶಿವಶರಣಶಿವಯೋಗಿ ಸಿದ್ಧರಾಮ ವಿರಚಿತ ಯೋಗಾಂಗ ತ್ರಿವಿಧಿ Shivayogi Siddharama Virachita Yoganga Trividhi.ಶಿವಯೋಗಿ ಸಿದ್ಧರಾಮ ವಿರಚಿತ ಯೋಗಾಂಗ ತ್ರಿವಿಧಿ. ವಿಶ್ವಕಲ್ಯಾಣ ಮಿಷನ್, ಬೆಂಗಳೂರು Shivayogi Siddharama Virachita Yoganga Trividhi. By Vishvakalyana Mission Bengaluru2020-06-291h 01ಶಿವಶರಣಶಿವಶರಣಪೂಜ್ಯ ಸ್ವಾಮಿ ಲಿಂಗಾನಂದ ಸ್ವಾಮೀಜಿಯವರಿಂದ ಅನುಭಾವ ಮಂಟಪದ ಪ್ರವಚನಪೂಜ್ಯ ಸ್ವಾಮಿ ಲಿಂಗಾನಂದ ಸ್ವಾಮೀಜಿಯವರಿಂದ ಅನುಭಾವ ಮಂಟಪದ ಪ್ರವಚನ Anubhava Mantapa Discourse by Swamy Lingananda - ಪ್ರವಚನ ಪಿತಾಮಹ ಪೂಜ್ಯ ಸ್ವಾಮಿ ಲಿಂಗಾನಂದರಿಂದ ಅನುಭಾವ ಮಂಟಪದ ಪ್ರವಚನ2020-06-291h 23ಶಿವಶರಣಶಿವಶರಣಅಕ್ಕ ಮಹಾದೇವಿ ವಿರಚಿತ ಸೃಷ್ಟಿವಚನ ಭಾಗ 1ಅಕ್ಕ ಮಹಾದೇವಿ ವಿರಚಿತ ಸೃಷ್ಟಿವಚನ ಭಾಗ 12020-06-1738 min